ಎದೆ ಭಾಗ ಕತ್ತರಿಸಿ, ಗುಪ್ತಾಂಗಕ್ಕೆ ಇರಿದು ಭೀಕರವಾಗಿ ಕೊಲೆ: ಭಾವಿ ಪತಿ ಅನುಮಾನಕ್ಕೆ ಅಪ್ರಾಪ್ತೆ ಬಲಿ

ಬೆಂಗಳೂರಿನ ಡಿ.ಜೆ. ಹಳ್ಳಿಯಲ್ಲಿ ಅಪ್ರಾಪ್ತ ಬಾಲಕಿಯ ಭೀಕರ ಕೊಲೆ ಪ್ರಕರಣ ಸಂಬಂಧ ಭಾವಿ ಪತಿಯ ಕ್ರೂರತೆ ಬಯಲಾಗಿದೆ. ಯುವತಿ ಮೇಲೆ ಅನುಮಾನಗೊಂಡು ಆಕೆಯ ಎದೆ ಭಾಗ ಮತ್ತು ಗುಪ್ತಾಂಗಕ್ಕೆ ಚಾಕುವಿನಿಂದ ಇರಿದು, ಕುತ್ತಿಗೆ ಕೊಯ್ದು ಆರೋಪಿ ಹತ್ಯೆಗೈದಿದ್ದಾನೆ. ಘಟನೆ ಬಳಿಕ ಆತ ನಾಪತ್ತೆಯಾಗಿದ್ದು, ಪ್ರಕರಣ ಕುಟುಂಬಸ್ಥರನ್ನು ಬೆಚ್ಚಿ ಬೀಳಿಸಿದೆ. ಆರೋಪಿಗಾಗಿ ಪೊಲೀಸರಿಂದ ಶೋಧ ಮುಂದುವರಿದಿದೆ.

ಎದೆ ಭಾಗ ಕತ್ತರಿಸಿ, ಗುಪ್ತಾಂಗಕ್ಕೆ ಇರಿದು ಭೀಕರವಾಗಿ ಕೊಲೆ: ಭಾವಿ ಪತಿ ಅನುಮಾನಕ್ಕೆ ಅಪ್ರಾಪ್ತೆ ಬಲಿ
ಆರೋಪಿ ಶಬೀಲ್
Edited By:

Updated on: Mar 19, 2026 | 7:18 PM

ಬೆಂಗಳೂರು, ಮಾರ್ಚ್​​ 19: ನಿಶ್ಚಿತಾರ್ಥ ಮಾಡಿಕೊಂಡಿದ್ದ ಅಪ್ರಾಪ್ತೆಯನ್ನು ಬೆಂಗಳೂರಿನ ಡಿ.ಜೆ.ಹಳ್ಳಿ ಸಕ್ಕರೆ ಮಂಡಿಯ ಪಾಳುಮನೆಯಲ್ಲಿ ವ್ಯಕ್ತಿಯೋರ್ವ ಭೀಕರವಾಗಿ ಕೊಲೆ ಮಾಡಿರುವ ಪ್ರಕರಣದ ತನಿಖೆ ವೇಳೆ ಶಾಕಿಂಗ್​​ ವಿಚಾರಗಳು ಬೆಳಕಿಗೆ ಬಂದಿವೆ. ಯುವತಿ ಮೇಲೆ ಆರೋಪಿ ಸೈಯದ್ ಶಬೀಲ್​​ಗಿದ್ದ ಅನುಮಾನವೇ ಕೊಲೆಗೆ ಕಾರಣ ಎಂಬುದು ಗೊತ್ತಾಗಿದೆ. ಆಕೆಯನ್ನು ಭೇಟಿಯ ನೆಪದಲ್ಲಿ ಕರೆದಿದ್ದ ಈತ ಎದೆ ಭಾಗ ಕತ್ತರಿಸಿ, ಗುಪ್ತಾಂಗಕ್ಕೆ ಚಾಕುವಿನಿಂದ ಇರಿದು ಮತ್ತು ಕುತ್ತಿಗೆ ಕೊಯ್ದು ಹತ್ಯೆ ಮಾಡಿರೋದು ತನಿಖೆ ವೇಳೆ ಬಯಲಾಗಿದೆ. ಘಟನೆ ಬಳಿಕ ನಾಪತ್ತೆಯಾಗಿರುವ ಆರೋಪಿಗಾಗಿ ಪೊಲೀಸರಿಂದ ಶೋಧ ಮುಂದುವರಿದಿದೆ.

ಕೋಲಾರ ಮೂಲದ ಅಪ್ರಾಪ್ತ ಬಾಲಕಿ ಆಗಾಗ ಬೆಂಗಳೂರಿನ ಸಂಬಂಧಿಕರ ಮನೆಗೆ ಬರುತ್ತಿದ್ದಳು. ಈ ನಡುವೆ ಡಿಜೆ ಹಳ್ಳಿಯ ಈರುಳ್ಳಿ ಮಾರ್ಕೆಟ್​​ನಲ್ಲಿ ಕೆಲಸ ಮಾಡ್ತಿದ್ದ ಸೈಯದ್ ಶಬೀಲ್ ಎಂಬ ಯುವಕನ ಜೊತೆ ಆಕೆಗೆ ಪ್ರೀತಿ ಶುರುವಾಗಿತ್ತು. ಆಗಾಗ ಫೋನ್​​ನಲ್ಲಿಇವರು ಮಾತಾನಾಡುತ್ತಿರೋದನ್ನು ಗಮನಿಸಿದ ಸಂಬಂಧಿಕರು, ಪೋಷಕರಿಗೆ ವಿಚಾರ ತಿಳಿಸಿದ್ದರು. ಬಳಿಕ ಆಕೆ ಪ್ರೀತಿಸುತ್ತಿದ್ದವನ ಜೊತೆಯೇ ಮದುವೆ ಮಾಡಲು ಮನೆಯವರು ಮುಂದಾಗಿದ್ದರು. ಅದರಂತೆ ಕಳೆದ 2025ರ ಜೂನ್​​ನಲ್ಲಿ ಇವರಿಬ್ಬರ ಎಂಗೇಜ್ಮೆಂಟ್ ಕೂಡ ನಡೆದಿತ್ತು. ಕೆಲ ಸಮಯದ ಬಳಿಕ ಮದುವೆಯ ತಯಾರಿಯಲ್ಲೂ ಮನೆಯವರಿದ್ದರು. ಆದರೆ ಇತ್ತೀಚೆಗೆ ಅಪ್ರಾಪ್ತಳ ಮೇಲೆ ಅನುಮಾನ ಪಡಲು ಶುರು ಮಾಡಿದ ಶಬೀಲ್, ವಿವಾಹಕ್ಕೂ ಮೊದಲೇ ಅಟ್ಟಹಾಸ ಮೆರೆದಿದ್ದಾನೆ.

ಇದನ್ನೂ ಓದಿ: ಪಾಳು ಮನೆಯಲ್ಲಿ ಅಪ್ರಾಪ್ತೆಯ ಭೀಕರ ಕೊಲೆ: ಭಾವಿ ಪತಿಯಿಂದಲೇ ನಡೀತು ಹತ್ಯೆ!

ಶಬೀಲ್ ಮನೆಯಿಂದ ಸ್ವಲ್ಪ ದೂರದಲ್ಲಿ ಇರುವ ಸಕ್ಕರೆ ಮಂಡಿ ಪಾಳು ಬಿದ್ದ ಜಾಗದಲ್ಲಿ ಆರೋಪಿ ಶಬೀಲ್ ಮತ್ತು ಅಪ್ರಾಪ್ತ ಯುವತಿ ಇಬ್ಬರೂ ಆಗಾಗ ಭೇಟಿ ಮಾಡುತ್ತಿದ್ದರು. ಅದೇ ಜಾಗಕ್ಕೆ ಯುವತಿಯನ್ನು ಈತ ಕರೆದಿದ್ದ. ಹೀಗಾಗಿ ಮನೆಯಲ್ಲೇ ಮೊಬೈಲ್​​ ಬಿಟ್ಟು ಆಕೆ ಶಬೀಲ್​​ನ ಭೇಟಿಗಾಗಿ ತೆರಳಿದ್ದಳು. ಬೆಳಗ್ಗೆ 6 ಗಂಟೆಗೆ ಮನೆಯಿಂದ ಹೋದ ಯುವತಿ 10.30 ಆದರೂ ಬಾರದ ಕಾರಣ ಸಂಬಂಧಿಕರ ಮನೆಯವರು ಹುಡುಕಾಟ ಆರಂಭಿಸಿದ್ದರು. ಶಬೀಲ್​​ಗೆ ಕರೆ ಮಾಡಿದರೂಆತ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಹೀಗಾಗಿ ಆತನ ಮನೆಯವರ ಬಳಿ ವಿಚಾರಿಸಿದಾಗ ಅವರಿಬ್ಬರು ಭೇಟಿ ಆಗ್ತಿದ್ದ ಜಾಗದ ಬಗ್ಗೆ ಮಾಹಿತಿ ಸಿಕ್ಕಿತ್ತು. ಅಲ್ಲಿಗೆ ತೆರಳಿ ಪರಿಶೀಲನೆ ನಡೆಸಿದಾಗ ರಕ್ತದ ಮಡುವಿನಲ್ಲಿ ಕುತ್ತಿಗೆ ಕೊಯ್ದ ಸ್ಥಿತಿಯಲ್ಲಿ ಅಪ್ರಾಪ್ತಳ ಶವ ಪತ್ತೆಯಾಗಿತ್ತು. ಒಟ್ಟಿನಲ್ಲಿ ಮದುವೆಯಾಗಿ ಸುಂದರ ಜೀವನ ನಡೆಸುವ ಕನಸು ಕಂಡಿದ್ದ ಯುವತಿಯನ್ನು ತನ್ನ ಅನುಮಾನದ ಭೂತಕ್ಕೆ ಆರೋಪಿ ಶಬೀಲ್​​ ಬಲಿ ಪಡೆದಿರೋದು ಕುಟುಂಬಸ್ಥರನ್ನು ಬೆಚ್ಚಿ ಬೀಳಿಸಿರೋದಂತೂ ಸತ್ಯ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 6:09 pm, Thu, 19 March 26

ರಾಚಪ್ಪಾಜಿ ನಾಯ್ಕ್

ರಾಚಪ್ಪಾಜಿ ನಾಯ್ಕ್ ಆದ ನಾನು ಮೂಲತಃ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಗೊಲ್ಲರದಿಂಬ ಗ್ರಾಮದವನು ಕಳೆದ 2 ವರ್ಷ 11 ತಿಂಗಳಿನಿಂದ ಟಿವಿ9 ಬೆಂಗಳೂರು ಕ್ರೈಂ ಬ್ಯೂರೊ ವರದಿಗಾರನಾಗಿ ಕೆಲಸ ಮಾಡುತ್ತಿದ್ದು.ರಾಜ್ಯದಲ್ಲಿ ನಡೆದ ಪ್ರಮುಖ ಅಪಾರಧ ವಿಷಯಗಳ ಮೇಲಿನ ವರದಿ ಮಾಡಿದ್ದೇನೆ.ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ನಡೆದ ಪ್ರಮುಖ ಬೆಳವಣಿಗೆಯ ವರದಿ ಮಾಡಿದ್ದೇನೆ.

Read More
Loading...
Unable to load recommendations.
Follow Us