ಸಿಲಿಕಾನ್ ಸಿಟಿಯಲ್ಲಿ ಸೀರೆ ಕಳ್ಳಿಯರು; ಪ್ರತಿಷ್ಟಿತ ಶೋರೂಂಗಳಲ್ಲಿ ಸೀರೆ ಕದ್ದು ಮಾರಾಟ‌

ಇವರೇ ಬೇರೆ, ಇವರ ಬ್ಯುಸಿನೆಸ್ ಕೂಡ​ ಬೇರೆ. ದುಬಾರಿ ಬೆಲೆಯ ಸೀರೆ ಕಂಡರೆ ಇವರಿಗೆ ಅದೇನೋ ಸಂತಸ. ಅದರಲ್ಲೂ ದೊಡ್ಡ ದೊಡ್ಡ ಶೋರೂಂಗಳನ್ನೆ ಟಾರ್ಗೆಟ್ ಮಾಡುತ್ತಿದ್ದ ಈ ಗ್ಯಾಂಗ್, ಸೀರೆ ಕದ್ದು ಚಮಕ್ ಕಿಮಕ್ ಅನ್ನದೇ ಬರುತ್ತಿದ್ದರು. ಹೀಗೆ ಸೀರೆ ಕದಿಯುತ್ತಿದ್ದ ಗ್ಯಾಂಗ್​ವೊಂದು ಪೊಲೀಸರ ಬಲೆಗೆ ಬಿದ್ದಿದೆ. ಈ ಕುರಿತು ಒಂದು ಸ್ಟೋರಿ ಇಲ್ಲಿದೆ.

ಸಿಲಿಕಾನ್ ಸಿಟಿಯಲ್ಲಿ ಸೀರೆ ಕಳ್ಳಿಯರು; ಪ್ರತಿಷ್ಟಿತ ಶೋರೂಂಗಳಲ್ಲಿ ಸೀರೆ ಕದ್ದು ಮಾರಾಟ‌
ಬಂಧಿತ ಸೀರೆ ಕಳ್ಳಿಯರು
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on: Sep 03, 2024 | 10:19 PM

ಬೆಂಗಳೂರು, ಸೆ.03: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸೀರೆ ಕದಿಯುವ ನಾರಿಯರ ಗ್ಯಾಂಗ್​ವೊಂದು ಪ್ರತ್ಯಕ್ಷವಾಗಿದೆ. ಕಲರ್ ಪುಲ್ ಡ್ರೆಸ್, ಒಳ್ಳೆ ಮೇಕಪ್ ಮಾಡಿಕೊಂಡು ದೊಡ್ಡ ದೊಡ್ಡ ಶೋರೂಂಗಳಿಗೆ ಎಂಟ್ರಿ ಕೊಡುವ ಈ ಗ್ಯಾಂಗ್, ದುಬಾರಿ ಬೆಲೆಯ ಸೀರೆ ಕದ್ದು, ಎಸ್ಕೇಪ್ ಆಗುತ್ತಾರೆ. ಹೀಗೆ ನಗರದ ಪ್ರತಿಷ್ಟಿತ ಸೀರೆ ಶೋರೂಂಗಳಲ್ಲಿ ಕೈಚಳಕ ತೋರಿದ್ದ ನಾಲ್ವರು ಸೀರೆ ಕಳ್ಳಿಯರನ್ನು ಜೆ ಪಿ ನಗರ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ಆಂಧ್ರಪ್ರದೇಶ ಮೂಲದ ಪೊನ್ನೂರು ಮಲ್ಲಿ, ವೆಂಕಟೇಶ್ವರಮ್ಮ, ಮಧುಗನಿ ಜಾನಕಿ ಹಾಗೂ ಮೇಧ ರಜನಿ ಬಂಧಿತ ಮಹಿಳೆಯರು. ಈ ಗ್ಯಾಂಗ್ ಆಗಾಗ ಬೆಂಗಳೂರು ಸೇರಿ ಬೇರೆ ಬೇರೆ ನಗರಗಳಿಗೆ ಸೀರೆ ಖರೀದಿಗೆ ಶಾಪಿಂಗ್ ಹೋಗುತ್ತಿದ್ದರು. ಹೆಸರಾಂತ ಬಟ್ಟೆ ಅಂಗಡಿಗಳನ್ನೆ ಸೆಲೆಕ್ಟ್ ಮಾಡಿಕೊಂಡು ಶಾಪಿಂಗ್ ಮಾಡುತ್ತಿದ್ದ ಈ ಮಹಿಳೆಯರು, ದುಬಾರಿ ಬೆಲೆಯ ಸೀರೆಗಳನ್ನ ತೆಗೆಸಿ ವ್ಯಾಪಾರ ಮಾಡುವ ಸೋಗಿನಲ್ಲಿ ಸಿಬ್ಬಂದಿ ಗಮನ ಬೇರೆಡೆ ಸೆಳೆದು, ಸೈಲೆಂಟಾಗಿ ಒಂದೊಂದೆ ಸ್ಯಾರಿಯನ್ನ ಬಟ್ಟೆ ಒಳಗೆ ಅಡಗಿಸಿಟ್ಟುಕೊಂಡು ಅಲ್ಲಿಂದ ಒಬ್ಬರ ಹಿಂದೆ ಒಬ್ಬರು ಪರಾರಿ ಆಗುತ್ತಿದ್ದರು.

ಇದನ್ನೂ ಓದಿ:ಮೈಸೂರು: ಕಲಾವಿದನ ಮನೆ ಮುಂದಿದ್ದ ಗಣೇಶನ ಮೂರ್ತಿ ಲಪಟಾಯಿಸಿದ ಕಳ್ಳರು!

ಬಂಧಿತ ಮಹಿಳೆಯರಿಂದ 17.5 ಲಕ್ಷ ಮೌಲ್ಯದ 38 ಸೀರೆಗಳು ವಶಕ್ಕೆ

ಇದೇ ರೀತಿ ಜೆಪಿ ನಗರದ ಪ್ರತಿಷ್ಟಿತ ಬಟ್ಟೆ ಅಂಗಡಿಗೆ ಶಾಪಿಂಗ್ ಹೋಗಿದ್ದ ಈ ಮಹಿಳೆಯರು, ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಸೀರೆಗಳನ್ನ ಕದ್ದು ಬಂದಿದ್ದರಂತೆ. ಈ ಬಗ್ಗೆ ಜೆ ಪಿ ನಗರ ಪೊಲೀಸರು ಕೇಸ್ ದಾಖಲಿಸಿ ಈ ನಾಲ್ವರು ಸೀರೆ ಕಳ್ಳಿಯರನ್ನ ಬಂಧಿಸಿದ್ದಾರೆ. ಇನ್ನು ಬಂಧಿತ ಮಹಿಳೆಯರು ಕಡಿಮೆ ಬೆಲೆಯ ಸೀರೆಗಳನ್ನ ಮುಟ್ಟುತ್ತಿರಲಿಲ್ಲ. ತಾವು ಶ್ರೀಮಂತ ವ್ಯಕ್ತಿಗಳು ಎಂದು ಪೋಸ್ ಕೊಟ್ಕೊಂಡು ಲಕ್ಷ ಲಕ್ಷ ಬೆಲೆಬಾಳುವ ಸೀರೆಗಳನ್ನೆ ನೋಡಿ ಕದಿಯುತ್ತಿದ್ದರಂತೆ. ಸದ್ಯ ಬಂಧಿತ ನಾಲ್ವರು ಮಹಿಳೆಯರಿಂದ ಸುಮಾರು 17.5 ಲಕ್ಷ ಮೌಲ್ಯದ 38 ಸೀರೆಗಳನ್ನ ವಶಕ್ಕೆ ಪಡೆಯಲಾಗಿದೆ. ಈ ಬಗ್ಗೆ ಜೆಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚ್ಚಿನ ತನಿಖೆ ನಡೆಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ