AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನ ದೇವಾಲಯದಲ್ಲಿ ನಾಗ ಪವಾಡ: ದೇವಿ ರಕ್ಷಣೆಗೆ ನಾಗರಹಾವು ಪ್ರತ್ಯಕ್ಷ! ದೇವಿ ಮುಡಿಯಲ್ಲಿ ವಿರಾಜಮಾನವಾಗುತ್ತಾನೆ ನಾಗಪ್ಪ

ಬೆಂಗಳೂರಿನ ರಾಮೋಹಳ್ಳಿಯ ಶ್ರೀ ಸಿದ್ದಿ ಪೀಠ ಮಹೇಶ್ವರಿ ಚೌಡೇಶ್ವರಿ ದೇವಸ್ಥಾನದಲ್ಲಿ ನಾಗಪವಾಡ ನಡೆಯುತ್ತಿದೆ. ದೇವಿಯ ಪೂಜೆ ಸಮಯಕ್ಕೆ ದೇಗುಲಕ್ಕೆ ನಾಗರಾಜ ಆಗಮಿಸುತ್ತಾನೆ.

ಬೆಂಗಳೂರಿನ ದೇವಾಲಯದಲ್ಲಿ ನಾಗ ಪವಾಡ: ದೇವಿ ರಕ್ಷಣೆಗೆ ನಾಗರಹಾವು ಪ್ರತ್ಯಕ್ಷ! ದೇವಿ ಮುಡಿಯಲ್ಲಿ ವಿರಾಜಮಾನವಾಗುತ್ತಾನೆ ನಾಗಪ್ಪ
ದೇವಿ ಕತ್ತಲ್ಲಿ ವಿರಾಜಮಾನನಾದ ನಾಗಪ್ಪ
TV9 Web
| Updated By: ಆಯೇಷಾ ಬಾನು|

Updated on: Jul 25, 2022 | 5:10 PM

Share

ಬೆಂಗಳೂರು: ಸಾಮಾನ್ಯವಾಗಿ ದೇವಾಲಯಗಳಲ್ಲಿ ಕಲ್ಲು ನಾಗರಹಾವಿನ ವಿಗ್ರಹಗಳಿಗೆ ಪೂಜೆ ಸಲ್ಲಿಸಲಾಗುತ್ತೆ. ಹಾಗೂ ನಾಗರಹಾವು(Cobra) ದೇವರಿಗೆ ಕಾವಲು ಕಾಯುತ್ತದೆ ಎನ್ನಲಾಗುತ್ತೆ. ಆದ್ರೆ ಈ ದೇವಾಲಯದಲ್ಲಿ ಜೀವಂತ ಹಾವು ದೇವಿ ರಕ್ಷಣೆಗೆ ಪ್ರತ್ಯಕ್ಷವಾಗಿದೆ. ಅಚ್ಚರಿ ಎಂದರೆ ದೇವಿಯ ಪೂಜೆ ಸಮಯಕ್ಕೆ ಪ್ರತ್ಯಕ್ಷವಾಗುವ ಈ ನಾಗರಹಾವು ಗರ್ಭಗುಡಿಯಲ್ಲೆಲ್ಲ ಓಡಾಡುತ್ತೆ. ದೇವಿ ಮುಡಿಯಲ್ಲಿ ವಿರಾಜಮಾನವಾಗುತ್ತೆ. ಈ ದೇಗುಲದಲ್ಲಿ ನಿತ್ಯ ನಾಗಪವಾಡ ನಡೆಯುತ್ತಿದೆ.

ಬೆಂಗಳೂರಿನ ರಾಮೋಹಳ್ಳಿಯ ಶ್ರೀ ಸಿದ್ದಿ ಪೀಠ ಮಹೇಶ್ವರಿ ಚೌಡೇಶ್ವರಿ ದೇವಸ್ಥಾನದಲ್ಲಿ ನಾಗಪವಾಡ ನಡೆಯುತ್ತಿದೆ. ದೇವಿಯ ಪೂಜೆ ಸಮಯಕ್ಕೆ ದೇಗುಲಕ್ಕೆ ನಾಗರಾಜ ಆಗಮಿಸುತ್ತಾನೆ. ಶ್ರೀ ಚೌಡೇಶ್ವರಿ ದೇಗುಲ ಗರ್ಭಗುಡಿಯಲ್ಲಿ ಓಡಾಡುತ್ತಾನೆ. ಕೇವಲ ಪ್ರತ್ಯಕ್ಷ ಮಾತ್ರವಲ್ಲದೆ ದೇಗುಲದಲ್ಲಿಯೇ ಈ ನಾಗರ ಹಾವು ಇರುತ್ತದೆಯಂತೆ. ಶ್ರೀ ಚೌಡೇಶ್ವರಿ ದೇವಿ ಮುಡಿಯಲ್ಲಿ ನಾಗರಾಜ ವಿರಾಜಮಾನವಾಗುತ್ತಾನೆ. ಇದು ದೇಗುಲದಲ್ಲಿ ಅಚ್ಚರಿ ಮತ್ತು ಆತಂಕವನ್ನು ಉಂಟು ಮಾಡಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಕಳೆದ ಮೂರು ದಿನಗಳಿಂದ ದೇಗುಲ ಬಿಟ್ಟು ಹೋಗದ ನಾಗರಹಾವು, ದೇವಾಲಯದಲ್ಲಿಯೇ ಉಳಿದಿದೆಯಂತೆ. ಈ‌ ಹಿಂದೇ ಇದೇ ದೇಗುಲಕ್ಕೆ ಗ್ರಾಮಸ್ಥರು ದೇವಿ ಮೂರ್ತಿ ಶೋಧಿಸಿದ್ದರು. ದೇಗುಲದ ಸ್ವಾಮೀಜಿ ಮಾಹಿತಿಯಂತೆ ಹಾವಿನ ಹುತ್ತದಲ್ಲಿ ಶಿವನ ಮೂರ್ತಿ ಸಿಕ್ಕಿತ್ತು. ಹುತ್ತದಲ್ಲಿ ಸಿಕ್ಕ ಮೂರ್ತಿಯನ್ನು ಜನರು ತಂದು ದೇಗುಲದಲ್ಲಿ ಪೂಜೆ ಮಾಡುತ್ತಿದ್ದಾರೆ. ಹಾವಿನ ಹುತ್ತದಲ್ಲಿ ಮಹೇಶ್ವರನ ಮೂರ್ತಿ ಸಿಕ್ಕಿತ್ತು. ದೇವಿಯ ಅಣತಿಯಂತೆ ಸಿಕ್ಕ ಮೂರ್ತಿ ಪೂಜೆ ಮಾಡುತ್ತಿದ್ದೇವೆ. ಇದೀಗ ಆ ಮೂರ್ತಿ ರಕ್ಷಣೆಗೆ ಹಾವು ಬಂದಿದೆ. ದೇಗುಲದ ದೇವಿಯ ಮುಡಿ ಭಾಗದಲ್ಲಿ ಇದೆ ಎಂದು ಚೌಡೇಶ್ವರಿ ದೇವಾಲಯದ ಗುರು ಕಾಲಭೈರವ ಅರುಣ್ ಮಾಹಿತಿ ನೀಡಿದ್ದಾರೆ.

bng temple

ಶ್ರೀ ಸಿದ್ದಿ ಪೀಠ ಮಹೇಶ್ವರಿ ಚೌಡೇಶ್ವರಿ ದೇವಸ್ಥಾನ