Al Qaeda: ಅಲ್ಖೈದಾ ಜೊತೆ ನಂಟು ಆರೋಪ, ಬೆಂಗಳೂರಿನ ಥಣಿಸಂದ್ರದಲ್ಲಿ ಶಂಕಿತನ ಬಂಧನ
ಬಂಧಿತ ಶಂಕಿತ ಉಗ್ರ ಆರೀಫ್ ಅಲ್ಖೈದಾ ಉಗ್ರ ಸಂಘಟನೆ ಜೊತೆ ಸಂಪರ್ಕದಲ್ಲಿದ್ದ ಎಂಬ ಶಂಕೆ ವ್ಯಕ್ತವಾಗಿದೆ. ಈತ ಕಳೆದ 2 ವರ್ಷಗಳಿಂದ ಅಲ್ಖೈದಾ ಜೊತೆ ಸಂಪರ್ಕದಲ್ಲಿರುವ ಬಗ್ಗೆ ಮಾಹಿತಿ ಸಿಕ್ಕಿದೆ.

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ತಣಿಸಂದ್ರದ ಮಂಜುನಾಥ್ ನಗರದಲ್ಲಿ ಐಎಸ್ಡಿ ಮತ್ತು ಕೇಂದ್ರ ತನಿಖಾ ಸಂಸ್ಥೆಗಳು ಕಾರ್ಯಾಚರಣೆ ನಡೆಸಿ ಶಂಕಿತ ಉಗ್ರ ಆರೀಫ್ ಎಂಬಾತನನ್ನು ಬಂಧಿಸಿದ್ದಾರೆ. ಸದ್ಯ ಶಂಕಿತ ಭಯೋತ್ಪಾದಕ ಆರೀಫ್ ಬಂಧಿಸಿ ತೀವ್ರ ವಿಚಾರಣೆ ನಡೆಸಲಾಗುತ್ತಿದ್ದು ಅನೇಕ ಸಂಗತಿಗಳು ಹೊರ ಬರುವ ಸಾಧ್ಯತೆ ಇದೆ.
ಬಂಧಿತ ಶಂಕಿತ ಉಗ್ರ ಆರೀಫ್ ಅಲ್ಖೈದಾ ಉಗ್ರ ಸಂಘಟನೆ ಜೊತೆ ಸಂಪರ್ಕದಲ್ಲಿದ್ದ ಎಂಬ ಶಂಕೆ ವ್ಯಕ್ತವಾಗಿದೆ. ಈತ ಕಳೆದ 2 ವರ್ಷಗಳಿಂದ ಅಲ್ಖೈದಾ ಜೊತೆ ಸಂಪರ್ಕದಲ್ಲಿರುವ ಬಗ್ಗೆ ಮಾಹಿತಿ ಸಿಕ್ಕಿದೆ. ಖಾಸಗಿ ಸಾಫ್ಟ್‌ವೇರ್ ಕಂಪನಿಯಲ್ಲಿ ವರ್ಕ್ ಫರ್ಮ್ ಹೋಮ್ ಮೂಲಕ ಮನೆಯಲ್ಲೆ ಕೆಲಸ ಮಾಡ್ತಿದ್ದ ಆರೀಫ್ಗೆ ಉಗ್ರ ಸಂಘಟನೆಗಳಲ್ಲಿ ಸೇರಿಕೊಳ್ಳಬೇಕು ಎಂಬ ಕನಸಿತ್ತು. ಅದರಂತೆ ಸಾಮಾಜಿಕ ಜಾಲತಾಣಗಳು, ವೆಬ್ ಸೈಟ್ ಮೂಲಕ ಉಗ್ರ ಸಂಘಟನೆಗಳನ್ನು ಸೇರಲು ತಯಾರಿ ನಡೆಸಿದ್ದನಂತೆ.
ಇದನ್ನೂ ಓದಿ: ಕಲಬುರಗಿಯಲ್ಲಿ ಕಂಡಕ್ಟರ್ ಆಗಲು ಅಕ್ರಮ, ಮತ್ತೊಬ್ಬ ಅಭ್ಯರ್ಥಿಯ ಕಳ್ಳಾಟ ಪತ್ತೆ: ಗೋಧಿಹಿಟ್ಟನ್ನು ಹೀಗೂ ಬಳಸಬಹುದು
ಟೆಲಿಗ್ರಾಮ್ ಹಾಗೂ ಡಾರ್ಕ್ ನೆಟ್ ಮೂಲಕ ಉಗ್ರ ಸಂಘಟನೆ ಆಲ್ ಖೈದಾ ಗ್ರೂಪ್ಗಳಲ್ಲಿ ಸಕ್ರಿಯನಾಗಿದ್ದ ಎನ್ನಲಾಗುತ್ತಿದೆ. ಈತ ಮಾರ್ಚ್ನಲ್ಲಿ ಇರಾಕ್ ಮೂಲಕ ಸಿರಿಯಾಗೆ ತೆರಳಲು ಯತ್ನಿಸಿದ್ದನಂತೆ. ಎರಡೂ ದೇಶಗಳಿಂದ ಒಪ್ಪಿಗೆ ಇಲ್ಲದ ಕಾರಣ ಹೋಗಲು ಸಾಧ್ಯವಾಗಿರಲಿಲ್ಲ ಎನ್ನಲಾಗಿದೆ. ಈಗ ಮಾರ್ಚ್ ನಲ್ಲಿ ಮತ್ತೆ ಇರಾಕ್ ಮೂಲಕ ಸಿರಿಯಾ ಹಾಗು ಅಫ್ಘಾನ್ ಗೆ ತೆರಳಲು ಪ್ಲಾನ್ ಮಾಡಿ ಫ್ಲೈಟ್ ಟಿಕೆಟ್ ರೆಡಿ ಮಾಡಿಕೊಳ್ಳುತ್ತಿದ್ದ ಎಂಬ ಬಗ್ಗೆ ಮಾಹಿತಿ ಸಿಕ್ಕಿದೆ. ಸದ್ಯ ಶಂಕಿತ ಆರೀಫ್ನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.
ಉಗ್ರ ಸಂಘಟನೆ ಪರವಾಗಿ ಫೇಕ್ ಅಕೌಂಟ್ನಿಂದ ಫೋಸ್ಟ್ಗಳನ್ನು ಹಾಕುತ್ತಿದ್ದನಂತೆ
ಇನ್ನು ಆರೀಫ್ ಈ ಹಿಂದೆ ಐಸಿಸ್ ಬಗ್ಗೆ ಒಲವನ್ನು ಹೊಂದಿದ್ದನಂತೆ. ಅದ್ರೆ ನಂತರದ ಹಂತದಲ್ಲಿ ಆಫ್ಘಾನಿಸ್ತಾನದದಲ್ಲಿ ಆಲ್ ಖೈದಾ ಮತ್ತು ತಾಲಿಬಾನ್ ಪ್ರವರ್ಧಮಾನಕ್ಕೆ ಬಂದಿತ್ತು. ತಾಲಿಬಾನ್ ಪವರ್ ಫುಲ್ ಆದ ಬಳಿಕ ಆರೀಫ್ನ ಒಲವು ಆಲ್ ಖೈದಾ ಮತ್ತು ತಾಲಿಬಾನ್ ಕಡೆಗೆ ಹೋಗಿತ್ತು. ಈ ಹಿಂದೆ ಟ್ವಿಟರ್ ನಲ್ಲಿ ಉಗ್ರ ಸಂಘಟನೆ ಪರವಾಗಿ ಫೇಕ್ ಅಕೌಂಟ್ ನಿಂದ ಫೋಸ್ಟ್ಗಳನ್ನು ಹಾಕುತ್ತಿದ್ದ ಎನ್ನಲಾಗುತ್ತಿದೆ. ಆದ್ರೆ ಟ್ವಿಟರ್ ಈತನ ಫೇಕ್ ಅಕೌಂಟ್ಗಳನ್ನು ಬ್ಲಾಕ್ ಮಾಡಿದೆಯಂತೆ.
ಲ್ಯಾಪ್ಟಾಪ್, 2 ಹಾರ್ಡ್ಡಿಸ್ಕ್ ವಶಕ್ಕೆ ಪಡೆದ ತನಿಖಾ ಅಧಿಕಾರಿಗಳು
ಬೆಂಗಳೂರಲ್ಲಿ ಅರೆಸ್ಟ್ ಆದ ಶಂಕಿತ ಉಗ್ರ ಆರೀಫ್ ಉತ್ತರ ಪ್ರದೇಶ ಮೂಲದವನಾಗಿದ್ದು ತನಿಖಾ ಅಧಿಕಾರಿಗಳು ಲ್ಯಾಪ್ಟಾಪ್, 2 ಹಾರ್ಡ್ಡಿಸ್ಕ್ ವಶಕ್ಕೆ ಪಡೆದಿದ್ದಾರೆ. ಶಂಕಿತ ಉಗ್ರ ಆರೀಫ್ಗೆ ಮದುವೆಯಾಗಿದ್ದು ಇಬ್ಬರು ಮಕ್ಕಳಿದ್ದಾರೆ. ಹೆಂಡತಿ, ಮಕ್ಕಳನ್ನು ಉತ್ತರ ಪ್ರದೇಶದಲ್ಲಿ ಬಿಟ್ಟು ಸಿರಿಯಾಗೆ ತೆರಳಲು ಆರೀಫ್ ಸಿದ್ಧತೆ ನಡೆಸಿದ್ದ ಎಂಬ ಬಗ್ಗೆ ಮಾಹಿತಿ ಸಿಕ್ಕಿದೆ. ಸೋಮವಾರ ಮನೆ ಖಾಲಿ ಮಾಡಿ ಯುಪಿಗೆ ಹೋಗಲು ಪ್ಲ್ಯಾನ್ ಮಾಡಿದ್ದನಂತೆ. ಮನೆ ಖಾಲಿ ಮಾಡುವುದಾಗಿ ಮಾಲೀಕರಿಗೂ ಹೇಳಿದ್ದನಂತೆ.
ಆರೀಫ್ ಜೊತೆ ಸಂಪರ್ಕದಲ್ಲಿದ್ದ ವ್ಯಕ್ತಿಗಳಿಗಾಗಿ ಎನ್ಐಎ ಶೋಧ
ಶಂಕಿತ ಉಗ್ರ ಆರೀಫ್ ಮಾಹಿತಿ ಮೇರೆಗೆ ಮಹಾರಾಷ್ಟ್ರ, ಉತ್ತರ ಪ್ರದೇಶ, ದೆಹಲಿ ಸೇರಿ 3 ರಾಜ್ಯಗಳಲ್ಲಿ ಎನ್ಐಎ ದಾಳಿ ನಡೆಸಿದೆ. ಆರೀಫ್ ಜೊತೆ ಸಂಪರ್ಕದಲ್ಲಿದ್ದ ವ್ಯಕ್ತಿಗಳಿಗಾಗಿ ಶೋಧ ನಡೆಯುತ್ತಿದೆ. ದಾಳಿ ವೇಳೆ ಎನ್ಐಎ ತಂಡ ಕೆಲವರನ್ನು ವಶಕ್ಕೆ ಪಡೆಯಲಿದೆ. ಆರೀಫ್ ಸೇರಿ ಹಲವರು ಅಲ್ಖೈದಾ ಸಂಘಟನೆ ಜೊತೆ ನಂಟು ಹೊಂದಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 9:43 am, Sat, 11 February 23