ಕಾಲೇಜ್ ಕ್ಯಾಂಪಸ್​ನಲ್ಲಿ ಸ್ಟಾರ್ ಬ್ಯೂಟಿ! ಸ್ಟೂಡೆಂಟ್ಸ್ ದಿಲ್ ಗೆದ್ದ ಅದಿತಿ ರಾವ್!

ಇವತ್ತು ಪ್ರೆಸಿಡೆನ್ಸಿ ಯೂನಿವರ್ಸಿಟಿ ಸ್ಟೂಡೆಂಟ್ಸ್ ಸಖತ್ ಖುಷಿ ಮೂಡ್​ನಲ್ಲಿದ್ದರು. ತಮ್ಮ ಕಾಲೇಜ್ ಕ್ಯಾಂಪಸ್​ನಲ್ಲಿ ಬಹುಭಾಷಾ ನಟಿ ನೋಡಿ ದಿಲ್ ಖುಷ್ ಆದರು. ಇನ್ನು ಆ ನಟಿಯ ಇನ್ಸ್ಪಿರೇಷನ್ ಸ್ಟೋರಿ ಕೇಳಿ, ಉತ್ತೇಜನಗೊಂಡರು. ಹಾಗಾದ್ರೆ, ಆ ಸ್ಟಾರ್ ನಟಿ ಯಾರು? ಆಕೆ ಕ್ಯಾಂಪಸ್​ಗೆ ಯಾಕೆ ಬಂದಿದ್ದರು. ಈ ಕುರಿತು ಒಂದು ಸ್ಟೋರಿ ಇಲ್ಲಿದೆ ಓದಿ.

ಕಾಲೇಜ್ ಕ್ಯಾಂಪಸ್​ನಲ್ಲಿ ಸ್ಟಾರ್ ಬ್ಯೂಟಿ! ಸ್ಟೂಡೆಂಟ್ಸ್ ದಿಲ್ ಗೆದ್ದ ಅದಿತಿ ರಾವ್!
ಪ್ರೆಸಿಡೆನ್ಸಿ ಯೂನಿವರ್ಸಿಟಿ ಕಾಲೇಜ್ ಕ್ಯಾಂಪಸ್​ನಲ್ಲಿ ಸ್ಟಾರ್ ಬ್ಯೂಟಿ ಅದಿತಿ ರಾವ್!
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on: Aug 02, 2024 | 10:53 PM

ಬೆಂಗಳೂರು, ಆ.02: ಯಲಹಂಕದ ರಾಜನು ಕುಂಟೆ ಬಳಿ ಇರುವ ಪ್ರೆಸಿಡೆನ್ಸಿ ಯೂನಿವರ್ಸಿಟಿ ಇಂದು(ಶುಕ್ರವಾರ) ಸಖತ್ ಕಲರ್ ಫುಲ್ ಆಗಿತ್ತು. ‘ಸಾಧಕರ ಸಂವಾದಗಳು ಕಾರ್ಯಕ್ರಮ’ವನ್ನ ಇವತ್ತು ಕಾಲೇಜ್ ಆಡಳಿತ ಮಂಡಳಿ ಆಯೋಜಿಸಿತ್ತು. ಈ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ನೀಡಿದ್ದು, ತೆಲುಗು, ತಮಿಳು, ಹಿಂದಿಯಲ್ಲಿ ಮಿಂಚುತ್ತಿರುವ ಬಹುಭಾಷಾ ನಟಿ ಅದಿತಿ ರಾವ್ ಹೈದರಿ(Aditi Rao Hydari). ಸಂಜಯ್ ಲೀಲಾ ಬನ್ಸಾಲಿಯವರ ಹೀರಾ ಮಂಡಿಯಲ್ಲಿ ಸಧ್ಯ ಅದಿತಿ ನಟನೆಗೆ ಎಲ್ಲರೂ ಕ್ಲೀನ್ ಬೋಲ್ಡ್ ಆಗಿದ್ದಾರೆ. ಅಂಥಹ ಸ್ಟಾರ್ ನಟಿಯನ್ನು ತಮ್ಮ ಕಾಲೇಜಿನಲ್ಲಿ ನೋಡಿ ಸ್ಟೂಡೆಂಟ್ಸ್ ತುಂಬಾನೇ ಸಂಭ್ರಮಿಸಿದರು.

ಇದೇ ವೇಳೆ ಅದಿತಿ ಕೂಡ ಸ್ಟೂಡೆಂಟ್ಸ್ ಜೊತೆ ತಮ್ಮ ಲೈಫ್ ಸ್ಟೋರಿಯನ್ನ ಹಂಚಿಕೊಂಡರು. ಅಷ್ಟೆ ಅಲ್ಲ, ನಮ್ಮ ಜೀವನದಲ್ಲಿ ಸಕ್ಸಸ್ ಆಗಲು ಏನೆಲ್ಲಾ ಮಾಡಬೇಕು ಎಂದು ಸ್ಟೂಡೆಂಟ್ಸ್ ಸ್ಪೂರ್ತಿಧಾಯಕ ಮಾತುಗಳನ್ನಾಡಿದರು. ಈ ವೇಳೆ ತಮ್ಮ ಬೆಳೆವಣಿಗೆ ನಮ್ಮ ಗುರುಗಳು, ಅಪ್ಪ-ಅಮ್ಮ, ಮೆಂಟರ್ಸ್, ನಮ್ಮ ಫ್ರೆಂಡ್ಸ್ ಕೂಡ ಕಾರಣವಾಗುತ್ತಾರೆ. ನಾವು ಸದಾ ಧನಾತ್ಮಕವಾಗಿ ಯೋಚಿಸಬೇಕು. ನಮ್ಮ ಮೈಂಡ್ ಯಾವಾಗಲೂ ಹೊಸತನದ ಬಗ್ಗೆ ಆಲೋಚಿಸಬೇಕು. ಪ್ರತಿ ನಿಮಿಷ ಜೀವನದಲ್ಲಿ ಖುಷಿಯಿಂದ ಅನುಭವಿಸಬೇಕು ಎಂದರು.

ಇದನ್ನೂ ಓದಿ:ಸಿನಿಮಾ ಕುರಿತು ಹೊಸ ವಿಷಯ ತಿಳಿಯಲು ಅಮೆರಿಕಕ್ಕೆ ತೆರಳಿದ ಶ್ರೇಯಸ್ ಮಂಜು

ಇನ್ನು ಸ್ಟೂಡೆಂಟ್ಸ್ ಜೊತೆ ಸ್ಟೇಜ್ ಮೇಲೆಯೇ ಸೆಲ್ಫೀ ಕ್ಲಿಕ್ಸಿಕೊಂಡರು. ಸ್ಟಾರ್ ಹೀರೋ ಸಿದ್ದಾರ್ಥ್ ಜೊತೆ ಅದಿತಿ ಇತ್ತೀಚೆಗೆ ಅಷ್ಟೆ ಎಂಗೇಜ್ಮೆಂಟ್ ಮಾಡಿಕೊಂಡು ಸಾಕಷ್ಟು ಸುದ್ದಿಯಲ್ಲಿದ್ದಾರೆ. ಈ ನಡುವೆ ಸ್ಟಾರ್ ನಟಿಯನ್ನು ನೋಡಿದ್ದು, ಸ್ಟೂಡೆಂಟ್ಸ್ ಸಂಭ್ರಮಕ್ಕೆ ಪಾರವೇ ಇರಲಿಲ್ಲ. ಇನ್ನು ಇವತ್ತು ಕ್ಯಾಂಪಸ್​ನಲ್ಲಿ ಯುಕೆಯ ಸುಮಾರು 30 ದೊಡ್ಡ ಯೂನಿವರ್ಸಿಟಿಗಳ ಪ್ರತಿನಿಧಿಗಳು ಸಹ ಭಾಗವಹಿಸಿ, ಉನ್ನತ ಶಿಕ್ಷಣದ ಬಗ್ಗೆ ಸ್ಟೂಡೆಂಟ್ಸ್ ಜೊತೆ ಸಂವಾದ ನಡೆಸಿದರು.

ಕಾಲೇಜ್​ನ ಉಪ ಕುಲಪತಿ ಡಾ. ಅನುಭಾ ಸಿಂಗ್ ಮಾತನಾಡಿ,  ‘ಸಾಧಕರು ಸಂವಾದ ದಲ್ಲಿ ಅದಿತಿ ಭಾಗವಹಿಸಿದ್ದು, ಒಂದುಕಡೆ ಖುಷಿಯಾದರೆ, ಹಲವು ವಿಶ್ವ ವಿದ್ಯಾಲಯಗಳು ನಮ್ಮ ಕ್ಯಾಂಪಸ್​ಗೆ ಬಂದು ಹೈಯರ್ ಎಜ್ಯುಕೇಶನ್ ಬಗ್ಗೆ ಇರುವ ಅವಕಾಶಗಳನ್ನು ತೆರೆದಿಟ್ಟಿದ್ದು ಕೂಡ ನಮ್ಮ ಸ್ಟೂಡೆಂಟ್ಸ್​ಗೆ ಅನುಕೂಲವಾಗಲಿದೆ ಎಂದರು. ಒಟ್ಟಿನಲ್ಲಿ ಇವತ್ತು ಪ್ರೆಸಿಡೆನ್ಸಿ ಕ್ಯಾಂಪಸ್ ಸ್ಟೂಡೆಂಟ್ಸ್ ಸ್ಟಾರ್ ನಟಿ ಅದಿತಿಯನ್ನು ಕಣ್ತುಂಬಿಕೊಂಡು ಖುಷಿಪಟ್ಟದ್ದಂತೂ ಸುಳ್ಳಲ್ಲ.

ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Nithya Bhavishya: ನವರಾತ್ರಿಯ 9ನೇ ದಿನ ಶುಕ್ರವಾರದ ರಾಶಿ ಭವಿಷ್ಯ
Nithya Bhavishya: ನವರಾತ್ರಿಯ 9ನೇ ದಿನ ಶುಕ್ರವಾರದ ರಾಶಿ ಭವಿಷ್ಯ
ದಸರಾ ಹಬ್ಬದ ವಿಶೇಷ ಬಸ್​ಗಳು ​ಫುಲ್: ಬಿಬಿಎಂಟಿಸಿ ಬಸ್ ವ್ಯವಸ್ಥೆ
ದಸರಾ ಹಬ್ಬದ ವಿಶೇಷ ಬಸ್​ಗಳು ​ಫುಲ್: ಬಿಬಿಎಂಟಿಸಿ ಬಸ್ ವ್ಯವಸ್ಥೆ
ಇಷ್ಟು ದಿನ ಸ್ವರ್ಗದಲ್ಲಿದ್ದು ಈಗ ನರಕದ ಪಾಲಾದ ಐಶ್ವರ್ಯಾ; ಜಗದೀಶ್​ಗೆ ಖುಷಿ
ಇಷ್ಟು ದಿನ ಸ್ವರ್ಗದಲ್ಲಿದ್ದು ಈಗ ನರಕದ ಪಾಲಾದ ಐಶ್ವರ್ಯಾ; ಜಗದೀಶ್​ಗೆ ಖುಷಿ
ಹಬ್ಬಕ್ಕಾಗಿ ದೂರದ ಊರುಗಳಿಗೆ ಪ್ರಯಾಣಿಸುತ್ತಿರೋರಿಗೆ ಮಳೆ ಕಾಟ!
ಹಬ್ಬಕ್ಕಾಗಿ ದೂರದ ಊರುಗಳಿಗೆ ಪ್ರಯಾಣಿಸುತ್ತಿರೋರಿಗೆ ಮಳೆ ಕಾಟ!
ಆ ಸಮಯದ ಬಳಿಕ ರಜನೀಕಾಂತ್ ನಾಯಕನಾಗಿ ನಟಿಸಲ್ಲ: ಗೆಳೆಯ ಬಹದ್ದೂರ್
ಆ ಸಮಯದ ಬಳಿಕ ರಜನೀಕಾಂತ್ ನಾಯಕನಾಗಿ ನಟಿಸಲ್ಲ: ಗೆಳೆಯ ಬಹದ್ದೂರ್
ಕರ್ನಾಟಕದಲ್ಲಿ ಮುಂದಿನ 5 ದಿನ ಭಾರೀ ಮಳೆ ಮುನ್ಸೂಚನೆ: ಎಲ್ಲೆಲ್ಲಿ?
ಕರ್ನಾಟಕದಲ್ಲಿ ಮುಂದಿನ 5 ದಿನ ಭಾರೀ ಮಳೆ ಮುನ್ಸೂಚನೆ: ಎಲ್ಲೆಲ್ಲಿ?
ಸಿದ್ದರಾಮಯ್ಯ ಮೇಲಿದ್ದ ವಿಶ್ವಾಸ ಹುಸಿಹೋಗಿದೆ, ರಾಜೀನಾಮೆ ನೀಡಲಿ: ರವಿಕುಮಾರ್
ಸಿದ್ದರಾಮಯ್ಯ ಮೇಲಿದ್ದ ವಿಶ್ವಾಸ ಹುಸಿಹೋಗಿದೆ, ರಾಜೀನಾಮೆ ನೀಡಲಿ: ರವಿಕುಮಾರ್
ದಸರಾ ರಜೆ: ತುಂಬಿ ತುಳುಕುತ್ತಿರೋ ಬೆಂಗಳೂರಿನ KSRTC ಬಸ್​ ನಿಲ್ದಾಣ
ದಸರಾ ರಜೆ: ತುಂಬಿ ತುಳುಕುತ್ತಿರೋ ಬೆಂಗಳೂರಿನ KSRTC ಬಸ್​ ನಿಲ್ದಾಣ
ಚನ್ನಪಟ್ಟಣ: ಬೇರೆ ಅಭ್ಯರ್ಥಿ ಒಪ್ಪಿಕೊಳ್ಳುವುದು ಕುಮಾರಸ್ವಾಮಿಗೆ ಸಾಧ್ಯವಿಲ್ಲ
ಚನ್ನಪಟ್ಟಣ: ಬೇರೆ ಅಭ್ಯರ್ಥಿ ಒಪ್ಪಿಕೊಳ್ಳುವುದು ಕುಮಾರಸ್ವಾಮಿಗೆ ಸಾಧ್ಯವಿಲ್ಲ
ಸುಲಭ ಕ್ಯಾಚ್ ಕೈಚೆಲ್ಲಿದ ಬಾಬರ್; 262 ರನ್ ಚಚ್ಚಿದ ರೂಟ್
ಸುಲಭ ಕ್ಯಾಚ್ ಕೈಚೆಲ್ಲಿದ ಬಾಬರ್; 262 ರನ್ ಚಚ್ಚಿದ ರೂಟ್