ಬೆಂಗಳೂರಿನಲ್ಲಿ ಬೀದಿ ದನಗಳ ಹಾವಳಿ; ವಾಹನ ಸವಾರರು ಹೈರಾಣ, ಪಾಲಿಕೆ ವಿರುದ್ಧ ಆಕ್ರೋಶ
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಎಲ್ಲಿ ನೋಡಿದ್ರು ಟ್ರಾಫಿಕ್. ಇನ್ನೂ ಟ್ರಾಫಿಕ್ ಸಮಸ್ಯೆ ಒಂದಡೆಯಾದರೆ ಮತ್ತೊಂದೆಡೆ ಬೀದಿ ದನಗಳ ಹಾವಳಿ. ಒಂದಲ್ಲ ಎರಡಲ್ಲ ನಾಲ್ಕೈದು ದನಗಳು ಗುಂಪು ಕಟ್ಟಿಕೊಂಡು ಓಡಾಡೊ ದನಗಳಿಂದ ಸಾರ್ವಜನಿಕರು ಹಾಗೂ ವಾಹನ ಸವಾರರು ಹೈರಾಣಾಗಿದ್ದಾರೆ.
ಬೆಂಗಳೂರು, ಜುಲೈ.14: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ಬೀದಿ ದನಗಳ ಉಪಟಳ ಮಿತಿ ಮೀರಿದೆ. ಅದರಲ್ಲೂ ಬನಶಂಕರಿಯಿಂದ ತಲಘಟ್ಟಪುರದ ಕನಕಪುರ ಮುಖ್ಯ ರಸ್ತೆಯಲ್ಲಿ ಓಡಾಡಬೇಕೆಂದರೆ ಜೀವ ಕೈಯಲ್ಲೆ ಹಿಡಿದು ಓಡಾಡಬೇಕು. ರಸ್ತೆಯ ಮಧ್ಯದಲ್ಲಿ ರಾಜರೋಷವಾಗಿ ಓಡಾಡೊ ಸ್ಟ್ರೀಟ್ ಬುಲ್ಸ್ಗಳಿಂದ ಪ್ರತಿನಿತ್ಯ ಒಂದಿಲ್ಲೊಂದು ಅಪಘಾತ ಸಂಭವಿಸುತ್ತಿವೆ.
ಶಾಲಾ ಮಕ್ಕಳು ಸೇರಿದಂತೆ ಸಾರ್ವಜನಿಕರು ಈ ರಸ್ತೆಯಲ್ಲಿ ಓಡಾಡುವುದಕ್ಕೂ ಭಯ ಪಡುತ್ತಿದ್ದಾರೆ. ಲಂಗು, ಲಗಾಮು ಇಲ್ಲದೇ ದನಗಳನ್ನ ಮಾಲೀಕರುಗಳು ಬೀದಿಗೆ ಬಿಟ್ಟು ಬಿಡ್ತಾರೆ. ಇದರಿಂದ ದನಗಳು ಆಹಾರ ಅರಿಸಿ ಮಾರ್ಕೆಟ್ ಏರಿಯಾ, ಸಾರ್ವಜನಿಕರು ಕಸ ಎಸೆಯುವಂತಹ ಪ್ರದೇಶಗಳಲ್ಲಿ ಓಡಾಡುವುದರಿಂದಾಗಿ ಟ್ರಾಫಿಕ್ ಸಮಸ್ಯೆ ಜೊತೆಗೆ ಅವುಗಳನ್ನ ಓಡಿಸೊದಕ್ಕೆ ಹೋದರೆ ಗುಮ್ಮೊದಕ್ಕೆ ಬರುತ್ತವೆ. ಶಾಲಾ ಮಕ್ಕಳು ಹಾಗೂ ಸಾರ್ವಜನಿಕರು ಓಡಾಡೊಕೆ ಕಷ್ಟವಾಗುತ್ತೆ ಹೀಗಾಗಿ ಬೀದಿ ದನಗಳನ್ನ ಕಂಟ್ರೋಲ್ ಮಾಡುವಂತೆ ಮನವಿ ಮಾಡುತ್ತಿದ್ದಾರೆ.
ಇದನ್ನೂ ಓದಿ: ಪೋಷಕರೇ ಎಚ್ಚರ: ಕರ್ನಾಟಕದಲ್ಲಿ ಮಕ್ಕಳನ್ನೇ ಹೆಚ್ಚು ಬಾಧಿಸುತ್ತಿದೆ ಡೆಂಗ್ಯೂ!
ಇನ್ನೂ ಟಿವಿ9 ಕ್ಯಾಮಾರಾ ತಗೆದು ಶೂಟ್ ಮಾಡುವಾಗ ಸ್ಟ್ರೀಟ್ ಬುಲ್ಸ್ ಮೈ ಮೇಲೆ ಎಗರಿ ಅಟ್ಯಾಕ್ ಮಾಡೋ ದೃಶ್ಯ ಸೆರೆಯಾಗಿದೆ. ಅಲ್ಲದೇ ಮೆಟ್ರೊ ನಿಲ್ದಾಣ ಕೆಳಗಡೆ ನಿಲ್ಲೋ ಕಪ್ಪು ಹಸುಗಳಿಂದಾಗಿ ಬೆಳಕಿನಿಂದ ನಿಲ್ದಾಣ ಕೆಳಗೆ ಬಂದ್ರೆ ಹಸುಗಳು ಕಾಣದೇ ಅಪಘಾತ ಸಂಭವಿಸುತ್ತಿವೆ. ಸಾಕಷ್ಟು ಬಾರಿ ಬೀದಿ ದನಗಳ ಕಂಟ್ರೋಲ್‌ಗೆ ಮನವಿ ಮಾಡಿದ್ರು ತಲೆಕೆಡಿಸಿಕೊಳ್ಳದ ಪಾಲಿಕೆ ವಿರುದ್ಧ ಸಾರ್ವಜನಿಕರು ಆಕ್ರೋಶ ಹೊರ ಹಾಕುತ್ತಿದ್ದು, ಬೀದಿಗೆ ದನಗಳನ್ನ ಬಿಡೋ ಮಾಲೀಕರುಗಳಿಗೆ ದಂಡದ ಬೀಸಿ ಮುಟ್ಟಿಸೋ ಮೂಲಕ ಕ್ರಮಕ್ಕೆ ಮುಂದಾಗಬೇಕು ಎನ್ನುತ್ತಿದ್ದಾರೆ.
ಒಟ್ಟಿನಲ್ಲಿ ಈ ಸ್ಟ್ರೀಟ್ ಬುಲ್ಸ್‌ಗಳಿಂದಾಗಿ ರಾಜಧಾನಿ ಮಂದಿ ರಸ್ತೆ ಮೇಲೆ ಓಡಾಡಲು ಭಯ ಪಡುವಂತಾಗಿದ್ದು, ಇನ್ನಾದರು ಪಾಲಿಕೆ ಎಚ್ಚೆತ್ತುಕೊಂಡು ಈ ಬೀದಿ ದನಗಳ ಉಪಟಳಕ್ಕೆ ಹೇಗೆ ಕಡಿವಾಣ ಹಾಕುತ್ತೆ ಅಂತ ಕಾದು ನೋಡಬೇಕು.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ