ಬೆಂಗಳೂರಿನಲ್ಲಿ ಕೊರೊನಾ ಶತ್ರುವಿಗೆ ಮಾಜಿ ಯೋಧ ಅಶ್ವತ್ಥ್ ನಾರಾಯಣ, ಪತ್ನಿ ಲಕ್ಷ್ಮೀ ಬಲಿ

ಬೆಂಗಳೂರಿನಲ್ಲಿ ಕೊರೊನಾ ಶತ್ರುವಿಗೆ ಮಾಜಿ ಯೋಧ ಅಶ್ವತ್ಥ್ ನಾರಾಯಣ, ಪತ್ನಿ ಲಕ್ಷ್ಮೀ ಬಲಿ
ಪ್ರಾತಿನಿಧಿಕ ಚಿತ್ರ

ಕೊರೊನಾ ಹೆಮ್ಮಾರಿ ಅಟ್ಟಹಾಸಕ್ಕೆ ವೃದ್ಧ ದಂಪತಿ ಬಲಿಯಾಗಿದ್ದು, ಮೊದಲು ಯೋಧ ಅಶ್ವತ್ಥ್ ನಾರಾಯಣ ಕೊವಿಡ್ ಸೋಂಕಿಗೆ ಬಲಿಯಾಗಿದ್ದರು. ಇನ್ನು, ಕೊವಿಡ್‌ನಿಂದ ಗುಣಮುಖರಾಗಿದ್ದ ಪತ್ನಿ ಲಕ್ಷ್ಮೀ ಅವರೂ ಸಹ ಮೃತಪಟ್ಟಿದ್ದಾರೆ.

TV9kannada Web Team

| Edited By: sadhu srinath

Jun 10, 2021 | 12:55 PM

ಬೆಂಗಳೂರಿನಲ್ಲಿ ಕೊರೊನಾ ಶತ್ರುವಿಗೆ ಮಾಜಿ ಯೋಧ ಮತ್ತು ಅವರ ಪತ್ನಿ ಅವರು 3 ದಿನದ ಅಂತರದಲ್ಲಿ ಬಲಿಯಾಗಿದ್ದಾರೆ. ಮಾಜಿ ಯೋಧ ಅಶ್ವತ್ಥ್ ನಾರಾಯಣ ಮತ್ತು ಅವರ ಪತ್ನಿ ಲಕ್ಷ್ಮೀ ಕೊರೊನಾದಿಂದ ಕೊನೆಯುಸಿರೆಳೆದಿದ್ದಾರೆ. ಪತಿ ಮೃತಪಟ್ಟ ಮೂರೇ ದಿನಕ್ಕೆ ಪತ್ನಿ ಲಕ್ಷ್ಮೀ ಸಹ ಸಾವನ್ನಪ್ಪಿದ್ದಾರೆ.

ಕೊರೊನಾ ಹೆಮ್ಮಾರಿ ಅಟ್ಟಹಾಸಕ್ಕೆ ವೃದ್ಧ ದಂಪತಿ ಬಲಿಯಾಗಿದ್ದು, ಮೊದಲು ಯೋಧ ಅಶ್ವತ್ಥ್ ನಾರಾಯಣ ಕೊವಿಡ್ ಸೋಂಕಿಗೆ ಬಲಿಯಾಗಿದ್ದರು. ಇನ್ನು, ಕೊವಿಡ್‌ನಿಂದ ಗುಣಮುಖರಾಗಿದ್ದ ಪತ್ನಿ ಲಕ್ಷ್ಮೀ ಅವರೂ ಸಹ ಮೃತಪಟ್ಟಿದ್ದಾರೆ.

72 ವರ್ಷದ ಎಸ್‌. ಲಕ್ಷ್ಮಿ ಅವರು ಪತಿ‌ ಮೃತಪಟ್ಟ ಮೂರೇ ದಿನಕ್ಕೆ ಅಸುನೀಗಿದ್ದಾರೆ. ಯೋಧ ಅಶ್ವತ್ಥ್ ನಾರಾಯಣ ಅವರ ಪುತ್ರ ತಮ್ಮ ತಂದೆಯ ಅಸ್ಥಿ ಕೂಡ ಇನ್ನೂ ತೆಗೆದುಕೊಂಡಿರಲಿಲ್ಲ. ಅಷ್ಟರಲ್ಲೇ ತಾಯಿಯ ಸಾವು ಮಗನಿಗೆ ಆಘಾತ ತಂದಿದೆ. ವೃದ್ಧ ತಾಯಿ ಕೊವಿಡ್‌ ನಿಂದ ಗುಣಮುಖರಾಗಿ ಮನೆ ಸೇರಿದ್ದರು. ಮೂರು ದಿನದ ಬಳಿಕ ಮತ್ತೆ ಆರೋಗ್ಯದಲ್ಲಿ ಏರುಪೇರಾಗಿದೆ. ಕುಟುಂಬಸ್ಥರು ಅವರನ್ನು ತಕ್ಷಣ ಎಚ್ಎಎಲ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಲ್ಲಿಂದ ಅಲ್ಲಿಂದ ಸಾಕ್ರಾ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಆಸ್ಪತ್ರೆಗೆ ಸ್ಟ್ರೆಚರ್ ನಲ್ಲಿ ಕರೆದುಕೊಂಡು ಹೋಗ್ತಿದ್ದಂತೆ ಲಕ್ಷ್ಮಿ ಕೊನೆಯುಸಿರೆಳೆದಿದ್ದಾರೆ.

ವೃದ್ಧೆ ಬಲಿ: ಮೊದಲು ತುಂಬಾ ಸ್ಟ್ರಾಂಗ್ ಆಗಿದ್ರು ಕೊರೊನಾ ಬಂದ ಮೇಲೆ ಡಲ್ ಆಗ್ಬಿಟ್ರು

ಕೊರೊನಾ ಮಹಾಮಾರಿಗೆ 65 ವರ್ಷದ ವೃದ್ಧೆಯೊಬ್ಬರು ಬೆಂಗಳೂರಿನಲ್ಲಿ ಬಲಿಯಾಗಿದ್ದಾರೆ. 15 ದಿನದ ಹಿಂದೆ ಪಾಸಿಟಿವ್ ಬಂದಿದ್ದು, ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಬಿಬಿಎಂಪಿ ಯಿಂದಲೇ ಬೆಡ್ ವ್ಯವಸ್ಥೆ ಮಾಡಲಾಗಿತ್ತು. ‘ತಾಯಿಗೆ ಯಾವುದೇ ಆರೋಗ್ಯ ಸಮಸ್ಯೆ ಇರಲಿಲ್ಲ. ಮೊದಲು ತುಂಬಾ ಸ್ಟ್ರಾಂಗ್ ಆಗಿದ್ರು, ಆದ್ರೆ ಕೊರೊನಾ ಬಂದ ಮೇಲೆ ಡಲ್ ಆಗ್ಬಿಟ್ರು. ಕೊರೊನಾ ಬಂತು ಅನ್ನೋ ಭಯದಿಂದಲೇ ಜನ ಸಾಯ್ತಿದ್ದಾರೆ ಅನಿಸುತ್ತೆ’ ಎಂದು ಪಣತ್ತೂರು ಚಿತಾಗಾರ ಬಳಿ ಮೃತ ಮಹಿಳೆಯ ಪುತ್ರ ಸಂಜಯ್ ಕುಮಾರ್ ಅಳಲು ತೋಡಿಕೊಂಡಿದ್ದಾರೆ.

(Retired soldier and his wife died due to coronavirus in bengaluru)

ಯೋಧರ ತವರು ಕೊಡಗಿನಲ್ಲಿ ಮತ್ತೊಂದು ದಾರುಣ: ಕೊರೊನಾಗೆ ಬಲಿಯಾಗಿದ್ದ ಮಾಜಿ ಸೈನಿಕನ ವಸ್ತುಗಳೂ ಮಿಸ್​!

Follow us on

Related Stories

Most Read Stories

Click on your DTH Provider to Add TV9 Kannada