ಐಎಎಸ್ ಅಧಿಕಾರಿಗೆ ಬೆದರಿಕೆ ಕರೆ: ಚಾಲಕನ ವರ್ಗಾವಣೆ ಪ್ರಶ್ನಿಸಿ ಬೆದರಿಕೆಯೊಡ್ಡಿದ್ದ ಆರೋಪಿ ಸೆರೆ
ಇತ್ತೀಚಿಗೆ ಆಡಳಿತಾತ್ಮಕ ಕಾರಣಗಳಿಗಾಗಿ ತಮ್ಮ ಕಾರು ಚಾಲಕ ಆನಂದ್ ಎಂಬುವರನ್ನ ಕೋಲಾರಕ್ಕೆ ವರ್ಗಾವಣೆ ಮಾಡಿದ್ದರು. ವರ್ಗಾವಣೆ ಮಾಡಿದ ದಿನವೇ ಆನಂದ್ ವರ್ಗಾವಣೆ ಪ್ರಶ್ನಿಸಿ ಕರೆ ಮಾಡಿ ಬೆದರಿಕೆ ಹಾಕಲಾಗಿದೆ.
ಬೆಂಗಳೂರು: ಐಎಎಸ್ ಅಧಿಕಾರಿ ಮನೀಷ್ ಮೌದ್ಗಿಲ್ಗೆ ಕರೆ ಮಾಡಿ ಬೆದರಿಕೆ ಆರೋಪಿಯನ್ನ ಸಂಪಿಗೆಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಗೋವಿಂದರಾಜು ಬಂಧಿತ ಆರೋಪಿ. ಸರ್ವೆ ಸೆಟ್ಲಮೆಂಟ್ ಹಾಗೂ ಲ್ಯಾಂಡ್ ರೆಕಾರ್ಡ್ಸ್ ಕಮೀಷನರ್ ಆಗಿರುವ ಮುನೀಷ್ ಮೌದ್ಗಿಲ್ಗೆ, ಅಬಕಾರಿ ಸಚಿವ ಗೋಪಾಲಯ್ಯನ ಪರ್ಸನಲ್ ಸೆಕ್ರೆಟ್ರಿ ಎಂದು ಹೇಳಿಕೊಂಡು ಬೆದರಿಕೆ ಕರೆ ಮಾಡಲಾಗಿದೆ. ಇತ್ತೀಚಿಗೆ ಆಡಳಿತಾತ್ಮಕ ಕಾರಣಗಳಿಗಾಗಿ ತಮ್ಮ ಕಾರು ಚಾಲಕ ಆನಂದ್ ಎಂಬುವರನ್ನ ಕೋಲಾರಕ್ಕೆ ವರ್ಗಾವಣೆ ಮಾಡಿದ್ದರು. ವರ್ಗಾವಣೆ ಮಾಡಿದ ದಿನವೇ ಗೋವಿಂದರಾಜು ವರ್ಗಾವಣೆ ಪ್ರಶ್ನಿಸಿ ಕರೆ ಮಾಡಿದ್ದು, ಯಾಕೆ ಆನಂದ್ ವರ್ಗಾವಣೆ ಮಾಡುತ್ತಿದ್ದಿರಿ, ವರ್ಗಾವಣೆ ಕ್ಯಾನ್ಸಲ್ ಮಾಡಿ ಎಂದು ಏರು ಧ್ವನಿಯಲ್ಲಿ ಆರೋಪಿ ಮಾತಾಡಿದ್ದಾನೆ. ಮಧ್ಯರಾತ್ರಿ ಕರೆ ಮಾಡಿ ಮುನೀಷ್ ಮೌದ್ಗಿಲ್ಗೆ 9740105969, 7975229904, ನಂಬರ್ಗಳಿಂದ ಬೆದರಿಕೆ ಕರೆ ಹಾಕಿದ್ದಾನೆ.
ಇದನ್ನೂ ಓದಿ: ಪಿಎಸ್ಐ ಹುದ್ದೆಗಳ ನೇಮಕಾತಿಯಲ್ಲಿ ಅಕ್ರಮ ಪ್ರಕರಣ; ಅನುಮಾನಿತ ಪಿಎಸ್ಐ ಎಸ್ಕೇಪ್
ಟ್ರು ಕಾಲರ್ನಲ್ಲಿ ಗೋವಿಂದರಾಜ. ಟಿ ಎಂದು ನಂಬರ್ಗಳು ಬರುತ್ತಿದ್ದು, ನಂತರ ಗೋಪಾಲಯ್ಯ ಪಿಎ ರಾಮೇಗೌಡರಿಗೆ ಮುನೀಷ್ ಮೌದ್ಗಿಲ್ ಮಾಹಿತಿ ತಿಳಿಸಲಾಗಿದೆ. ನಂತರ ಸಂಪಿಗೇಹಳ್ಳಿ ಠಾಣೆಗೆ ಖುದ್ದು ದೂರು ನೀಡಿದ್ದ ಮುನೀಷ್ ಮೌದ್ಗಿಲ್, ಸದ್ಯ ಆರೋಪಿ ಗೋವಿಂದರಾಜು ನನ್ನ ಸಂಪಿಗೇಹಳ್ಳಿ ಪೊಲೀಸರು ಬಂಧನ ಮಾಡಿದ್ದಾರೆ.
ಇದನ್ನೂ ಓದಿ: ಸಿದ್ದರಾಮಯ್ಯ ಸಿಎಂ ಆದ ಒಂದೇ ವರ್ಷಕ್ಕೆ ಭ್ರಷ್ಟಾಚಾರ ಬಯಲು; ಟ್ವಿಟರ್ನಲ್ಲಿ ಚಾಟಿ ಬೀಸಿದ ರಾಜ್ಯ ಬಿಜೆಪಿ
ಅಕ್ರಮವಾಗಿ ಗೋಹತ್ಯೆ ವೇಳೆ ಪೊಲೀಸರು ದಾಳಿ
ತುಮಕೂರು: ಜಿಲ್ಲೆಯ ಕುಣಿಗಲ್ ತಾಲೂಕಿನ ಬಿಸಿನೆಲೆ ಗ್ರಾಮ ಬಳಿ ಅಕ್ರಮವಾಗಿ ಗೋಹತ್ಯೆ ವೇಳೆ ಪೊಲೀಸರು ದಾಳಿ ಮಾಡಿದ್ದು ಇಬ್ಬರು ಆರೋಪಿಗಳನ ಬಂಧಿಸಿ, 27 ಜಾನುವಾರುಗಳ ರಕ್ಷಣೆ ಮಾಡಲಾಗಿದೆ. ಬಕ್ರೀದ್ ಹಬ್ಬಕ್ಕಾಗಿ 15 ಹಸು, 13 ಕೋಣಗಳ ತರಲಾಗಿದ್ದು, ಅವುಗಳನ್ನು ಕೊಲ್ಲುತ್ತಿದ್ದ ವೇಳೆ ಕುಣಿಗಲ್ ಡಿವೈಎಸ್ಪಿ ರಮೇಶ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಒಂದು ಟಾಟಾ ಏಸ್, 2 ಬೈಕ್ಗಳು, ಹಸು ಮಾಂಸ ವಶಕ್ಕೆ ಪಡೆಯಲಾಗಿದ್ದು, ಅಮೃತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಅಕ್ರಮವಾಗಿ ಕಸಾಯಿ ಖಾನೆಗೆ ಎಮ್ಮೆಗಳನ್ನು ಸಾಗಾಟ
ಚಿಕ್ಕಬಳ್ಳಾಪುರ: ಅಕ್ರಮವಾಗಿ ಕಸಾಯಿ ಖಾನೆಗೆ ಎಮ್ಮೆಗಳನ್ನು ಸಾಗಾಟ ಮಾಡ್ತಿದ್ದ ಹಿನ್ನಲೆ, ಅಕ್ರಮ ಜಾನುವಾರಗಳ ತಡೆ ಚೆಕ್ ಪೋಸ್ಟ್ನಲ್ಲಿ ಎಮ್ಮೆಗಳನ್ನ ವಶಕ್ಕೆ ಪಡೆಯಲಾಗಿದೆ. ಆಂಧ್ರದಿಂದ ಬೆಂಗಳೂರಿಗೆ ಅಕ್ರಮವಾಗಿ ಎಮ್ಮೆಗಳ ಸಾಗಾಟ ಮಾಡ್ತಿದ್ರು. 9 ಎಮ್ಮೆಗಳ ನಂದಿಗಿರಿಧಾಮ ಠಾಣೆ ಪೊಲೀಸರು ರಕ್ಷಣೆ ಮಾಡಿದ್ದು, ಎಮ್ಮೆಗಳನ್ನು ಗೋಶಾಲೆಗೆ ರವಾನೆ ಮಾಡಿದ್ದಾರೆ. ಆಂಧ್ರ ಮೂಲದ ಇಬ್ಬರು ಆರೋಪಿಗಳ ಬಂಧನ ಮಾಡಲಾಗಿದೆ.
Published On - 12:30 pm, Sat, 9 July 22