ವಾಹನಗಳಿಗೆ ‘ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್’ ಅಳವಡಿಕೆ ಟೆಂಡರ್; ಸೆಪ್ಟೆಂಬರ್ 19ಕ್ಕೆ ರಿಟ್ ಅರ್ಜಿ ವಿಚಾರಣೆ

| Updated By: ಕಿರಣ್ ಹನುಮಂತ್​ ಮಾದಾರ್

Updated on: Sep 12, 2023 | 7:07 PM

ರಾಜ್ಯದಲ್ಲಿ ಮಾರ್ಚ್ 3, 2019ರ ಬಳಿಕ ರಸ್ತೆಗೆ ಇಳಿಯುವ ಹೊಸ ವಾಹನಗಳಿಗೆ ಎಚ್​ಎಸ್​ಆರ್​ಪಿ ಸಂಖ್ಯೆಯನ್ನು ಆರಂಭದಲ್ಲಿಯೇ ಅಳವಡಿಸುವ ಜೊತೆಗೆ, ಹಾಲೊಗ್ರಾಂ ಜೊತೆಗೆ ವಿಶಿಷ್ಟ ಗುರುತು ಸಂಖ್ಯೆಯನ್ನು ಸಾರಿಗೆ ಇಲಾಖೆ ನೀಡುತ್ತಿತ್ತು. ಅದಕ್ಕಿಂತ ಪೂರ್ವದಲ್ಲಿ ನೋಂದಾಯಿಸಲಾಗಿರುವ ಎಲ್ಲ ಮಾದರಿಯ ವಾಹನಗಳಿಗೆ ‘ಅತಿ ಸುರಕ್ಷಿತ ನೋಂದಣಿ ಫಲಕ'ಗಳ (ಎಚ್‌ಎಸ್‌ಆರ್‌ಪಿ) ಅಳವಡಿಕೆ ಕಡ್ಡಾಯಗೊಳಿಸಲಾಗಿದೆ.

ವಾಹನಗಳಿಗೆ ‘ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್’ ಅಳವಡಿಕೆ ಟೆಂಡರ್; ಸೆಪ್ಟೆಂಬರ್ 19ಕ್ಕೆ ರಿಟ್ ಅರ್ಜಿ ವಿಚಾರಣೆ
ವಾಹನಗಳಿಗೆ ‘ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್’
Follow us on
ಬೆಂಗಳೂರು, ಸೆ.12: ರಾಜ್ಯ ಸರ್ಕಾರದ ಆಗಸ್ಟ್​.17ರ ಅಧಿಸೂಚನೆ ಪ್ರಶ್ನಿಸಿ ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್ (HSRP Number Plate) ಉತ್ಪಾದಕರ ಸಂಘದ ರಿಟ್ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಏಕಸದಸ್ಯ ಪೀಠ ಸೆಪ್ಟೆಂಬರ್ 19ಕ್ಕೆ ನಿಗದಿಪಡಿಸಿದೆ. ಇನ್ನು ಇದರಲ್ಲಿ ಸರ್ಕಾರದ ಅಧಿಸೂಚನೆಯಿಂದ ಪ್ರಭಾವಿ ಕಂಪನಿಗಳಿಗೆ ಮಾತ್ರ ಅನುಕೂಲವೆಂದು ಆರೋಪಿಸಿ, ರಾಜ್ಯ ಸರ್ಕಾರ ಹೊರಡಿಸಿದ‌ ಅಧಿಸೂಚನೆಗೆ ತಡೆ ನೀಡುವಂತೆ ಮನವಿ ಮಾಡಲಾಗಿತ್ತು.
ಹೌದು, ರಾಜ್ಯದಲ್ಲಿ ಮಾರ್ಚ್ 3, 2019ರ ಬಳಿಕ ರಸ್ತೆಗೆ ಇಳಿಯುವ ಹೊಸ ವಾಹನಗಳಿಗೆ ಎಚ್​ಎಸ್​ಆರ್​ಪಿ ಸಂಖ್ಯೆಯನ್ನು ಆರಂಭದಲ್ಲಿಯೇ ಅಳವಡಿಸುವ ಜೊತೆಗೆ, ಹಾಲೊಗ್ರಾಂ ಜೊತೆಗೆ ವಿಶಿಷ್ಟ ಗುರುತು ಸಂಖ್ಯೆಯನ್ನು ಸಾರಿಗೆ ಇಲಾಖೆ ನೀಡುತ್ತಿತ್ತು. ಇದರಲ್ಲಿ ಎಂಜಿನ್ ಸಂಖ್ಯೆ, ಛಾಸಿ ಸಂಖ್ಯೆ ಸೇರಿದಂತೆ ಎಲ್ಲ ಅಗತ್ಯ ಮಾಹಿತಿ ಇರುತ್ತಿತ್ತು. ಅದಕ್ಕಿಂತ ಪೂರ್ವದಲ್ಲಿ ನೋಂದಾಯಿಸಲಾಗಿರುವ ಎಲ್ಲ ಮಾದರಿಯ ವಾಹನಗಳಿಗೆ ‘ಅತಿ ಸುರಕ್ಷಿತ ನೋಂದಣಿ ಫಲಕ’ಗಳ (ಎಚ್‌ಎಸ್‌ಆರ್‌ಪಿ) ಅಳವಡಿಕೆ ಕಡ್ಡಾಯಗೊಳಿಸಲಾಗಿದೆ.
ಇದನ್ನೂ ಓದಿ:ಟ್ರಾವೆಲ್ ಏಜೆಂಟ್​​ನಿಂದ ಮೋಸ, ಮಲೇಷ್ಯಾದಿಂದ ಅಮೃತಸರ ವಿಮಾನ ನಿಲ್ದಾಣಕ್ಕೆ ಬಂದ ಯುವಕ ಆತ್ಮಹತ್ಯೆ
ಇನ್ನು ಎಚ್‌ಎಸ್‌ಆರ್‌ಪಿ ಅಳವಡಿಕೆಗೆ ತಗಲುವ ವೆಚ್ಚವನ್ನು ವಾಹನ ಮಾಲೀಕರೇ ಭರಿಸಬೇಕಿದೆ. ಈಗಾಗಲೇ ರಾಜ್ಯದಲ್ಲಿ 2019ರ ಮಾರ್ಚ್‌ 31ರ ಅಂತ್ಯಕ್ಕೆ ನೋಂದಣಿಯಾಗಿರುವ ವಾಹನಗಳ ಸಂಖ್ಯೆ 2,10,73,227 ಇದೆ. ಇವುಗಳ ಪೈಕಿ ಹಾಳಾಗಿರುವ ಅಥವಾ ಗುಜರಿ ಸೇರಿರುವ ವಾಹನಗಳನ್ನು ಹೊರತುಪಡಿಸಿ 1.76 ಕೋಟಿ ವಾಹನಗಳಿಗೆ ಹೊಸ ಫಲಕ ಅಳವಡಿಸಲು ನಿರ್ಧರಿಸಲಾಗಿದೆ.

ಏನಿದು ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ?

ಈ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಪ್ಲೇಟ್​ನ್ನು ಅಲ್ಯುಮಿನಿಯಂ ಲೋಹದಿಂದ ತಯಾರಿಸಲಾಗುತ್ತದೆ. ಈಗಾಗಲೇ ಹೊಸ ವಾಹನಗಳಲ್ಲಿ ಈ ರೀತಿಯ ನಂಬರ್ ಪ್ಲೇಟ್ ಕಡ್ಡಾಯವಾಗಿ ಅಳವಡಿಸಲಾಗುತ್ತಿದೆ. ಈ ಪ್ಲೇಟ್‌ಗಳಲ್ಲಿ ನಂಬರ್‌ಗಳು ಉಬ್ಬಿಕೊಂಡಿರುವ ರೀತಿ ಅಚ್ಚಾಗಿರುತ್ತದೆ. ಈ ಪ್ಲೇಟ್‌ನ ಮೇಲ್ಭಾಗದ ಎಡ ಬದಿಯಲ್ಲಿ ನೀಲಿ ಬಣ್ಣದ ಅಶೋಕ ಚಕ್ರದ ಮುದ್ರೆಯನ್ನು ಕಾಣಬಹುದು. 20 ಮಿಲಿ ಮೀಟರ್ ಉದ್ದ ಅಗಲದ ಈ ಮುದ್ರೆಯನ್ನು ಕ್ರೋಮಿಯಂ ಲೋಹ ಬಳಸಿ ತಯಾರಿಸಲಾಗಿರುತ್ತೆ.
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ