Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಾಡಹಗಲೇ ಚಾಕು ತೋರಿಸಿ ದರೋಡೆ; ಖದೀಮರ ಕೈಚಳಕ ಸಿಸಿಟಿವಿ ಕ್ಯಾಮಾರಾದಲ್ಲಿ ಸೆರೆ

ಅವರು ಅಂತಿಂಥಾ ಖದೀಮರಲ್ಲ, ಡೈಲಿ ಫೈನಾನ್ಸ್ ಹಣ ಕಲೆಕ್ಷನ್ ಮಾಡೋ ಯುವಕರನ್ನೇ ಟಾರ್ಗೆಟ್ ಮಾಡೋ ನಟೋರಿಯಸ್​ಗಳು. ಹಾಡಹಗಲೇ ಚಾಕು ತೋರಿಸಿ ಖತರ್ನಾಕ್ ದರೋಡೆಕೋರರು ಹಣ ದೋಚಿ ಎಸ್ಕೇಪ್ ಆಗಿದ್ದಾರೆ. ಮಟಮಟ ಮಧ್ಯಾಹ್ನ ನಡೆದ ರಾಬರಿ ದೃಶ್ಯ ಕಂಡು ಜನರು ಬೆಚ್ಚಿ ಬಿದ್ದಿದ್ದಾರೆ. 

ಹಾಡಹಗಲೇ ಚಾಕು ತೋರಿಸಿ ದರೋಡೆ; ಖದೀಮರ ಕೈಚಳಕ ಸಿಸಿಟಿವಿ ಕ್ಯಾಮಾರಾದಲ್ಲಿ ಸೆರೆ
ಆನೇಕಲ್​ನಲ್ಲಿ ದರೋಡೆ
Follow us
ರಾಮು, ಆನೇಕಲ್​
| Updated By: ಕಿರಣ್ ಹನುಮಂತ್​ ಮಾದಾರ್

Updated on:Oct 01, 2023 | 7:55 PM

ಬೆಂಗಳೂರು ನಗರ, ಅ.01: ಜಿಲ್ಲೆಯ ಆನೇಕಲ್(Anekal) ತಾಲ್ಲೂಕಿನ ಮರಸೂರಿನಲ್ಲಿ ಡೈಲಿ ಫೈನಾನ್ಸ್ ಕಲೆಕ್ಷನ್ ಮಾಡುವ ಯುವಕರನ್ನೇ ಟಾರ್ಗೆಟ್ ಮಾಡಿದ ಖದೀಮರು, ಚಾಕು ತೋರಿಸಿ ಹಣ ದೋಚಿ ಎಸ್ಕೇಪ್ ಆಗಿದ್ದಾರೆ. ಹೌದು, ಹೊಸೂರಿನ ಶ್ರೀರಾಮ್ ಫೈನಾನ್ಸ್​ನಲ್ಲಿ ಕೆಲಸ ಮಾಡುತ್ತಿದ್ದ ಶಿವಲಿಂಗ ಹಾಗೂ ಚರಣ್ ಅತ್ತಿಬೆಲೆ ಎಂಬುವವರು ಚಂದಾಪುರ ಮಾರ್ಗವಾಗಿ ಡೈಲಿ ಫೈನಾನ್ಸ್ ಕಲೆಕ್ಷನ್ ಮಾಡಿಕೊಂಡು ಮರಸೂರಿನ ಎಸ್.ಎಲ್‌.ಎನ್ ಮೆಡಿಕಲ್ ಶಾಪ್ ಬಳಿ ಬಂದಿದ್ದಾರೆ. ಮೆಡಿಕಲ್ ಶಾಪ್​ನವರ ಬಳಿ ಫೈನಾನ್ಸ್ ಕಲೆಕ್ಷನ್ ಮಾಡಿ ಹಣವನ್ನ ಜೇಬಿನಲ್ಲಿ ಇಟ್ಟುಕೊಳ್ಳುವಷ್ಟರಲ್ಲಿ ಬೈಕ್​ನಲ್ಲಿ ಬಂದ ಮೂವರು ಅಸಾಮಿಗಳು, ಚಾಕು ತೋರಿಸಿ ಅವರ ಬಳಿ ಇದ್ದ 50 ಸಾವಿರಕ್ಕೂ ಅಧಿಕ ಹಣವನ್ನು ಕಸಿದು ಸಿನಿಮೀಯ ರೀತಿಯಲ್ಲಿ ಬೈಕ್​ನಲ್ಲಿ ಎಸ್ಕೇಪ್ ಆಗಿದ್ದಾರೆ.

ಇನ್ನು ಡೈಲಿ ಅಂಗಡಿಗಳ ಬಳಿ ಫೈನಾನ್ಸ್ ಹಣವನ್ನು ಕಲೆಕ್ಷನ್ ಮಾಡುವವರ ಬಳಿ ಹೆಚ್ಚು ಹಣ ಇರುತ್ತದೆ  ಎಂದು ಪ್ಲ್ಯಾನ್ ಮಾಡಿದ್ದ ಅಸಾಮಿಗಳು, ಅವರನ್ನ ಹಿಂಬಾಲಿಸುತ್ತಿದ್ದರು. ಅದರಂತೆಯೇ ಶ್ರೀರಾಮ್ ಫೈನಾನ್ಸ್​ನ ಶಿವಲಿಂಗ ಹಾಗೂ ಚರಣ್ ಮೆಡಿಕಲ್ ಶಾಫ್​ ಬಳಿ ಫೈನಾನ್ಸ್ ಹಣವನ್ನ ಕಲೆಕ್ಷನ್ ಮಾಡಲು ಹೋದಾಗ ಖದೀಮರು ಚಾಕು ತೋರಿಸಿ ಯುವಕರ ಜೇಬಿಗೆ ಕೈಹಾಕಿ ಹಣವನ್ನ ರಾಬರಿ ಮಾಡಿದ್ದಾರೆ. ಅದರಲ್ಲೂ ಮಧ್ಯಾಹ್ನದ ವೇಳೆ ಜನವಸತಿ ಪ್ರದೇಶದಲ್ಲಿ, ಎಲ್ಲರೂ ಓಡಾಡುವ ಸಂಧರ್ಭದಲ್ಲಿಯೇ ದರೋಡೆಕೋರರು ಯಾವುದೇ ಭಯವಿಲ್ಲದೆ ಕೃತ್ಯ ಎಸಗಿದ್ದು, ಜನರನ್ನ ಬೆಚ್ಚಿ ಬೀಳಿಸಿದೆ.  ಇನ್ನು ದರೋಡೆಕೋರರ ಕೈಚಳಕದ ದೃಶ್ಯ ಮೆಡಿಕಲ್ ಶಾಫ್​ನ ಸಿಸಿಟಿವಿ ಕ್ಯಾಮಾರಾದಲ್ಲಿ ಸೆರೆಯಾಗಿದೆ.

ಇದನ್ನೂ ಓದಿ:ಬರಗಾಲದಲ್ಲೂ ಹನಿ ಹನಿ ನೀರು ಉಳಿಸಿ ದಾಳಿಂಬೆ ಬೆಳೆದಿದ್ದ ವಿಜಯಪುರ ರೈತ: ರಾತ್ರೋರಾತ್ರಿ ನಾಲ್ಕಾರು ಲಕ್ಷ ಮೌಲ್ಯದ ದಾಳಿಂಬೆ ಕದ್ದ ಖದೀಮರು!

ಈ ಘಟನೆ ಸಂಬಂಧ ಸ್ಥಳಕ್ಕೆ ಭೇಟಿ ನೀಡಿದ ಸೂರ್ಯನಗರ ಪೋಲೀಸರು, ಪರಿಶೀಲನೆ ನಡೆಸಿ ಪ್ರಕರಣ ದಾಖಲು ಮಾಡಿಕೊಂಡಿದ್ದು, ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ. ಒಟ್ಟಿನಲ್ಲಿ ಹಾಡಹಗಲೇ ಈ ರೀತಿ ದರೋಡೆ ಪ್ರಕರಣಗಳು ನಡೆಯುತ್ತಿದ್ದು, ಸಾರ್ವಜನಿಕರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಅದಷ್ಟು ಬೇಗ ಪೋಲೀಸರು ಈ ಖತರ್ನಾಕ್ ಖದೀಮರನ್ನು ಹೆಡೆಮುರಿ ಕಟ್ಟುವ ಮೂಲಕ ಸಾರ್ವಜನಿಕರಲ್ಲಿರುವ ಆತಂಕವನ್ನ ದೂರಮಾಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:54 pm, Sun, 1 October 23

ಯುವತಿಗೆ ಪ್ರೊಪೋಸ್​ ಮಾಡಲು ರಿಂಗ್ ಹಿಡಿದು ಫಾಲ್ಸ್ ಬಳಿ ಹೋದ ವ್ಯಕ್ತಿ
ಯುವತಿಗೆ ಪ್ರೊಪೋಸ್​ ಮಾಡಲು ರಿಂಗ್ ಹಿಡಿದು ಫಾಲ್ಸ್ ಬಳಿ ಹೋದ ವ್ಯಕ್ತಿ
‘ಅಂಡಮಾನ್’ ಹಾಡನ್ನು ರೀ-ಕ್ರಿಯೇಟ್ ಮಾಡಿದ ಶಿವಣ್ಣ-ನಿವೇದಿತಾ
‘ಅಂಡಮಾನ್’ ಹಾಡನ್ನು ರೀ-ಕ್ರಿಯೇಟ್ ಮಾಡಿದ ಶಿವಣ್ಣ-ನಿವೇದಿತಾ
ವಿರೋಧ ಯಾರದ್ದೂ ಇಲ್ಲ, ಸಂದೇಹಗಳನ್ನು ಮಾತ್ರ ವ್ಯಕ್ತಪಡಿಸಿದ್ದಾರೆ: ರಾಜಣ್ಣ
ವಿರೋಧ ಯಾರದ್ದೂ ಇಲ್ಲ, ಸಂದೇಹಗಳನ್ನು ಮಾತ್ರ ವ್ಯಕ್ತಪಡಿಸಿದ್ದಾರೆ: ರಾಜಣ್ಣ
ದಿನನಿತ್ಯ ತುಪ್ಪ ಸೇವನೆಯಿಂದ ಏನೆಲ್ಲಾ ಲಾಭಗಳಿವೆ ಗೊತ್ತಾ? ವಿಡಿಯೋ ನೋಡಿ
ದಿನನಿತ್ಯ ತುಪ್ಪ ಸೇವನೆಯಿಂದ ಏನೆಲ್ಲಾ ಲಾಭಗಳಿವೆ ಗೊತ್ತಾ? ವಿಡಿಯೋ ನೋಡಿ
Horoscope: ಸೂರ್ಯ ಮೇಷ ರಾಶಿಯಲ್ಲಿ, ಚಂದ್ರ ಧನುಸ್ಸು ರಾಶಿಯಲ್ಲಿ ಸಂಚಾರ
Horoscope: ಸೂರ್ಯ ಮೇಷ ರಾಶಿಯಲ್ಲಿ, ಚಂದ್ರ ಧನುಸ್ಸು ರಾಶಿಯಲ್ಲಿ ಸಂಚಾರ
ನಾಯಿ ನಮಗಿಂತಲೂ ಚೆನ್ನಾಗಿ ಆಕ್ಟ್ ಮಾಡಿದೆ: ರಚನಾ ಇಂದರ್
ನಾಯಿ ನಮಗಿಂತಲೂ ಚೆನ್ನಾಗಿ ಆಕ್ಟ್ ಮಾಡಿದೆ: ರಚನಾ ಇಂದರ್
ಮಾಲೂರು ಆಸ್ಪತ್ರೆ ಸಿಬ್ಬಂದಿ ಪೋನ್​ ಪೇ ವಹಿವಾಟು ನೋಡಿ ದಂಗಾದ ಉಪ ಲೋಕಾಯುಕ್ತ
ಮಾಲೂರು ಆಸ್ಪತ್ರೆ ಸಿಬ್ಬಂದಿ ಪೋನ್​ ಪೇ ವಹಿವಾಟು ನೋಡಿ ದಂಗಾದ ಉಪ ಲೋಕಾಯುಕ್ತ
ಮದುವೆ ಮೆರವಣಿಗೆ ವೇಳೆ ವರನನ್ನು ಕುದುರೆಯಿಂದ ಬೀಳಿಸಿ, ಹೊಡೆದ ಜನರು
ಮದುವೆ ಮೆರವಣಿಗೆ ವೇಳೆ ವರನನ್ನು ಕುದುರೆಯಿಂದ ಬೀಳಿಸಿ, ಹೊಡೆದ ಜನರು
ನೀರಿಗಾಗಿ ಪ್ರಾಣ ಕಳೆದುಕೊಂಡ ಕೋತಿ ಮರಿ: ಇಲ್ಲಿದೆ ಮನಕಲಕುವ ದೃಶ್ಯ
ನೀರಿಗಾಗಿ ಪ್ರಾಣ ಕಳೆದುಕೊಂಡ ಕೋತಿ ಮರಿ: ಇಲ್ಲಿದೆ ಮನಕಲಕುವ ದೃಶ್ಯ
ರೋಹಿತ್ ಶರ್ಮಾಗೆ ಬಿಸಿಸಿಐನಿಂದ ವಿಶೇಷ ಗೌರವ; ವಿಡಿಯೋ ನೋಡಿ
ರೋಹಿತ್ ಶರ್ಮಾಗೆ ಬಿಸಿಸಿಐನಿಂದ ವಿಶೇಷ ಗೌರವ; ವಿಡಿಯೋ ನೋಡಿ