ಬಿಡುಗಡೆ ಆಯ್ತು ‘ಭೀಮ’ ಟ್ರೈಲರ್, ಇದು ಬೆಂಗಳೂರಿನ ಗಲ್ಲಿಗಳ ಕತೆ

ದುನಿಯಾ ವಿಜಯ್ ನಟಿಸಿ, ನಿರ್ದೇಶನ ಮಾಡಿರುವ ಎರಡನೇ ಸಿನಿಮಾ ‘ಭೀಮ’ ಟ್ರೈಲರ್ ಇಂದು (ಆಗಸ್ಟ್ 3) ಬಿಡುಗಡೆ ಆಗಿದೆ. ಸಿನಿಮಾವು ಆಗಸ್ಟ್ 9ರಂದು ಬಿಡುಗಡೆ ಆಗಲಿದೆ. ‘ಭೀಮ’ ಸಿನಿಮಾ ಬೆಂಗಳೂರಿನ ಕರಾಳ ಗಲ್ಲಿಗಳ ಕತೆಯಂತೆ ತೋರುತ್ತಿದೆ.

ಬಿಡುಗಡೆ ಆಯ್ತು ‘ಭೀಮ’ ಟ್ರೈಲರ್, ಇದು ಬೆಂಗಳೂರಿನ ಗಲ್ಲಿಗಳ ಕತೆ
ಭೀಮ ಸಿನಿಮಾ
Follow us
ಮಂಜುನಾಥ ಸಿ.
|

Updated on: Aug 03, 2024 | 9:38 PM

ದುನಿಯಾ ವಿಜಯ್ ನಟಿಸಿ, ನಿರ್ದೇಶನ ಮಾಡಿರುವ ‘ಭೀಮ’ ಸಿನಿಮಾದ ಟ್ರೈಲರ್ ಇಂದು (ಆಗಸ್ಟ್ 03) ಬಿಡುಗಡೆ ಆಗಿದೆ. ‘ಭೀಮ’ ದುನಿಯಾ ವಿಜಯ್ ನಿರ್ದೇಶಿಸಿರುವ ಎರಡನೇ ಸಿನಿಮಾ ಆಗಿದ್ದು, ಸಾಕಷ್ಟು ಸಮಯ ತೆಗೆದುಕೊಂಡು ಈ ಸಿನಿಮಾವನ್ನು ದುನಿಯಾ ವಿಜಯ್ ಕಟ್ಟಿದ್ದಾರೆ. ಈ ಹಿಂದೆ ‘ಸಲಗ’ ಸಿನಿಮಾ ಮೂಲಕ ಗೆಲುವು ಕಂಡಿರುವ ದುನಿಯಾ ವಿಜಯ್ ಈ ಬಾರಿ ಮತ್ತೊಂದು ಗೆಲುವಿನ ಭರವಸೆಯಲ್ಲಿದ್ದು, ಅದೇ ಭರವಸೆಯಲ್ಲಿ ಸಿನಿಮಾದ ಟ್ರೈಲರ್ ಅನ್ನು ಇಂದು ಬಿಡುಗಡೆ ಮಾಡಿದ್ದಾರೆ. ‘ಸಲಗ’ದ ರೀತಿಯಲ್ಲಿಯೇ ಇದು ಸಹ ರೌಡಿಗಳನ್ನು ಹೆಚ್ಚು ಹತ್ತಿರದಿಂದ ನೋಡುವ ಕತೆಯಂತೆ ತೋರುತ್ತಿದೆ.

‘ಸಲಗ’ ಸಿನಿಮಾದಲ್ಲಿ ರೌಡಿಗಳ ಬದುಕನ್ನು ಹತ್ತಿರದಿಂದ ತೋರಿಸುವ ಪ್ರಯತ್ನವನ್ನು ದುನಿಯಾ ವಿಜಯ್ ಮಾಡಿದ್ದರು. ಬೆಂಗಳೂರಿನ ಗಲ್ಲಿಗಳಲ್ಲಿ ನಡೆಯುವ ರೌಡಿಸಂನ ಕತೆಗಳನ್ನು ‘ಸಲಗ’ ಸಿನಿಮಾದಲ್ಲಿ ಹೇಳುವುದರ ಜೊತೆಗೆ ಒಂದು ರಿವೇಂಜ್ ಡ್ರಾಮಾ ಅನ್ನೂ ಸಹ ಸೃಷ್ಟಿಸಿದ್ದರು. ಈಗ ಬಿಡುಗಡೆ ಆಗಿರುವ ‘ಭೀಮ’ ಸಿನಿಮಾದ ಟ್ರೈಲರ್​ನಲ್ಲಿಯೂ ಸಹ ಅಲ್ಲಲ್ಲಿ ‘ಸಲಗ’ದ ಛಾಯೆ ಕಾಣುತ್ತಿದೆ. ಇದೂ ಸಹ ಬೆಂಗಳೂರಿನ ಕರಾಳ ಗಲ್ಲಿಗಳ ಕತೆಯೇ ಎಂಬುದನ್ನಂತೂ ಟ್ರೈಲರ್ ಸಾರಿ ಹೇಳುತ್ತಿದೆ. ಜೊತೆಗೆ ಸ್ವಲ್ಪ ನಾಯಕನ ವೈಭವೀಕರಣವೂ ಇದ್ದಂತೆ ತೋರುತ್ತಿದೆ.

ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯರ ಭೇಟಿಯಾದ ದುನಿಯಾ ವಿಜಿ, ‘ಭೀಮ’ ವೀಕ್ಷಿಸಲು ಆಹ್ವಾನ

ರೌಡಿಗಳ ಕೊಳಕು ವ್ಯಕ್ತಿತ್ವ, ಹಸಿ ಸಂಭಾಷಣೆ, ರಕ್ತದ ಕಮಟು, ಪೊಲೀಸರ ಒರಟುತನ, ರೌಡಿಗಳ ಕೊಳಕುತನ ಎಲ್ಲದರ ಝಲಕ್ ಅನ್ನು ಟ್ರೈಲರ್​ ಅಲ್ಲ ತೋರಿಸಲಾಗಿದೆ. ಜೊತೆಗೆ ದುನಿಯಾ ವಿಜಯ್ ರ ಕೆಲವು ಹೀರೋಯಿಕ್ ಮೂಮೆಂಟ್​ಗಳನ್ನು ಸಹ ಸೇರಿಸಲಾಗಿದೆ. ‘ಸಲಗ’ ಸಿನಿಮಾದಲ್ಲಿ ಡಾಲಿ ಧನಂಜಯ್ ಅವರನ್ನು ಪವರ್​ಫುಲ್ ಪೊಲೀಸ್ ಆಗಿ ತೋರಿಸಲಾಗಿತ್ತು, ಆದರೆ ಈ ಸಿನಿಮಾದಲ್ಲಿ ದುನಿಯಾ ವಿಜಯ್ ಹೊರತಾಗಿ ಇನ್ನೊಂದು ಪವರ್​ಫುಲ್ ಪಾತ್ರ ಇದ್ದಂತಿಲ್ಲ.

ಇಂದು (ಆಗಸ್ಟ್ 03) ನಗರದಲ್ಲಿ ಟ್ರೈಲರ್ ಬಿಡುಗಡೆ ಕಾರ್ಯಕ್ರಮವನ್ನು ಅದ್ಧೂರಿಯಾಗಿ ದುನಿಯಾ ವಿಜಯ್ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಶಿವರಾಜ್ ಕುಮಾರ್ ಮತ್ತು ಗೀತಾ ಶಿವರಾಜ್ ಕುಮಾರ್ ಭಾಗಿಯಾಗಿದ್ದರು ಜೊತೆಗೆ ನಿರ್ದೇಶಕ ತರುಣ್ ಸುಧೀರ್ ಇನ್ನೂ ಕೆಲವರು ಭಾಗಿಯಾಗಿ ದುನಿಯಾ ವಿಜಯ್​ಗೆ ಹಾಗೂ ಇಡೀ ಚಿತ್ರತಂಡಕ್ಕೆ ಶುಭ ಕೋರಿದ್ದಾರೆ. ‘ಭೀಮ’ ಸಿನಿಮಾ ಆಗಸ್ಟ್ 9ರಂದು ತೆರೆಗೆ ಬರಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ