AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ಶಾಕಿಂಗ್ ಘಟನೆ: ಸತ್ತ ಸಾಕು ನಾಯಿ ಜತೆ 3 ದಿನ ಕಳೆದ ಯುವತಿ!

ಮನುಷ್ಯನಿಗೆ ನಡುಕ ಹುಟ್ಟಿಸುತ್ತೆ ಈ ಸ್ಟೋರಿ. ಮಹಿಳೆಯ ಈ ಕೃತ್ಯಕ್ಕೆ ಪ್ರಾಣಿ ಪ್ರಿಯರು, ಪೊಲೀಸರು ಹಾಗೂ ಅಕ್ಕಪಕ್ಕದ ಮನೆಯವರು ಬೆಚ್ಚಿ ಬಿದ್ದಿದ್ದಾರೆ. ಹೌದು.. ಬೆಂಗಳೂರಿನ ಮಹದೇವಪುರದ ಅಪಾರ್ಟ್ಮೆಂಟ್​ ವೊಂದರಲ್ಲಿ ಯುವತಿಯೊಬ್ಬಳು ತಾನು ಸಾಕಿದ್ದ ಲ್ಯಾಬ್ರಡಾರ್ ರಿಟ್ರೈವರ್ ನಾಯಿಗೆ ಚಿತ್ರ ಹಿಂಸೆ ಕೊಟ್ಟು ಸಾಯಿಸಿದ್ದಾಳೆ. ಅಲ್ಲದೇ ಜೀವ ಬಿಟ್ಟಿರೋ ನಾಯಿ ಮೃತದೇಹದ ಜೊತೆ ಮೂರ್ನಾಲ್ಕು ದಿನ ವಾಸ ಮಾಡಿರುವ ಶಾಕಿಂಗ್ ಘಟನೆ ಬೆಳಕಿಗೆ ಬಂದಿದೆ.

ಬೆಂಗಳೂರಿನಲ್ಲಿ ಶಾಕಿಂಗ್ ಘಟನೆ: ಸತ್ತ ಸಾಕು ನಾಯಿ ಜತೆ 3 ದಿನ ಕಳೆದ ಯುವತಿ!
Woman With Dog
ರಮೇಶ್ ಬಿ. ಜವಳಗೇರಾ
|

Updated on: Jun 29, 2025 | 4:31 PM

Share

ಬೆಂಗಳೂರು, (ಜೂನ್ 29): ಯುವತಿಯೋರ್ವಳು ತನ್ನ ಮನೆಯಲ್ಲಿದ್ದ ಸಾಕು ನಾಯಿಯನ್ನು (pet dog) ಕೊಂದು ಅದರ ಜೊತೆ ನಾಲ್ಕು ದಿನ ಕಳೆದಿರುವ ಆಘಾತಕಾರಿ ಘಟನೆ ಬೆಂಗಳೂರಿನಲ್ಲಿ  (Bengaluru) ನಡೆದಿದೆ. ಮಹದೇವಪುರದ ದೊಡ್ಡನಕ್ಕುಂದಿಯ ಅಕ್ಮೆ ಬಾಲ್ಲೇಟ್‌ ಅಪಾರ್ಟ್‌ಮೆಂಟ್‌ ನಿವಾಸಿ ತ್ರಿಪರ್ಣಾ ಪಾಯಿಕ್‌ ಮೇಲೆ ಈ ಆರೋಪ ಬಂದಿದ್ದು, ಆಕೆಯ ಮನೆಯಿಂದ ಹೊರಬರುತ್ತಿದ್ದ ದುರ್ವಾಸನೆ ಸಹಿಸಲಾರದೆ ಬಿಬಿಎಂಪಿ ಪಶುಸಂಗೋಪಾನಾ ಇಲಾಖೆಗೆ ಅಪಾರ್ಟ್‌ಮೆಂಟ್ ನಿವಾಸಿಗಳು ದೂರು ನೀಡಿದ್ದರು. ಈ ಅದರನ್ವಯ ಅಧಿಕಾರಿಗಳು ಆಕೆ ಫ್ಲ್ಯಾಟ್‌ನಲ್ಲಿ ಪರಿಶೀಲನೆ ಮಾಡಿದಾಗ ನಾಯಿ ಮೃತದೇಹ ಪತ್ತೆಯಾಗಿದೆ.

ಮಹದೇವಪುರದ AKME ballet apartment ಅಸೋಸಿಯೇಷನ್ 404 ಫ್ಲ್ಯಾಟ್​ ನಲ್ಲಿ ಲ್ಲಿ ಮಾಲಕಿ ತ್ರಿಪರ್ಣಾ ಎಂಬಾಕೆ ನಾಯಿಗೆ ಚಿತ್ರಹಿಂಸೆ ಕೊಟ್ಟು ಸಾಯಿಸಿದ್ದು, ಮನೆಯಲ್ಲಿ ಮೃತದೇಹದ ಗುಬ್ಬು ವಾಸನೆ ಮಧ್ಯೆಯೇ ವಾಸ ಮಾಡಿದ್ದಾಳೆ. ವಾಸನೆಯಿಂದ ಕಂಗೆಟ್ಟ ಸ್ಥಳೀಯರು ಪಾಲಿಕೆ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಈ ವಿಚಾರ ತಿಳಿದ ಕೂಡಲೇ ಸ್ಥಳಕ್ಕೆ ದೌಡಾಯಿಸಿದ ಬಿಬಿಎಂಪಿ ಪಶುಸಂಗೋಪಾನಾ ಸಹಾಯಕ ನಿರ್ದೇಶಕರು ಮತ್ತು ಪ್ರಾಣಿ ಪ್ರಿಯರು, ತ್ರಿಪರ್ಣಾ ಮನೆ ಒಳಗಡೆ ಹೋಗುತ್ತಿದ್ದಂತೆ ಶಾಕ್ ಆಗಿದ್ದಾರೆ. ಮನೆಯಲ್ಲಿ ಊಟ ಇಲ್ಲದೇ 2 ಶ್ವಾನಗಳು ಬಳಲಿದ್ರೆ, ಮತ್ತೊಂದು ಶ್ವಾನ ಜೀವಬಿಟ್ಟು ಗೊಬ್ಬು ನಾರುತ್ತಿತ್ತು.

ಇದನ್ನೂ ಓದಿ: ಬೆಂಗಳೂರಿನಲ್ಲಿ ಮಹಿಳೆಯ ಭಯಾನಕ ಕೊಲೆ: ಶವವನ್ನ ಮೂಟೆಕಟ್ಟಿ ಕಸದ ಲಾರಿಯಲ್ಲಿಟ್ಟು ಪರಾರಿ

ಪಶ್ಚಿಮ ಬಂಗಾಳ ಮೂಲದ ತ್ರಿಪರ್ಣಾ ಸಾಫ್ಟ್‌ವೇರ್ ಕಂಪನಿಯ ಉದ್ಯೋಗಿಯಾಗಿದ್ದು, ಐದು ವರ್ಷಗಳಿಂದ ಅಕ್ಮೆ ಅಪಾರ್ಟ್‌ಮೆಂಟ್‌ನಲ್ಲಿ ಏಕಾಂಗಿಯಾಗಿ ನೆಲೆಸಿದ್ದಾರೆ. ಆದರೆ ತಮ್ಮ ಫ್ಲ್ಯಾಟ್‌ನಲ್ಲಿ ಆಕೆ ಮೂರು ನಾಯಿಗಳನ್ನು ಸಾಕಿದ್ದರು. ಅಲ್ಲದೆ ನೆರೆಹೊರೆಯವರ ಜತೆ ಆಕೆ ಅನ್ಯೋನ್ಯವಾಗಿರಲಿಲ್ಲ. ಯಾರೊಂದಿಗೆ ಮಾತುಕತೆ ಸಹ ಇರಲಿಲ್ಲ ಎನ್ನಲಾಗಿದೆ.

ಮೂರ್ನಾಲ್ಕು ದಿನಗಳಿಂದ  ದುರ್ವಾಸನೆ

ಕಳೆದ ಮೂರ್ನಾಲ್ಕು ದಿನಗಳಿಂದ ತ್ರಿಪರ್ಣಾ ಅವರ ಫ್ಲ್ಯಾಟ್‌ನಿಂದ ಸತ್ತ ಪ್ರಾಣಿಯ ದುರ್ವಾಸನೆ ಬಂದಿದೆ. ಈ ಬಗ್ಗೆ ಆಕೆಯನ್ನು ಅಪಾರ್ಟ್‌ಮೆಂಟ್‌ ನಿವಾಸಿಗಳು ಪ್ರಶ್ನಿಸಿದಾಗ ಜಗಳವಾಗಿದೆ. ಕೊನೆಗೆ ಬಿಬಿಎಂಪಿ ಕಚೇರಿಗೆ ಕರೆ ಮಾಡಿ ಸ್ಥಳೀಯರು ಮಾಹಿತಿ ನೀಡಿದ್ದಾರೆ. ಅದರನ್ವಯ ತ್ರಿಪರ್ಣಾ ಅವರ ಫ್ಲ್ಯಾಟ್‌ಗೆ ಜೂನ್ 26 ರಂದು ಮಂಗಳವಾರ ಪ್ರಶುಸಂಗೋಪನಾ ವಿಭಾಗದ ಸಹಾಯಕ ನಿರ್ದೇಶಕ ಡಾ.ಕೆ.ಎಲ್‌.ರುದ್ರೇಶ್ ಕುಮಾರ್ ತಂಡವು ತೆರಳಿದೆ. ಆಗ ತನ್ನ ಫ್ಲ್ಯಾಟ್‌ ಒಳಗೆ ಅಧಿಕಾರಿಗಳು ಪ್ರವೇಶಿಸಲು ಆಕೆ ನಿರ್ಬಂಧಿಸಿದ್ದಾಳೆ.

ಈ ವೇಳೆ ಅಧಿಕಾರಿ ಮತ್ತು ತ್ರಿಪರ್ಣಾ ಮಧ್ಯೆ ಬಿರುಸಿನ ಮಾತುಕತೆ ನಡೆದಿದೆ. ಆಗ ಪೊಲೀಸ್ ನಿಯಂತ್ರಣ ಕೊಠಡಿ (ನಮ್ಮ-122)ಗೆ ಕರೆ ಮಾಡಿ ಆಕೆ ದೂರು ನೀಡಿದ್ದಾಳೆ. ಕೂಡಲೇ ಘಟನಾ ಸ್ಥಳಕ್ಕೆ ಮಹದೇವಪುರ ಠಾಣೆ ಪೊಲೀಸರು ಬಂದಿದ್ದು, ಅಂತಿಮವಾಗಿ ಪೊಲೀಸರ ಸಮ್ಮುಖದಲ್ಲಿ ಬಾಗಿಲು ತೆರೆದು ಅಧಿಕಾರಿಗಳನ್ನು ಆಕೆ ಒಳ ಬಿಟ್ಟಿದ್ದಾಳೆ.

ನಾಯಿಯನ್ನ ಬೆಡ್‌ಶೀಟ್‌ ಸುತ್ತಿ ಬ್ಯಾಗ್​​ನಲ್ಲಿಟ್ಟಿದ್ದಳು

ಫ್ಲ್ಯಾಟ್‌ನಲ್ಲಿ ಗಬ್ಬು ವಾಸನೆ ಪರಿಶೀಲಿಸಿದಾಗ ಕೋಣೆಯಲ್ಲಿ ಬೆಡ್‌ಶೀಟ್‌ ಸುತ್ತಿ ಬ್ಯಾಗ್‌ನಲ್ಲಿಟ್ಟ ಸಾಕು ನಾಯಿ ಮೃತದೇಹ ಪತ್ತೆಯಾಗಿದೆ. ಇನ್ನುಳಿದ ಎರಡು ನಾಯಿಗಳು ನಿತ್ರಾಣ ಸ್ಥಿತಿಯಲ್ಲಿ ಪತ್ತೆಯಾಗಿವೆ. ಮೊದ ಮೊದಲು ಎರಡು ನಾಯಿ ಕಂಡು ಮತ್ತೊಂದು ನಾಯಿ ಬಗ್ಗೆ ಅಧಿಕಾರಿಗಳು ಪ್ರಶ್ನಿಸಿದಾಗ ಆಕೆ ಸರಿಯಾಗಿ ಉತ್ತರ ನೀಡಿಲ್ಲ. ಕೊನೆಗೆ ಕೋಣೆಯಲ್ಲಿ ತಪಾಸಣೆ ನಡೆಸಿದಾಗ ನಾಯಿ ಮೃತದೇಹ ಸಿಕ್ಕಿದೆ. ಸದ್ಯ ಈ ಸಂಬಂಧ ಮಹದೇವಪುರ ಠಾಣೆಯಲ್ಲಿ ಮಹಿಳೆಯ ವಿರುದ್ಧ FIR ದಾಖಲಾಗಿದೆ.

ತನ್ನ ಸಾಕು ನಾಯಿಗೆ ಚಿತ್ರ ಹಿಂಸೆ ನೀಡಿ ತ್ರಿಪರ್ಣಾ ಕೊಂದಿದ್ದಾಳೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಅಲ್ಲದೆ ಘಟನೆ ಬಗ್ಗೆ ಪಶುಪಾಲನಾ ಇಲಾಖೆ ಅಧಿಕಾರಿ ರುದ್ರೇಶ್ ಅವರು ನೀಡಿರುವ ದೂರಿನಲ್ಲಿ ಸಹ ನಾಯಿಗೆ ಚಿತ್ರ ಹಿಂಸೆ ನೀಡಿದ ಬಗ್ಗೆ ಉಲ್ಲೇಖವಾಗಿದೆ. ಆದರೆ ಹಸಿವಿನಿಂದ ನಾಯಿ ಸತ್ತಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಇನ್ನು ಈ ಬಗ್ಗೆ ಮಾತಾಡಿದ ಪ್ರಾಣಿ ಪ್ರಿಯೆ ಸಾಧನಾ ಹೆಗ್ಡೆ ಅವರು, ಘಟನೆ ನಡೆದು 2 ದಿನ ಆಗಿದೆ. ಪೋಸ್ಟ್ ಮಾರ್ಟಮ್ ರಿಪೋರ್ಟ್ ಸಬ್ಮಿಟ್ ಮಾಡಿದ್ದೇವೆ. ಬ್ಲ್ಯಾಕ್ ಮ್ಯಾಜಿಕ್ ಬಳಕೆ ಬಗ್ಗೆ ಶಂಕೆ ಇದೆ. ಪೊಲೀಸರು ಇನ್ನು ಯಾಕೆ ತ್ರಿಪರ್ಣಾ ವಶಕ್ಕೆ ಪಡೆದಿಲ್ಲ ಅನ್ನೋ ಪ್ರಶ್ನೆ ಎದುರಾಗಿದೆ. ಪೊಲೀಸರ ತನಿಖೆ ಮುಂದುವರಿಯುತ್ತಿಲ್ಲ. ಬೆಂಗಳೂರು ಪೊಲೀಸರು ಅನಿಮಲ್ ಕೇಸ್ ಯಾವಾಗ ಗಂಭೀರವಾಗಿ ಪರಿಗಣಿಸುತ್ತಾರೆ ಎನ್ನುವುದು ಪ್ರಶ್ನೆಯಾಗಿಯೇ ಉಳಿದಿದೆ ಎಂದಿದ್ದಾರೆ.