ಸಿನಿಮಾ ಕುರಿತು ಹೊಸ ವಿಷಯ ತಿಳಿಯಲು ಅಮೆರಿಕಕ್ಕೆ ತೆರಳಿದ ಶ್ರೇಯಸ್ ಮಂಜು

ನಿರ್ಮಾಪಕ ಕೆ. ಮಂಜು ಅವರ ಪುತ್ರ, ನಟ ಶ್ರೇಯಸ್​ ಮಂಜು ಅವರು ಅಮೆರಿಕಕ್ಕೆ ತೆರಳಿದ್ದಾರೆ. ಅಲ್ಲಿ ಅವರು ಹಲವರನ್ನು ಭೇಟಿ ಆಗುತ್ತಿದ್ದಾರೆ. ವಿವಿಧ ರೀತಿಯ ತರಬೇತಿಗಳ ಮೂಲಕ ಸಿನಿಮಾ ಬಗ್ಗೆ ಹೊಸ ವಿಚಾರಗಳನ್ನು ತಿಳಿಯುವ ಉದ್ದೇಶದಿಂದ ಶ್ರೇಯಸ್​ ಮಂಜು ಅವರು ವಿದೇಶಕ್ಕೆ ತೆರಳಿದ್ದಾರೆ. ಮುಂದಿನ ಸಿನಿಮಾದ ತಯಾರಿಗಾಗಿ ಅವರು ಈ ಪ್ರವಾಸ ಮಾಡಿದ್ದಾರೆ.

ಸಿನಿಮಾ ಕುರಿತು ಹೊಸ ವಿಷಯ ತಿಳಿಯಲು ಅಮೆರಿಕಕ್ಕೆ ತೆರಳಿದ ಶ್ರೇಯಸ್ ಮಂಜು
ಶ್ರೇಯಸ್​ ಮಂಜು
Follow us
ಮದನ್​ ಕುಮಾರ್​
|

Updated on: Aug 02, 2024 | 10:33 PM

ಚಿತ್ರರಂಗದಲ್ಲಿ ದಿನೇ ದಿನೇ ಪೈಪೋಟಿ ಹೆಚ್ಚುತ್ತಿದೆ. ಹೊಸ ಕಲಾವಿದರ ಎಂಟ್ರಿ ಆಗುತ್ತಲೇ ಇದೆ. ಅದಕ್ಕೆ ತಕ್ಕಂತೆ ಹೊಸ ವಿಚಾರಗಳನ್ನು ಕಲಾವಿದರು ತಿಳಿದುಕೊಳ್ಳುವುದು ತುಂಬ ಅವಶ್ಯಕ. ಹೊಸ ಬಗೆಯ ತರಬೇತಿಗಳು ಕೂಡ ನಟರಿಗೆ ಅಗತ್ಯವಿದೆ. ಈ ನಿಟ್ಟಿನಲ್ಲಿ ನಟ ಶ್ರೇಯಸ್​ ಮಂಜು ಅವರು ವಿದೇಶಕ್ಕೆ ತೆರಳಿದ್ದಾರೆ. ಅಲ್ಲಿನ ಅನುಭವದ ಬಗ್ಗೆ ಅವರು ಮಾಹಿತಿ ನೀಡಿದ್ದಾರೆ. ನಿರ್ಮಾಪಕ ಕೆ. ಮಂಜು ಅವರ ಪುತ್ರನಾದ ಶ್ರೇಯಸ್​ ಅವರು ಅಮೆರಿಕದಲ್ಲಿ ಹಲವು ಬಗೆಯ ತರಬೇತಿಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಆ ಕುರಿತು ವಿವರ ಇಲ್ಲಿದೆ..

ಕನ್ನಡ ಚಿತ್ರರಂಗದ ಯುವನಟರ ಸಾಲಿನಲ್ಲಿ ಶ್ರೇಯಸ್ ಮಂಜು ಕೂಡ ಇದ್ದಾರೆ. ಅವರ ನಟಿಸಿದ ‘ವಿಷ್ಣುಪ್ರಿಯ’ ಸಿನಿಮಾ ಈಗ ಬಿಡುಗಡೆಗೆ ಸಜ್ಜಾಗಿದೆ. ಬೇರೆ ಬೇರೆ ಪ್ರಾಜೆಕ್ಟ್​ಗಳ ಕಡೆಗೂ ಶ್ರೇಯಸ್​ ಅವರು ಗಮನ ಹರಿಸಿದ್ದಾರೆ. ಹಾಗಾಗಿ ಅವರು ಮುಂದಿನ ವರ್ಷ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿತ್ರೀಕರಿಸಲಾಗುವ ಹೊಸ ಆ್ಯಕ್ಷನ್ ಸಿನಿಮಾಗಾಗಿ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಶ್ರೇಯಸ್​ ಮಂಜು ಅವರು‌ ಕಳೆದ 2 ವಾರಗಳಿಂದ ಅಮೆರಿಕದ ಚಿಕಾಗೋ ಹಾಗೂ ನ್ಯೂಯಾರ್ಕ್‌ನ ಫಿಲ್ಮ್​ ಸಿಟಿಯ ವಿವಿಧ ನಟನಾ ಶಾಲೆಗಳಲ್ಲಿ ಮಾಸ್ಟರ್ ಕ್ಲಾಸ್ ತರಬೇತಿ ಪಡೆದುಕೊಳ್ಳುತ್ತಿದ್ದಾರೆ ಎಂಬುದು ವಿಶೇಷ. ಸಿನಿಮಾಗೆ ಸಂಬಂಧಿಸಿದಂತೆ ಹೊಸ ಬಗೆಯ ಆ್ಯಕ್ಷನ್ ತಂತ್ರಗಳ ಬಗ್ಗೆ ಕೂಡ ಅವರು ತರಬೇತಿ ಪಡೆಯುತ್ತಿದ್ದಾರೆ. ಅಲ್ಲಿನ ಹೊಸ ಜನರು ಮತ್ತು ಜಾಗದಲ್ಲಿ ಶ್ರೇಯಸ್ ಮಂಜು ಅವರು ಹಲವು ರೀತಿ ಅನುಭವ ಪಡೆಯುತ್ತಿದ್ದಾರೆ.

‘ಸಿನಿ ಕ್ಷೇತ್ರದಲ್ಲಿ ಸಕ್ರಿಯವಾಗಿರವ ಹೊಸ ವ್ಯಕ್ತಿಗಳನ್ನು ಭೇಟಿ ಮಾಡುವುದು ಮತ್ತು ಅವರ ಜೊತೆ ಚರ್ಚೆ ನಡೆಸುವುದರಿಂದ ನನಗೆ ಹೊಸ ಉತ್ಸಾಹ ಮೂಡಿದೆ. ಚಿತ್ರರಂಗದಲ್ಲಿ ದಿನದಿಂದ ದಿನಕ್ಕೆ ಹೊಸತನದ ಅವಿಷ್ಕಾರ ಆಗುತ್ತಿದೆ. ಕಲಾವಿದರಾಗಿ ನಾವೂ ಸಹ ಹೊಸದನ್ನು ಕಲಿಯಬೇಕು. ಆದ್ದರಿಂದ ಬಹಳ ವಿಷಯಗಳನ್ನು ತಿಳಿದುಕೊಳ್ಳುತ್ತಿದ್ದೇನೆ’ ಎಂದು ಶ್ರೇಯಸ್​ ಮಂಜು ಹೇಳಿದ್ದಾರೆ.

ಇದನ್ನೂ ಓದಿ: ಕನ್ನಡ ಚಿತ್ರರಂಗದ ಪರಿಸ್ಥಿತಿ, ಹಿರಿಯ ನಟ ಜಗ್ಗೇಶ್ ಕಣ್ಣೀರು

ದುನಿಯಾ ವಿಜಯ್ ಹಾಗೂ ಶ್ರೇಯಸ್ ಮಂಜು ಅವರ ಕಾಂಬಿನೇಶನ್​ನ ಸಿನಿಮಾದ ಕೆಲಸಗಳು ಕೂಡ ಪ್ರಗತಿಯಲ್ಲಿವೆ. ಆ ಸಿನಿಮಾಗೆ ಎಸ್. ನಾರಾಯಣ್ ಅವರು ನಿರ್ದೇಶನ ಮಾಡಲಿದ್ದಾರೆ. ‘ವಿಷ್ಣು ಪ್ರಿಯಾ’ ಸಿನಿಮಾ ಬಿಡುಗಡೆ ಆದ ಬಳಿಕ ಶೀಘ್ರದಲ್ಲೇ ದುನಿಯಾ ವಿಜಯ್-ಶ್ರೇಯಸ್ ಮಂಜು ಕಾಂಬಿನೇಷನ್​ನ ಸಿನಿಮಾ ಬಗ್ಗೆ ಅಪ್​ಡೇಟ್​ ನೀಡಲು ನಿರ್ಧರಿಸಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ