ಅಕ್ಷರ ಬರೆಯಬೇಕಿದ್ದ ಕೈಯಲ್ಲಿ ಮಲ-ಮೂತ್ರ ಗುಂಡಿ ಕ್ಲೀನ್ ಮಾಡಿಸಿದ ಶಿಕ್ಷಕರು..!
ಸರ್ಕಾರಿ ಶಾಲೆಯಲ್ಲಿ ಶೌಚಾಲಯ ಕಟ್ಟಿಕೊಂಡರೇ ಕ್ಲೀನ್ ಮಾಡುವವರನ್ನ ಕರೆಯಿಸಿ ಕ್ಲೀನ್ ಮಾಡಿಸುತ್ತಾರೆ. ಆದರೆ ಸಿಲಿಕಾನ್ ಸಿಟಿ ಬೆಂಗಳೂರಿನ ಸರ್ಕಾರಿ ಶಾಲೆವೊಂದರಲ್ಲಿ ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಶಿಕ್ಷಕರೇ ಮಕ್ಕಳ ಕೈಲ್ಲಿ ಮಲಮೂತ್ರ ಗುಂಡಿಯನ್ನು ಕ್ಲೀನ್ ಮಾಡಿಸಿದ್ದಾರೆ. ಸಣ್ಣ ಮಕ್ಕಳ ಕೈಯಲ್ಲಿ ಕ್ಲೀನ್ ಮಾಡಿಸಿರುವ ಎಕ್ಸ್ಕೂಸಿವ್ ವಿಡಿಯೋ, ಪೋಟೋಗಳು ಟಿವಿ9ಗೆ ಲಭ್ಯವಾಗಿದೆ.

ಬೆಂಗಳೂರು, (ಮಾರ್ಚ್ 21): ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳಿಸುವುದು ವಿದ್ಯಾವಂತರಾಗಲಿ,ದೇಶಕ್ಕೆ ಒಳ್ಳೆಯ ಪ್ರಜೆಗಳಾಗಲಿ, ಸಣ್ಣ ವಯಸ್ಸಿನಲ್ಲಿ ನಮ್ಮ ಮಕ್ಕಳು ಕೂಲಿ ನಾಲಿ ಮಾಡೋದು ಬೇಡ ನಾನಾ ಕನಸು ಕಟ್ಟಿಕೊಂಡು ಶಾಲೆ ಕಳುಹಿಸುತ್ತಾರೆ. ಆದರೆ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ವಿಶ್ವಪ್ರಿಯ ಲೇಔಟ್, ಬೇಗೂರು ಮುಖ್ಯ ರಸ್ತೆಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಶಿಕ್ಷಕರು ವಿದ್ಯಾರ್ಥಿಗಳಿಂದಲೇ ಮಲ, ಮೂತ್ರ ವಿಸರ್ಜನೆ ಮಾಡುವ ಶೌಚಾಲಯದ ಗುಂಡಿಯನ್ನು ಕ್ಲೀಸ್ ಮಾಡಿಸಿರುವ ಘಟನೆ ನಡೆದಿದೆ.
ಸಣ್ಣ ಮಕ್ಕಳ ಕೈಯಲ್ಲಿ ಕ್ಲೀನ್ ಮಾಡಿಸಿರುವ ಎಕ್ಸ್ಕೂಸಿವ್ ವಿಡಿಯೋ, ಪೋಟೋಗಳು ಟಿವಿ9ಗೆ ಲಭ್ಯವಾಗಿದೆ. ಈ ಬಗ್ಗೆ ಶಾಲೆಯ ಮಕ್ಕಳನ್ನು ಕ್ಲೀನ್ ಮಾಡಲು ಯಾರು ಹೇಳಿದ್ದು ಮತ್ತು ಟಿವಿ9ಗೆ ಲಭ್ಯವಾಗಿರುವ ವಿಡಿಯೋದಲ್ಲಿ ಕೇಳಿಸುತ್ತಿರುವ ಧ್ವನಿ ಯಾರದ್ದು ಎಂದು ವಿಚಾರಿಸಿದಾಗ ಶಾಲೆಯ ಮಕ್ಕಳು ಇದು ನಮ್ಮ ಶಾಲೆಯ ಪಿಟಿ ಟೀಚರ್ ಸುಮಿತ್ರ ಮೇಡಂ ಅವರದ್ದು ಅಂತಾರೇ.
ಇದನ್ನೂ ಓದಿ: ಅಂಗನವಾಡಿಯಲ್ಲಿ ಮಗು ಹಠ ಮಾಡುತ್ತೆಂದು ಕೈಗೆ ಬರೆ: ಡೈಪರ್ಗೆ ಖಾರದಪುಡಿ ಹಾಕಿ ವಿಕೃತಿ!
ಈ ಬಗ್ಗೆ ಸಾಮಾಜಿಕ ಹೋರಾಟಗಾರ ನಾಗೇಶ್ ಪ್ರತಿಕ್ರಿಯಿಸಿ, ಶಾಲೆಯ ಸುಣ್ಣಬಣ್ಣ ಸ್ವಚ್ಚತೆಗಾಗಿ ಸರ್ಕಾರ ಹಣ ನೀಡುತ್ತದೆ. ಅದನ್ನು ಬಳಕೆ ಮಾಡಬೇಕಿತ್ತು. ಆದರೆ ಸಣ್ಣ ಮಕ್ಕಳ ಕೈಯಲ್ಲಿ ಕ್ಲೀನ್ ಮಾಡಿಸಿದ್ದು ನಿಜಕ್ಕೂ ನೋವಿನ ಸಂಗತಿ. ಈ ಶಾಲೆಯ ಹೆಡ್ ಮೇಡಂ ಮತ್ತು ಪಿಟಿ ಟೀಚರನ್ನ ಕೂಡಲೇ ಸಸ್ಪೆಂಡ್ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಇನ್ನೂ ಟಿವಿ9 ಸ್ಕೂಲ್ ಗೆ ಭೇಟಿ ನೀಡಿ ಈ ಶಾಲೆಯ ಹೆಡ್ ಮೇಡಂ ಸಾಕಮ್ಮ ಅವರನ್ನು ಕೇಳಿದ್ರೆ, ಸಾಕಷ್ಟು ದಿನಗಳಿಂದ ಶೌಚಾಲಯದ ಗುಂಡಿ ಕಟ್ಟಿಕೊಂಡಿತ್ತು ಸಾಕಷ್ಟು ಬಾರಿ ದೂರು ನೀಡಿದರೂ ಯಾರು ಕ್ಲೀನ್ ಮಾಡಲಿಲ್ಲ. ಹಾಗಾಗಿ ನಾನು ನಮ್ಮ ಶಾಲೆಯ ಶಿಕ್ಷಕರಿಗೆ ಕ್ಲೀನ್ ಮಾಡಿಸಲು ಹೇಳಿದೆ. ಆದರೆ ಅವರು ಶಾಲೆಯ ಮಕ್ಕಳ ಕೈಯಲ್ಲಿ ಕ್ಲೀನ್ ಮಾಡಿಸಿದ್ದಾರೆ ಎಂದಿದ್ದಾರೆ.
ಪಿಟಿ ಟೀಚರ್ ಸುಮಿತ್ರ ಅವರನ್ನು ಕೇಳಿದ್ರೆ ಹೆಡ್ ಮೇಡಂ ಕ್ಲೀನ್ ಮಾಡಿಸಲು ಹೇಳಿದ್ರು, ಹಾಗಾಗಿ ನಮ್ಮ ಶಾಲೆಯ ಶಿಕ್ಷಕರು ಸೇರಿಯೇ ಮಕ್ಕಳ ಕೈಯಲ್ಲಿ ಕ್ಲೀನ್ ಮಾಡಿಸಿದ್ದೇವೆ. ಆದರೆ ವಿಡಿಯೋದಲ್ಲಿ ನನ್ನ ಆಡಿಯೋ ಮಾತ್ರ ಕೇಳಿಸಿದೆ ನನ್ನಿಂದ ತಪ್ಪಾಗಿದೆ ಕ್ಷಮಿಸಿಬಿಡಿ ಅಂತಾರೇ.
ಒಟ್ಟಿನಲ್ಲಿ ಶಿಕ್ಷಣ ಇಲಾಖೆ ಶಾಲೆಯ ನಿರ್ವಹಣೆಗಾಗಿ ಪ್ರತಿವರ್ಷ ಇಂತಿಷ್ಟು ಎಂದು ಅನುದಾನ ಬಿಡುಗಡೆ ಮಾಡುತ್ತದೆ. ಆದರೆ ಆ ಹಣವನ್ನು ಗುಳುಂ ಮಾಡಿ ಆ ಪುಟ್ಟ ಮಕ್ಕಳ ಕೈಯಲ್ಲಿ ಶೌಚಾಲಯದ ಗುಂಡಿ ಕ್ಲೀನ್ ಮಾಡಿಸಿದ ಶಿಕ್ಷಕರಿಗೆ ನಿಜವಾಗಿಯೂ ನಾಚಿಕೆ ಆಗಬೇಕು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:59 pm, Fri, 21 March 25