ಕೃಷಿ ಕಾಯ್ದೆ- ಬೆಲೆ ಏರಿಕೆ ವಿರೋಧಿಸಿ ಭಾರತ್ ಬಂದ್: ಬೆಂಗಳೂರಿನಲ್ಲಿ ಬಂದ್ ಠುಸ್ ಪಟಾಕಿ
ಬೆಂಗಳೂರಿನಲ್ಲಿ ಬಂದ್ಗೆ ಬೆಂಬಲ ನೀಡದೇ ಎಂದಿನಂತೆ ವಾಹನ ಸಂಚರಿಸುತ್ತಿವೆ. ದೇವನಹಳ್ಳಿ ಎರ್ಪೋರ್ಟ್ ರಸ್ತೆಯ ಹೆಬ್ಬಾಳ ಭಾಗದಲ್ಲಿ ಎಂದಿನಂತೆ ವಾಹನ ಸಂಚಾರ ಆರಂಭವಾಗಿದೆ.
ಬೆಂಗಳೂರು: ಕೃಷಿ ಕಾಯ್ದೆ ಹಾಗೂ ಬೆಲೆ ಏರಿಕೆ ವಿರೋಧಿಸಿ ಇಂದು ( ಸೆಪ್ಟೆಂಬರ್ 27) ಭಾರತ್ ಬಂದ್ಗೆ ಕರೆ ನೀಡಲಾಗಿದೆ. ಆದರೆ ಬೆಂಗಳೂರಿನಲ್ಲಿ ಬಂದ್ಗೆ ಬೆಂಬಲ ನೀಡದೇ ಎಂದಿನಂತೆ ವಾಹನ ಸಂಚರಿಸುತ್ತಿವೆ. ದೇವನಹಳ್ಳಿ ಎರ್ಪೋರ್ಟ್ ರಸ್ತೆಯ ಹೆಬ್ಬಾಳ ಭಾಗದಲ್ಲಿ ಎಂದಿನಂತೆ ವಾಹನ ಸಂಚಾರ ಆರಂಭವಾಗಿದೆ. ಓಲಾ ಊಬರ್, ಟ್ಯಾಕ್ಸಿ, ಆಟೋ, ಬಿಎಂಟಿಸಿ ಕೆಎಸ್ಆರ್ಟಿಸಿ, ಬಸ್ಗಳು ಎಂದಿನಂತೆ ಓಡಾಡುತ್ತಿವೆ.
ಹೋಟೆಲ್ ಉದ್ಯಮ ನೈತಿಕ ಬೆಂಬಲ ರೈತ ಸಂಘಟನೆಗಳಿಂದ ಭಾರತ್ ಬಂದ್ಗೆ ಕರೆ ನೀಡಿದ್ದು, ಹೋಟೆಲ್ ಉದ್ಯಮ ನೈತಿಕ ಬೆಂಬಲ ನೀಡಿದೆ. ಮೆಜೆಸ್ಟಿಕ್ ಸುತ್ತಲೂ ಹೋಟೆಲ್ಗಳು ಯಥಾಸ್ಥಿತಿಯಲ್ಲಿ ತೆರೆದಿದ್ದು, ಗ್ರಾಹಕರಿಗೆ ಸೇವೆ ನೀಡುತ್ತಿವೆ.
ಕೆ.ಆರ್.ಪುರ ಮಾರ್ಕೆಟ್: ವರ್ತಕರಿಂದ ಅಗತ್ಯ ಸಾಮಾಗ್ರಿಗಳ ಖರೀದಿ ಭಾರತ್ ಬಂದ್ ಹಿನ್ನೆಲೆ ಇಂದು ಗ್ರಾಹಕರ ಸಂಖ್ಯೆಯಲ್ಲಿ ಕೊಂಚ ಇಳಿಕೆ ಕಂಡುಬಂದಿದೆ. ನಿನ್ನೆಯೇ ಅಗತ್ಯ ಸಾಮಾಗ್ರಿಗಳನ್ನು ಜನರು ಖರೀದಿಸಿದ್ದು, ಇಂದು ಬೀದಿಬದಿ ವ್ಯಾಪಾರಿಗಳಿಂದ ಹೆಚ್ಚು ಖರೀದಿಸಲಾಗುತ್ತಿದೆ. ಆಟೋ, ದ್ವಿಚಕ್ರ ವಾಹನಗಳ ಮೂಲಕ ಹೂವು, ತರಕಾರಿ, ಹಣ್ಣು ಸೇರಿದಂತೆ ಅಗತ್ಯ ಸಾಮಾಗ್ರಿಗಳನ್ನು ಮೂಟೆಗಳಲ್ಲಿ ಸಾಗಾಣೆ ಮಾಡಲಾಗುತ್ತಿದೆ.
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬೆಳ್ಳಂ ಬೆಳಗ್ಗೆ ಪ್ರಯಾಣಿಕರ ದಂಡು ಬೆಲೆ ಏರಿಕೆ ಕೃಷಿ ಮಸೂದೆ ವಿರೋಧಿಸಿ ಭಾರತ್ ಬಂದ್ ಹಿನ್ನಲೆ, ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬೆಳ್ಳಂ ಬೆಳಗ್ಗೆ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದಾರೆ. ಬಂದ್ ಹಿನ್ನಲೆ ಬಸ್ ಸಿಗುತ್ತೊ, ಇಲ್ಲವೋ ಎಂದು ಬೆಳಗ್ಗೆಯೇ ಪ್ರಯಾಣಿಕರು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಬಳಿಯ ಕೆಐಎಬಿಗೆ ಆಗಮಿಸಿದ್ದಾರೆ.
ಇದನ್ನೂ ಓದಿ:
Bharat Bandh: ಸೆಪ್ಟೆಂಬರ್ 27 ಭಾರತ್ ಬಂದ್, ಇದಕ್ಕೆ ಯಾರ್ಯಾರ ಬೆಂಬಲವಿದೆ?
ಸೆ 27ರ ಭಾರತ್ ಬಂದ್ಗೆ ಹಾವೇರಿ, ದಾವಣಗೆರೆ ರೈತ ಸಂಘಟನೆಗಳು, ಓಲಾ-ಊಬರ್ ಕಾರ್ಮಿಕರ ಬೆಂಬಲ
Published On - 7:42 am, Mon, 27 September 21