AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಾಲೆ ಆರಂಭದ ನಡುವೆ ಬಿಬಿಎಂಪಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ; ಶಿಕ್ಷಣದ ಗುಣಮಟ್ಟ ಕುಸಿಯೋ ಆತಂಕ

ಬಿಬಿಎಂಪಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಎದುರಾಗಿದ್ದು ಇನ್ನು ಕೂಡ ನೇಮಕಾತಿ ಶುರುವಾಗಿಲ್ಲ. ಕಳೆದ ಮೂರು ದಿನಗಳ ಹಿಂದಷ್ಟೇ ಬಿಬಿಎಂಪಿ ಶಾಲಾ ಶಿಕ್ಷಕರ ನೇಮಕ್ಕೆ ಸೆಕ್ಯುರಿಟಿ ಏಜೆನ್ಸಿಗೆ ಜವಾಬ್ದಾರಿ ನೀಡಿದ್ದು ಭಾರೀ ಚರ್ಚೆಯಾಗಿತ್ತು. ಬಳಿಕ ಟೆಂಡರ್ ರದ್ದು ಮಾಡಿದ್ರೂ ಸದ್ಯ ಇನ್ನೂ ಶಿಕ್ಷಕರ ನೇಮಕವಾಗಿಲ್ಲ.

ಶಾಲೆ ಆರಂಭದ ನಡುವೆ ಬಿಬಿಎಂಪಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ; ಶಿಕ್ಷಣದ ಗುಣಮಟ್ಟ ಕುಸಿಯೋ ಆತಂಕ
ಸಾಂದರ್ಭಿಕ ಚಿತ್ರ
ಶಾಂತಮೂರ್ತಿ
| Edited By: |

Updated on: Jun 01, 2024 | 7:08 AM

Share

ಬೆಂಗಳೂರು, ಜೂನ್.01: ಬಿಬಿಎಂಪಿ ಶಾಲೆಗಳಲ್ಲಿ (BBMP Schools) ತರಗತಿಗಳು ಶುರುವಾದ್ರೂ ಇನ್ನೂ ಶಿಕ್ಷಕರ ನೇಮಕಾತಿ ಅಗಿಲ್ಲ. ಸೆಕ್ಯುರಿಟಿ ಏಜೆನ್ಸಿ ಮೂಲಕ ಶಿಕ್ಷಕರ ನೇಮಕಕ್ಕೆ ವಿರೋಧ ಬಂದ ಬಳಿಕ ಟೆಂಡರ್ ರದ್ದುಮಾಡಿರೋ ಪಾಲಿಕೆ, ಇದೀಗ SDMC ಮೂಲಕ ಶಿಕ್ಷಕರ ನೇಮಕಕ್ಕೆ ಮುಂದಾಗಿದೆ. ಇದೆಲ್ಲದರ ಮಧ್ಯೆ ಮಕ್ಕಳು ಪಾಠ ಕೇಳೋಕೆ ಶಾಲೆಗೆ ಬಂದ್ರೂ ಪಾಠ ಮಾಡೋದಕ್ಕೆ ಶಿಕ್ಷಕರ ಕೊರತೆ ಇರೋದರಿಂದ ಪಾಠ-ಪ್ರವಚನಕ್ಕೆ ಅಡ್ಡಿಯಾಗ್ತಿದೆ ಅನ್ನೋ ಆರೋಪ ಕೇಳಿಬರ್ತಿದೆ.

ತರಗತಿ ಶುರುವಾದ್ರೂ ಪಾಲಿಕೆ ಶಾಲೆಗಳಿಗಿಲ್ಲ ಶಿಕ್ಷಕರ ನೇಮಕ

ರಾಜ್ಯ ಸರ್ಕಾರದ ಯಡವಟ್ಟಿಗೆ ಬಿಬಿಎಂಪಿ ಶಾಲೆಗಳಲ್ಲಿ ಶಿಕ್ಷಕರ ಕೊರತೆಯಿಂದ ಮಕ್ಕಳಿಗೆ ಶಿಕ್ಷಣ ಸಿಗದೆ ಪರದಾಡೋ ಪರಿಸ್ಥಿತಿ ಎದುರಾಗಿದೆ. ಕಳೆದ ಮೂರು ದಿನಗಳ ಹಿಂದಷ್ಟೇ ಬಿಬಿಎಂಪಿ ಶಾಲಾ ಶಿಕ್ಷಕರ ನೇಮಕ್ಕೆ ಸೆಕ್ಯುರಿಟಿ ಏಜೆನ್ಸಿಗೆ ಜವಾಬ್ದಾರಿ ನೀಡಿದ್ದು ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇದಾದ ಬಳಿಕ ಟೆಂಡರ್ ರದ್ದು ಮಾಡಿದ್ರೂ ಸದ್ಯ ಇನ್ನೂ ಶಿಕ್ಷಕರ ನೇಮಕವಾಗಿಲ್ಲ. ಇತ್ತ ತರಗತಿಗಳು ಶುರುವಾದ್ರೂ ಶಿಕ್ಷಕರ ನೇಮಕವಾಗದೇ ಇರೋದು ಮಕ್ಕಳ ಶಿಕ್ಷಣದ ಮೇಲೆ ಪರಿಣಾಮ ಬೀರ್ತಿದೆ ಅನ್ನೋ ಆರೋಪ ಕೇಳಿಬರ್ತಿದೆ.

ಇದನ್ನೂ ಓದಿ: ಗುಜರಾತ್ ಅಗ್ನಿ ದುರಂತ ಬಳಿಕ ಎಚ್ಚೆತ್ತ ಪಾಲಿಕೆ; ಮಾಲ್, ಸ್ಟಾರ್ ಹೊಟೇಲ್, ಚಿತ್ರಮಂದಿರಗಳಲ್ಲೂ ಸೇಫ್ಟಿ ಚೆಕ್

ಸದ್ಯ ಬಿಬಿಎಂಪಿ ವ್ಯಾಪ್ತಿಯಲ್ಲಿ ಸುಮಾರು 20 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಈ ಮಕ್ಕಳಿಗೆ ಪಾಠ ಮಾಡೋದಕ್ಕೆ ಅಂತಾ ಪಾಲಿಕೆಯಲ್ಲಿ 150 ಕಾಯಂ ಶಿಕ್ಷಕರು ಮಾತ್ರ ಇದ್ದಾರೆ, ಉಳಿದ 700ಕ್ಕೂ ಹೆಚ್ಚು ಗುತ್ತಿಗೆ ಶಿಕ್ಷಕರು ಗುತ್ತಿಗೆ ಅಧಾರದ ಮೇಲೆ ಸೇವೆ ನೀಡ್ತಿದ್ರು, ಅದ್ರೆ ಗುತ್ತಿಗೆ ರದ್ದಾಗಿರೋದರಿಂದ ಶಿಕ್ಷಕರ ಕೊರತೆ ಎದುರಾಗಿದೆ.

ಇತ್ತ ಏಜೆನ್ಸಿ ರದ್ದು ಮಾಡಿದ ಬಳಿಕ SDMC ಮೂಲಕ ಶಿಕ್ಷಕರನ್ನ ನೇಮಿಸೋಕೆ ಸರ್ಕಾರ ಸಮಿತಿ ರಚನೆ ಮಾಡಿದೆ, ಈ ಸಮಿತಿ ಎಲ್ಲವನ್ನ ಪರಿಶೀಲಿಸಿ ಜೂನ್ 10ರೊಳಗೆ ಗುತ್ತಿಗೆ ಆಧಾರದಲ್ಲಿ ಶಿಕ್ಷಕರನ್ನ ನೇಮಿಸಬೇಕಿದೆ, ಆದ್ರೆ ಈಗಾಗಲೇ ತರಗತಿಗಳು ಶುರುವಾಗಿದ್ದು, ಶಿಕ್ಷಕರ ನೇಮಕ ಆಗೋ ತನಕ ಮಕ್ಕಳು ಪಾಠ-ಪ್ರವಚನವಿಲ್ಲದೇ ಕಾಯೋ ಅನಿವಾರ್ಯತೆ ಎದುರಾಗಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಬಿಗ್ ಬಾಸ್ ಮುಗಿದ ಬಳಿಕ ಬರಲಿರೋ ಧಾರಾವಾಹಿ ಯಾವುದು? ಪ್ರೋಮೋ ರಿಲೀಸ್
ಬಿಗ್ ಬಾಸ್ ಮುಗಿದ ಬಳಿಕ ಬರಲಿರೋ ಧಾರಾವಾಹಿ ಯಾವುದು? ಪ್ರೋಮೋ ರಿಲೀಸ್