ಇಂದು ಕನಕಪುರ ದೊಡ್ಡಕಲ್ಲಸಂದ್ರಕ್ಕೆ ರಾಷ್ಟ್ರಪತಿ ಭೇಟಿ; ಟ್ರಾಫಿಕ್ ತಪ್ಪಿಸಲು ವಾಹನ ಸವಾರರಿಗೆ ಈ ಮಾರ್ಗಗಳಲ್ಲಿ ಸಂಚಾರಕ್ಕೆ ಸೂಚನೆ

| Updated By: sandhya thejappa

Updated on: Jun 14, 2022 | 9:09 AM

ರಾಷ್ಟ್ರಪತಿ ರಾಮನಾಥ್ ಕೋವಿಂದ್ ಆಗಮಿಸುತ್ತಿರುವುದರಿಂದ ಕನಕಪುರ ರಸ್ತೆಯಲ್ಲಿರುವ ಎಲ್ಲಾ ಅಂಗಡಿಗಳನ್ನು ಬೆಳಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಮುಚ್ಚುವಂತೆ ತಿಳಿಸಲಾಗಿದೆ.

ಇಂದು ಕನಕಪುರ ದೊಡ್ಡಕಲ್ಲಸಂದ್ರಕ್ಕೆ ರಾಷ್ಟ್ರಪತಿ ಭೇಟಿ; ಟ್ರಾಫಿಕ್ ತಪ್ಪಿಸಲು ವಾಹನ ಸವಾರರಿಗೆ ಈ ಮಾರ್ಗಗಳಲ್ಲಿ ಸಂಚಾರಕ್ಕೆ ಸೂಚನೆ
ಬೆಂಗಳೂರು ಟ್ರಾಫಿಕ್ (ಸಂಗ್ರಹ ಚಿತ್ರ)
Follow us on

ಬೆಂಗಳೂರು: ರಾಜ್ಯಕ್ಕೆ ಆಗಮಿಸಿರುವ ರಾಷ್ಟ್ರಪತಿ ರಾಮನಾಥ್ ಕೋವಿಂದ್ (Ram Nath Kovind) ಇಂದು (ಜೂನ್ 14) ಕನಕಪುರ (Kanakapura) ರಸ್ತೆಯ ದೊಡ್ಡಕಲ್ಲಸಂದ್ರಕ್ಕೆ ಭೇಟಿ ನೀಡುತ್ತಾರೆ. ಈ ಹಿನ್ನೆಲೆ ಕನಕಪುರ ರಸ್ತೆಯಲ್ಲಿ ಟ್ರಾಫಿಕ್ ಅಲರ್ಟ್ ಮಾಡಲಾಗಿದೆ. ಬೆಳಗ್ಗೆ 11.30ಕ್ಕೆ ಸುಮಾರಿಗೆ ಇಸ್ಕಾನ್ ದೇವಸ್ಥಾನ ಉದ್ಘಾಟನಾ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ಕೋವಿಂದ್ ಭಾಗಿಯಾಗುತ್ತಾರೆ. ಹೀಗಾಗಿ ಈ ಮಾರ್ಗದ ಹಲವೆಡೆ ಟ್ರಾಫಿಕ್ ಜಾಮ್ ತಪ್ಪಿಸಲು ಬೇರೆ ಮಾರ್ಗಗಳಲ್ಲಿ ವಾಹನ ಸಂಚಾರ ಮಾಡುವುದಕ್ಕೆ ಸೂಚನೆ ನೀಡಲಾಗಿದೆ.

ಬೆಳಗ್ಗೆ 10.15ರಿಂದ 11ರವರೆಗೆ ಕ್ವೀನ್ಸ್ ರಸ್ತೆ, ವಿಠ್ಠಲ್ ಮಲ್ಯ ರಸ್ತೆ, ಆರ್ಆರ್ಎಂಆರ್ ರಸ್ತೆ, ಎನ್.ಆರ್.ವೃತ್ತ, ದೇವಾಂಗ, ಲಾಲ್ಬಾಗ್ ರಸ್ತೆ, ಕೃಂಬಿಗಲ್ ರಸ್ತೆ, ಸೌತ್ಎಂಡ್ ಸರ್ಕಲ್, ಬನಶಂಕರಿ, ಸಾರಕ್ಕಿ, ಕೋಣನಕುಂಟೆ ಕ್ರಾಸ್, ದೊಡ್ಡಕಲ್ಲಸಂದ್ರ, ಇಸ್ಕಾನ್ ದೇವಸ್ಥಾನ ರಸ್ತೆ ಮಾರ್ಗವಾಗಿ ಸಂಚರಿಸಲು ವಾಹನ ಸವಾರರಿಗೆ ಸೂಚನೆ ನೀಡಲಾಗಿದೆ.

ರಾಷ್ಟ್ರಪತಿಗಳು ಬೆಂಗಳೂರಿಗೆ ವಾಪಸ್ ಆಗುವ ವೇಳೆ ಅಂದರೆ ಸಮಯ ಬೆಳಗ್ಗೆ 11.45ರಿಂದ ಮಧ್ಯಾಹ್ನ 12.45ರವರೆಗೆ ಮತ್ತೆ ಸಂಚಾರ ಮಾರ್ಗ ಬದಲಾಗುತ್ತದೆ. ವಾಹನ ಸವಾರರು ಕನಕಪುರ ರಸ್ತೆ, ಸೌತ್ಎಂಡ್ ಸರ್ಕಲ್, ಜೆಸಿ ರಸ್ತೆ, ಟೌನ್ಹಾಲ್, ಕಾರ್ಪೊರೇಷನ್ ವೃತ್ತ, ಕಸ್ತೂರಬಾ ರಸ್ತೆ, ಅನಿಲ್ ಕುಂಬ್ಳೆ ಜಂಕ್ಷನ್, ಬೊಆರ್ವಿ, ಹಳೆಯ ವಿಮಾನ ನಿಲ್ದಾಣ ರಸ್ತೆಯಲ್ಲಿ ಸಂಚಾರ ಮಾಡಬೇಕು.

ಇದನ್ನೂ ಓದಿ
ಅತಿಥಿಯಾಗಿ ತೆರಳಿದ ಊರ್ವಶಿ ರೌಟೇಲಾಗೆ ಭಾರೀ ಮುಜುಗರ; ದೊಡ್ಡದಾಗಿ ಪಂತ್..ಪಂತ್.. ಎಂದು ಕೂಗಿದ ಫ್ಯಾನ್ಸ್​
Big Success: ಅಮರನಾಥ ಯಾತ್ರೆ ಧ್ವಂಸಗೊಳಿಸಲು ಪಾಕಿಸ್ತಾನದಿಂದ ಬಂದಿದ್ದ ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ಭದ್ರತಾ ಸಿಬ್ಬಂದಿ
International Yoga Day 2022: 22,850 ಅಡಿ ಎತ್ತರದಲ್ಲಿ ಯೋಗಾಭ್ಯಾಸ ಮಾಡಿದ ITBP ಸಿಬ್ಬಂದಿಗಳು!
IND vs SA: ಮೂರನೇ ಟಿ20 ಪಂದ್ಯಕ್ಕೆ ಟೀಮ್ ಇಂಡಿಯಾ ಮಾಡಿದೆ ಮಾಸ್ಟರ್ ಪ್ಲಾನ್: ಏನದು ನೋಡಿ

ಇದನ್ನೂ ಓದಿ: Cholesterol: ನಿಮ್ಮ ದೇಹದಲ್ಲಿ ಕೊಬ್ಬು ಹೆಚ್ಚಾದರೆ ನಿಮ್ಮ ಕಣ್ಣಿನಲ್ಲೇ ತಿಳಿಯುತ್ತೆ ಹೇಗಂತೀರಾ?

ಇನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಆಗಮಿಸುತ್ತಿರುವುದರಿಂದ ಕನಕಪುರ ರಸ್ತೆಯಲ್ಲಿರುವ ಎಲ್ಲಾ ಅಂಗಡಿಗಳನ್ನು ಬೆಳಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಮುಚ್ಚುವಂತೆ ತಿಳಿಸಲಾಗಿದೆ.

ತಾಜಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 8:36 am, Tue, 14 June 22