AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Draupadi Murmu Bangalore Visit ಎನ್ ಡಿಎ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಭಾನುವಾರ ಬೆಂಗಳೂರಿಗೆ ಭೇಟಿ – ಸಮಯ ಬದಲಾವಣೆ

ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಮಾಜಿ ಸಿಎಂ ಬಿ ಎಸ್​ ಯಡಿಯೂರಪ್ಪ, ಬಿಜೆಪಿ ಕರ್ನಾಟಕ ಅಧ್ಯಕ್ಷ ನಳಿನ್ ಕುಮಾರ್​ ಕಟೀಲ್ ಸೇರಿ ಅನೇಕ ಪ್ರಮುಖ ನಾಯಕರು ಸಭೆಯಲ್ಲಿ ಭಾಗಿಯಾಗಲಿದ್ದಾರೆ. ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಅವರು ಸಭೆ ಮುಗಿಸಿ ನಾಳೆಯೆ ದೆಹಲಿಗೆ ವಾಪಸಾಗಲಿದ್ದಾರೆ.

Draupadi Murmu Bangalore Visit ಎನ್ ಡಿಎ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಭಾನುವಾರ ಬೆಂಗಳೂರಿಗೆ ಭೇಟಿ - ಸಮಯ ಬದಲಾವಣೆ
ಭಾನುವಾರ ಬೆಂಗಳೂರಿಗೆ ಆಗಮಿಸಲಿರುವ ಎನ್ ಡಿಎ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು, ಯಾರನ್ನೆಲ್ಲಾ ಭೇಟಿ ಆಗಲಿದ್ದಾರೆ?
TV9 Web
| Edited By: |

Updated on:Jul 09, 2022 | 9:19 PM

Share

ಬೆಂಗಳೂರು: ಭಾರತದ ರಾಷ್ಟ್ರಪತಿ ಸ್ಥಾನಕ್ಕೆ ಇದೇ 18 ರಂದು (July 18th) ಚುನಾವಣೆ ನಡೆಯಲಿದ್ದು, ಎನ್ ಡಿ ಎ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು (Draupadi Murmu) ಅವರು ಪ್ರಚಾರಾರ್ಥವಾಗಿ ನಾಳೆ ಭಾನುವಾರ ಬೆಳಗ್ಗೆ 10 ಗಂಟೆಗೆ ಬೆಂಗಳೂರಿಗೆ ಆಗಮಿಸಲಿದ್ದಾರೆ (2022 Presidential election).

ಶಾಂಗ್ರಿಲಾ ಹೊಟೇಲ್ ಗೆ ಆಗಮಿಸಲಿರುವ ದ್ರೌಪದಿ ಮುರ್ಮು ಅವರನ್ನು ಆದಿವಾಸಿ ಜನಾಂಗದ ಕಲಾ ತಂಡವು ಸಾಂಪ್ರದಾಯಿಕ ನೃತ್ಯದ ಮೂಲಕ ಸ್ವಾಗತಿಸಲಿದೆ. ಎಸ್ ಟಿ ಮೋರ್ಚಾ ನೇತೃತ್ವದಲ್ಲಿ ದ್ರೌಪದಿ ಮುರ್ಮು ಅವರನ್ನು ಅದ್ಧೂರಿಯಾಗಿ ಸ್ವಾಗತ ಕೋರಲು ನಿರ್ಧರಿಸಲಾಗಿದೆ.

  1. ದ್ರೌಪದಿ ಮುರ್ಮು ಬೆಂಗಳೂರು ಪ್ರವಾಸ – ಸಮಯ ಬದಲಾವಣೆ ತಾಜಾ ಮಾಹಿತಿ ಪ್ರಕಾರ ಬಿಜೆಪಿ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಅವರ ಬೆಂಗಳೂರು ಪ್ರವಾಸ ಕಾರ್ಯಕ್ರಮದಲ್ಲಿ ಸ್ವಲ್ಪ ಸಮಯ ಬದಲಾವಣೆಯಾಗಿದೆ. ನಾಳೆ ಮಧ್ಯಾಹ್ನ 3.30ಕ್ಕೆ HAL ಏರ್​ಪೋರ್ಟ್​ ಗೆ ದ್ರೌಪದಿ ಆಗಮಿಸಲಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಕಟೀಲು ಮತ್ತು ಸಿಎಂ ಬೊಮ್ಮಾಯಿ ಸ್ವಾಗತಿಸಲಿದ್ದಾರೆ. HAL​ನಿಂದ ನೇರವಾಗಿ ಶಾಂಘ್ರಿಲಾ ಹೋಟೆಲ್​ಗೆ ತೆರಳುವ ದ್ರೌಪದಿ ಅವರು ಸಂಜೆ 4ಕ್ಕೆ ಶಾಂಘ್ರಿಲಾ ಹೋಟೆಲ್​ನಲ್ಲಿ ಶಾಸಕರು ಮತ್ತು ಸಂಸದರ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಮಹಿಳಾ ಮೋರ್ಚಾ ಟೀಮ್ ನಿಂದ ಸಾವಿರಾರು ಕಾರ್ಯಕರ್ತರನ್ನು ಸೇರಿಸಲು ಆಲೋಚಿಸಲಾಗಿದೆ. ಸಂಜೆ ಐದು ಗಂಟೆಗೆ ಬಿಜೆಪಿ ಶಾಸಕರು ಮತ್ತು ಸಂಸದರ ಸಭೆ ನಡೆಯಲಿದೆ. ಈ ಸಭೆಯಲ್ಲಿ ಭಾಗಿಯಾಗಲಿರುವ ಮುರ್ಮು ಚುನಾವಣೆಯಲ್ಲಿ ತಮ್ಮ ಪರ ಮತ ಚಲಾಯಿಸಲು ಕೋರಲಿದ್ದಾರೆ.

ಸಭೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಮಾಜಿ ಸಿಎಂ ಬಿ ಎಸ್​ ಯಡಿಯೂರಪ್ಪ, ಬಿಜೆಪಿ ಕರ್ನಾಟಕ ಅಧ್ಯಕ್ಷ ನಳಿನ್ ಕುಮಾರ್​ ಕಟೀಲ್ ಸೇರಿ ಅನೇಕ ಪ್ರಮುಖ ನಾಯಕರು ಸಭೆಯಲ್ಲಿ ಭಾಗಿಯಾಗಲಿದ್ದಾರೆ. ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಅವರು ಸಭೆ ಮುಗಿಸಿ ನಾಳೆಯೆ ದೆಹಲಿಗೆ ವಾಪಸಾಗಲಿದ್ದಾರೆ. ಈ ಮಧ್ಯೆ, ಜೆಡಿಎಸ್ ವರಿಷ್ಠ ಹೆಚ್ ಡಿ ದೇವೆಗೌಡ ಅವರನ್ನು ಎನ್ ಡಿ ಎ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಭೇಟಿ ಆಗಲಿದ್ದಾರಾ ಎಂಬ ಕುತೂಹಲ ಮೂಡಿದೆ.

Published On - 4:20 pm, Sat, 9 July 22

ಚೆಂಡಿಲ್ಲದೆ ಸ್ಟಂಪ್ ಔಟ್: ಪಾಕ್ ವಿಕೆಟ್ ಕೀಪರ್​ನ ಮೋಸದಾಟ ಬಯಲು!
ಚೆಂಡಿಲ್ಲದೆ ಸ್ಟಂಪ್ ಔಟ್: ಪಾಕ್ ವಿಕೆಟ್ ಕೀಪರ್​ನ ಮೋಸದಾಟ ಬಯಲು!
ಈ ವಿಷಯ ಗೊತ್ತಾದ್ರೆ ಚರ್ಕವರ್ತಿಯನ್ನು ಹತ್ತಿರಕ್ಕೂ ಸೇರಿಸಿಕೊಳ್ಳಲ್ಲ; ಮಂಜು
ಈ ವಿಷಯ ಗೊತ್ತಾದ್ರೆ ಚರ್ಕವರ್ತಿಯನ್ನು ಹತ್ತಿರಕ್ಕೂ ಸೇರಿಸಿಕೊಳ್ಳಲ್ಲ; ಮಂಜು
ಫ್ಲೈಓವರ್ ಮೇಲೆ ಕಾರು ಚಾಲಕನ ರ‍್ಯಾಶ್ ಡ್ರೈವಿಂಗ್, ಬೈಕ್ ಸವಾರ ಜಸ್ಟ್ ಮಿಸ್
ಫ್ಲೈಓವರ್ ಮೇಲೆ ಕಾರು ಚಾಲಕನ ರ‍್ಯಾಶ್ ಡ್ರೈವಿಂಗ್, ಬೈಕ್ ಸವಾರ ಜಸ್ಟ್ ಮಿಸ್
ಸ್ತ್ರೀಯರಿಗೆ ಕಾಲ ಹೆಬ್ಬೆರಳಿಗಿಂತ ಉದ್ದದ ಬೆರಳುಗಳಿದ್ರೆ ಏನರ್ಥ?
ಸ್ತ್ರೀಯರಿಗೆ ಕಾಲ ಹೆಬ್ಬೆರಳಿಗಿಂತ ಉದ್ದದ ಬೆರಳುಗಳಿದ್ರೆ ಏನರ್ಥ?
ಇಂದು ಈ ರಾಶಿಯವರಿಗೆ ಧನ ಯೋಗ!
ಇಂದು ಈ ರಾಶಿಯವರಿಗೆ ಧನ ಯೋಗ!
ಜಾಗಕ್ಕಾಗಿ ಹಠ ಹಿಡಿದಿರುವುದು ಯಾಕೆ? ಅಸಲಿ ಕಾರಣ ತಿಳಿಸಿದ ಯಶ್ ತಾಯಿ ಪುಷ್ಪಾ
ಜಾಗಕ್ಕಾಗಿ ಹಠ ಹಿಡಿದಿರುವುದು ಯಾಕೆ? ಅಸಲಿ ಕಾರಣ ತಿಳಿಸಿದ ಯಶ್ ತಾಯಿ ಪುಷ್ಪಾ
ಬೈಕ್ ಶೋರೂಂನೊಳಗೆ ನುಗ್ಗಿದ ಕಾಡುಕೋಣ; ಶಾಕಿಂಗ್ ವಿಡಿಯೋ ವೈರಲ್
ಬೈಕ್ ಶೋರೂಂನೊಳಗೆ ನುಗ್ಗಿದ ಕಾಡುಕೋಣ; ಶಾಕಿಂಗ್ ವಿಡಿಯೋ ವೈರಲ್
ಚಾರ್ಮಾಡಿ ಅರಣ್ಯದಲ್ಲಿ ಬೆಂಕಿ: ಹೊತ್ತಿ ಉರಿದ ವನ್ಯಸಂಪತ್ತು
ಚಾರ್ಮಾಡಿ ಅರಣ್ಯದಲ್ಲಿ ಬೆಂಕಿ: ಹೊತ್ತಿ ಉರಿದ ವನ್ಯಸಂಪತ್ತು
ಚಕ್ರವರ್ತಿ ಚಂದ್ರಚೂಡ್ ವಿಡಿಯೋ ನೋಡಿ ಅಸಹ್ಯ ಆಯ್ತು: ನಟಿ ಪ್ರಿಯಾ ಹಾಸನ್
ಚಕ್ರವರ್ತಿ ಚಂದ್ರಚೂಡ್ ವಿಡಿಯೋ ನೋಡಿ ಅಸಹ್ಯ ಆಯ್ತು: ನಟಿ ಪ್ರಿಯಾ ಹಾಸನ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್