ಬೆಂಗಳೂರು: ಕಾಂಗ್ರೆಸ್ ಎಲ್ಲೂ ಇಲ್ಲ, ಕಾಂಗ್ರೆಸ್(Congress) ಪಕ್ಷದವರಿಗೆ ಭವಿಷ್ಯವಿಲ್ಲ. ಕಾಂಗ್ರೆಸ್ ಮುಳುಗುವ ಪಕ್ಷ, ಯಾವ ರಾಜ್ಯದಲ್ಲೂ ಕಾಂಗ್ರೆಸ್ ಇಲ್ಲ ಕಾಂಗ್ರೆಸ್ ಪಕ್ಷ ಕುಟುಂಬ ಆಧಾರಿತ ಪಕ್ಷ. ಅವರೇನು ನಮ್ಮವರನ್ನು ಕರೆಯುವುದು. ಅವರೇ ಇರುತ್ತಾರೋ ಇಲ್ವೋ?, ಕಾಂಗ್ರೆಸ್ ಪಕ್ಷದಲ್ಲಿ ಒಗ್ಗಟ್ಟಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಕಾಲು ಅವರವರೇ ಎಳೆದುಕೊಳ್ಳುತ್ತಿದ್ದಾರೆ. ಅವರ ರಾಷ್ಟ್ರೀಯ ಅಧ್ಯಕ್ಷರು ಯಾರು ಎನ್ನುವುದೇ ಗೊತ್ತಿಲ್ಲ ಎಂದು ಬಿಜೆಪಿ (BJP) ಶಾಸಕರು ಸಂಪರ್ಕದಲ್ಲಿದ್ದಾರೆಂಬ ಸಿದ್ದರಾಮಯ್ಯ ಹೇಳಿಕೆಗೆ ಬೆಂಗಳೂರಿನಲ್ಲಿ ಸಚಿವ ಡಾ.ಅಶ್ವತ್ಥ್ ನಾರಾಯಣ (Ashwath Narayan) ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರು ಉಸ್ತುವಾರಿಯನ್ನು ಶ್ಯಾಡೋ ಉಸ್ತುವಾರಿಯಾಗಿ ಸಚಿವ ಅಶೋಕ್ ನಿರ್ವಹಣೆ ಮಾಡುತ್ತಾರೆ ಎಂಬ ವಿಚಾರಕ್ಕೆ ಸಂಬಂಧಪಟ್ಟಂತೆ ಸಚಿವ ಡಾ. ಅಶ್ವಥ್ ನಾರಾಯಣ ಪ್ರತಿಕ್ರಿಯೆ ನೀಡಿದ್ದು, ಬೆಂಗಳೂರು ನಗರಾಭಿವೃದ್ಧಿ ಇಲಾಖೆಯನ್ನು ಸಿಎಂ ನಿರ್ವಹಿಸುತ್ತಿದ್ದಾರೆ. ಅವರೇ ಬೆಂಗಳೂರಿನ ಉಸ್ತುವಾರಿ ಆಗಿದ್ದಾರೆ. ರಾಜ್ಯಾದ್ಯಂತ ಯಾರು ಯಾವ ಜಿಲ್ಲೆ ಪ್ರತಿನಿಧಿಸುತ್ತಾರೋ ಅವರು ಆ ಜಿಲ್ಲೆಯ ಉಸ್ತುವಾರಿ ಆಗುವಂತಿಲ್ಲ. ಇದು ನಮ್ಮ ಪಕ್ಷದ ರಾಷ್ಟ್ರೀಯ ನೀತಿ. ಹೀಗಾಗಿ ಬೆಂಗಳೂರು ಉಸ್ತುವಾರಿ ಸಚಿವ ಅಶೋಕ್ಗೆ ನೀಡಲಿಲ್ಲ ಎಂಬ ಪ್ರಶ್ನೆಯೇ ಉದ್ಭವಿಸಲ್ಲ ಎಂದು ಹೇಳಿದ್ದಾರೆ.
ಚುನಾವಣೆ ಮಾಡಲು ನಮ್ಮ ಸರ್ಕಾರ ಬದ್ಧವಾಗಿದೆ: ಡಾ.ಅಶ್ವತ್ಥ್ ನಾರಾಯಣ
ಸುಪ್ರೀಂ ಕೋರ್ಟ್ನಲ್ಲಿರುವ ಕೇಸ್‌ನಲ್ಲಿ, ಕ್ಯಾಲೆಂಡರ್ ಆಫ್ ಈವೆಂಟ್ ಪ್ರಕಾರ ಏನು ಮಾಡುತ್ತಾರೋ ನಾವು ಬದ್ಧ. ಚುನಾವಣೆ ಮಾಡಲು ನಮ್ಮ ಸರ್ಕಾರ ಬದ್ಧವಾಗಿದೆ. ಹೊಸ ಕಾಯ್ದೆ ಬೇಕು ಎಂಬ ಒತ್ತಾಯ ಇತ್ತು. ನಮ್ಮ ಪ್ರಣಾಳಿಕೆಯಲ್ಲೂ ಈ ಬಗ್ಗೆ ಇತ್ತು. ಆ ಪ್ರಕಾರ 243 ವಾರ್ಡ್ ಮಾಡಲಾಗಿದೆ. ನಗರದ ಹೊಸ ವಲಯಕ್ಕೆ ವಾರ್ಡ್ ವಿಸ್ತರಣೆ ಮಾಡಿಲ್ಲ. 198 ವಾರ್ಡ್ ಅನ್ನೇ 243 ವಾರ್ಡ್ ಮಾಡಲಾಗಿದೆ ಎಂದು ಡಾ.ಅಶ್ವತ್ಥ್ ನಾರಾಯಣ ಎಂದು ಡಾ.ಅಶ್ವತ್ಥ್ ನಾರಾಯಣ ತಿಳಿಸಿದ್ದಾರೆ.
ಗಾಳಿಯಲ್ಲಿ ಗುಂಡು ಹಾರಿಸುವುದೇ ಡಿಕೆಶಿ ಕೆಲಸ: ಸಚಿವ ಭೈರತಿ ಬಸವರಾಜ್
ಏನೇ ಇದ್ದರೂ ಡಿಕೆಶಿ ಸ್ಪಷ್ಟವಾಗಿ ಹೇಳಬೇಕು. ಸೂಕ್ತ ಸಮಯ ಬಂದಾಗ ಹೇಳುತ್ತೇನೆಂದು ಹೇಳಬಾರದು. ಗಾಳಿಯಲ್ಲಿ ಗುಂಡು ಹಾರಿಸುವುದೇ ಡಿಕೆಶಿ ಕೆಲಸ. ಏನೇ ಇದ್ದರೂ ಬಹಿರಂಗವಾಗಿ ಹೇಳಿಕೆ ನೀಡಬೇಕು. ಅದು ಬಿಟ್ಟು ಗಾಳಿಯಲ್ಲಿ ಗುಂಡು ಹೊಡೆದರೆ ಹೇಗೆ? ನಾವು ಮಾತ್ರ ಬಿಜೆಪಿಯನ್ನು ಬಿಟ್ಟು ಹೋಗುವುದಿಲ್ಲ. ಬೊಮ್ಮಾಯಿ ನೇತೃತ್ವದಲ್ಲೇ ಚುನಾವಣೆ ಎದುರಿಸುತ್ತೇವೆ ಎಂದು ದಾವಣಗೆರೆಯಲ್ಲಿ ಸಚಿವ ಭೈರತಿ ಬಸವರಾಜ್ ಹೇಳಿಕೆ ನೀಡಿದ್ದಾರೆ.
ಸಂಪುಟ ವಿಸ್ತರಣೆ ವೇಳೆ ನನ್ನ ಕೈಬಿಡಬೇಕೆಂದು ಎಲ್ಲಿಯೂ ಕೂಡ ಕೇಳಿ ಬಂದಿಲ್ಲ. ನನ್ನ ಬಗ್ಗೆ ಸಿಎಂ ಹಾಗೂ ವರಿಷ್ಠರಿಗೆ ಒಳ್ಳೇ ಅಭಿಪ್ರಾಯವಿದೆ. ಪರೋಕ್ಷವಾಗಿ ಸಂಪುಟದಿಂದ ಕೈ ಬಿಡಲ್ಲ ಎಂದು ದಾವಣಗೆರಯಲ್ಲಿ ಸಚಿವ ಭೈರತಿ ಬಸವರಾಜ್ ಪ್ರತಿಕ್ರಿಯೆ ನೀಡಿದ್ದಾರೆ.
ಬಳಿಕ ಮಾತನಾಡಿದ ಅವರು, ಎಲ್ಲರಿಗೂ ಸಚಿವರಾಗಬೇಕು ಎಂಬ ಆಸೆ ಇದ್ದೆ ಇರುತ್ತದೆ. ಇಂತಹ ವಿಚಾರವನ್ನು ಪಕ್ಷದ ವೇದಿಕೆಯಲ್ಲಿ ಮಾತಾಡಬೇಕು. ಬಹಿರಂಗ ಹೇಳಿಕೆ ಕೊಟ್ಟರೇ ಸರಿಯಲ್ಲ.ಇದರಿಂದ ಜನರಲ್ಲಿ ಎನಪ್ಪಾ ಇದು ಅಧಿಕಾರಕ್ಕಾಗಿ ಕಚ್ಚಾಟ ಎಂಬ ಮಾತು ಬರಬಾರದು. ಯಾರು ಕೂಡಾ ಬಹಿರಂಗ ಹೇಳಿಕೆ ನೀಡಬೇಡಿ ಎಂದು ಈಗಾಗಲೇ ನಳೀನ್ಕುಮಾರ ಕಟೀಲ್ ಹೇಳಿದ್ದಾರೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
Published On - 8:21 pm, Tue, 25 January 22