ಬೆಂಗಳೂರಿನಲ್ಲಿ ಮಳೆ ಆರ್ಭಟ! ಹೆಚ್ಚಾಯ್ತು ಮನೆಗಳು ಕುಸಿಯುವ ಭೀತಿ
ತಡೆಗೋಡೆ ಕುಸಿದ ಪರಿಣಾಮ ಮನೆಯ ಪಾಯಕ್ಕೆ ಸೇರಿದ ಮಣ್ಣು ಕೂಡ ಕುಸಿದಿದೆ. ಹೀಗಾಗಿ ಮೂರುಮನೆಗಳು ಕುಸಿಯುವ ಭೀತಿ ಎದುರಾಗಿದೆ. ಮನೆಯೊಳಗೆ ಗೋಡೆಗಳು ಬಿರುಕು ಬಿಟ್ಟಿದೆ.
ಬೆಂಗಳೂರು: ನಗರದಲ್ಲಿ ಸತತ ಮಳೆಯ ಆರ್ಭಟದಿಂದ ಮೂರು ಮನೆಗಳು ಕುಸಿಯುವ ಭೀತಿಯಲ್ಲಿವೆ. ಹೆಸರಘಟ್ಟ ರಸ್ತೆಯ ಚಿಮನಿ ಹಿಲ್ಸ್‌ನ ಸೌಂದರ್ಯ ಲೇಔಟ್ ನಿರ್ಮಾಣಕ್ಕಾಗಿ ಭೂಮಿ ಅಗೆಯಲಾಗಿತ್ತು. ಶ್ರೀನಿವಾಸ್, ಸುರೇಶ್, ನಾಗರಾಜ್, ಗುಂಡಪ್ಪ ನಾಲ್ವರು ಸೇರಿ ಚಿಮಣಿ ಹಿಲ್ಸ್ ಲೇಔಟ್ ನಿರ್ಮಿಸಿದ್ದರು. 2014 ರಲ್ಲಿ ಚಿಮಣಿ ಹಿಲ್ಸ್ ಲೇಔಟ್ ನಿರ್ಮಾಣವಾಗಿತ್ತು. ಲೇಔಟ್ಗಾಗಿ ನಿರ್ಮಾಣವಾಗಿರುವ ಮನೆಯ ಪಕ್ಕದಲ್ಲಿ ಹೆಚ್ಚು ಮಣ್ಣು ಅಗೆಯಲಾಗಿದೆ. ಮನೆಯ ಪಕ್ಕದಲ್ಲೇ ಬೇಕಾಬಿಟ್ಟಿಯಾಗಿ ಮಾಲೀಕರು ಲೇಔಟ್ ನಿರ್ಮಿಸಿದ್ದರು. ಆದರೆ ಕಳಪೆ ಕಾಮಗಾರಿಯಿಂದ ಮಳೆಯ ಹೊಡೆತಕ್ಕೆ ತಡೆಗೋಡೆ ಕುಸಿದಿದೆ.
ತಡೆಗೋಡೆ ಕುಸಿದ ಪರಿಣಾಮ ಮನೆಯ ಪಾಯಕ್ಕೆ ಸೇರಿದ ಮಣ್ಣು ಕೂಡ ಕುಸಿದಿದೆ. ಹೀಗಾಗಿ ಮೂರುಮನೆಗಳು ಕುಸಿಯುವ ಭೀತಿ ಎದುರಾಗಿದೆ. ಮನೆಯೊಳಗೆ ಗೋಡೆಗಳು ಬಿರುಕು ಬಿಟ್ಟಿದೆ. ಮನೆಯ ಮಾಲೀಕರು ಜೀವ ಭಯದಲ್ಲಿ ಬದುಕುವಂತಾಗಿದೆ. ಸ್ಥಳಕ್ಕೆ ಬಂದ ಬಿಬಿಎಂಪಿ ಅಧಿಕಾರಿಗಳು ಮನೆ ಖಾಲಿ ಮಾಡಿ ಎಂದು ನೋಟಿಸ್ ನೀಡಿದ್ದಾರೆ.
ನಿರಂತರ ಮಳೆಯಿಂದ ಕುಸಿದುಬಿದ್ದ ಕಾಂಪೌಂಡ್ ತೆರವುಗೊಳಿಸಲಾಗಿದೆ. ಹಾನಿಯಾಗಿರುವ ಗೋಡೆಯನ್ನು ತೆರವು ಮಾಡಿ, ಹೊಸದಾಗಿ ಗೋಡೆ ನಿರ್ಮಾಣ ಮಾಡುವುದಕ್ಕೆ ನಿರ್ಧಾರ ಮಾಡಲಾಗಿದೆ.
ಹೈರೇಜ್ ಬಿಲ್ಡಿಂಗ್ ಮಾಲೀಕರಿಗೆ ನಡುಕ ಶುರು ಬಿಬಿಎಂಪಿಗೆ ಮೋಸ ಮಾಡಿ ಬಿಲ್ಡಿಂಗ್ ಕಟ್ಟಿದವರಿಗೆ ಶಾಕ್ ಎದುರಾಗಿದೆ. ನಾಲ್ಕು ಅಂತಸ್ತಿಗೆ ಕಟ್ಟಡ ನಿರ್ಮಾಣಕ್ಕೆ ಅನುಮತಿ ಪಡೆದು ತಮಗಿಷ್ಟ ಬಂದಂತೆ ಮಾಲೀಕರು ಕಟ್ಟಡ ನಿರ್ಮಿಸಿಕೊಂಡಿದ್ದಾರೆ. ಅಂದಾಜು 5,000 ಕಟ್ಟಡ ಅನಧಿಕೃತವಾಗಿರುವ ಮಾಹಿತಿ ಇದೆ. ಹೈರೇಜ್ ಬಿಲ್ಡಿಂಗ್ಗಳ ನೆಲಸಮಕ್ಕೆ ಬಿಬಿಎಂಪಿ ನಿರ್ಧರಿಸಿದೆ.
ಇದನ್ನೂ ಓದಿ
Duplicate Fertilizer: ಮಣ್ಣಿಗೆ ರೆಡ್ ಆಕ್ಸೈಡ್ ಬಣ್ಣ ಬೆರೆಸಿ ನಕಲಿ ಗೊಬ್ಬರ ತಯಾರಿ – 85 ಮೂಟೆ ಜಪ್ತಿ
ರಾಜ್ಯದಲ್ಲಿ ಕ್ರೈಸ್ತ ಮಿಷನರಿಗಳ ಸರ್ವೆ ವಿಚಾರ; ಸರ್ಕಾರದ ನಿಲುವಿಗೆ ಬೆಂಗಳೂರಿನ ಆರ್ಚ್ ಬಿಷಪ್ ಆಕ್ಷೇಪ
Published On - 2:34 pm, Mon, 18 October 21