ಹೆಬ್ಬಾಳ ಕ್ಷೇತ್ರದ ಒಂದು ರಸ್ತೆಯಲ್ಲಿ 5 ಜನ ಮುಖ್ಯಮಂತ್ರಿಗಳಾಗಿದ್ದಾರೆ, ನಾನೂ ನಿಮ್ಮಲ್ಲಿ ಒಬ್ಬ: ಸಿಎಂ ಬಸವರಾಜ ಬೊಮ್ಮಾಯಿ
ಬಿಜೆಪಿ ಕಾರ್ಯಕರ್ತರ ಅಭಿಮಾನಕ್ಕೆ ಸಂತೋಷಪಟ್ಟ ಸಿಎಂ ಬಸವರಾಜ್ ಬೊಮ್ಮಾಯಿ, ಹೆಬ್ಬಾಳ ಕ್ಷೇತ್ರದ ಒಂದು ರಸ್ತೆಯಲ್ಲಿ ಐದು ಜನ ಮುಖ್ಯಮಂತ್ರಿಗಳಾಗಿದ್ದಾರೆ, ನಾನೂ ನಿಮ್ಮಲ್ಲಿ ಒಬ್ಬ ಎಂದಿದ್ದಾರೆ. ಬೆಂಗಳೂರು ನಗರ ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಹೊಂದಿರುವ ನಗರ. ನರೇಂದ್ರ ಮೋದಿ ಬೆಂಗಳೂರು ನಗರದ ಸರ್ವಾಂಗೀಣ ಅಭಿವೃದ್ಧಿ ಮಾಡಬೇಕು ಅಂತಾ ತಿಳಿಸಿದ್ದಾರೆ. -
ಬೆಂಗಳೂರು: ಹೆಬ್ಬಾಳ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ನೂತನ ಸಿಎಂಗೆ ಭೇಟಿ ಮಾಡಿ ಸನ್ಮಾನ ಮಾಡಿದ್ದಾರೆ. ಮಾಜಿ ಶಾಸಕ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ವಾರ್ಡ್ ಸದಸ್ಯರು ಸೇರಿದಂತೆ ನೂರಾರು ಕಾರ್ಯಕರ್ತರು ಸಿಎಂ ಸ್ವಗೃಹ ಆರ್.ಟಿ ನಗರದ ಬಳಿ ಬಂದು ಸಿಎಂ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ. ಬಸವರಾಜ ಬೊಮ್ಮಾಯಿ ಸಿಎಂ ಆಗಿರೋದು ತುಂಬಾ ಖುಷಿಯಾಗಿದೆ. ಅವರು ಅಭಿವೃದ್ಧಿ ಕೆಲಸ ಮಾಡ್ತಾರೆ ಅಂತಾ ಕಾರ್ಯಕರ್ತರು ಬಿಜೆಪಿ ಬಾವುಟ ಹಿಡಿದು ಜೈಕಾರ ಹಾಕಿದ್ದಾರೆ.
ಬಿಜೆಪಿ ಕಾರ್ಯಕರ್ತರ ಅಭಿಮಾನಕ್ಕೆ ಸಂತೋಷಪಟ್ಟ ಸಿಎಂ ಬಸವರಾಜ ಬೊಮ್ಮಾಯಿ, ಹೆಬ್ಬಾಳ ಕ್ಷೇತ್ರದ ಒಂದು ರಸ್ತೆಯಲ್ಲಿ ಐದು ಜನ ಮುಖ್ಯಮಂತ್ರಿಗಳಾಗಿದ್ದಾರೆ, ನಾನೂ ನಿಮ್ಮಲ್ಲಿ ಒಬ್ಬ ಎಂದಿದ್ದಾರೆ. ಬೆಂಗಳೂರು ನಗರ ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಹೊಂದಿರುವ ನಗರ. ನರೇಂದ್ರ ಮೋದಿ ಬೆಂಗಳೂರು ನಗರದ ಸರ್ವಾಂಗೀಣ ಅಭಿವೃದ್ಧಿ ಮಾಡಬೇಕು ಅಂತಾ ತಿಳಿಸಿದ್ದಾರೆ. ಟೂರಿಸಂ, ಕಲ್ಚರ್ ಎಲ್ಲವೂ ಬೆಂಗಳೂರಿಗೆ ಬರಲಿದೆ. ಹೆಬ್ಬಾಳ ಕ್ಷೇತ್ರದ ಇದೇ ರಸ್ತೆಯಲ್ಲಿ ಐದು ಜನ ಮುಖ್ಯಮಂತ್ರಿಗಳಾಗಿದ್ದಾರೆ. ನಂದೂ ಇದೇ ರೆಸಿಡೆನ್ಸಿ ನಾನು ನಿಮ್ಮಲ್ಲಿ ಒಬ್ಬ. ಬರುವಂತಹ ದಿನಗಳಲ್ಲಿ ಬಿಬಿಎಂಪಿ ಚುನಾವಣೆ ಬರಲಿದೆ. ಹೆಬ್ಬಾಳದ ಎಂಟು ವಾರ್ಡ್ಗಳಲ್ಲೂ ಬಿಜೆಪಿ ಬರಬೇಕು. ಆ ರೀತಿ ಕೆಲಸ ಮಾಡಬೇಕು. ನಿಮ್ಮ ಅಭಿಮಾನಕ್ಕೆ ಚಿರಖುಣಿ ಎಂದ ಹೇಳಿದ್ರು.
ಇವತ್ತು ಹೆಬ್ಬಾಳ ಕ್ಷೇತ್ರದ ಎಲ್ಲಾ ಅಧ್ಯಕ್ಷರು ಪದಾದಿಕಾರಿಗಳು ಮಾಜಿ ಶಾಸಕರು ಬಂದಿದ್ದಾರೆ. ಈ ಕ್ಷೇತ್ರದ ಅಭಿವೃದ್ಧಿಗೆ ನಾನು ಕೂಡ ಸಹಕಾರ ನೀಡುತ್ತೇನೆ. ಇವತ್ತು ಮೂರು ಇಲಾಖೆಗಳ ಪದಾಧಿಕಾರಿಗಳ ಸಭೆ ಮಾಡ್ತಿದ್ದೇನೆ. ನಾಳೆ ಮೂರು ಇಲಾಖೆಗಳ ಸಭೆಯನ್ನ ಮಾಡ್ತೇನೆ. ರಾಜ್ಯದ ಅಭಿವೃದ್ಧಿ ವೇಗ ಹೆಚ್ಚಿಸುತ್ತೇನೆ. ಆರ್ಥಿಕ ಸಾಮಾಜಿಕ ಸ್ಥಿತಿ ಸುಧಾರಣೆ ಮಾಡಬೇಕು. ಸ್ವಾತಂತ್ರ್ಯ ಘೋಷಣೆ ಮಾಡಿದ ಯೋಜನೆಗಳು ಬೇಗ ಅನುಷ್ಠಾನಕ್ಕೆ ಬರಲಿದೆ. ಜನರ ಪರ ಅಧಿಕಾರಿವರ್ಗ ಕೆಲಸ ಮಾಡಲಿದೆ ಎಂದು ಈ ವೇಳೆ ಅವರು ಹೇಳಿದರು.
ಸಿಎಂ ಬಸವರಾಜ ಬೊಮ್ಮಾಯಿಗೆ ಸರ್ಕಾರಿ ನಿವಾಸ ಹಂಚಿಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ರೇಸ್‌ಕೋರ್ಸ್ ರಸ್ತೆಯಲ್ಲಿರುವ ಸರ್ಕಾರಿ ಗೃಹ ಕಚೇರಿ ಸಂಖ್ಯೆ 1ರ ರೇಸ್ ವ್ಯೂ ಕಾಟೇಜ್ ವಸತಿ ಗೃಹ ಹಂಚಿಕೆ ಮಾಡಲಾಗಿದೆ. ಈ ಹಿಂದೆ ಇದನ್ನು ಸಚಿವ ಡಾ.ಅಶ್ವತ್ಥ್ ನಾರಾಯಣ್‌ಗೆ ಹಂಚಿಕೆ ಮಾಡಲಾಗಿತ್ತು. ಈಗ ಅಶ್ವತ್ಥ್ ನಾರಾಯಣ್‌ರಿಂದ ಹಿಂಪಡೆದು ಸಿಎಂಗೆ ಹಂಚಿಕೆ ಮಾಡಿ ಆದೇಶ ನೀಡಲಾಗಿದೆ.
ಇದನ್ನೂ ಓದಿ: ಕೆಂಗೇರಿ ಮಾರ್ಗದ ಮೆಟ್ರೋಗೆ ಸಿಕ್ಕಿತು ಸೇಫ್ಟಿ ಸರ್ಟಿಫಿಕೇಟ್: ಮುಂದಿನ ವಾರವೇ ಉದ್ಘಾಟನಾ ದಿನ ನಿಗದಿ ಸಾಧ್ಯತೆ
CM Basavaraj Bommai: ಸಿಎಂ ಬಸವರಾಜ ಬೊಮ್ಮಾಯಿ ಭೇಟಿಗೆ ಬರುವ ಸಾರ್ವಜನಿಕರಿಗೆ ಮೊಬೈಲ್ ನಿಷೇಧ
Published On - 10:18 am, Tue, 17 August 21