ಬಿಎಸ್ ಯಡಿಯೂರಪ್ಪ ಮೊಮ್ಮಗಳು ಸೌಂದರ್ಯ ಪೋಸ್ಟ್ ಪಾರ್ಟಮ್ ಖಿನ್ನತೆಗೆ ಒಳಗಾಗಿದ್ರಾ?

ಬಿಎಸ್ ಯಡಿಯೂರಪ್ಪ ಮೊಮ್ಮಗಳು ಸೌಂದರ್ಯ ಪೋಸ್ಟ್ ಪಾರ್ಟಮ್ ಖಿನ್ನತೆಗೆ ಒಳಗಾಗಿದ್ರಾ?
ಡಾ ಸೌಂದರ್ಯ ಮತ್ತು ಡಾ ನೀರಜ್ ಜೊತೆ ಬಿಎಸ್ ಯಡಿಯೂರಪ್ಪ

ಮದುವೆಯ ನಂತರ ಸೌಂದರ್ಯ ಬೌರಿಂಗ್ ಆಸ್ಪತ್ರೆಯಲ್ಲಿ ಕೆಲಸ ಆರಂಭಿಸಿದ್ದರು. ಆರು ತಿಂಗಳ ಹಿಂದೆ ಇಬ್ಬರ ದಾಂಪತ್ಯದ ಸಾಕ್ಷಿಯಾಗಿ ಒಂದು ಮಗುವಾಗಿತ್ತು. ಬಾಣಂತನಕ್ಕಾಗಿ ಸೌಂದರ್ಯ ತವರಿನಲ್ಲಿದ್ದರು. ತಾತನ ಕಾವೇರಿ ನಿವಾಸದಲ್ಲಿ ಸೌಂದರ್ಯ ಇದ್ದರು.

TV9kannada Web Team

| Edited By: sandhya thejappa

Jan 29, 2022 | 10:59 AM


ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ (BS Yediyurappa) ನಿವಾಸದಲ್ಲಿ ನೀರವ ಮೌನ ಆವರಿಸಿದೆ. ಮುದ್ದಿನ ಮೊಮ್ಮಗಳು ಸೌಂದರ್ಯ ಆತ್ಮಹ (Soundarya Suicide) ಇಡೀ ಕುಟುಂಬಕ್ಕೆ ಬಾರಿ ನೋವು ತಂದಿದೆ. ಸೌಂದರ್ಯರನ್ನು ಕಳೆದುಕೊಂಡ ಇಡೀ ಕುಟುಂಬ ಮೌನಕ್ಕೆ ಶರಣಾಗಿದೆ. ಆದರೆ ಈ ನಿರ್ಧಾರಕ್ಕೆ ಕಾರಣ ಇನ್ನೂ ತಿಳಿದುಬಂದಿಲ್ಲ. ಮಗು ಜನಿಸಿದ ಬಳಿಕ ಸೌಂದರ್ಯ ಖಿನ್ನತೆಗೆ ಒಳಗಾಗಿದ್ದರೂ ಎಂದು ಹೇಳಲಾಗುತ್ತಿದೆ. ಸದ್ಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಸೌಂದರ್ಯ ಪತಿ ನೀರಜ್ ದೂರಿನನ್ವಯ ಹೈಗ್ರೌಂಡ್ಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೌಂದರ್ಯ ಪತಿ ನೀರಜ್ ಯಾರು?
ಸೌಂದರ್ಯ ಪತಿ ಬೆಂಗಳೂರು ಜಿಲ್ಲಾ ಪಂಚಾಯತ್ ಅಧ್ಯಕ್ಷ ಮುನಿಸ್ವಾಮಪ್ಪ ಸಹೋದರನ ಪುತ್ರ. ಎಂಎಸ್ ರಾಮಯ್ಯ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದಾಗಿನಿಂದಲೂ ಪರಸ್ಪರ ಪರಿಚಯವಿತ್ತು. 2 ವರ್ಷಗಳ ಹಿಂದೆ ಸೌಂದರ್ಯ ಮತ್ತು ನೀರಜ್ ಕುಟುಂಬಸ್ಥರ ಇಚ್ಚೆಯಂತೆ ವಿವಾಹವಾಗಿತ್ತು. ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ಧೂರಿ ವಿವಾಹವಾಗಿತ್ತು. ನೀರಜ್, ಸೌಂದರ್ಯ ಇಬ್ಬರೂ ವೈದ್ಯಕೀಯ ವೃತ್ತಿಯಲ್ಲಿದ್ದವರು.

ಮದುವೆಯ ನಂತರ ಸೌಂದರ್ಯ ಬೌರಿಂಗ್ ಆಸ್ಪತ್ರೆಯಲ್ಲಿ ಕೆಲಸ ಆರಂಭಿಸಿದ್ದರು. ಆರು ತಿಂಗಳ ಹಿಂದೆ ಇಬ್ಬರ ದಾಂಪತ್ಯದ ಸಾಕ್ಷಿಯಾಗಿ ಒಂದು ಮಗುವಾಗಿತ್ತು. ಬಾಣಂತನಕ್ಕಾಗಿ ಸೌಂದರ್ಯ ತವರಿನಲ್ಲಿದ್ದರು. ತಾತನ ಕಾವೇರಿ ನಿವಾಸದಲ್ಲಿ ಸೌಂದರ್ಯ ಇದ್ದರು. ಎರಡು ದಿನಗಳ ಹಿಂದಷ್ಟೆ ಗಂಡನ ಮನೆಗೆ ಬಂದಿದ್ದರು.

ವಸಂತನಗರದಲ್ಲಿ ಸೌಂದರ್ಯ ಪತಿ ನೀರಜ್ ಒಡೆತನದ ಫ್ಲಾಟ್ ಇದೆ. ಎರಡು ದಿನಗಳ ಹಿಂದಷ್ಟೆ ಸೌಂದರ್ಯ ಫ್ಲಾಟಿಗೆ ಬಂದಿದ್ದರು. ಫ್ಲಾಟಿಗೆ ಬಂದ ಬಳಿಕ ಇಬ್ಬರ ನಡುವೆ ಸಣ್ಣದಾಗಿ ಕಲಹವಾಗಿತ್ತು ಎಂದು ತಿಳಿದುಬಂದಿದೆ. ಸೌಂದರ್ಯ ಹಾಗೂ ನೀರಜ್ ನಡುವೆ ಮಾತು ಬೆಳೆದಿತ್ತು. ನಂತರ ಸೌಂದರ್ಯ ಗಂಡನಿಂದ ಅಂತರ ಕಾಯ್ದುಕೊಂಡಿದ್ದರು ಎಂದು ಹೇಳಲಾಗುತ್ತಿದೆ.

ಸೌಂದರ್ಯ ಗಂಡ, ಮಗು ಇಬ್ಬರನ್ನೂ ಬಿಟ್ಟು ಬೇರೆ ಕೊಠಡಿಯಲ್ಲಿ ಮಲಗಿದ್ದರು. ಮಗುವನ್ನ ನೋಡಿಕೊಳ್ಳುವ ಕೆಲಸದಾಕೆಯ ಜೊತೆ ಬಿಟ್ಟು ಮಲಗಿದ್ದರು. ಮತ್ತೊಂದು ಕೊಠಡಿಯಲ್ಲಿ ಪತಿ ನೀರಜ್ ಇದ್ದರು. ಬೆಳಿಗ್ಗೆ ಎಂದಿನಂತೆ 8 ಗಂಟೆಗೆ ನೀರಜ್ ಕೆಲಸಕ್ಕೆ ತೆರಳಿದ್ದಾರೆ. ನೀರಜ್ ಕೆಲಸಕ್ಕೆ ತೆರಳುವಾಗಲು ಸೌಂದರ್ಯ ಕೋಣೆಯಿಂದ ಹೊರ ಬಂದಿರಲಿಲ್ಲ.

ಬೆಳಿಗ್ಗೆ 9ರ ವೇಳೆಗೆ ಪರಿಸ್ಥಿತಿ ಬಿಗಡಾಯಿಸಿತ್ತು. ಮನೆ ಕೆಲಸದವರು ಎಷ್ಟೇ ಬಾಗಿಲು ಬಡಿದರೂ ಸೌಂದರ್ಯ ಬಾಗಿಲು ತೆರೆದಿರಲಿಲ್ಲ. ತಕ್ಷಣ ಸೌಂದರ್ಯ ಪತಿ ನೀರಜ್ ಹಾಗೂ ಕಾವೇರಿ ನಿವಾಸಕ್ಕೂ ಕೆಲಸದವರು ಕರೆ ಮಾಡಿದ್ದರು. ನೀರಜ್ ಬಂದು ಕಿಟಕಿಯಲ್ಲಿ ನೋಡಿದಾಗ ಸೌಂದರ್ಯ ನೇಣಿಗೆ ಶರಣಾಗಿರುವುದು ಪತ್ತೆಯಾಗಿದೆ. ತಕ್ಷಣ ಇನ್ನೊಂದು ಕೀ ಬಳಸಿ ಬಾಗಿಲು ತೆರೆದು ಸೌಂದರ್ಯಳನ್ನ ಆಸ್ಪತ್ರೆಗೆ ರವಾನಿಸಲಾಗಿತ್ತು. ಮಲ್ಲಿಗೆ ಆಸ್ಪತ್ರೆಗೆ ರವಾನಿಸಿದ್ದರು. ಆದರೆ 10.30ರ ಸುಮಾರಿಗೆ ಸೌಂದರ್ಯ ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಣೆ ಮಾಡಿದ್ದರು.

ಸದ್ಯ ಸೌಂದರ್ಯ ಮೊಬೈಲ್, ಆತ್ಮಹತ್ಯೆಗೆ ಬಳಸಿದ್ದ ವೇಲ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮರಣೋತ್ತರ ಪರೀಕ್ಷಾ ವರದಿಯಲ್ಲಿ ಆತ್ಮಹತ್ಯೆ ಕಾರಣ ಏನು ಎಂಬುದು ಬಹಿರಂಗ ಆಗಲಿದೆ. ನೇಣಿಗೆ ಶರಣಾದ ಗಾಯ ಹೊರತುಪಡಿಸಿ ದೇಹದ ಬೇರೆ ಯಾವ ಭಾಗದಲ್ಲೂ ಗಾಯಗಳಿಲ್ಲ.

ಬಾಣಂತನದಲ್ಲಿ ಖಿನ್ನತೆ ಸಹಜ:
ಬಾಣಂತದ ಸಮಯದಲ್ಲಿ ಖಿನ್ನತೆಗೆ ಒಳಗಾಗಿ ಸಾವಿಗೆ ಶರಣಾಗಲು ನಿರ್ಧರಿಸುತ್ತಾರೆ. ಇದೇ ರೀತಿ ಮಗು ಜನಿಸಿದ ಬಳಿಕ ಸೌಂದರ್ಯ ಕೂಡಾ ಪೋಸ್ಟ್ ಪಾರ್ಟಮ್ ಖಿನ್ನತೆಗೆ ಒಳಗಾಗಿದ್ದರೂ ಎಂದು ಹೇಳಲಾಗುತ್ತಿದೆ. ಪೋಸ್ಟ್ ಪಾರ್ಟಮ್ ಡಿಪ್ರೆಷನ್ ಅಂದರೆ ಮಗು ಆದ ಬಳಿಕ ಖಿನ್ನತೆಗೆ ಒಳಗಾಗುವುದು. ಇದನ್ನು ಬಾಣಂತಿಯರಿಗೆ ಅಗುವ ಸನ್ನಿ ಎಂದು ಕರೆಯುತ್ತಾರೆ. ಸಹಜವಾಗಿ ಈ ಖಿನ್ನತೆ ಅಗುತ್ತದೆ. ಆದರೆ ಬಹುಪಾಲು ಜನರು ಈ ಖಿನ್ನತೆಯಿಂದ ಹೊರ ಬರುತ್ತಾರೆ ಅಂತ ವೈದ್ಯರು ತಿಳಿಸಿದ್ದಾರೆ.

ಸೌಂದರ್ಯ ಹಾಗೂ ನೀರಜ್ ಮಧ್ಯೆ ಯಾವುದೇ ಜಗಳ ಮನಸ್ತಾಪ ಇರಲಿಲ್ಲ. ಸೌಂದರ್ಯ ವೈದ್ಯೆಯಾಗಿ ಆತ್ಮಹತ್ಯೆ ಮಾಡಿಕೊಂಡಿರುವುದು ನಂಬಲು ಆಗುತ್ತಿಲ್ಲ. ಅವರು ಖಿನ್ನತೆ ಒಳಗಾಗಿದ್ದರು ಅನ್ನೋ ಮಾಹಿತಿ ಇಲ್ಲ. ಆದರೆ ಮಾತ್ರೆ ತೆಗೆದುಕೊಳ್ಳುತ್ತಿದ್ದರು. ಗಂಡ ಹೆಂಡತಿ ಮಧ್ಯೆ ಜಗಳ ರಾಜಿ ಪಂಚಾಯತಿ ಯಾವುದು ನಡೆದಿಲ್ಲವೆಂದು ಸೌಂದರ್ಯ ಸೋದರ ಮಾವ ಮರಿಸ್ವಾಮಿ ಹೇಳಿದ್ದಾರೆ. ಸೌಂದರ್ಯ ಸಮಾಧಿಗೆ ಹಾಲು ತುಪ್ಪ ಬಿಡುವ ಕಾರ್ಯಕ್ಕೂ ಮುನ್ನ ಟಿವಿ9 ಜೊತೆ ಮಾತನಾಡಿದ ಅವರು, ನೀರಜ್ ಪ್ರತ್ಯೇಕವಾಗಿ ವಾಸ ಮಾಡುತ್ತಿರಲಿಲ್ಲ. ಇಬ್ಬರು ಬಿಎಸ್​ವೈ ಅವರ ಕಾವೇರಿ ನಿವಾಸದಲ್ಲೆ ಇರುತ್ತಿದ್ದರು. ಸೌಂದರ್ಯ ಹೆರಿಗೆ ಸಹ ಕಾವೇರಿ ನಿವಾಸದಲ್ಲೆ ಆಗಿತ್ತು. ಕೊನೆ ಪಕ್ಷ ಮಗುವನ್ನ ನೆನಪಿಸಿಕೊಂಡು ಧೈರ್ಯವಾಗಿ ಇರಬೇಕಿತ್ತು. ಅವರ ಆತ್ಮಹತ್ಯೆ ನಮ್ಮಗೆ ಯಕ್ಷ ಪ್ರಶ್ನೆ ಆಗಿದೆ ಅಂತ ಸೌಂದರ್ಯ ಸೋದರಮಾವ ಹೇಳಿದರು.

ಇದನ್ನೂ ಓದಿ

ಕಂಠಪೂರ್ತಿ ಕುಡಿದು ಮಧ್ಯರಾತ್ರಿ ಶಾರುಖ್​ ಖಾನ್​ ಮನೆಗೆ ನುಗ್ಗಿದ್ದ ಕಪಿಲ್​ ಶರ್ಮಾ; ಮುಂದೇನಾಯ್ತು?

ರೌಡಿಶೀಟರ್ ಓಪನ್ ಮಾಡಿಸುವ ಬೆದರಿಕೆ ಹಾಕಿದ್ದ ಚಿಕ್ಕನಾಯಕನಹಳ್ಳಿ ತಹಶೀಲ್ದಾರ್ ವಿರುದ್ಧ ಎಫ್‌ಐಆರ್ ದಾಖಲು

Follow us on

Related Stories

Most Read Stories

Click on your DTH Provider to Add TV9 Kannada