ಬೆಂಗಳೂರು: ವಿಧಾನಸಭೆ ಚುನಾವಣೆಗೆ ಕೆಲವೇ ದಿನಗಳು ಬಾಕಿ ಉಳಿದಿದ್ದು ಉಭಯ ಪಕ್ಷಗಳು ಪ್ರಚಾರವನ್ನ ಕೈಗೊಂಡಿದೆ. ಅದರಂತೆ ವಿವಿಧ ಕ್ಷೇತ್ರದಲ್ಲಿ ಹೆಸರು ಮಾಡಿದವರನ್ನ ಕರೆತಂದು ಮತದಾರರನ್ನ ಸೆಳೆಯಲು ಹರಸಾಹಸ ಮಾಡುತ್ತಿವೆ. ಅದರಂತೆ ಇದೀಗ ಕಾಂಗ್ರೆಸ್ ತನ್ನ ಸ್ಟಾರ್ ಪ್ರಚಾರಕರ ಪಟ್ಟಿ ಪ್ರಕಟ ಮಾಡಿದ್ದು, ಕಾಂಗ್ರೆಸ್ ಸ್ಟಾರ್ ಪ್ರಚಾರಕನಾಗಿ ಇಮ್ರಾನ್ ಪ್ರತಾಪ್ ಗರ್ಹಿ ಹೆಸರು ಇರುವ ಹಿನ್ನೆಲೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ(Shobha Karandlaje) ವಾಗ್ದಾಳಿ ನಡೆಸಿದ್ದಾರೆ.‘ಇಮ್ರಾನ್ ಪ್ರತಾಪ್ ಗರ್ಹಿ ಉತ್ತರ ಪ್ರದೇಶದ ಗ್ಯಾಂಗ್‌ಸ್ಟಾರ್ ಅತೀಕ್ ಅಹ್ಮದ್ ಬೆಂಬಲಿಗ ಜೊತೆಗೆ ನನ್ನ ಗುರು ಎಂದು ಗರ್ಹಿ ಹೇಳಿಕೊಳ್ಳುತ್ತಿದ್ದ. ಇಂತಹವನನ್ನು ಕಾಂಗ್ರೆಸ್ ರಾಜ್ಯ ಚುನಾವಣೆಯಲ್ಲಿ ಸ್ಟಾರ್ ಪ್ರಚಾರಕ ಮಾಡಿದೆ ಎನ್ನುವ ಮೂಲಕ ಕಿಡಿಕಾರಿದ್ದಾರೆ.
ಇಮ್ರಾನ್ ಪ್ರತಾಪ್ ಗರ್ಹಿ ಶಾಯರಿ ಬರೆಯುವವನು, ಕವಿ. ಅವನ ಶಾಯರಿಗಳು ದೇಶ, ಸಮಾಜದ ವಿರುದ್ಧ ಇವೆ.
ಇಂತಹ ದೇಶದ್ರೋಹಿ, ಸಮಾಜ ದ್ರೋಹಿಗಳ ಮೇಲೆ ಕಾಂಗ್ರೆಸ್ಗೆ ಬಹಳ ಪ್ರೀತಿ. ಇಮ್ರಾನ್ನನ್ನು ಮಹಾರಾಷ್ಟ್ರ ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆ ಮಾಡಿದೆ. ಗ್ಯಾಂಗ್‌ಸ್ಟಾರ್ ಕಾಯ್ದೆಯಡಿ ಬಂಧನವಾದವರ ಜೊತೆ ಇಮ್ರಾನ್ ಸಂಪರ್ಕ ಇದೆ. ಇತ ಟಿಪ್ಪು ಹೋರಾಟ ತಾರಕಕ್ಕೇರಿದ್ದಾಗ ಕರ್ನಾಟಕಕ್ಕೆ ಬಂದು ‘ಮುಸ್ಲಿಮರಿಗೆ ತಲೆ ತಗ್ಗಿಸಿ ಗೊತ್ತಿಲ್ಲ, ತಲೆ ಕಡಿದು ಗೊತ್ತು ಎಂದು ಭಾಷಣ ಮಾಡಿದ್ದ.
ಇನ್ನು ಅತಿಕ್ ಅಹ್ಮದ್ ಕೊಲೆ ಆರೋಪಿ, ಆತನ ಜೊತೆ ಇದ್ದವರನ್ನು ಕೂಡ ಬಂಧನ ಮಾಡಬೇಕು ಎಂದು ದಿಗ್ವಿಜಯ ಸಿಂಗ್ ಯೋಗಿ ಆದಿತ್ಯನಾಥ್ಗೆ ಮನವಿ ಮಾಡಿದ್ದಾರೆ. ಆದರೆ ಈಗ ಇಮ್ರಾನ್ ಪ್ರತಾಪ್ನನ್ನು ಸ್ಟಾರ್ ಪ್ರಚಾರಕ ಮಾಡಿದ್ದೀರಿ. ಹಾಗಾದರೆ ಇಮ್ರಾನ್ಗೂ, ಕಾಂಗ್ರೆಸ್ಗೂ ಏನು ಸಂಬಂಧ? ಕಾಂಗ್ರೆಸ್ ಕೈ ಅಪರಾಧಿಗಳ ಜೊತೆ ಇದ್ದು, ಕಾಂಗ್ರೆಸ್ ಅಪರಾಧ ಕೃತ್ಯಗಳಿಗೆ ಕೈ ಜೋಡಿಸಿದೆ. ಹಿಂದೂ ಮುಸ್ಲಿಂ ಒಡೆಯಲು ಇಮ್ರಾನ್ನ ಬಳಸಿಕೊಳ್ಳುತ್ತಿದ್ದಾರೆ ಎನ್ನುವ ಮೂಲಕ ಕಾಂಗ್ರೆಸ್ ವಿರುದ್ದ ಟಾಂಗ್ ಕೊಟ್ಟಿದ್ದಾರೆ.
ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಗೋಹತ್ಯೆ ನಿಷೇಧ ಕಾಯ್ದೆ ವಾಪಸ್ ಪಡೆಯುತ್ತೇವೆ ಎಂಬ ಹೇಳಿಕೆ ಕುರಿತು ಮಾತನಾಡಿದ ಅವರು ‘ ಕೇರಳದಲ್ಲಿ ಹಸುವನ್ನು ರಸ್ತೆಯಲ್ಲಿ ಕಡಿದು, ಆ ರಕ್ತದ ಜೊತೆ ಆಟ ಆಡಿದ ರಸೂಲ್ ಮಾಕುಟ್ಟಿಯನ್ನು ಕಾಂಗ್ರೆಸ್ ಯುವ ಮೋರ್ಚಾ ಅಧ್ಯಕ್ಷ ಮಾಡಿದೆ. ಅಂತಹವನ ಜೊತೆ ಡಿ.ಕೆ. ಶಿವಕುಮಾರ್ ಓಡಾಡುತ್ತಾರೆ ಎಂದರು.
ಜೊತೆಗೆ 1700 ಪಿಎಫ್ಐ ಕಾರ್ಯಕರ್ತರ ಕೇಸ್ ಸಿದ್ದರಾಮಯ್ಯ ವಾಪಸ್ ಪಡೆದಿದ್ದರು. ಪಿಎಫ್ಐ ಬ್ಯಾನ್ ಮಾಡಬೇಕು ಎಂದು ಅಂದಿನ ಗೃಹ ಸಚಿವ ಆಗಿದ್ದ ರಾಮಲಿಂಗಾರೆಡ್ಡಿಗೆ ಕೇಂದ್ರ ಸರ್ಕಾರ ಮಾಹಿತಿ ಕೇಳಿತ್ತು. ಆದರೆ ಪಿಎಫ್ಐ ಬ್ಯಾನ್ ಮಾಡುವ ಪ್ರಸಂಗ ಇಲ್ಲ ಎಂದು ರಾಮಲಿಂಗಾರೆಡ್ಡಿ ಕೇಂದ್ರಕ್ಕೆ ಹೇಳಿದ್ದರು. ಕುಟ್ಟಪ್ಪನ ಕಲ್ಲು ಹೊಡೆದು ಸಾಯಿಸಿದರು. ಇಂದು ಮುಸ್ಲಿಂರಿಗೆ ನಾಯಕ ಸಿದ್ದರಾಮಯ್ಯ, ಕ್ರಿಮಿನಲ್ಗಳಿಗೆ ನಾಯಕ ಡಿ.ಕೆ. ಶಿವಕುಮಾರ್ ಎಂದು ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ:ಡಿಕೆ ಶಿವಕುಮಾರ್ ಕಾಂಗ್ರೆಸ್ ಟಿಕೆಟ್ ಮಾರಾಟ ಮಾಡಿಕೊಂಡಿದ್ದಾರೆ; ಮೊಯ್ದೀನ್ ಬಾವಾ ಗಂಭೀರ ಆರೋಪ
ಕಾಂಗ್ರೆಸ್ ಕೈಗೆ ರಕ್ತ ಅಂಟಿದೆ. ಇಂತಹ ವಿಚಾರ ಓಟಿನ ಪ್ರಶ್ನೆ ಅಲ್ಲ. ನಮಗೆ ನಮ್ಮ ಭಾಗದಲ್ಲಿ ಓಡಾಡೋಕೆ ಭಯ ಆಗುತ್ತಿದೆ. ನಮ್ಮ ಕಾರು ಹೋಗುವಾಗ ಹಸಿರು ಧ್ವಜ ಹಿಡಿದು ಹಿಂದೆ ಬರುತ್ತಾರೆ. ಇವರಿಗೆ ಹೇಗೆ ಧೈರ್ಯ ಬಂತು? ನಮ್ಮ ಸಿದ್ದರಾಮಯ್ಯ ಬರುತ್ತಾರೆ, ನಿಮ್ಮನ್ನ ನೋಡಿಕೊಳ್ಳುತ್ತಾರೆ ಎನ್ನುತ್ತಾರೆ. ನಮಗೆ ಭಯ ಆಗುತ್ತದೆ ಎಂದಿದ್ದಾರೆ.
ಇನ್ನಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:08 pm, Thu, 20 April 23