ವಿಶಿಷ್ಟ ಪರಂಪರೆಯ ರಾಮ ನವಮಿ ಸಂಗೀತೋತ್ಸವಕ್ಕೆ ಚಾಲನೆ ನೀಡಿದ ಸಿಎಂ ಬೊಮ್ಮಾಯಿ, ಇನ್ಫೋಸಿಸ್ ಸುಧಾ ಮೂರ್ತಿ

ವಿಶಿಷ್ಟ ಪರಂಪರೆಯ ರಾಮ ನವಮಿ ಸಂಗೀತೋತ್ಸವಕ್ಕೆ ಚಾಲನೆ ನೀಡಿದ ಸಿಎಂ ಬೊಮ್ಮಾಯಿ, ಇನ್ಫೋಸಿಸ್ ಸುಧಾ ಮೂರ್ತಿ
ವಿಶಿಷ್ಟ ಪರಂಪರೆಯ ಶ್ರೀರಾಮನವಮಿ ಸಂಗೀತೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಸಿಎಂ ಬೊಮ್ಮಾಯಿ, ಇನ್ಫೋಸಿಸ್ ಸುಧಾಮೂರ್ತಿ

Kote Chamarajpet Ramanavami music festival: ವಿಶಿಷ್ಟ ಪರಂಪರೆಯ, ಜಗದ್ವಿಖ್ಯಾತ ಶ್ರೀರಾಮ ಸೇವಾ ಮಂಡಳಿ ಆಯೋಜಿಸುವ ಶ್ರೀರಾಮನವಮಿ ಸಂಗೀತೋತ್ಸವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಸಂಜೆ ಚಾಲನೆ ನೀಡಿದರು.

TV9kannada Web Team

| Edited By: sadhu srinath

Apr 02, 2022 | 8:20 PM


ಬೆಂಗಳೂರು: ವಿಶಿಷ್ಟ ಪರಂಪರೆಯ, ಜಗದ್ವಿಖ್ಯಾತ ಶ್ರೀರಾಮ ಸೇವಾ ಮಂಡಳಿ ಆಯೋಜಿಸುವ ಶ್ರೀರಾಮನವಮಿ ಸಂಗೀತೋತ್ಸವ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (CM Basavaraj Bommai) ಇಂದು ಸಂಜೆ ಚಾಲನೆ ನೀಡಿದರು. ಚಾಮರಾಜಪೇಟೆಯ ಕೋಟೆ ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಿಎಂ ಬೊಮ್ಮಾಯಿ ಅವರಿಗೆ ಇನ್ಫೋಸಿಸ್ ಪ್ರತಿಷ್ಠಾನದ ಮುಖ್ಯಸ್ಥೆ ಸುಧಾಮೂರ್ತಿ ಅವರು (Infosys Foundation Sudha murthy) ಸಾಥ್​ ನೀಡಿದರು. ಅಪ್ಪಟ ಸಂಗೀತ ಪ್ರೇಮಿಗಳಿಗೆ ತಿಂಗಳು ಕಾಲ ನಡೆಯುವ ಸಂಗೀತ ರಸದೌತಣ ಕಾರ್ಯಕ್ರಮ ಇದಾಗಲಿದೆ. ಕಳೆದೆರಡು ವರ್ಷದಿಂದ ಕೊರೊನಾ ಸೋಂಕಿನಿಂದಾಗಿ ಕೋಟೆ ರಾಮನವಮಿ ಸಂಗೀತೋತ್ಸವಕ್ಕೆ ಅಡಚಣೆಯಾಗಿತ್ತು. ಆದರೆ ಈ ಬಾರಿ ವಾಡಿಕೆಯಂತೆ ಪೂರ್ಣ ಪ್ರಮಾಣದಲ್ಲಿ ಸಂಗೀತೋತ್ಸವ ನಡೆಯಲಿದೆ.

ಬೆಂಗಳೂರಿನ ಚಾಮರಾಜಪೇಟೆಯ ಕೋಟೆ ಮೈದಾನದಲ್ಲಿ ಶ್ರೀ ರಾಮ ಸೇವಾ ಮಂಡಳಿ, ರಾಮನವಮಿ ಉತ್ಸವ ಸಮಿತಿ ತನ್ನ 84ನೇ ಶ್ರೀ ರಾಮನವಮಿ ಸಂಗೀತೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿತು (INAUGURATION OF 84TH SREE RAMANAVAMI GLOBAL MUSIC FESTIVAL).

ಚಾಮರಾಜಪೇಟೆಯ ಕೋಟೆ ಮೈದಾನದಲ್ಲಿ ಆಯೋಜಿಸಿರುವ 84ನೇ ಶ್ರೀ ರಾಮನವಮಿ ಸಂಗೀತೋತ್ಸವದ ವೇಳಾಪಟ್ಟಿ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ: http://www.ramanavami.org/schedule/2022

ಅಥವಾ http://www.ramanavami.org/celebration

ರಾಜ ಮನೆತನದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಸರಳತೆಗೆ ಅಪಾರ ಮೆಚ್ಚುಗೆ, ಫೋಟೋ ವೈರಲ್
ಮೈಸೂರು: ಎಷ್ಟೇ ದೊಡ್ಡ ವ್ಯಕ್ತಿಗಳಾದರೂ ದೇವರು ಹಾಗೂ ಗುರುಗಳ ಮುಂದೆ ಮಂಡಿಯೂರಲೇಬೇಕು. ಗುರುಭಕ್ತಿಯನ್ನು ಮಾಡಲೇಬೆಕು ಎನ್ನುವುದಕ್ಕೆ ಮೈಸೂರು ರಾಜ ಮನೆತನದ ಯದುವಂಶದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಸಾಕ್ಷಿಯಾಗಿದ್ದಾರೆ. ಗುರುಗಳ ಸಮಾನವಾಗಿ ಕುರ್ಚಿಯಲ್ಲಿ ಕುಳಿತುಕೊಳ್ಳದೆ ನೆಲದ ಮೇಲೆ ಕುಳಿತು ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ತಮ್ಮ ಸರಳತೆಯನ್ನು ಪ್ರದರ್ಶಿಸಿದ್ದಾರೆ. ಸದ್ಯ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಯದುವೀರರ ಸರಳತೆಗೆ ಜನ ಕೊಂಡಾಡಿದ್ದಾರೆ.

ನಿನ್ನೆ ಅಗ್ರಹಾರದ ಉತ್ತರಾದಿ ಮಠದಲ್ಲಿ ನಡೆದ ಶ್ರೀ 1008 ಶ್ರೀ ಸತ್ಯಾತ್ಮತೀರ್ಥ ಶ್ರೀಪಾದಂಗಳವರ 50ನೇ ವರ್ಧುಂತ್ಯುತ್ಸವ ಕಾರ್ಯಕ್ರಮದಲ್ಲಿ ಮಧ್ವಶ್ರೀಗಳ ಸಮಾನವಾಗಿ ಕುರ್ಚಿಯಲ್ಲಿ ಕೂರದೆ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ನೆಲದ ಮೇಲೆ ಕೂತಿದ್ದಾರೆ. ತಾನೊಬ್ಬ ರಾಜವಂಶಸ್ಥ ಎಂಬ ಯಾವುದೇ ಅಹಂ ಇಲ್ಲದೆ. ರಾಜ ಮನೆತನದ ಯದುವಂಶದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ತಮ್ಮ ಸರಳತೆಯಿಂದ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸದ್ಯ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Follow us on

Related Stories

Most Read Stories

Click on your DTH Provider to Add TV9 Kannada