
ಬೆಂಗಳೂರು, ಜೂ.3: ಪ್ರತಿ ಮುಂಗಾರು ಮಳೆಯಲ್ಲೂ ದೇಶದ ಮೆಟ್ರೋ ಸಿಟಿಗಳು ಎದುರಿಸುವ ಅತಿ ದೊಡ್ಡ ಸಮಸ್ಯೆಯೆಂದರೆ ರಸ್ತೆಗಳು ಜಲಾವೃತಗೊಳ್ಳುವುದು ಮತ್ತು ಚರಂಡಿಗಳು ಬ್ಲಾಕ್ ಆಗುವುದು. ಬೆಂಗಳೂರಿನ ಮುಳುಗುವ ಅಂಡರ್‌ಪಾಸ್‌ಗಳು, ಮುಂಬೈನ ಕಸದಿಂದ ತುಂಬಿಹೋಗಿರುವ ರಾಜಕಾಲುವೆಗಳು ಮತ್ತು ಚೆನ್ನೈನ ಜಲಾವೃತ ರಸ್ತೆಗಳು ಇದಕ್ಕೆ ಜೀವಂತ ಸಾಕ್ಷಿ. ಈ ಜ್ವಲಂತ ಸಮಸ್ಯೆಗೆ ಯಾವುದೇ ಕೋಟ್ಯಂತರ ರೂಪಾಯಿಗಳ ಬಜೆಟ್ ಅಥವಾ ರಾಕೆಟ್ ಸೈನ್ಸ್ ತಂತ್ರಜ್ಞಾನದ ಅಗತ್ಯವಿಲ್ಲ, ಕೇವಲ ಒಂದು ಸರಳ ‘ನೆಟ್’ (ಜಾಲರಿ) ಮೂಲಕ ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬಹುದು ಎಂಬ ನಾವೀನ್ಯತೆಯ ಐಡಿಯಾವೊಂದು ಈಗ ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ. ಇದೀಗ ಬಗ್ಗೆ ಪೋಸ್ಟ್ವೊಂದನ್ನು ಬೆಂಗಳೂರು ಪೋಸ್ಟ್ (@Bengaluru Post) ಎಂಬ ಎಕ್ಸ್ ಖಾತೆ ಹಂಚಿಕೊಂಡಿದೆ.
ಪ್ರತಿ ವರ್ಷ ನಗರಗಳು ಮಳೆನೀರು ಮತ್ತು ಪ್ಲಾಸ್ಟಿಕ್ ತ್ಯಾಜ್ಯಗಳ ವಿರುದ್ಧ ದೊಡ್ಡ ಯುದ್ಧವನ್ನೇ ನಡೆಸುತ್ತವೆ. ಸಾರ್ವಜನಿಕರು ಮತ್ತು ಪರಿಸರ ಪ್ರೇಮಿಗಳ ಪ್ರಕಾರ, “ಸಮಸ್ಯೆ ಸೃಷ್ಟಿಸುವ ಚರಂಡಿಗಳೇ ಏಕೆ ಪರಿಹಾರದ ಭಾಗವಾಗಬಾರದು?”. ಪ್ರತಿ ಚರಂಡಿಯ ಮುಖದ್ವಾರ ಅಥವಾ ಒಳಗಡೆ ಬಲವಾದ ನೆಟ್‌ಗಳನ್ನು ಅಳವಡಿಸುವುದರಿಂದ, ನೀರು ಸರಾಗವಾಗಿ ಹರಿದು ಹೋಗುತ್ತದೆ ಮತ್ತು ಪ್ಲಾಸ್ಟಿಕ್ ಸೇರಿದಂತೆ ಎಲ್ಲಾ ಘನ ತ್ಯಾಜ್ಯಗಳು ಒಂದೇ ಕಡೆ ಶೇಖರಣೆಯಾಗುತ್ತವೆ. ಇದರಿಂದಾಗಿ ಚರಂಡಿಗಳು ಬ್ಲಾಕ್ ಆಗುವುದು ಸಂಪೂರ್ಣವಾಗಿ ತಪ್ಪುತ್ತದೆ ಮತ್ತು ಕಸವನ್ನು ಸುಲಭವಾಗಿ ವಿಲೇವಾರಿ ಮಾಡಬಹುದು.
ಇದನ್ನೂ ಓದಿ: ಜೊಹೊ ಮುಖ್ಯ ವಿಜ್ಞಾನಿ ಶ್ರೀಧರ್ ವೆಂಬು ಅವರ ಕರುವಿಯಿಂದ ಚೀನೀ ಪವರ್ ಟೂಲ್ಸ್ಗೆ ಪೈಪೋಟಿ
No rocket science. No crores in budget.
Just a simple net in every drain.
Bengaluru’s flooded underpasses. Mumbai’s choked nalas. Chennai’s waterlogged streets.
Every monsoon, our cities battle water and plastic.
What if the drain itself could be part of the solution?
Maybe… pic.twitter.com/cacPLW1XVj
— Bengaluru Post (@bengalurupost1) June 3, 2026
ಬೆಂಗಳೂರಿನ ಹೊರವರ್ತುಲ ರಸ್ತೆ ಭಾಗದಲ್ಲಿ ಮಳೆಯಾದರೆ ಸೃಷ್ಟಿಯಾಗುವ ಟ್ರಾಫಿಕ್ ಮತ್ತು ಪ್ರವಾಹದ ಪರಿಸ್ಥಿತಿಯನ್ನು ನಿಯಂತ್ರಿಸಲು ಈ ಸರಳ ಮತ್ತು ಅತ್ಯಂತ ಕಡಿಮೆ ವೆಚ್ಚದ ತಂತ್ರಜ್ಞಾನವನ್ನು ಪ್ರಾಯೋಗಿಕವಾಗಿ ಬಳಸಬಹುದಾಗಿದೆ. ಬೆಂಗಳೂರಿನ ಹೊರವರ್ತುಲ ರಸ್ತೆ ಕಂಪನಿಗಳ ಸಂಘಟನೆ ಈ ನಿಟ್ಟಿನಲ್ಲಿ ಬಿಬಿಎಂಪಿ ಮತ್ತು ನಗರಾಭಿವೃದ್ಧಿ ಮಂಡಳಿಗಳೊಂದಿಗೆ ಕೈಜೋಡಿಸಿ, ಓಆರ್‌ಆರ್ ವ್ಯಾಪ್ತಿಯ ಚರಂಡಿಗಳಲ್ಲಿ ಇಂತಹ ‘ನೆಟ್’ ಅಳವಡಿಸುವ ಪ್ರಾಯೋಗಿಕ ಯೋಜನೆಯನ್ನು ಪರಿಶೀಲಿಸಬೇಕು ಎಂದು ಸಾರ್ವಜನಿಕರು ಸೋಷಿಯಲ್ ಮೀಡಿಯಾ ಮೂಲಕ ಒತ್ತಾಯಿಸುತ್ತಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:51 pm, Wed, 3 June 26