AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಲಮಂಡಳಿ ಕಾಮಗಾರಿ: ಜುಲೈ 2ರ ವರೆಗೆ ಬೆಂಗಳೂರಿನ ಈ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧ

ಬೆಂಗಳೂರಿನ ಕದಿರೇನಹಳ್ಳಿ ಅಂಡರ್ ಪಾಸ್ ಬಳಿ BWSSB ಕಾಮಗಾರಿಯಿಂದ ಜೂನ್ 29 ರಿಂದ ಜುಲೈ 2 ರವರೆಗೆ ಸರ್ವೀಸ್ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧಸಲಾಗಿದೆ. ಈ ಬಗ್ಗೆ ಸಂಚಾರ ಪೊಲೀಸರು ಟ್ವೀಟ್​ ಮೂಲಕ ಮಾಹಿತಿ ನೀಡಿದ್ದು, ಪರ್ಯಾಯ ಮಾರ್ಗಗಳನ್ನು ಬಳಸುವಂತೆ ಸೂಚಿಸಿದ್ದಾರೆ.

ಜಲಮಂಡಳಿ ಕಾಮಗಾರಿ: ಜುಲೈ 2ರ ವರೆಗೆ ಬೆಂಗಳೂರಿನ ಈ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧ
ಪ್ರಾತಿನಿಧಿಕ ಚಿತ್ರ
ಗಂಗಾಧರ​ ಬ. ಸಾಬೋಜಿ
|

Updated on: Jun 30, 2025 | 8:00 AM

Share

ಬೆಂಗಳೂರು, ಜೂನ್ 30: ಕದಿರೇನಹಳ್ಳಿ (Kadarenahalli) ಅಂಡರ್ ಪಾಸ್ ಬಳಿ ಸರ್ವಿಸ್ ರಸ್ತೆಯಲ್ಲಿ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (BWSSB) ಕಾಮಗಾರಿ ನಡೆಯುತ್ತಿರುವುದರಿಂದ ಸರ್ವೀಸ್ ರಸ್ತೆಯಲ್ಲಿ ಜೂನ್​ 29 ರಿಂದ ಜುಲೈ 2ರ ವರೆಗೆ ವಾಹನ ಸಂಚಾರವನ್ನು ನಿರ್ಬಂಧಸಲಾಗಿದೆ. ಈ ಬಗ್ಗೆ ಬನಶಂಕರಿ ಸಂಚಾರ ಪೊಲೀಸ​​ರು ಮಾಹಿತಿ ನೀಡಿದ್ದಾರೆ. ಪರ್ಯಾಯ ಮಾರ್ಗಗಳು ಹೀಗಿವೆ.

ಪರ್ಯಾಯ ಮಾರ್ಗಗಳು ಹೀಗಿವೆ

ಡಾ. ಪುನೀತ್ ರಾಜಕುಮಾರ್ ರಿಂಗ್ ರಸ್ತೆಯ ಮೂಲಕ ಸಾರಕ್ಕಿ ಜಂಕ್ಷನ್ ಗೆ ಸಾಗಿ ಎಡತಿರುವು ಪಡೆದು ಕನಕಪುರ ರಸ್ತೆಯ ಮೂಲಕ ಸಾಗಬಹುದಾಗಿದೆ.

ಇದನ್ನೂ ಓದಿ
Image
ಕರ್ನಾಟಕದ ಈ ಜಿಲ್ಲೆಗಳಲ್ಲಿ ಜುಲೈ 3ರಿಂದ ಭಾರಿ ಮಳೆ
Image
ಕಾಂಗ್ರೆಸ್ ಗೊಂದಲ, ಬಿಕ್ಕಟ್ಟು ಶಮನಕ್ಕೆ ಇಂದು ಬೆಂಗಳೂರಿಗೆ ಸುರ್ಜೇವಾಲ
Image
ಕೆಪಿಸಿಸಿ ಸಾಮಾಜಿಕ ಮಾಧ್ಯಮ ವಿಭಾಗಕ್ಕೆ ಐಶ್ವರ್ಯಾ ಮಹಾದೇವ್ ನೂತನ ಮುಖ್ಯಸ್ಥೆ
Image
ಬೆಳಗಾವಿಯಲ್ಲಿ ಗೋ ರಕ್ಷಕರನ್ನು ಮರಕ್ಕೆ ಕಟ್ಟಿಹಾಕಿ ಮಾರಣಾಂತಿಕ ಹಲ್ಲೆ

ಬನಶಂಕರಿ ಸಂಚಾರ ಪೊಲೀಸ್​ ಟ್ವೀಟ್​

ಬಿಡಬ್ಲ್ಯೂಎಸ್ಎಸ್​ಬಿ ಕಾಮಗಾರಿಯಿಂದಾಗಿ, ವಾಟರ್ ಟ್ಯಾಂಕ್ ಜಂಕ್ಷನ್‌ನಿಂದ ಕೃಪಾನಿಧಿ ಜಂಕ್ಷನ್ ಕಡೆಗೆ ನಿಧಾನಗತಿಯ ಸಂಚಾರವಿರಲಿದೆ ಎಂದು ಬೆಂಗಳೂರು ಸಂಚಾರ ಪೊಲೀಸರು ಸಂಚಾರ ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ಕೆಪಿಸಿಸಿ ಸಾಮಾಜಿಕ ಮಾಧ್ಯಮ ವಿಭಾಗಕ್ಕೆ ಐಶ್ವರ್ಯಾ ಮಹಾದೇವ್ ನೂತನ ಮುಖ್ಯಸ್ಥೆ

ಇನ್ನು ಮಾರತ್ತಹಳ್ಳಿ ಪೊಲೀಸ್ ಠಾಣೆಯ ಎದುರುಗಡೆಯ ಹೊರ ವರ್ತುಲ ರಸ್ತೆಯಲ್ಲಿ ಮೆಟ್ರೋ ಪಿಲ್ಲರ್ ಕೆಲಸ ನಡೆಯುತ್ತಿರುವುದರಿಂದ, ಕಾಡುಬೀಸನಹಳ್ಳಿಯಿಂದ ಕಲಾಮಂದಿರದ ಕಡೆಗೆ ಮತ್ತು ಮಾರತ್ತಹಳ್ಳಿಯಿಂದ ಕಾಡುಬೀಸನಹಳ್ಳಿ ಕಡೆಗೆ ಸಂಚಾರ ನಿಧಾನವಾಗಿರಲಿದ್ದು, ಪ್ರಯಾಣಿಕರು ಸಹಕರಿಸುವಂತೆ ಕೋರಲಾಗಿದೆ.

ಇದನ್ನೂ ಓದಿ: ಸೆಡೆಂಟರಿ ಜೀವನಶೈಲಿ ಮತ್ತು ಒತ್ತಡ ಹೃದಯಾಘಾತಗಳಿಗೆ ಕಾರಣವಾಗುತ್ತಿವೆ: ಡಾ ಕೆಎಸ್ ಸದಾನಂದ, ಹೃದ್ರೋಗ ತಜ್ಞ

ಟ್ಯಾನಿ ರಸ್ತೆಯಲ್ಲಿ ಚರಂಡಿ ಕಾಮಗಾರಿ ಕೆಲಸ ಕೂಡ ನಡೆಯುತ್ತಿರುವುದರಿಂದ ನಾಗವಾರ ಕಡೆಗೆ ನಿಧಾನಗತಿಯ ಸಂಚಾರವಿರಲಿದೆ. ಅದೇ ರೀತಿಯಾಗಿ ಬಿಬಿಎಂಪಿ ಕಾಮಗಾರಿಯಿಂದಾಗಿ ಪೆರಿಯಾರ್ ವೃತ್ತದಿಂದ ನಗರದ ಕಡೆಗೆ ನಿಧಾನಗತಿಯ ಸಂಚಾರವಿರಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.