AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾರತಹಳ್ಳಿ ಸೇತುವೆ ಬಳಿ ಸಂಚಾರ ದಟ್ಟಣೆ: ಪರ್ಯಾಯ ಮಾರ್ಗ ಸೂಚಿಸಿದ ಟ್ರಾಫಿಕ್​ ಪೊಲೀಸ್​

Traffic Advisory: ಬೆಂಗಳೂರಿನ ಮಾರತಹಳ್ಳಿ ಸೇತುವೆ ಪ್ರತಿನಿತ್ಯ ಸಂಚಾರ ದಟ್ಟಣೆಯಿಂದ ಕೂಡಿರುತ್ತದೆ. ಈ ಸಂಚಾರ ದಟ್ಟಣೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಹೆಚ್​ಎಎಲ್​ ವಿಮಾನ ನಿಲ್ದಾಣ ಸಂಚಾರ ಪೊಲೀಸರು ವಾಹನ ಸವಾರರಿಗೆ ಪರ್ಯಾಯ ಮಾರ್ಗ ಸೂಚಿಸಿದ್ದಾರೆ. ಪರ್ಯಾಯ ಮಾರ್ಗ ಮಾಹಿತಿ ಇಲ್ಲಿದೆ.

ಮಾರತಹಳ್ಳಿ ಸೇತುವೆ ಬಳಿ ಸಂಚಾರ ದಟ್ಟಣೆ: ಪರ್ಯಾಯ ಮಾರ್ಗ ಸೂಚಿಸಿದ ಟ್ರಾಫಿಕ್​ ಪೊಲೀಸ್​
ಸಾಂದರ್ಭಿಕ ಚಿತ್ರ
ವಿವೇಕ ಬಿರಾದಾರ
|

Updated on: Oct 04, 2024 | 7:29 AM

Share

ಬೆಂಗಳೂರು, ಅಕ್ಟೋಬರ್​ 04: ವರ್ತೂರು ರಸ್ತೆಯ ಮಾರತಹಳ್ಳಿ ಸೇತುವೆ ಜಂಕ್ಷನ್‌ನಲ್ಲಿ (Marathahalli Bridge Junction) ಸಂಚಾರ ದಟ್ಟಣೆ ಹೆಚ್ಚಾಗಿದೆ. ಈ ಸಂಚಾರ ದಟ್ಟಣೆಯನ್ನು ನಿಯಂತ್ರಿಸಲು ಹೆಚ್​ಎಎಲ್​ ವಿಮಾನ ನಿಲ್ದಾಣ ಸಂಚಾರ ಪೊಲೀಸರು (Traffic Police) ಪರ್ಯಾಯ ವ್ಯವಸ್ಥೆ ಮಾಡಿದ್ದಾರೆ. ಗುರುವಾರದಿಂದಲೇ (ಅ.03) ಈ ಸಂಚಾರ ಬದಲಾವಣೆ ಜಾರಿಗೆ ಬಂದಿದೆ.

ಹೊರವರ್ತುಲ ರಸ್ತೆ ಕೆ.ಎಲ್.ಎಂ ಸರ್ವೀಸ್ ರಸ್ತೆಯಿಂದ ಕುಂದಲಹಳ್ಳಿ ಗೇಟ್ ಕಡೆಗೆ ಸಂಚರಿಸುವ ವಾಹನಗಳನ್ನು ಪ್ರತಿನಿತ್ಯ ಬೆಳಗ್ಗೆ 07.00 ಗಂಟೆಯಿಂದ 11.00 ಗಂಟೆಯವರೆಗೆ ಮತ್ತು ಸಂಜೆ 04.00 ಗಂಟೆಯಿಂದ ರಾತ್ರಿ 10.00 ಗಂಟೆಯವರೆಗೆ ನಿರ್ಬಂಧಿಸಲಾಗಿದೆ.

ಇದನ್ನೂ ಓದಿ: ಹೆಣ್ಣೂರು ಜಂಕ್ಷನ್‌ನಿಂದ ಶಿವಾಜಿನಗರ ಕಡೆಗೆ ಹೋಗುವ ರಸ್ತೆಯಲ್ಲಿ 2 ತಿಂಗಳು ವಾಹನ ಸಂಚಾರ ಬಂದ್​

ಪರ್ಯಾಯ ಮಾರ್ಗ

ಹೊರವರ್ತುಲ ರಸ್ತೆ ಕೆ.ಎಲ್.ಎಂ ಸರ್ವೀಸ್ ರಸ್ತೆ ಕಡೆಯಿಂದ ಕುಂದಲಹಳ್ಳಿ ಗೇಟ್ ಕಡೆಗೆ ಸಂಚರಿಸುವ ಲಘು ವಾಹನ ಸವಾರರು ಆಕಾಶ್ ವಿಹಾರ್ ವಸತಿ ಗೃಹದ ಮುಂಭಾಗದಲ್ಲಿ ‘ಯು’ ಟರ್ನ್ ಪಡೆದು ಮಾರತಹಳ್ಳಿ ಬ್ರಿಡ್ಜ್ ಮುಖಾಂತರ ಕುಂದಲಹಳ್ಳಿ ಗೇಟ್ ಕಡೆಗೆ ಸಂಚರಿಸಬಹುದಾಗಿದೆ.

ಭಾರಿ ವಾಹನ ಚಾಲಕರು ತುಳಸಿ ಟಾಕೀಸ್ ಜಂಕ್ಷನ್‌ನಲ್ಲಿ ‘ಯು’ ಟರ್ನ್ ಪಡೆದು ಮಾರತಹಳ್ಳಿ ಬ್ರಿಡ್ಜ್, ಮುಖಾಂತರ ಕುಂದಲಹಳ್ಳಿ ಗೇಟ್ ಕಡೆಗೆ ಸಂಚರಿಸಬಹುದಾಗಿದೆ.

ಇದೇ ಸಮಯದಲ್ಲಿ ಪಾದಚಾರಿಗಳು ರಸ್ತೆ ದಾಟುವುದನ್ನು ಸಹ ನಿರ್ಬಂಧಿಸಲಾಗಿದೆ. ವರ್ತೂರು ರಸ್ತೆ ಮತ್ತು ಹಳೆ ವಿಮಾನ ನಿಲ್ದಾಣ ರಸ್ತೆ ದಾಟಲು ಪಾದಚಾರಿಗಳು ಸ್ಕೈವಾಕ್ ಅನ್ನು ಬಳಸಬಹುದಾಗಿದೆ ಎಂದು ಬೆಂಗಳೂರು ಸಂಚಾರ ಪೊಲೀಸರು ಮಾಧ್ಯಮ ಪ್ರಕಟಣೆ ಹೊರಟಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ