ಕೆಆರ್​ ಮಾರ್ಕೆಟ್​ ಫ್ಲೈಓವರ್‌ ಮೇಲೆ ಡಿವೈಡರ್‌ಗೆ ಬೈಕ್‌ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಸಾವು

ನಗರದ ಕೆ.ಆರ್‌.ಮಾರ್ಕೆಟ್‌ ಫ್ಲೈಓವರ್‌ ಮೇಲೆ ಡಿವೈಡರ್‌ಗೆ ಬೈಕ್‌ ಡಿಕ್ಕಿಯಾಗಿ ಸವಾರ ಮೃತಪಟ್ಟ ಘಟನೆ ನಡೆದಿದೆ. ಹಾಗೂ ಹಿಂಬದಿ ಸವಾರನಿಗೆ ಗಾಯಗಳಾಗಿವೆ.

ಕೆಆರ್​ ಮಾರ್ಕೆಟ್​ ಫ್ಲೈಓವರ್‌ ಮೇಲೆ ಡಿವೈಡರ್‌ಗೆ ಬೈಕ್‌ ಡಿಕ್ಕಿಯಾಗಿ ಸವಾರ ಸ್ಥಳದಲ್ಲೇ ಸಾವು
ಕೆಆರ್​ ಮಾರ್ಕೆಟ್​ ಫ್ಲೈಓವರ್‌
Follow us
TV9 Web
| Updated By: ಆಯೇಷಾ ಬಾನು

Updated on:Feb 11, 2023 | 7:08 AM

ಬೆಂಗಳೂರು: ಕೆ.ಆರ್‌.ಮಾರ್ಕೆಟ್‌ ಫ್ಲೈಓವರ್‌(KR Market Flyover) ಮೇಲೆ ಡಿವೈಡರ್‌ಗೆ ಬೈಕ್‌ ಡಿಕ್ಕಿಯಾಗಿ ಸವಾರ ಕಬೀರ್‌ ಪಾಷಾ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ. ಇನ್ನು ಮತ್ತೋರ್ವ ಬೈಕ್ ಸವಾರನಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಮೃತನ ಬೈಕ್‌ನಲ್ಲಿ 8 ಮೊಬೈಲ್‌ಗಳು ಪತ್ತೆಯಾಗಿವೆ. ರಾತ್ರಿ 11 ಗಂಟೆ ಸುಮಾರಿಗೆ ಘಟನೆ ನಡೆದಿದೆ.

ಇನ್ನು ಮೃತನ ಬೈಕ್​ನಲ್ಲಿ ಮೊಬೈಲ್​ಗಳು ಪತ್ತೆಯಾಗಿದ್ದು ಮೊಬೈಲ್ ಕಳ್ಳತನ ಮಾಡಿ ಎಸ್ಕೇಪ್ ಆಗುವ ವೇಳೆ ಅಪಘಾತ ಸಂಭವಿಸಿದೆ ಎಂಬ ಶಂಕೆ ವ್ಯಕ್ತವಾಗಿದೆ. ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಮೊಬೈಲ್‌ ಕಳ್ಳರೆಂಬ ಬಗ್ಗೆ ಮಾಹಿತಿ ಸಿಕ್ಕಿದ್ದು ವಿಕ್ಟೋರಿಯಾ ಆಸ್ಪತ್ರೆಗೆ ಕಬೀರ್‌ ಮೃತದೇಹ ಸ್ಥಳಾಂತರಿಸಲಾಗಿದೆ. ಹಾಗೂ ಸಿಟಿ ಮಾರ್ಕೆಟ್‌ ಠಾಣೆ ಪೊಲೀಸರಿಂದ ತನಿಖೆ ಮುಂದುವರೆದಿದೆ.

ಇದನ್ನೂ ಓದಿ: ಕೆಲವರ ಕಿರುಕುಳದಿಂದ ಕಣ್ಣೀರು ಹಾಕುತ್ತಲೇ ದೂರು ನೀಡಿದ್ದ ವೃದ್ಧೆ ಮನೆಗೆ ಕೋಲಾರ ಎಸ್ಪಿ, ಖಾಕಿಯೊಳಗಿನ ಮಾನವೀಯತೆಯ ಕಣ್ಣು ನಾರಾಯಣ್

ಎಸ್​ಪಿ ರೋಡಲ್ಲಿ ವ್ಯಕ್ತಿಗಳ ನಡುವೆ ಹೊಡೆದಾಟ

ಬೆಂಗಳೂರಿನ ಎಸ್​ಪಿ ರೋಡಲ್ಲಿ ಇಬ್ಬರು ವ್ಯಕ್ತಿಗಳ ನಡುವೆ ಹೊಡೆದಾಟವಾಗಿದೆ. ಹೊಡೆದಾಟದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸಾಮಾನ್ಯವಾಗಿ ಎಸ್​ಪಿ ರೋಡ್​ನಲ್ಲಿ ರಸ್ತೆ ರಸ್ತೆಗಳಲ್ಲೂ ನಿಂತು ಬ್ರೋಕರ್​ಗಳು ಗ್ರಾಹಕರ ಹಿಂದೆ ಬೀಳುವುದು ಹೆಚ್ಚಾಗಿದೆ. ಬ್ರೋಕರ್​ಗಳ ಹಾವಳಿಯಿಂದ ಅಂಗಡಿ ಮಾಲೀಕರ ಮಧ್ಯೆ ಗಲಾಟೆ ನಡೆದಿದೆ. ಅಲ್ಲದೇ ಗ್ರಾಹಕರ ಜೊತೆಗೂ ಬ್ರೋಕರ್​ಗಳು ಜಗಳಕ್ಕೆ ಇಳಿಯುತ್ತಾರೆ. ಈ ವಿಚಾರಕ್ಕೆ ಸಂಬಂಧ ಪಟ್ಟಂತೆ ಠಾಣೆಗೆ ದೂರು ಕೊಟ್ಟರೂ ಪ್ರಯೋಜನ ವಾಗ್ತಿಲ್ಲ. ಹೀಗಾಗಿ ಟ್ವಿಟ್ಟರ್ ಮೂಲಕ ಅಂಗಡಿ ಮಾಲೀಕ ಬೇಸರ ವ್ಯಕ್ತ ಪಡಿಸಿದ್ದಾರೆ.

ನಿನ್ನೆ ಮಧ್ಯಾಹ್ನ‌ ಕೂಡ ಎರಡು ಅಂಗಡಿ ಬ್ರೋಕರ್ ಗಳ ಮಧ್ಯೆ ಗಲಾಟೆ ನಡೆದಿದೆ. ಹಲಸೂರು ಗೇಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಹೊಡೆದಾಟದ ವಿಡಿಯೋ ಅಪ್ಲೋಡ್ ಮಾಡಿ ದೂರು ನೀಡಲಾಗಿದೆ. ಬೆಂಗಳೂರು ಪೊಲೀಸರಿಗೆ ವಿಡಿಯೋ‌ ಟ್ಯಾಗ್ ಮಾಡಲಾಗಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 7:08 am, Sat, 11 February 23