AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ಎಸಿ, ಏರ್ ಕೂಲರ್​​ಗಳಿಗೆ ಭರ್ಜರಿ ಬೇಡಿಕೆ; ಎಲ್ಲಡೆ ಏರ್ ಕೂಲರ್ ಔಟ್ ಆಫ್ ಸ್ಟಾಕ್

ಈ ವರ್ಷ ನಿರೀಕ್ಷೆಗೂ ಮೀರಿದ ತಾಪಮಾನ ಹಿನ್ನಲೆ ವಿಪರೀತ ಸೆಖೆಯ ಪರಿಣಾಮ ಕೂಲಿಂಗ್ ಅಪ್ಲಾಯನ್ಸ್ ಏರ್ ಕೂಲರ್, ಎಸಿಗಳು, ರೆಫ್ರಿಜರೇಟರ್ ಮತ್ತು ಫ್ಯಾನ್ ಗಳಿಗೆ ರಾಜ್ಯದಲ್ಲಿ ಬೇಡಿಕೆ ಹೆಚ್ಚಳವಾಗಿದೆ. ಬೆಂಗಳೂರಿನಲ್ಲಿ ಇದು ಮತ್ತಷ್ಟು ಹೆಚ್ಚಾಗಿದೆ. ಒಂದು ಅಂದಾಜಿನ ಪ್ರಕಾರ, ಬೆಂಗಳೂರಿನಲ್ಲಿ ಕೂಲರ್​ಗೆ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 60 ರಷ್ಟು ಬೇಡಿಕೆ ಹೆಚ್ಚಾಗಿದೆ.

ಬೆಂಗಳೂರಿನಲ್ಲಿ ಎಸಿ, ಏರ್ ಕೂಲರ್​​ಗಳಿಗೆ ಭರ್ಜರಿ ಬೇಡಿಕೆ; ಎಲ್ಲಡೆ ಏರ್ ಕೂಲರ್ ಔಟ್ ಆಫ್ ಸ್ಟಾಕ್
ಸಾಂದರ್ಭಿಕ ಚಿತ್ರ
Vinay Kashappanavar
| Updated By: Ganapathi Sharma|

Updated on: May 02, 2024 | 7:30 AM

Share

ಬೆಂಗಳೂರು, ಮೇ 2: ಈ ವರ್ಷದ ಬಿರು ಬಿಸಿಲಿಗೆ (Summer) ಎಲ್ಲರೂ ತತ್ತರಿಸಿ ಹೋಗಿದ್ದಾರೆ. ಕೂಲ್ ಸಿಟಿ ಎಂಬ ಹೆಗ್ಗಳಿಕೆ ಹೊಂದಿದ್ದ ಬೆಂಗಳೂರು (Bengaluru) ಈಗ ಹಾಟ್ ಸಿಟಿಯಾಗಿದೆ. ಹೀಗಾಗಿ ಜನರು ಮನೆಯಿಂದ ಹೊರಗಡೆ ಬಂದರೆ ಸಾಕು, ತಂಪಾಗಿರೋದಕ್ಕೆ ಎಂದು ಎಳನೀರು, ಜ್ಯೂಸ್ ಕುಡಿಯುತ್ತಿದ್ದಾರೆ. ಆದ್ರೆ ಮನೆಯಲ್ಲಿ ಮುಂಜಾನೆ ಬಿಸಿಲಿನ ಧಗೆಯಾದ್ರೆ ಸಂಜೆ ವೇಳೆಗೆ ಬಿಸಿ ಗಾಳಿಯಯಿಂದಾಗಿ ಫ್ಯಾನ್ ಹಾಕಿದರೂ ಪ್ರಯೋಜನವಾಗುವುದಿಲ್ಲ. ರಾತ್ರಿ ನಿದ್ದೆ ಮಾಡುವುದೂ ಕಷ್ಟವಾಗಿದೆ. ಹೀಗಾಗಿ ಏರ್ ಕೂಲರ್ (Air Cooler) ಹಾಗೂ ಎಸಿಗಳಿಗೆ (AC) ಭರ್ಜರಿ ಬೇಡಿಕೆ ಸೃಷ್ಟಿಯಾಗಿದೆ. ಆದರೆ, ಬೇಡಿಕೆಗೆ ತಕ್ಕಂತೆ ಕೂಲರ್ ಎಸಿಗಳು ಸಿಗದೆ ಜನರು ಪರದಾಡುವಂತಾಗಿದೆ.

ಬೆಂಗಳೂರಿನಲ್ಲಿ ಬೇಸಿಗೆಯ ಬಿಸಿ ಏರುತ್ತಿದ್ದಂತೆ ಮನೆಗಳಲ್ಲಿ ಆರಾಮದಾಯಕವಾದ ವಾತಾವರಣ ನಿರ್ಮಾಣಕ್ಕೆ ಏರ್ ಕೂಲಿಂಗ್, ಎಸಿ ಅಪ್ಲಾಯನ್ಸ್​​​ಗೆ ಸಖತ್ ಬೇಡಿಕೆ ಸೃಷ್ಟಿಯಾಗಿದೆ. ಗ್ರಾಹಕರ ಆರೋಗ್ಯ ಮತ್ತು ನೈರ್ಮಲ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ತಯಾರಿಸಲಾಗಿರುವ ಕೂಲಿಂಗ್ ಅಪ್ಲಾಯನ್ಸ್ ಗೆ ಬೇಡಿಕೆ ದುಪ್ಪಾಟಗಿದೆ. ಆದರೆ, ಎಲ್ಲಿಯೂ ಎರ್ ಕೂಲರ್ ಹಾಗೂ ಎಸಿಗಳು ಸಿಗುತ್ತಿಲ್ಲ. ಯಾವ ಮಳಿಗೆಯಲ್ಲೂ ಸಿಗುತ್ತಿಲ್ಲ. ಅಷ್ಟು ಬೇಡಿಕೆ ಹೆಚ್ಚಾಗಿದೆ. ಯಾವ ಮಳಿಗೆಗೆ ಹೋದರೂ ಏರ್ ಕೂಲರ್ ಔಟ್ ಆಫ್ ಸ್ಟಾಕ್ ಎನ್ನುತ್ತಿದ್ದಾರೆ. ಪ್ಲಿಪ್​​​ಕಾರ್ಟ್, ಅಮೇಜಾನ್​​ನಂತಹ ಇ ಮಾರ್ಕೆಟಿಂಗ್ ತಾಣಗಳಲ್ಲಿಯೂ ಔಟ್ ಆಫ್ ಸ್ಟಾಕ್ ತೋರಿಸುತ್ತಿವೆ. ಅಲ್ಲದೆ, ಆರ್ಡರ್ ಮಾಡಿದರೆ ಡೆಲೆವರಿ ಪಡೆಯಲು ಮೂರು ವಾರಗಳ ಕಾಲ ಕಾಯಬೇಕಾದ ಸ್ಥಿತಿ ಎದುರಾಗಿದೆ.

ಈ ವರ್ಷ ನಿರೀಕ್ಷೆಗೂ ಮೀರಿದ ತಾಪಮಾನ ಹಿನ್ನಲೆ ವಿಪರೀತ ಸೆಖೆಯ ಪರಿಣಾಮ ಕೂಲಿಂಗ್ ಅಪ್ಲಾಯನ್ಸ್ ಏರ್ ಕೂಲರ್, ಎಸಿಗಳು, ರೆಫ್ರಿಜರೇಟರ್ ಮತ್ತು ಫ್ಯಾನ್ ಗಳಿಗೆ ರಾಜ್ಯದಲ್ಲಿ ಬೇಡಿಕೆ ಹೆಚ್ಚಳವಾಗಿದೆ. ಒಂದು ಅಂದಾಜಿನ ಪ್ರಕಾರ ಕೂಲರ್​ಗೆ ಕಳೆದ ವರ್ಷಕ್ಕೆ ಹೋಲಿಸಿದರೆ ಶೇ 60 ರಷ್ಟು ಬೇಡಿಕೆ ಹೆಚ್ಚಾಗಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ರಕ್ತ ಸಿಗದೆ ಮಕ್ಕಳು, ರೋಗಿಗಳ ಪರದಾಟ; ಬೇಸಿಗೆಯೇ ಕಾರಣ!

ಒಂದೇ ಮಳಿಗೆಯಲ್ಲಿ ದಿನಕ್ಕೆ 50ಕ್ಕೂ ಹೆಚ್ಚು ಕೂಲರ್ ಮಾರಾಟ

ರಾಜಾಜಿನಗರದಲ್ಲಿರುವ ಗಿರಿಯಾಸ್ ಹೋಮ್ ಅಪ್ಲೈನ್ಸ್ ಮಳಿಗೆಯಲ್ಲಿ ದಿನವೊಂದಕ್ಕೆ 50 ಕ್ಕೂ ಹೆಚ್ಚು ಕೂಲರ್ ಮಾರಟವಾಗುತ್ತಿವೆ. 30ಕ್ಕೂ ಹೆಚ್ಚು ಎಸಿ ಮಾರಟವಾಗುತ್ತಿವೆ. ಬೇಡಿಕೆಯಷ್ಟು ಪೂರೈಕೆ ದೊರೆಯುತ್ತಿಲ್ಲ. ಸಿಕ್ಕಿದರೆ ದಿನವೊಂದಕ್ಕೆ 100 ಏರ್ ಕೂಲರ್​ಗೆ ಬೇಡಿಕೆ ಇದೆ ಎನ್ನುತ್ತಾರೆ ಮಳಿಗೆಯ ಸಿಬ್ಬಂದಿ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ