ಡಿಜಿಟಲ್‌ ಪೇಮೆಂಟ್‌ ಮೇಲೂ ಸೈಬರ್‌ ಕಳ್ಳರ ಕಣ್ಣು; ನಗರದಲ್ಲಿ ಹೆಚ್ಚಾಗುತ್ತಿದೆ ಡಿಜಿಟಲ್‌ ಪೇಮೆಂಟ್‌ ದೋಖಾ

ಡಿಜಿಟಲ್‌ ಪೇಮೆಂಟ್‌ ಮೇಲೂ ಸೈಬರ್‌ ಕಳ್ಳರ ಕಣ್ಣು; ನಗರದಲ್ಲಿ ಹೆಚ್ಚಾಗುತ್ತಿದೆ ಡಿಜಿಟಲ್‌ ಪೇಮೆಂಟ್‌ ದೋಖಾ
ಸಾಂದರ್ಭಿಕ ಚಿತ್ರ

10 ರೂಪಾಯಿ ಟೀ ಕುಡಿದ್ರೂ ಪೋನ್‌ ಪೇ, 15 ರೂಪಾಯಿಯ ಕಬ್ಬಿನ ಹಾಲಿಗೂ ಗೂಗಲ್‌ ಪೇ, 30 ರೂಪಾಯಿಯ ತಿಂಡಿ ತಿಂದ್ರೂ ಕೂಡಾ ಪೇಟಿಎಂ ಮಾಡುವ ಕಾಲ ಬಂದಿದೆ. ಹೀಗೆ ನಿತ್ಯ ಬದುಕಿನಲ್ಲಿ ಡಿಜಿಟಲ್‌ ಪೇಮೆಂಟ್‌ ಬಳಕೆ ಹೆಚ್ಚಾಗುತ್ತಿದ್ದಂತೆ ಇದೇ ಡಿಜಿಟಲ್‌ ಪೇಮೆಂಟ್‌ ಮೇಲೂ ಸೈಬರ್‌ ಕಳ್ಳರ ಕಣ್ಣು ಬಿದ್ದಿದೆ. ನಿತ್ಯ ಹತ್ತಾರು ಕೇಸ್‌ಗಳು ಬೆಳಕಿಗೆ ಬರ್ತಿವೆ.

TV9kannada Web Team

| Edited By: Ayesha Banu

Apr 03, 2022 | 10:17 PM

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಡಿಜಿಟಲ್‌ ಪೇಮೆಂಟ್‌(Digital Payment) ಹೆಚ್ಚಾಗುತ್ತಿದ್ದಂತೆ ಡಿಜಿಟಲ್‌ ಪೇಮೆಂಟ್‌ನಿಂದ ದೋಖಾಗಳು ಕೂಡ ಹೆಚ್ಚಾಗುತ್ತಿವೆ. ಮೊಬೈಲ್‌ನಲ್ಲಿ ಪೋನ್‌ ಪೇ(Phonepe), ಪೇಟಿಎಂ(Paytm), ಗೂಗಲ್‌ ಪೇ(Google Pay) ಌಪ್‌ ಇದ್ರೆ ಸಾಕು ಜನ ತಮ್ಮ ಜೇಬಲ್ಲಿ ಹತ್ತು ರೂಪಾಯಿ ಇಲ್ಲದಿದ್ರೂ ಹತ್ತಾರು ಏರಿಯಾ ಸುತ್ತಿ, ಹತ್ತಾರು ಕಡೆ ಶಾಪಿಂಗ್‌ ಮಾಡಿ ಬರ್ತಾರೆ. 10 ರೂಪಾಯಿ ಟೀ ಕುಡಿದ್ರೂ ಪೋನ್‌ ಪೇ, 15 ರೂಪಾಯಿಯ ಕಬ್ಬಿನ ಹಾಲಿಗೂ ಗೂಗಲ್‌ ಪೇ, 30 ರೂಪಾಯಿಯ ತಿಂಡಿ ತಿಂದ್ರೂ ಕೂಡಾ ಪೇಟಿಎಂ ಮಾಡುವ ಕಾಲ ಬಂದಿದೆ. ಹೀಗೆ ನಿತ್ಯ ಬದುಕಿನಲ್ಲಿ ಡಿಜಿಟಲ್‌ ಪೇಮೆಂಟ್‌ ಬಳಕೆ ಹೆಚ್ಚಾಗುತ್ತಿದ್ದಂತೆ ಇದೇ ಡಿಜಿಟಲ್‌ ಪೇಮೆಂಟ್‌ ಮೇಲೂ ಸೈಬರ್‌ ಕಳ್ಳರ ಕಣ್ಣು ಬಿದ್ದಿದೆ. ನಿತ್ಯ ಹತ್ತಾರು ಕೇಸ್‌ಗಳು ಬೆಳಕಿಗೆ ಬರ್ತಿವೆ.

ನಗರದಲ್ಲಿ ಹೆಚ್ಚಾಗ್ತಿವೆ ಸೈಬರ್‌ ಕಳ್ಳತನ ಬೆಳಗ್ಗೆ ಎದ್ದು ಟೀ ಕುಡಿಯೋದ್ರಿಂದ ಸಂಜೆ ಮನೆಗೆ ರೇಷನ್‌ ತರೋವರೆಗೂ ಎಲ್ಲದಕ್ಕೂ ಡಿಜಿಟಲ್‌ ಪೇಮೆಂಟ್‌ ಮೂಲಕವೇ ಜನ ಹಣ ಕಳಿಸ್ತಾರೆ. ಹೀಗಾಗಿ ಕ್ಯಾಶ್‌ ವ್ಯವಹಾರ ಅರ್ಧಕ್ಕಿಂತ ಕಡಿಮೆಯಾಗಿದೆ. ಗೂಗಲ್ ಪೇ, ಪೋನ್ ಪೇ, ಪೇಟಿಎಂ ನಂತಹ ಆ್ಯಪ್‌ಗಳ ಮೂಲಕ ಅಂಗಡಿ ಮಾಲೀಕರಿಗೆ ಗ್ರಾಹಕರು ಡಿಜಿಟಲ್ ಪೇಮೆಂಟ್‌ ಮಾಡ್ತಾರೆ. ಆದ್ರೆ ಇದ್ರಿಂದ ಕೆಲ ಅಂಗಡಿ ಮಾಲೀಕರಿಗೆ ವಂಚನೆಯಾಗ್ತಿರೋದು ಬೆಳಕಿಗೆ ಬಂದಿದೆ. ಅಂಗಡಿಗೆ ಬಂದ ಗ್ರಾಹಕರು ಪೋನ್ ಪೇ ಮಾಡಿದ ಬಳಿಕ ಪೋನ್ ಪೇ ಆಗಿದೆ ಅಂತಾ ಗ್ರೀನ್ ಸಿಗ್ನಲ್ ತೋರಿಸಿ ಹೋಗ್ತಾರೆ. ಆದರೆ ಅಕೌಂಟ್ ಚೆಕ್ ಮಾಡಿದಾಗ ಅಕೌಂಟ್‌ಗೆ ಅಮೌಂಟ್ ಬಾರದೆ ಶಾಪ್‌ ಮಾಲೀಕರು ವಂಚನೆಗೆ ಒಳಗಾಗ್ತಿದ್ದಾರೆ. ಅದ್ರಲ್ಲೂ ನಗರದ ಮೆಜೆಸ್ಟಿಕ್‌ ಭಾಗದಲ್ಲೇ ಇಂಥಾ ಪ್ರಕರಣಗಳು ಹೆಚ್ಚಾಗ್ತಿವೆ.

ಇನ್ನೂ ಡಿಜಿಟಲ್ ಪೇಮೆಂಟ್‌ನಲ್ಲಿ ಆಗ್ತಿರೋ ಕಳ್ಳತನದ ಬಗ್ಗೆ ಸೈಬರ್‌ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ನಗದು ವ್ಯವಹಾರಕ್ಕಿಂತ ಕೇಸ್‌ಲೆಸ್‌ ವ್ಯವಹಾರವೇ ಹೆಚ್ಚಾಗ್ತಿರೋದ್ರಿಂದ ಸೈಬರ್‌ ಕಳ್ಳರು ಕೂಡಾ ಇಂಥಾ ದಾರಿ ಹಿಡಿದಿದ್ದಾರೆ. ಹೀಗಾಗಿ ಗ್ರಾಹಕರು ಹಾಗೂ ಶಾಪ್‌ ಮಾಲೀಕರು ಇಂಥಾ ಌಪ್‌ಗಳನ್ನ ಎಚ್ಚರಿಕೆಯಿಂದ ಬಳಸಬೇಕು. ಮೊಬೈಲ್‌ಗೆ ಬರೋ ಯಾವುದೇ ಓಟಿಪಿ, ಲಿಂಕ್‌ಗಳನ್ನ ಕ್ಲಿಕ್‌ ಮಾಡಬಾರ್ದು ಅಂತಾರೆ.

ಒಟ್ನಲ್ಲಿ ಬ್ಯಾಂಕ್‌ಗೆ ಹೋಗಿ ಹಣ ಬಿಡಿಸಿಕೊಂಡು ಬರೋದನ್ನ ನಿಲ್ಲಿಸಿರೋ ಜನ, ಎಟಿಎಂ ಕೂಡಾ ಮರೆತಿದ್ದಾರೆ. ಎಲ್ಲದಕ್ಕೂ ಡಿಜಿಟಲ್‌ ಪೇಮೆಂಟ್‌ ಌಪ್‌ಗಳನ್ನೇ ಬಳಸ್ತಿದ್ದಾರೆ. ಆದ್ರೆ ಇದನ್ನೇ ಕೆಲವರು ಬಂಡವಾಳ ಮಾಡಿಕೊಂಡು ಶಾಪ್‌ ಮಾಲೀಕರಿಗೆ ಯಾಮಾರಿಸುತ್ತಿದ್ದಾರೆ.

ವರದಿ: ಪೂರ್ಣಿಮಾ, ಟಿವಿ9 ಬೆಂಗಳೂರು

ಇದನ್ನೂ ಓದಿ: ಮಸೀದಿಗಳಲ್ಲಿ ಧ್ವನಿವರ್ಧಕಗಳನ್ನು ತೆಗೆದುಹಾಕಿ, ಇಲ್ಲದಿದ್ದರೆ ಮಸೀದಿ ಮುಂದೆ ಲೌಡ್ ಸ್ಪೀಕರ್​​ನಲ್ಲಿ ಹನುಮಾನ್ ಚಾಲೀಸಾ ಹಾಕುತ್ತೇವೆ: ರಾಜ್ ಠಾಕ್ರೆ

ಅಪಘಾತದಲ್ಲಿ ಗಾಯಗೊಂಡಿದ್ದ ಮಲೈಕಾ ಆರೋಗ್ಯ ಈಗ ಹೇಗಿದೆ?

Follow us on

Related Stories

Most Read Stories

Click on your DTH Provider to Add TV9 Kannada