Bengaluru Areas: ನಿಮ್ ಏರಿಯಾ ಯಾವ್​ದು? ಬೆಂಗಳೂರಿನ ಪ್ರತಿ ಏರಿಯಾ ಹೆಸರಿನ ಹಿಂದೆ ಒಂದೊಂದು ಕಥೆಯಿದೆ, ತಿಳಿಯೋಣ ಬನ್ನಿ

|

Updated on: Aug 18, 2022 | 6:36 PM

History of Bengaluru: ಹತ್ತಾರು ಹಳ್ಳಿ, ಊರುಗಳನ್ನು ಜೀರ್ಣಿಸಿಕೊಂಡಿರುವ ಬೆಂಗಳೂರಿನ ಪ್ರತಿ ಪ್ರದೇಶದ ಹೆಸರಿನ ಹಿಂದೆಯೂ ಒಂದೊಂದು ಕಥೆಯಿದೆ. ಬಡಾವಣೆಗಳು, ರಸ್ತೆಗಳ ಹೆಸರುಗಳೂ ಕಥೆಗಳನ್ನು ಹೇಳುತ್ತಿವೆ.

Bengaluru Areas: ನಿಮ್ ಏರಿಯಾ ಯಾವ್​ದು? ಬೆಂಗಳೂರಿನ ಪ್ರತಿ ಏರಿಯಾ ಹೆಸರಿನ ಹಿಂದೆ ಒಂದೊಂದು ಕಥೆಯಿದೆ, ತಿಳಿಯೋಣ ಬನ್ನಿ
ಬೆಂಗಳೂರು ನಗರ (ಸಂಗ್ರಹ ಚಿತ್ರ)
Follow us on

ಹತ್ತಾರು ಹಳ್ಳಿ, ಊರುಗಳನ್ನು ಜೀರ್ಣಿಸಿಕೊಂಡಿರುವ ಬೆಂಗಳೂರಿನ ಪ್ರತಿ ಪ್ರದೇಶದ ಹೆಸರಿನ ಹಿಂದೆಯೂ ಒಂದೊಂದು ಕಥೆಯಿದೆ. ಬಡಾವಣೆಗಳು, ರಸ್ತೆಗಳ ಹೆಸರುಗಳೂ ಕಥೆಗಳನ್ನು ಹೇಳುತ್ತಿವೆ. ಇಂಥ ಕಥೆಗಳನ್ನು ಅರಿಯುವ ವ್ಯವಧಾನ, ಮನಸ್ಸು ನಮಗೆ ಬೇಕಷ್ಟೇ. ಬೆಂಗಳೂರಿನ ವಿವಿಧ ಪ್ರದೇಶಗಳಿಗೆ ಇರುವ ಹೆಸರುಗಳ ಹಿನ್ನೆಲೆ ವಿವರಿಸುವ ಪ್ರಯತ್ನವನ್ನು ಸಿ.ಎಸ್.ನಾಗೇಶ್​ಕುಮಾರ್ ತಮ್ಮ ಫೇಸ್​ಬುಕ್ ಪೋಸ್ಟ್​ನಲ್ಲಿ ಮಾಡಿದ್ದರು. ಈ ಪೋಸ್ಟ್​ಗೆ ಕಾಮೆಂಟ್ ಮಾಡಿರುವ ಹಲವರು ತಮಗೆ ತಿಳಿದಿರುವ ಅಂಶಗಳನ್ನು ಹಂಚಿಕೊಂಡಿದ್ದರು. ನಾಗೇಶ್​ ಕುಮಾರ್ ಅವರ ಪೋಸ್ಟ್​ನಲ್ಲಿದ್ದ ಒಕ್ಕಣೆಯನ್ನು ಇಲ್ಲಿ ಕೊಡಲಾಗಿದೆ.

***

ಇಂದು ನಾನು ಚಿಕ್ಕಪೇಟೆ ಮೆಟ್ರೋ ಬಳಿ ಇಳಿದಾಗ ನಿಂತಿದ್ದ ನಾಲ್ಕೈದು ಆಟೋದವರಿಗೆ ‘ಸಿಲ್ವರ್ ಜುಬಿಲೀ ಪಾರ್ಕ್ ರೋಡಿಗೆ ಬರ್ತೀರಾ?’ ಎಂದರೆ ನಾನೇ ಪೆಕರನೋ ಎಂಬಂತೆ ನೋಡಿ, ‘ಎಲ್ಲಿ ಬರತ್ತೆ ಅದು?’ ಎಂದರು. ‘ಅದೆಲ್ಲೂ ಬರಲ್ಲ, ನಾವೇ ಹೋಗಬೇಕು’ ಎಂದು ಹೇಳಿ ನಾನು ಸುಮ್ಮನಾದರೂ ನಾವು ಸಂಕ್ಷಿಪ್ತ ಇಂಗ್ಲೀಷ್ ಹೆಸರುಗಳಿಗೆ ಮೋಡಿ ಹೋಗಿ ನಮ್ಮ ನಗರ, ಅದರ ಸಂಸ್ಕೃತಿಯ, ಇತಿಹಾಸದ ಹೆಸರುಗಳನ್ನು ಮರೆತಿದ್ದೇವಾ ಎನಿಸಿತು ಈ ಹಳೇ ಬೆಂಗಳೂರಿಗನಿಗೆ.

ಹಾಗಾಗಿ ನಗರದ ಕೆಲವು ರಸ್ತೆ, ಪ್ರದೇಶಗಳ short form/ Abbreviated initalsಗಳನ್ನು ಇಲ್ಲಿ ಪೂರ್ತಿ ಬರೆದು ಹೆಸರಿಸಿದ್ದೇನೆ.

KG Road- ಕೆಪೇಗೌಡ ರಸ್ತೆ, MG Road- ಮಹಾತ್ಮ ಗಾಂಧಿ ರಸ್ತೆ, Shoolay circle- ಶೂಲೆ ಸರ್ಕಲ್ (It’s not the Kannada vulgar word) ಅಶ್ಲೀಲ ಪದ ‘ಸೂ*’ ಅಲ್ಲ. ಶೂಲೆ ಎಂಬುದು ಅಲ್ಲಿದ್ದ ಶೂಲ್ಯ ಕೆರೆ ಬದಿಯ ಪ್ರದೇಶ, ಹಾಗಾಗಿ ಶೂಲೆ ಸರ್ಕಲ್. ಇದು ಬ್ರಿಗೇಡ್ ರಸ್ತೆಗೂ- ರಿಚ್‌ಮಂಡ್ ಸರ್ಕಲಿಗೆ ಮಧ್ಯೆ ಇದೆ. JP Nagar- ಜಯಪ್ರಕಾಶ ನಾರಾಯಣ ನಗರ (ಅವರನ್ನು ನಾವ್ಯಾರೂ ಮರೆತಿಲ್ಲ ತಾನೆ?)

ಸಾಮಾನ್ಯವಾಗಿ, ನಮ್ಮೂರಿನಲ್ಲಿ- KG ಎಂದರೆ ಕೆಂಪೇಗೌಡ, ಬೆಂಗಳೂರು ಸ್ಥಾಪಕ. JC ಎಂದರೆ ಜಯಚಾಮರಾಜ ನಗರ ಬಡಾವಣೆ/ರಸ್ತೆ ಇತ್ಯಾದಿ. KR Market, KR Road ಎಂದರೆ ಕೃಷ್ಣರಾಜೆಂದ್ರ ಮಾರ್ಕೆಟ್, ನಗರ, ಸರ್ಕಲ್ ಇತ್ಯಾದಿ. NR colony- ನರಸಿಂಹರಾಜ ಕಾಲೋನಿ (ಇವರೆಲ್ಲ ಮೈಸೂರಿನ ಅರಸರು).

SJP Road- ಸಿಲ್ವರ್ ಜುಬಿಲಿ ಪಾರ್ಕ್ ರಸ್ತೆ (ಪಾರ್ಕ್ ಆ ರಸ್ತೆ ಬದಿಯಲ್ಲಿ ಇದೆ). ಮೋಟಾರ್ ಪಾರ್ಟ್ಸ್, ಹೋಲ್ ಸೇಲ್ ಇತ್ಯಾದಿಗೆ ಹೆಸರುವಾಸಿ. SP Road- ಸಾದರ ಪತ್ರಪ್ಪ ರಸ್ತೆ (ಸಾದರ ಸಂಘದ ಒಬ್ಬ ಹಿರಿಯರು ಅಲ್ಲಿಯವರು)- ಎಲೆಕ್ಟ್ರಾನಿಕ್ಸ್ ಪಾರ್ಟ್ಸ್ ಮಾರ್ಕೆಟ್​ಗೆ ಇದು ಹೆಸರುವಾಸಿ. BVK Iyengar Road- ಶ್ರೀ ಬಿ.ವಿ.ಕೃಷ್ಣಯ್ಯಂಗಾರ್ ರಸ್ತೆಯು ಮೈಸೂರು ಪ್ರಾಂತದ ಅತ್ಯಂತ ಹಿರಿಯ ಸಮರ್ಥ ಅಧಿಕಾರಿ. ಅವರ ಹೆಸರಿನಲ್ಲಿದೆ ರಸ್ತೆ. (ಚಿಕ್ಕಪೇಟೆಗೆ ಹೋಗುವಾಗ).

CT Bed- ಚೆನ್ನಮ್ಮನ ಕೆರೆ ಟ್ಯಾಂಕ್ ಬೆಡ್! (ತ್ಯಾಗರಾಜನಗರ ಬಳಿ). CK Achkat- ಚೆನ್ನಮ್ಮನ ಕೆರೆ ಅಚ್ಚುಕಟ್ಟು (ಜಲಾನಯನ). DVG Road- ಡಿ ವಿ ಗುಂಡಪ್ಪ ರಸ್ತೆ. AS char street- ಆರ್ಕಾಟ್ ಶ್ರೀನಿವಾಸಾಚಾರ್ ರಸ್ತೆ, ಚಿಕ್ಕಪೇಟೆ. BBMP- ಬೆಂಗಳೂರು ಮಹಾನಗರ ಪಾಲಿಕೆ. BDA- ಬೆಂಗಳೂರ್ ಡೆವೆಲಪ್ಮೆಂಟ್ ಅಥಾರಿಟಿ (ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ).

HSR Layout- ಹೊಸೂರು ರೋಡ್-ಸರ್ಜಾಪುರ ರೋಡ್ ಲೇಔಟ್, HRBR Layout- ಹೆಣ್ಣೂರು ರೋಡ್-ಬಾಣಸವಾಡಿ ರೋಡ್ ಲೇಔಟ್, SBC- ಸೌತ್ ಬೆಂಗಳೂರ್ ಸಿಟಿ ರೈಲ್ವೆ ನಿಲ್ದಾಣ (ಈಗ KSR- ಕೆಎಸ್ಆರ್- ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣ). BTM- ಬೈರಸಂದ್ರ-ತಾವರೆಕೆರೆ-ಮಡಿವಾಳ ಲೇಔಟ್. BSK- ಬನಶಂಕರಿ 1 ರಿಂದ 6 ಹಂತ.

Bank Colony- ಸ್ಟೇಟ್ ಬ್ಯಾಂಕ್ ಆಫ್ ಮೈಸೂರ್ ಕಾಲೊನಿ. MSR- ಗೋಕುಲದ ಬಳಿಯಿದೆ. ಎಂ.ಎಸ್.ರಾಮಯ್ಯ ಸ್ಥಾಪಕರು (ಗೋಕುಲ ಅವರ ಮನೆಯ ಹೆಸರು). BMTC- ಬೆಂಗಳೂರ್ ಮೆಟ್ರೊಪಾಲಿಟನ್ ಟ್ರಾನ್ಸ್​ಪೋರ್ಟ್​ ಸರ್ವೀಸ್ (ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ). BTS- ಬೆಂಗಳೂರ್ ಟ್ರಾನ್ಸ್​ಪೋರ್ಟ್ ಸರ್ವೀಸ್ (ಇದು ಈ ಸಂಸ್ಥೆಯ ಹಿಂದಿನ ಹೆಸರು). AGs office- ಅಕೌಂಟೆಂಟ್ ಜೆನರಲ್ಸ್ ಆಫೀಸ್.

AECS layout- ಏರೋನಾಟಿಕಲ್ ಏಂಜಿನಿಯರ್ಸ್ ಕೋ-ಆಪ್. ಸೊಸೈಟಿ ಬಡಾವಣೆ. RR Nagar- ರಾಜರಾಜೇಶ್ವರಿ ನಗರ. KIMS- ಕೆಂಪೇಗೌಡ ಇನ್​ಸ್ಟಿಟ್ಯೂಠ್ ಆಫ್ ಮೆಡಿಕಲ್ ಸೈನ್ಸಸ್. PES University- ಪೀಪಲ್ಸ್ ಎಜುಕೇಶನ್ ಸೊಸೈಟಿ ಯೂನಿವರ್ಸಿಟಿ. MES College- ಮೈಸೂರ್ ಎಜುಕೇಶನ್ ಸೊಸೈಟಿ, ಮಲ್ಲೇಶ್ವರಂನಲ್ಲಿ ಮೊದಲಿಗೆ ಸ್ಥಾಪನೆಯಾಗಿದ್ದು. BMS college- ಬಿಎಂ ಶ್ರೀನಿವಾಸಯ್ಯ (ಸ್ಥಾಪಕರು) ಕಾಲೇಜು. FCI- ಫುಡ್ ಕಾರ್ಪೊರೇಷನ್ ಆಪ್ ಇಂಡಿಯಾ.

CMH- ಚಿನ್ಮಯ ಮಿಶನ್ ಹಾಸ್ಪಿಟಲ್ ರೋಡ್ (ಇಂದಿರಾನಗರ). VV Puram- ವಿಶ್ವೇಶ್ವರ ಪುರಂ, RT Nagar-ರವೀಂದ್ರನಾಥ ಟಾಗೋರ್ ನಗರ, MKK Road- ಮಹಾಕವಿ ಕುವೆಂಪು ರಸ್ತೆ (ಮಲ್ಲೇಶ್ವರಂ ಇಂದ ನವರಂಗ್) ಸಂಪರ್ಕಿಸುವ ರಸ್ತೆ. SP extension- ಸ್ವಿಮಿಂಗ್ ಪೂಲ್ ಎಕ್ಸ್​ಟೆನ್ಷನ್, RMV- ರಾಜಾ ಮಹಲ್ ವಿಲಾಸ್ (ಈಗ ಅರಮನೆ ನಗರ?) (ಡಾಲರ್ಸ್ ಕಾಲೋನಿ- ಇಲ್ಲಿ NRI ಅನಿವಾಸಿ ಭಾರತೀಯರು ಅಲ್ಲಿನ ಕರೆನ್ಸಿ ಕೊಟ್ಟು ಕೊಂಡರಂತೆ, ಅದಕ್ಕೇ ಆ ಹೆಸರು)

RV Road- ರಾಷ್ಟ್ರೀಯ ವಿದ್ಯಾಲಯ ರಸ್ತೆ (ಎಂಜಿನಿಯರಿಂಗ್ ಕಾಲೇಜು ಇತ್ಯಾದಿ). SJP- ಶ್ರೀ ಜಯಚಾಮರಾಜ ಪಾಲಿಟೆಕ್ನಿಕ್ (ಕೆಆರ್ ಸರ್ಕಲ್ ಬಳಿ). GKVK- ಗಾಂಧಿ ಕೃಷಿ ವಿಜ್ಞಾನ ಕೇಂದ್ರ, UAS- ಯೂನಿವಸಿಟಿ ಆಪ್ ಅಗ್ರಿಕಲ್ಚರಲ್ ಸೈನ್ಸಸ್ ಕ್ಯಾಂಪಸ್ (ಕೃಷಿ ವಿಶ್ವವಿದ್ಯಾಲಯ, ಹೆಬ್ಬಾಳ), MC Layout- ಮಾಗಡಿ-ಕಾರ್ಡ್ ರೋಡ್ ಲೇಔಟ್, WOC- ವೆಸ್ಟ್ ಆಫ್ ಕಾರ್ಡ್ ರೋಡ್ (ಅದು chord ಕಾರ್ಡ್, card ಅಲ್ಲ).

AD halli- ಅಗ್ರಹಾರ ದಾಸರಹಳ್ಳಿ (ಬಸವೇಶ್ವರನಗರ ಬಳಿ), GB Palya- ಗಾರ್ವೇಭಾವೀ ಪಾಳ್ಯ, RC college- ರಾಮನಾರಾಯಣ ಚೆಲ್ಲಾರಾಮ್ಸ್ ಕಾಲೇಜ್ (ಚಾಲುಕ್ಯ ಹೊಟೆಲ್ ಬಳಿ), JJ nagar- ಜಗಜೀವನ ರಾಂ ನಗರ, SR nagar- ಸಂಪಂಗಿ ರಾಮ ನಗರ, BEML layout- (ಬೆಮೆಲ್-ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ ಲೇ ಔಟ್).

UVCE-ಯುನಿವರ್ಸಿಟಿ ವಿಶ್ವೇಶ್ವರಯ್ಯ ಕಾಲೇಜ್ ಆಫ್ ಎಂಜಿನಿಯರಿಂಗ್, Sir MV ಎಂದರೆ- ಎಲ್ಲೆಲ್ಲೂ ಸರ್ ಎಂ ವಿಶ್ವೇಶ್ವರಯ್ಯ ಅವರೇ (Sir MV layout ಬರುತ್ತಿದೆ), NPKL- ನಾಡಪ್ರಭು ಕೆಂಪೇಗೌಡ ಲೇಔಟ್ (ಹೊಸ ಬಿಡಿಎ ಬಡಾವಣೆ), AV road- ಆಲ್ಬರ್ಟ್ ವಿಕ್ಟರ್ ರಸ್ತೆ- ಈಗ ಆಲೂರ್ ವೆಂಕಟರಾವ್ ರಸ್ತೆ (ಚಾಮರಾಜಪೇಟೆ). KP agrahara- ಕೆಂಪಾಪುರ ಅಗ್ರಹಾರ.

RPC layout- ರೈಲ್ವೇ ಪ್ಯಾರಲಲ್ ಕಾರ್ಡ್ ರೋಡ್ ಲೇಔಟ್ (ವಿಜಯನಗರ ಬಳಿ). MS Nagar- ಮಾರುತಿ ಸೇವಾ ನಗರ (ಮಾರುತಿ ದೇವಸ್ಥಾನ, ಬಾಣಸವಾಡಿ ಕಡೆ). LBS Nagar- ಲಾಲ್ ಬಹದೂರ್ ಶಾಸ್ತ್ರಿ ನಗರ. GM Palya- ಗರುಕಾಮಂತನ ಪಾಳ್ಯ- ಗರುಕಾಮಂತ ಅಂದರೆ ರಾಮಾಯಣದ ಜಟಾಯು- ಸಿವಿ ರಾಮನ್ ನಗರ ಬಳಿ). JB Nagar- ಜೀವನ್ ಬಿಮಾ ನಗರ (ಎಲ್​ಐಸಿ ಬಗ್ಗೆ, ತಿಪ್ಪಸಂದ್ರದ ನಂತರ)

Monotype- ಇದು ಬನಶಂಕರಿ 2ನೇ ಹಂತ ಬಳಿ ಮೊದಲು ಇದ್ದ ಒಂದು ಕಂಪನಿ. ಆಗ ಬಸ್ಸಿನವರು ಸ್ಟಾಪಿಗೆ ಇಟ್ಟ ಹೆಸರು, ಈಗ ಆ ಕಚೇರಿ ಇಲ್ಲ. ಕಂಪನಿಯ ಹೆಸರು ಮಾತ್ರ ಇದೆ. BGS- ಬಾಲಗಂಗಾಧರನಾಥ ಸ್ವಾಮಿ ಕಾಲೇಜ್, ಆಸ್ಪತ್ರೆ ಎಲ್ಲಾ. Bull Temple road- ಬಸವನಗುಡಿ ರಸ್ತೆ. Malleshwaram- ಕಾಡು ಮಲ್ಲೇಶ್ವರನ ಗುಡಿ ಇದೆ, ಅದಕ್ಕಾಗಿ. Seshadripuram- ಮೈಸೂರಿನ ದಿವಾನ್ ಕೆ ಶೇಷಾದ್ರಿ ಅಯ್ಯರ್ ಅವರ ನೆನಪಿನಲ್ಲಿ ಇರಿಸಿದ ಹೆಸರು.

SLV- ಅಂದರೆ ಶ್ರೀ ಲಕ್ಷ್ಮಿ ವೆಂಕಟೇಶ್ವರ, SLN- ಅಂದರೆ ಶ್ರೀ ಲಕ್ಷ್ಮಿ ನರಸಿಂಹ, ಲಕ್ಷ್ಮೀ ನಾರಾಯಣ ಹೊಟೆಲ್ ಮತ್ತು ಬೇಕರಿಯ ಸಾಮಾನ್ಯ ಹೆಸರುಗಳು. ಇನ್ನು ಮಿಕ್ಕ ಸಾಮಾನ್ಯ ಸಂಕ್ಷಿಪ್ತ ನಾಮಗಳಾದ ITI, HAL, HMT , BEL, NAL, CPRI, ADE, LRDE ಮತ್ತು CMTI ಗಾಗಿ ಗೂಗಲ್ ಸರ್ಚ್ ಮಾಡಬಹುದು. ಇನ್ನೂ ನೂರಾರು ಸಂಕ್ಷಿಪ್ತ ನಾಮಗಳಿರಬಹುದು, ಹುಡುಕಿದರೆ ಸಿಗುತ್ತದೆ, ಗೊತ್ತಿದ್ದರೆ ನೀವೂ ಹೇಳಿ. ಗೊತ್ತಿಲ್ಲದಿದ್ದರೆ ಕೇಳಿ, ಎಲ್ಲಾ ಸೇರಿ ಪತ್ತೆ ಮಾಡೋಣ.

 

Published On - 6:33 pm, Thu, 18 August 22