ಬೆಂಗಳೂರು, (ಅಕ್ಟೋಬರ್ 20): ಇಂದಿರಾ ಕ್ಯಾಂಟೀನ್ (Indira Canteen) ಹಸಿದವರ ಹೊಟ್ಟೆ ತುಂಬಿಸೋ, ಬಡವರು ಬಾಯಿ ಚಪ್ಪರಿಸಬಹುದಾದ ಊಟ-ಉಪಾಹಾರದ ಮಂದಿರ. 2016ರಲ್ಲಿ ಸಿದ್ದರಾಮಯ್ಯನವರು ಸಿಎಂ ಆಗಿದ್ದಾಗ ಜಾರಿ ಮಾಡಿದ ಯೋಜನೆ ಹಾಗೂ ಕನಸಿನ ಕೂಸೇ ಇಂದಿರಾ ಕ್ಯಾಂಟೀನ್. ಆದ್ರೆ, ಈಗ ಸಿದ್ದರಾಮಯ್ಯನವರೇ ಸಿಎಂ ಆಗಿದ್ರು ಇಂದಿರಾ ಕ್ಯಾಂಟೀನ್ಗಳ ದುರಸ್ತಿ ಕಾರ್ಯ ನಡೆಯುತ್ತಿಲ್ಲ.
ಇದುವರೆಗೆ ಬಿಬಿಎಂಪಿ ವ್ಯಾಪ್ತಿಯಲ್ಲಿ 23 ಇಂದಿರಾ ಕ್ಯಾಂಟೀನ್ಗಳಿಗೆ ಈಗಾಗಲೇ ಬೀಗ ಬಿದ್ದಿದೆ. ಈ ಪೈಕಿ 17 ಮೊಬೈಲ್ ಇಂದಿರಾ ಕ್ಯಾಂಟೀನ್ಗಳು ಮತ್ತು 6 ನಿಗದಿತ ಜಾಗದಲ್ಲಿ ನಿರ್ಮಿಸಲಾಗಿರುವ ಕ್ಯಾಂಟೀನ್ಗಳ ಬಾಗಿಲು ಬಂದ್ ಆಗಿದೆ. ಬಡ ಮಧ್ಯಮ ಕೆಲಸಗಾರರಿಗೆ ಅನುಕೂಲವಾಗಿದ್ದ ಇಂದಿರಾ ಕ್ಯಾಂಟೀನ್ ಮುಚ್ಚಿದ್ರಿಂದ ಜನಸಾಮಾನ್ಯರು ಅಸಮಾಧಾನ ಹೊರಹಾಕಿದ್ದಾರೆ. ಅಷ್ಟಕ್ಕೂ ಬೆಂಗಳೂರಿನಲ್ಲಿ ಇರುವ ಇಂದಿರಾ ಕ್ಯಾಂಟೀನ್ಗಳು ಎಷ್ಟು? ಯಾವ್ಯಾವ ಏರಿಯಾಗಳಲ್ಲಿ ಈ ಇಂದಿರಾ ಕ್ಯಾಂಟೀನ್ ಬಾಗಿಲು ಬಂದ್ ಆಗಿದೆ ಎನ್ನುವ ವಿವರ ಇಲ್ಲಿದೆ.
ಇದನ್ನೂ ಓದಿ: ಅಧಿಕಾರಿ, ಗುತ್ತಿಗೆದಾರ ನಡುವೆ ಜಟಾಪಟಿ: ಇಬ್ಬರ ಜಗಳದಲ್ಲಿ ಇಂದಿರಾ ಕ್ಯಾಂಟೀನ್ ಬಂದ್
ಬೆಂಗಳೂರಿನಲ್ಲಿ ಒಟ್ಟು 198 ಇಂದಿರಾ ಕ್ಯಾಂಟೀನ್ಗಳನ್ನ ನಿರ್ಮಾಣ ಮಾಡಲಾಗಿದೆ. BBMP ವ್ಯಾಪ್ತಿಯಲ್ಲಿ 24 ಮೊಬೈಲ್ ಇಂದಿರಾ ಕ್ಯಾಂಟೀನ್ಗಳಿವೆ. ಅನುದಾನದ ಕೊರತೆ ಹಾಗೂ ಬಿಬಿಎಂಪಿಯಿಂದ ಕಳಪೆ ನಿರ್ವಹಣೆ ಮಾಡಿದ್ದು ಕ್ಯಾಂಟೀನ್ಗಳಿಗೆ ಕುತ್ತು ಬಂದಿದೆ. ಕಳಪೆ ಗುಣಮಟ್ಟದ ಆಹಾರ ಪೂರೈಕೆ ಮಾಡುತ್ತಿರೋದಾಗಿ ಆರೋಪ ಕೇಳಿ ಬಂದಿದೆ. ಮಾರತ್ತಹಳ್ಳಿ, ಪದ್ಮನಾಭನಗರ & ಕುಮಾರಸ್ವಾಮಿ ಲೇಔಟ್ನಲ್ಲಿ ಈಗಾಗಲೇ ಇಂದಿರಾ ಕ್ಯಾಂಟೀನ್ ಬಾಗಿಲು ಕ್ಲೋಸ್ ಆಗಿದೆ. ಹನುಮಂತನಗರ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಕ್ಯಾಂಟೀನ್ ಬಾಗಿಲು ಬಂದ್ ಆಗಿದೆ. ಅಲ್ಲಲ್ಲಿ ಸ್ಥಾಪಿಸಲಾದ 17 ಮೊಬೈಲ್ ಕ್ಯಾಂಟೀನ್ಗಳು ತುಕ್ಕು ಹಿಡೀತಾ ಇವೆ. 50ಕ್ಕೂ ಅಧಿಕ ಇಂದಿರಾ ಕ್ಯಾಂಟೀನ್ಗಳಿಗೆ ದುರಸ್ತಿ ಕಾರ್ಯ ಬೇಕಿದೆ. ಹೀಗಾಗಿ ಸಿದ್ದರಾಮಯ್ಯ ಕನಸಿನ ಇಂದಿರಾ ಕ್ಯಾಂಟೀನ್ ಯೋಜನೆಗೆ ಗ್ರಹಣ ಆವರಿಸಿದೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಿದ್ರೂ ಇಂದಿರಾ ಕ್ಯಾಂಟೀನ್ಗೆ ಹೈಟೆಕ್ ಸ್ಪರ್ಶ, ಮರು ಜೀವ ಸಿಗೋ ಸಿಗೋ ನಿರೀಕ್ಷೆ ಇತ್ತು. ಆದ್ರೆ, ಬಡವರ ಹಸಿವು ನೀಗಿಸ್ಬೇಕು ಎಂದು ಪಣ ತೊಟ್ಟು ಜಾರಿಗೆ ತಂದಿದ್ದ ಸಿಎಂ ಸಿದ್ದರಾಮಯ್ಯನವರ ಕನಸಿನ ಇಂದಿರಾ ಕ್ಯಾಂಟೀನ್ ಯೋಜನೆಗೆ ಕಾಯಕಲ್ಪ ಬೇಕಿದೆ. ಅದ್ಯಾವಾಗ ಇಂದಿರಾ ಕ್ಯಾಂಟೀನ್ಗಳಿಗೆ ಸರ್ಕಾರ ಮರುಜೀವ ನೀಡುತ್ತೆ ನೋಡಬೇಕು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ