ಬೆಂಗಳೂರು: ತಂದೆ ಸಾವಿನ ನೋವಿನಲ್ಲೂ SSLC ಪರೀಕ್ಷೆಗೆ ವಿದ್ಯಾರ್ಥಿನಿ ಬಿ. ವೈಷ್ಣವಿ ಎಂಬವರು ಹಾಜರಾಗಿದ್ದಾರೆ. ತಂದೆ ಮೃತಪಟ್ಟಿದ್ದರೂ ಪರೀಕ್ಷೆ ತಪ್ಪಿಸದೆ ಹಾಜರಾಗಿದ್ದಾರೆ. ನಗರದ ಹತ್ತನೇ ತರಗತಿ ವಿದ್ಯಾರ್ಥಿನಿ ವೈಷ್ಣವಿ ಎಂಬವರ ತಂದೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಆದರೂ ಪರೀಕ್ಷೆಗೆ ಹಾಜರಾಗಿದ್ದಾರೆ. ಬಸವನಗುಡಿಯ ನ್ಯಾಷನಲ್ ಹೈಸ್ಕೂಲ್ನಲ್ಲಿ ಗಣಿತ ಪರೀಕ್ಷೆ ಬರೆದ ನಂತರ ತಂದೆಯ ಅಂತ್ಯ ಸಂಸ್ಕಾರದಲ್ಲಿ ವಿದ್ಯಾರ್ಥಿನಿ ಬಿ. ವೈಷ್ಣವಿ ಭಾಗಿ ಆಗಲಿದ್ದಾರೆ ಎಂದು ತಿಳಿದುಬಂದಿದೆ. ಇಂದು (ಏಪ್ರಿಲ್ 4) ಗಣಿತ ಪರೀಕ್ಷೆ ನಡೆಯುತ್ತಿದ್ದು ವಿದ್ಯಾರ್ಥಿನಿ ಪರೀಕ್ಷೆಗೆ ಹಾಜರಾಗಿದ್ದಾರೆ.
ತಂದೆ ಸಾವಿನಲ್ಲೂ SSLC ಪರೀಕ್ಷೆ ಎದುರಿಸುತ್ತಿರುವ ವಿದ್ಯಾರ್ಥಿನಿ, ಪರೀಕ್ಷೆ ಬಳಿಕ ತಂದೆ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಲಿದ್ದಾರೆ. ನೋವಿನಲ್ಲೂ ಇಂದು ನಡೆಯುತ್ತಿರುವ ಗಣಿತ ಪರೀಕ್ಷೆ ತಪ್ಪಿಸಿಕೊಂಡಿಲ್ಲ. ಬಸವನಗುಡಿಯ KPS ಶಾಲೆಯ ಕೇಂದ್ರದಲ್ಲಿ ಇಂದು ಪರೀಕ್ಷೆ ನಡೆಯುತ್ತಿದೆ. ಬಸವನಗುಡಿಯ ನ್ಯಾಷನ್ ಹೈಸ್ಕೂಲ್ ವಿದ್ಯಾರ್ಥಿನಿ ವೈಷ್ಣವಿ. ಬಿ ತಂದೆ ನಿನ್ನೆ ರಾತ್ರಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಈ ಮಧ್ಯೆ ಮನೆಯಲ್ಲಿ ಸೂತಕದ ಛಾಯೆ ಇದ್ದರೂ ವಿದ್ಯಾರ್ಥಿನಿ ಪರೀಕ್ಷೆಗೆ ಗೈರಾಗಿಲ್ಲ. ವರ್ಷವಿಡೀ ಓದಿದ ಪರೀಕ್ಷೆಗೆ ತೊಂದರೆ ಆಗಬಾರದು ಎಂದು ಪರೀಕ್ಷೆಗೆ ಹಾಜರಾಗಿದ್ದಾರೆ.
ಪರೀಕ್ಷೆ ಬರೆಯುವಂತೆ ಕುಟುಂಬಸ್ಥರು ಸಲಹೆ ನೀಡಿದ್ದಾರೆ. ಇಂದು ಬೆಳಗ್ಗೆ 10:30ಕ್ಕೆ ಆರಂಭವಾಗಲಿರುವ ಪರೀಕ್ಷೆಯನ್ನು ವಿದ್ಯಾರ್ಥಿನಿ ಎದುರಿಸಲಿದ್ದಾರೆ. ಮಧ್ಯಾಹ್ನ 1:45ಕ್ಕೆ ಗಣಿತ ಪರೀಕ್ಷೆ ಮುಗಿಯಲಿದೆ. ಇಂದಿನ ಪರೀಕ್ಷೆ ನಂತರ ವಿದ್ಯಾರ್ಥಿನಿ ತಂದೆ ಕಾರ್ಯ ಆರಂಭ ಮಾಡಲಾಗುತ್ತದೆ ಎಂದು ತಿಳಿದುಬಂದಿದೆ. ವಿದ್ಯಾರ್ಥಿನಿ ಕುಟುಂಬಸ್ಥರು, ವಿದ್ಯಾರ್ಥಿನಿ ಸ್ಥೈರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ಇಂದು (ಸೋಮವಾರ) ಎಸ್‌ಎಸ್‌ಎಲ್‌ಸಿ ಗಣಿತ, ಸಮಾಜಶಾಸ್ತ್ರ ಪರೀಕ್ಷೆ ನಡೆಯುತ್ತಿದೆ. ಬೆಳಗ್ಗೆ 10.30 ರಿಂದ ಮಧ್ಯಾಹ್ನ 1.45ರ ವರೆಗೆ ಪರೀಕ್ಷೆ ನಡೆಯಲಿದೆ. ಏಪ್ರಿಲ್ 11ರ ವರೆಗೆ SSLC ಪರೀಕ್ಷೆ ನಡೆಯಲಿದೆ. 8 ಲಕ್ಷದ 60 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ಪರೀಕ್ಷೆಗೆ ನೊಂದಣಿ ಮಾಡಿಕೊಂಡಿದ್ದಾರೆ. 3,444 ಪರೀಕ್ಷಾ ಕೇಂದ್ರ, 45 ಸಾವಿರಕ್ಕೂ ಅಧಿಕ ಕೊಠಡಿಗಳಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ. ಪರೀಕ್ಷೆಯ ಪ್ರವೇಶ ತೋರಿಸಿದ್ರೆ ಬಸ್ನಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡಲಾಗಿದೆ. ಪರೀಕ್ಷಾ ಕೇಂದ್ರದ ಸುತ್ತ ಸೆಕ್ಷನ್ 144 ಜಾರಿ ಮಾಡಲಾಗಿದೆ. ಅಹಿತಕರ ಘಟನೆ ನಡೆಯದಂತೆ ಖಾಕಿ ಕಣ್ಗಾವಲು ಇರಲಿದೆ.
ಇದನ್ನೂ ಓದಿ: KSRTC ಬಸ್ ಪಾಸ್ ಅವಧಿ ಮುಕ್ತಾಯವಾಗಿದ್ದ ಹಿನ್ನೆಲೆ; ಪರೀಕ್ಷೆಗೆ ಹೊರಟಿದ್ದ ವಿದ್ಯಾರ್ಥಿಗಳನ್ನು ನಡುದಾರಿಯಲ್ಲಿ ಬಿಟ್ಟ ಸಿಬ್ಬಂದಿ
ಇದನ್ನೂ ಓದಿ: ಎಸ್‌ಎಸ್‌ಎಲ್‌ಸಿ ಪರೀಕ್ಷೆ: ಮೊದಲ ದಿನ 20 ಸಾವಿರ, 2ನೇ ದಿನ 22 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಗೈರು, ಕಾರಣ ಏನು?