Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜ್ಯದಲ್ಲಿ ಶಾಲೆ ಶುರುವಾದ್ರೂ ಸಿಕ್ಕಿಲ್ಲ ಶೂ, ಸಾಕ್ಸ್, ಪಠ್ಯಪುಸ್ತಕ; ಶಿಕ್ಷಣ ಇಲಾಖೆ ವಿರುದ್ಧ ಪೋಷಕರ ಅಸಮಾಧಾನ

ಬೇಸಿಗೆ ರಜೆ ಮುಗಿಸಿ ಮಕ್ಕಳು ಕಳೆದ ಒಂದು ವಾರದಿಂದ ಮರಳಿ ಶಾಲೆಗೆ ವಾಪಸ್ ಆಗಿದ್ದಾರೆ. ಪುಸ್ತಕ, ಪೆನ್ ತಗೊಂಡು ಬ್ಯಾಗ್ ಹಾಕಿಕೊಂಡು ಶಾಲೆಗಳಿಗೆ ಬರ್ತಿದ್ದಾರೆ. ಮಕ್ಕಳು ಪಾಠ ಕಲಿಯೋದಕ್ಕೆ ರೆಡಿಯಾಗಿದ್ದಾರೆ. ಶಿಕ್ಷಕರು ಕ್ಲಾಸ್ ಮಾಡೋದಕ್ಕೆ ಸಿದ್ಧರಿದ್ದಾರೆ. ಆದರೆ ಶಾಲೆ ಶುರುವಾದ್ರೂ ಮಕ್ಕಳಿಗೆ ಸಿಗಬೇಕಿದ್ದ ಮೂಲಭೂತ ಸೌಲಭ್ಯ ಮಾತ್ರ ಕೈ ಸೇರಿಲ್ಲ. ಶಾಲೆ ಶುರುವಾದ್ರೂ ಸರ್ಕಾರಿ ಶಾಲೆಗಳ ಮಕ್ಕಳಿಗೆ ಸಿಗಬೇಕಿದ್ದ ಉಚಿತ ಶೂ ಹಾಗೂ ಸಾಕ್ಸ್ ಮತ್ತು ಪಠ್ಯಪುಸ್ತಕ ಇನ್ನೂ ಕೈ ತಲುಪಿಲ್ಲ.

ರಾಜ್ಯದಲ್ಲಿ ಶಾಲೆ ಶುರುವಾದ್ರೂ ಸಿಕ್ಕಿಲ್ಲ ಶೂ, ಸಾಕ್ಸ್, ಪಠ್ಯಪುಸ್ತಕ; ಶಿಕ್ಷಣ ಇಲಾಖೆ ವಿರುದ್ಧ ಪೋಷಕರ ಅಸಮಾಧಾನ
ರಾಜ್ಯದಲ್ಲಿ ಶಾಲೆ ಶುರುವಾದ್ರೂ ಸಿಕ್ಕಿಲ್ಲ ಶೂ, ಸಾಕ್ಸ್, ಪಠ್ಯಪುಸ್ತಕ
Follow us
Vinay Kashappanavar
| Updated By: ಆಯೇಷಾ ಬಾನು

Updated on: Jun 09, 2024 | 12:55 PM

ಬೆಂಗಳೂರು, ಜೂನ್.09: ರಾಜ್ಯದ ಎಲ್ಲಾ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು (Government Schools) ಶುರುವಾಗ್ತೀವೆ. 2024-2025ನೇ ಸಾಲಿನ ಶೈಕ್ಷಣಿಕ ಅವಧಿ ಆರಂಭವಾಗಿದೆ. ಚಿಣ್ಣರು ಶಾಲೆಗೆ ರೀ ಎಂಟ್ರಿ ಕೊಟ್ಟಿದ್ದಾರೆ. ಆದರೆ ಶಾಲೆ ಶುರುವಾದರೂ ಇನ್ನು ವಿದ್ಯಾರ್ಥಿಗಳ ಕೈ ಸೇರಿಲ್ಲ ಶೂ ಹಾಗೂ ಸಾಕ್ಸ್ ಜೊತೆಗೆ ಕೆಲವು ಶಾಲೆಗಳಲ್ಲಿ ಪಠ್ಯ ಪುಸ್ತಕ ಸಿಕ್ಕಿಲ್ಲ.

ಶಾಲೆ ಆರಂಭವಾದರೂ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಶೂ ಮತ್ತು ಸಾಕ್ಸ್ ಸಿಕ್ಕಿಲ್ಲ. ಶೂ ಇಲ್ಲದೆ ಚಪ್ಪಲಿ ಹಾಕಿಕೊಂಡು ವಿದ್ಯಾರ್ಥಿಗಳು ಶಾಲೆಗೆ ಬರ್ತಿದ್ದಾರೆ. ಇನ್ನು ಕೆಲವು ಮಕ್ಕಳು ಕಳೆದ ವರ್ಷದ ಶೂ ಹಾಕಿಕಂಡು ಬಂದ್ರೆ ಮತ್ತೆ ಕೆಲವು ಮಕ್ಕಳು ಶೂ ಇಲ್ಲದೇ ಶಾಲೆಗೆ ಬರ್ತಿದ್ದಾರೆ. ಪಂಚ ಗ್ಯಾರಂಟಿ ನೀಡಿರುವ ಕೈ ಸರ್ಕಾರ ಮಾತು ಎತ್ತಿದರೆ ನುಡಿದ್ದಂತೆ ನಡೆದಿದ್ದೇವೆ. ನಮ್ಮ ಸರ್ಕಾರ ಗ್ಯಾರಂಟಿ ಸರ್ಕಾರ ಅಂತಾ ಕೊಚ್ಚಿಕೊಳ್ಳುತ್ತೆ. ಜನರಿಗೆ ಪಂಚ ಗ್ಯಾರಂಟಿ ನೀಡಿರುವ ಸರ್ಕಾರ ಬಡ ಶಾಲಾ ಮಕ್ಕಳನ್ನ ಮಾತ್ರ ಪ್ರಪಾತಕ್ಕೆ ತಳ್ಳಿದೆ. ಶೈಕ್ಷಣಿಕ ವರ್ಷ ಆರಂಭವಾದರೂ ಶಾಲಾ ಮಕ್ಕಳಿಗೆ ನೀಡಬೇಕಾದ ಮೂಲಭೂತ ಸೌಲಭ್ಯ ಒದುಗಿಸದೇ ಪರದಾಡುವಂತೆ ಮಾಡಿದೆ. ಶಾಲೆ ಆರಂಭದಲ್ಲಿಯೇ ಶೂ ಸಾಕ್ಸ್ ನೀಡದೆ ನಿರ್ಲಕ್ಷ್ಯವಹಿಸಿದ ಶಿಕ್ಷಣ ಇಲಾಖೆ ವಿರುದ್ಧ ಪೋಷಕರು ಆಕ್ರೋಶ ಹೊರ ಹಾಕಿದ್ದಾರೆ.

ಇದನ್ನೂ ಓದಿ: ತುಮಕೂರು ಜಿಲ್ಲಾಡಳಿತ ನಿರ್ಲಕ್ಷ್ಯ: ಮಳೆಯಿಂದ ಸಮಸ್ಯೆಯಾಗಬಾರದೆಂದು ತಾವೇ ಗುದ್ದಲಿ ಹಿಡಿದು ರಾಜಕಾಲುವೆ ಹೂಳು ತೆಗೆದ 70ರ ವೃದ್ಧ

ಇನ್ನು ರಾಜ್ಯದ ಸರಕಾರಿ ಶಾಲೆಗಳಲ್ಲಿ 2024-25ನೇ ಶೈಕ್ಷಣಿಕ ಸಾಲಿನಲ್ಲಿ 1 ರಿಂದ 10ನೇ ತರಗತಿವರೆಗೆ ವ್ಯಾಸಂಗ ಮಾಡುತ್ತಿರುವ ಅಂದಾಜು 42.65 ಲಕ್ಷ ವಿದ್ಯಾರ್ಥಿಗಳಿಗೆ ಒಂದು ಜೊತೆ ಶೂ ಮತ್ತು ಎರಡು ಜೊತೆ ಸಾಕ್ಸ್‌ ಖರೀದಿಗೆ ಸರಕಾರ ಈಗಾಗಲೇ 121 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಕಳಪೆ ಶೂ ಪೂರೈಕೆ ಬಗ್ಗೆ ದೂರು ಬಂದಲ್ಲಿ ತಪಾಸಣೆಗೆ ಒಳಪಡಿಸಿ ಶಿಸ್ತು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ. ಶೂ ಹಾಗು ಸಾಕ್ಸ್ ಸ್ಥಳೀಯವಾಗಿ ಖರೀದಿಸಿ ವಿತರಣೆ ಮಾಡುವ ಜವಾಬ್ದಾರಿಯನ್ನು ಆಯಾ ಶಾಲೆಯ ಶಾಲಾಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಗೆ ವಹಿಸಿದೆ. ಶೂ ಹಾಗೂ ಸಾಕ್ಸ್‌ ಖರೀದಿಗೆ 1 ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ 265 ರೂ., 6 ರಿಂದ 8ನೇ ತರಗತಿ ವಿದ್ಯಾರ್ಥಿಗಳಿಗೆ 295 ರೂ. ಹಾಗೂ 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ 325 ರೂ. ನಿಗದಿ ಮಾಡಿದೆ. ಆದ್ರೆ ಇದರ ದುಡ್ಡನ್ನ ಶಾಲೆಗೆ ನೀಡಿಲ್ಲ. ಹೀಗಾಗಿ ಶೂ ಸಾಕ್ಸ್ ಖರೀದಿಗೆ ಸೂಚನೆ ಬಂದಿದೆ. ಹಣ ಬಂದಿಲ್ಲ. ಹಣ ಬಂದ ಮೇಲೆ ಖರೀದಿ ಮಾಡ್ತೀವಿ ಎಂದು ಶಾಲೆಗಳ ಮುಖ್ಯಸ್ಥರು ಸುಮ್ಮನಾಗಿವೆ.

ಒಟ್ನಲ್ಲಿ ಶಾಲೆಗಳು ಶುರುವಾಗಿವೆ. ಈ ಬಾರಿ ಮಕ್ಕಳು ಶಾಲೆಗೆ ಬರುತ್ತಿದ್ದಂತೆ ಎರಡು ಜೊತೆ ಸಮವಸ್ತ್ರ ಮತ್ತು ಪಠ್ಯಪುಸ್ತಕ ಹಾಗೂ ಶೂ ಸಾಕ್ಸ್ ನೀಡುತ್ತೇವೆ ಅಂತ ಹೇಳಿದ್ದ ಶಿಕ್ಷಣ ಇಲಾಖೆ ಪ್ರತೀ ಬಾರಿಯಂತೆ ಈ ಬಾರಿಯೂ ವಿತರಣೆ ತಡಗೊಳಿಸಿದೆ. ಸಮವಸ್ತ್ರ ಮಾತ್ರ ನೀಡಿದ್ದು ಶೂ ಸಾಕ್ಸ್ ಗಳನ್ನ ಸಮಯಕ್ಕೆ ಸರಿಯಾಗಿ ವಿತರಿಸದೆ ನಿರ್ಲಕ್ಷ್ಯ ವಹಿಸಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ