2025-26 ಸಾಲಿನಲ್ಲಿ ನೈರುತ್ಯ ರೈಲ್ವೆ, ಬೆಂಗಳೂರು ವಿಭಾಗ ಭರ್ಜರಿ ಸಾಧನೆ: ಕೋಟಿ ಕೋಟಿ ಆದಾಯ

2025-26ರಲ್ಲಿ ನೈರುತ್ಯ ರೈಲ್ವೆ ಮತ್ತು ಬೆಂಗಳೂರು ವಿಭಾಗಗಳು ಭರ್ಜರಿ ಆದಾಯ ಗಳಿಸಿವೆ. ನೈರುತ್ಯ ರೈಲ್ವೆ 9,488 ಕೋಟಿ ಹಾಗೂ ಬೆಂಗಳೂರು ವಿಭಾಗ 2,951 ಕೋಟಿ ರೂ ಆದಾಯ ಗಳಿಸಿದೆ. ಟಿಕೆಟ್ ಇಲ್ಲದೆ ಪ್ರಯಾಣಿಸಿದವರಿಂದ ಬೆಂಗಳೂರು ವಿಭಾಗ 39 ಕೋಟಿ ರೂ ದಂಡ ಸಂಗ್ರಹಿಸಿದೆ. ಸರಕು, ಪ್ರಯಾಣಿಕರ ಮತ್ತು ಪಾರ್ಸೆಲ್ ವಿಭಾಗಗಳಲ್ಲಿಯೂ ಆದಾಯ ಗಣನೀಯವಾಗಿ ಏರಿಕೆಯಾಗಿದೆ.

2025-26 ಸಾಲಿನಲ್ಲಿ ನೈರುತ್ಯ ರೈಲ್ವೆ, ಬೆಂಗಳೂರು ವಿಭಾಗ ಭರ್ಜರಿ ಸಾಧನೆ: ಕೋಟಿ ಕೋಟಿ ಆದಾಯ
ರೈಲು (ಸಂಗ್ರಹ ಚಿತ್ರ)
Image Credit source: google
Edited By:

Updated on: Apr 05, 2026 | 9:50 PM

ಬೆಂಗಳೂರು, ಏಪ್ರಿಲ್​ 05: ದಿನದಿಂದ ದಿನಕ್ಕೆ ರೈಲಿನಲ್ಲಿ ಟಿಕೆಟ್ ಇಲ್ಲದೆ ಪ್ರಯಾಣ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ಇದಕ್ಕೆ ಸರಿಯಾಗಿ ಬ್ರೇಕ್ ಹಾಕಲು ಮುಂದಾಗಿರುವ ರೈಲ್ವೆ ಇಲಾಖೆ ಟಿಕೆಟ್ ಇಲ್ಲದೆ ಪ್ರಯಾಣ ಮಾಡುವವರಿಗೆ ದಂಡ ಹಾಕಿದ್ದು, ಇದರಿಂದ 38 ಕೋಟಿ ರೂ ಆದಾಯ ಗಳಿಸಿದೆ. ಇತ್ತ ನೈರುತ್ಯ ರೈಲ್ವೆ ಇಲಾಖೆ (South Western Railway) ಬರೋಬ್ಬರಿ ಒಂಬತ್ತುವರೆ ಸಾವಿರ ಕೋಟಿ ರೂ ಆದಾಯ ಗಳಿಸಿದೆ.

ನೈರುತ್ಯ ರೈಲ್ವೆ ಮತ್ತು ಬೆಂಗಳೂರು ರೈಲ್ವೆ ವಲಯ ಭರ್ಜರಿ ಆದಾಯ

2025-26 ಸಾಲಿನಲ್ಲಿ ನೈರುತ್ಯ ರೈಲ್ವೆ ಮತ್ತು ಬೆಂಗಳೂರು ರೈಲ್ವೆ ವಲಯ ಭರ್ಜರಿ ಆದಾಯ ಗಳಿಸಿದೆ. ಈ ಆರ್ಥಿಕ ವರ್ಷದಲ್ಲಿ ನೈರುತ್ಯ ರೈಲ್ವೆ ವಿಭಾಗವು ಬರೋಬ್ಬರಿ 9,488 ಕೋಟಿ ರೂ ಆದಾಯ ಗಳಿಸಿದರೆ, ಬೆಂಗಳೂರು ರೈಲ್ವೆ ವಿಭಾಗವು 2,951 ಕೋಟಿ ರೂ ಆದಾಯ ಗಳಿಸಿದೆ. ಬೆಂಗಳೂರು ವಿಭಾಗವು 2025-26ನೇ ಸಾಲಿನಲ್ಲಿ ಟಿಕೆಟ್ ತಪಾಸಣೆಯಿಂದ 39.68 ಕೋಟಿ ರೂ ಆದಾಯ ಗಳಿಸಿದರೆ, ಪಾರ್ಸೆಲ್​ನಿಂದ 140.31 ಕೋಟಿ ರೂ ಗಳಿಸಿದ್ದು, ಸರಕು ಸಾಗಣೆ ಆದಾಯವು 351.07 ಕೋಟಿ ರೂ ಗಳಿಸಲಾಗಿದೆ.

ಇದನ್ನೂ ಓದಿ: ಮೈಸೂರು ರೈಲ್ವೆ ದಾಖಲೆ: ಸರಕು ಸಾಗಣೆ-ಪಾರ್ಸೆಲ್, ಟಿಕೆಟ್ ಪರಿಶೀಲನೆಯಲ್ಲಿ ಕೋಟ್ಯಂತರ ರೂ ಆದಾಯ

2024-25ರಲ್ಲಿ ಇದು 327.74 ಕೋಟಿ ರೂಪಾಯಿಗಳಾಗಿತ್ತು. ಪ್ರಯಾಣಿಕ ಆದಾಯವು ಸಹಾ ಏರಿಕೆಯನ್ನು ದಾಖಲಿಸಿದ್ದು 2025-26 ರಲ್ಲಿ 2420.55 ಕೋಟಿ ರೂಪಾಯಿಗಳ ಆದಾಯವನ್ನು ಗಳಿಸಿದೆ ಎಂದು ಸಾರ್ವಜನಿಕ ಸಂಪರ್ಕಾಧಿಕಾರಿ ಪ್ರಾಣೇಶ್ ಮಾಹಿತಿ ನೀಡಿದ್ದಾರೆ.

ನೈಋತ್ಯ ರೈಲ್ವೆ ಕೋಟಿ ಕೋಟಿ ಆದಾಯ

2025–26ನೇ ಆರ್ಥಿಕ ವರ್ಷದಲ್ಲಿ ನೈಋತ್ಯ ರೈಲ್ವೆ ಸರಕು ಟಿಕೆಟ್ ಚೆಕ್ಕಿಂಗ್, ಪಾರ್ಸೆಲ್​​ ವಿಭಾಗದಲ್ಲಿ 9,488 ಕೋಟಿ ರೂ ಆದಾಯ ಗಳಿಸಿದೆ. ಈ ಬಾರಿ ನೈರುತ್ಯ ರೈಲ್ವೆ ವಲಯವು ಸರಕು-ಸಾಗಣೆಯಿಂದ 5,347.40 ಕೋಟಿ ರೂ, ಆದಾಯ ಗಳಿಸಿದ್ದರೆ 2024–25ರಲ್ಲಿ 4,672 ಕೋಟಿ ರೂ ಗಳಿಸಿತ್ತು. ಕಳೆದ ವರ್ಷದ ದಾಖಲೆಯನ್ನು ಈ ವರ್ಷ ಮೀರಿಸಿದೆ. ಪ್ರಯಾಣಿಕರ ವಿಭಾಗದಲ್ಲಿ ಆದಾಯವು 3,468 ಕೋಟಿಗೆ ಏರಿಕೆಯಾಗಿದೆ. ಪ್ರಯಾಣಿಕರ ಸಂಖ್ಯೆ 165.53 ಮಿಲಿಯನ್‌ನಿಂದ 176.93 ಮಿಲಿಯನ್‌ಗೆ ಹೆಚ್ಚಳವಾಗಿದ್ದು, ಕೋಚಿಂಗ್ ಆದಾಯ 329.5 ಕೋಟಿಗೆ ಏರಿದ್ದು, ಪಾರ್ಸೆಲ್ ಆದಾಯ 170.4 ಕೋಟಿಗೆ ಹೆಚ್ಚಾಗಿದೆ. ವಾಣಿಜ್ಯ ವಿವಿಧ ಆದಾಯವು 121.08 ಕೋಟಿಗೆ ಏರಿಕೆಯಾಗಿದೆ. ಟಿಕೆಟ್ ಪರಿಶೀಲನೆಯಿಂದ 70.76 ಕೋಟಿ ರೂ ‌ಆದಾಯ ಗಳಿಸಿದೆ. ಕಳೆದ ಆರ್ಥಿಕ ವರ್ಷದಲ್ಲಿ 8,489 ಕೋಟಿಗಳಿಸಿದ್ದು, ನೈರುತ್ಯ ವಲಯ ಈ ಬಾರಿ 9,488 ಕೋಟಿ ರೂ ಆದಾಯ ಗಳಿಸಿದೆ.

ಇದನ್ನೂ ಓದಿ: ಬೇಸಿಗೆ ರಜೆಯ ಹಿನ್ನೆಲೆ ರೈಲ್ವೆ ಇಲಾಖೆ ಹೊಸ ಕೊಡುಗೆ! ಬೆಂಗಳೂರು-ತಿರುಚಿರಾಪಲ್ಲಿ ನಡುವೆ ವಿಶೇಷ ರೈಲು ವ್ಯವಸ್ಥೆ

ಒಟ್ಟಿನಲ್ಲಿ ಕಳೆದ ಆರ್ಥಿಕ ವರ್ಷಕ್ಕೆ ಹೋಲಿಕೆ ಮಾಡಿದರೆ ಈ ವರ್ಷ ನೈರುತ್ಯ ರೈಲ್ವೆ, ಬೆಂಗಳೂರು ರೈಲ್ವೆ ವಲಯ ಸಾವಿರಾರು ಕೋಟಿ ರೂ ಹೆಚ್ಚುವರಿ ಆದಾಯ ಗಳಿಸಿದ್ದು, ರೈಲ್ವೆ ಅಭಿವೃದ್ಧಿ ಕಾಮಗಾರಿಗಳಿಗೆ ವೇಗ ಸಿಗೋದ್ರಲ್ಲಿ ಯಾವುದೇ ಅನುಮಾನವಿಲ್ಲ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:48 pm, Sun, 5 April 26

Loading...
Unable to load recommendations.
Follow Us