ಸಿದ್ದರಾಮಯ್ಯ, ಯಡಿಯೂರಪ್ಪ, ದೇವೇಗೌಡರನ್ನ ಒಂದೇ ಪಕ್ಷಕ್ಕೆ ತರ್ತೀನಿ -ಎಂಎಲ್‌ಸಿ ಸಿ.ಎಂ. ಇಬ್ರಾಹಿಂ
ಈ ವೇಳೆ ಮಾತನಾಡಿದ ಎಂಎಲ್‌ಸಿ ಸಿಎಂ ಇಬ್ರಾಹಿಂ, ಡಿ.ಕೆ.ಶಿವಕುಮಾರ್ ಸಹ ಒಂದೇ ಪಕ್ಷಕ್ಕೆ ತರುವಂತ ಪ್ರಯತ್ನ ಮಾಡುತ್ತೇನೆ. ನನ್ನ ನಿಲುವು ಒಂದೇ ಇರುತ್ತೆ ಇದರಿಂದ ಹಿಂದೆ ಸರಿಯುವ ಪ್ರಶ್ನೆ ಇಲ್ಲ.
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಮಾಜಿ ಪ್ರಧಾನಿ ದೇವೇಗೌಡರನ್ನ ಒಂದೇ ವೇದಿಕೆಗೆ ತರ್ತೀನಿ. ಒಂದೇ ಪಕ್ಷದಲ್ಲಿ ಬಿಎಸ್‌ವೈ, ಸಿದ್ದರಾಮಯ್ಯ, ದೇವೇಗೌಡರು ಇರ್ತಾರೆ ಎಂದು ಎಂಎಲ್‌ಸಿ ಸಿ.ಎಂ. ಇಬ್ರಾಹಿಂ ಸ್ಫೋಟಕ ಹೇಳಿಕ ನೀಡಿದ್ದಾರೆ.
ಈ ವೇಳೆ ಮಾತನಾಡಿದ ಎಂಎಲ್‌ಸಿ ಸಿ.ಎಂ. ಇಬ್ರಾಹಿಂ, ಡಿ.ಕೆ.ಶಿವಕುಮಾರ್ ಸಹ ಒಂದೇ ಪಕ್ಷಕ್ಕೆ ತರುವಂತ ಪ್ರಯತ್ನ ಮಾಡುತ್ತೇನೆ. ನನ್ನ ನಿಲುವು ಒಂದೇ ಇರುತ್ತೆ ಇದರಿಂದ ಹಿಂದೆ ಸರಿಯುವ ಪ್ರಶ್ನೆ ಇಲ್ಲ. ಸಿದ್ದರಾಮಯ್ಯನವರ ಜೊತೆ ಈ ಹಿಂದೆಯೇ ಮಾತನಾಡಿದ್ದೇನೆ. ಕಲ್ಲನ್ನ ಮಾತನಾಡಿಸಿ ಕಲ್ಲಿನಿಂದ ನೀರು ತೆಗಿದವನು ನಾನು ಎಂದು ಸಿಎಂ ಇಬ್ರಾಹಿಂ ತಿಳಿಸಿದ್ದಾರೆ.
ಯಾವುದು ಆಗಲ್ಲ ಅಂತಿರೋ ಅದನ್ನ ಮಾಡಿ ತೋರಿಸ್ತಿನಿ. ದೇವೇಗೌಡರು ಪ್ರಧಾನಿ ಆಗ್ತಾರೆ ಅಂತ ಯಾರು ಅಂದುಕೊಂಡಿರಲಿಲ್ಲ. ಅದನ್ನ ಮಾಡಿದವನು ನಾನು. ಕಾಂಗ್ರೆಸ್‌ನಲ್ಲೂ ಅಲ್ಪ ಸಂಖ್ಯಾತರಿಗೆ ಸ್ಥಾನ ಮಾನವಿಲ್ಲ. ನಾನು ಈ ಬಗ್ಗೆ ಸುಮಾರು ಸರಿ ಹೇಳಿದ್ದೇನೆ. ದೆಹಲಿಗೆ ಹೋದ್ರು ಸಿದ್ದರಾಮಯ್ಯ ಮತ್ತು ಡಿಕೆಶಿ ಮಾತ್ರನಾ ಮುಸ್ಲಿಂನಲ್ಲಿ ಯಾರು ಸಹ ಲೀಡರ್ ಇಲ್ವಾ? ನಾನು ಯಾವುದೇ ರೀತಿಯ ಬ್ಲಾಕ್‌ಮೇಲ್ ಮಾಡಲ್ಲ. ಬ್ಲಾಕ್‌ಮೇಲ್ ಮಾಡ್ತಿಲ್ಲ ಇರೋದನ್ನ ಬಿಡಿತ್ತಿದ್ದೀನಿ. ಎಂಎಲ್‌ಸಿ ಸ್ಥಾನವನ್ನೇ ಬಿಡುತ್ತಿದ್ದೇನೆ. ನನ್ನ ಮನೆಗೆ ಜನ ಬರ್ತಾರೆ ಹೊರತು ಇ.ಡಿ.ಯವರು ಬರಲ್ಲ ಎಂದರು.
ಇದನ್ನೂ ಓದಿ: ಧಾರವಾಡ: ಮತಾಂತರಕ್ಕೆ ಯತ್ನ ಆರೋಪ; ಮನೆ ಮೇಲೆ ಭಜರಂಗದಳ ಕಾರ್ಯಕರ್ತರ ದಾಳಿ
Published On - 10:58 am, Tue, 12 October 21