SSLC Exam 2021: ಎಸ್ಎಸ್ಎಲ್ಸಿ ಭಾಷಾ ವಿಷಯಗಳಿಗೆ ಪರೀಕ್ಷೆ, ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿದ ಶಿಕ್ಷಣ ಸಚಿವ ಸುರೇಶ್ ಕುಮಾರ್
ಶಿಕ್ಷಣ ಸಚಿವ ಸುರೇಶ್ ಕುಮಾರ್ ಸಿಟಿ ರೌಂಡ್ಸ್ ಹಾಕಿದ್ದಾರೆ. ಬೆಂಗಳೂರಿನ ಶ್ರೀರಾಮಪುರದ ಸರ್ಕಾರಿ ಬಾಲಕರ ಶಾಲೆಗೆ ಭೇಟಿ ನೀಡಿ ಪರೀಕ್ಷಾ ಕೇಂದ್ರಗಳಲ್ಲಿನ ಸಿದ್ಧತೆಗಳ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.
ಬೆಂಗಳೂರು: ರಾಜ್ಯಾದ್ಯಂತ ಇಂದು (ಜೂನ್ 22) ಎಸ್ಎಸ್ಎಲ್ಸಿ (SSLC) ಭಾಷಾ ವಿಷಯಗಳಿಗೆ ಪರೀಕ್ಷೆ ಹಿನ್ನೆಲೆಯಲ್ಲಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸಿಟಿ ರೌಂಡ್ಸ್ ಹಾಕಿದ್ದಾರೆ. ಬೆಂಗಳೂರಿನ ಶ್ರೀರಾಮಪುರದ ಸರ್ಕಾರಿ ಬಾಲಕರ ಶಾಲೆಗೆ ಭೇಟಿ ನೀಡಿ ಪರೀಕ್ಷಾ ಕೇಂದ್ರಗಳಲ್ಲಿನ ಸಿದ್ಧತೆಗಳ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.
ಪರೀಕ್ಷಾ ಕೇಂದ್ರದ ಆವರಣದಲ್ಲಿ ಬಾಕ್ಸ್ಗಳ ನಿರ್ಮಾಣ ಮಾಡಲಾಗಿದ್ದು ಇಡೀ ಆವರಣದಲ್ಲಿ ಕೊವಿಡ್ ಗೈಡ್ ಲೈನ್ಸ್ನ ಬಿತ್ತಿ ಫಲಕ ಅಳವಡಿಸಲಾಗಿದೆ. ಎಂಟ್ರೆನ್ಸ್ನಲ್ಲಿ ಸ್ಯಾನಿಟೇಷನ್ ಹಾಗೂ ಧರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಮಾಡಲಾಗಿದೆ. ಹಾಗೂ ನೋಟಿಸ್ ಬೋರ್ಡ್ ಮೂಲಕ ಕೊಠಡಿಗಳ ನಂಬರ್ ಕೂಡ ಅಳವಡಿಸಲಾಗಿದೆ. ಮೆಡಿಕಲ್ ಕೌಂಟರ್, ಮೊಬೈಲ್ ಕೌಂಟರ್ ಸ್ಥಾಪಿಸಲಾಗಿದೆ.
ಇಂದು ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಕನ್ನಡ, ಇಂಗ್ಲಿಷ್, ಹಿಂದಿ ಸೇರಿದಂತೆ ಭಾಷಾ ವಿಷಯಗಳ ಪರೀಕ್ಷೆ ನಡೆಯಲಿದೆ. ಬೆಳಗ್ಗೆ 10.30ರಿಂದ ಮಧ್ಯಾಹ್ನ 1.30 ರವರೆಗೆ ಪರೀಕ್ಷೆ ನಡೆಯಲಿದೆ. ಎರಡು ದಿನದಲ್ಲಿ SSLCಯ ಒಟ್ಟು 6 ವಿಷಯಗಳನ್ನ ಕವರ್ ಮಾಡಲಾಗ್ತಿದೆ. ಪ್ರತಿ ಪಶ್ನೆ ಪತ್ರಿಕೆ ಒಟ್ಟು 120 ಅಂಕಗಳನ್ನ ಒಳಗೊಂಡಿದ್ದು, ಮೂರು ಮೂರು ವಿಷಯಗಳಿಗೆ ತಲಾ 40 ಅಂಕಗಳ ಪ್ರಶ್ನೆಗಳಿರುತ್ತೆ. ಅಷ್ಟೇ ಅಲ್ಲ ಒಂದು ಪ್ರಶ್ನೆಗೆ ಬಹು ಆಯ್ಕೆಯ ಉತ್ತರಗಳನ್ನ ನೀಡಲಾಗ್ತಿದ್ದು, ವಿದ್ಯಾರ್ಥಿಗಳು OMR ಶೀಟ್ನಲ್ಲಿ ಉತ್ತರ ಗುರುತು ಮಾಡಿದ್ರೆ ಸಾಕು. ಪ್ರತಿ ವಿಷಯಕ್ಕೆ ಒಎಂಆರ್ ಶೀಟ್ನಲ್ಲಿ ಬಣ್ಣ ಬದಲು ಮಾಡಿದ್ದಾರೆ. ಗಣಿತಕ್ಕೆ ಪಿಂಕ್ ಕಲರ್, ವಿಜ್ಞಾನಕ್ಕೆ ಆರೆಂಜ್ ಕಲರ್, ಸಮಾಜ ವಿಜ್ಞಾನಕ್ಕೆ ಗ್ರೀನ್ ಕಲರ್ OMR ಶೀಟ್ ಇರಲಿದೆ. ಪರೀಕ್ಷೆಗೆ 3 ಗಂಟೆಗಳ ಅವಧಿ ನೀಡಲಾಗಿದೆ. ಇನ್ನು ಒಟ್ಟು 8 ಲಕ್ಷದ 76 ಸಾವಿರ 581 ವಿದ್ಯಾರ್ಥಿಗಳ ಎಕ್ಸಾಂಗೆ ನೊಂದಣಿ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: SSLC Exam 2021; ರಾಜ್ಯಾದ್ಯಂತ ಇಂದು ಎಸ್ಎಸ್ಎಲ್ಸಿ ಭಾಷಾ ವಿಷಯಗಳಿಗೆ ಪರೀಕ್ಷೆ
Published On - 9:43 am, Thu, 22 July 21