ಐಎಎಸ್, ಕೆಎಎಸ್ ಸ್ಪರ್ಧಾ ಪರೀಕ್ಷೆಗಳಿಗಾಗಿ ತರಬೇತಿ: ಆಸಕ್ತರಿಗಾಗಿ ಇಲ್ಲಿದೆ ಸರಕಾರಿ ಮಾಹಿತಿ

| Updated By: preethi shettigar

Updated on: Mar 21, 2022 | 8:48 PM

ಆಸಕ್ತರು ಮಾರ್ಚ್​ 29 ರೊಳಗಾಗಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಮುಕ್ತಗಂಗೋತ್ರಿ ಆವರಣದಲ್ಲಿರುವ ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ಕಚೇರಿಯಲ್ಲಿ ಬೆಳಗ್ಗೆ 10.00 ಗಂಟೆಯಿಂದ ಸಂಜೆ 5.00 ಗಂಟೆಯವರೆಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದೆಂದು ವಿಶ್ವವಿದ್ಯಾನಿಲಯದ ಕುಲಸಚಿವರಾದ ಪ್ರೊ. ಆರ್. ರಾಜಣ್ಣ ಅವರು  ತಿಳಿಸಿದ್ದಾರೆ. 

ಐಎಎಸ್, ಕೆಎಎಸ್ ಸ್ಪರ್ಧಾ ಪರೀಕ್ಷೆಗಳಿಗಾಗಿ ತರಬೇತಿ: ಆಸಕ್ತರಿಗಾಗಿ ಇಲ್ಲಿದೆ ಸರಕಾರಿ ಮಾಹಿತಿ
ಐಎಎಸ್, ಕೆಎಎಸ್
Follow us on

ಬೆಂಗಳೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ವತಿಯಿಂದ ಕೇಂದ್ರ ಲೋಕಸೇವಾ ಆಯೋಗದವರು ನಡೆಸಲಿರುವ ಐ.ಎ.ಎಸ್(IAS), ಐ.ಪಿ.ಎಸ್(IPS), ಪರೀಕ್ಷೆಗೆ ಹಾಗೂ ಕರ್ನಾಟಕ ಲೋಕಸೇವಾ ಆಯೋಗದವರು ನಡೆಸಲಿರುವ ಕೆ.ಎ.ಎಸ್(KAS) ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅನುಕೂಲವಾಗುವ ತರಬೇತಿಯನ್ನು ನೀಡಲು ನಿರ್ಧರಿಸಲಾಗಿದೆ.

ಆಸಕ್ತರು ಮಾರ್ಚ್​ 29 ರೊಳಗಾಗಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಮುಕ್ತಗಂಗೋತ್ರಿ ಆವರಣದಲ್ಲಿರುವ ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ಕಚೇರಿಯಲ್ಲಿ ಬೆಳಗ್ಗೆ 10.00 ಗಂಟೆಯಿಂದ ಸಂಜೆ 5.00 ಗಂಟೆಯವರೆಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದೆಂದು ವಿಶ್ವವಿದ್ಯಾನಿಲಯದ ಕುಲಸಚಿವರಾದ ಪ್ರೊ. ಆರ್. ರಾಜಣ್ಣ ಅವರು  ತಿಳಿಸಿದ್ದಾರೆ.

ಹೆಚ್ಚಿನ ವಿವರಗಳಿಗೆ ದೂರವಾಣಿ ಸಂಖ್ಯೆ 0821-2515944 ನ್ನು ಸಂಪರ್ಕಿಸಬಹುದಾಗಿದೆ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಮಾರ್ಚ್​ 23 ರಂದು ಸಂಗೀತ, ನೃತ್ಯ ಹಾಗೂ ತಾಳವಾದ್ಯ ಪರೀಕ್ಷೆಗಳ ಫಲಿತಾಂಶ  ಪ್ರಕಟ

ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು ಡಿಸೆಂಬರ್ 2021 ರ ಮಾಹೆಯಲ್ಲಿ ನಡೆದ ವಿಶೇಷ ಸಂಗೀತ, ನೃತ್ಯ ಹಾಗೂ ತಾಳವಾದ್ಯ ಪರೀಕ್ಷೆಗಳ ಫಲಿತಾಂಶವನ್ನು ಮಾರ್ಚ್​ 23 ರಂದು ಅಪರಾಹ್ನ 4 ಗಂಟೆಗೆ ಮಂಡಳಿಯ ಜಾಲತಾಣ https://sslc.karnataka.gov.in ದಲ್ಲಿ ಹಾಗೂ ಪರೀಕ್ಷಾ ಕೇಂದ್ರದ ಲಾಗಿನ್‍ನಲ್ಲಿ ಮಾರ್ಚ 24 ರಂದು ಪ್ರಕಟಿಸಲಾಗುವುದು. ಅಭ್ಯರ್ಥಿಗಳು ಇದರ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಸೂಚಿಸಲಾಗಿದೆ.

ಫಲಿತಾಂಶವನ್ನು ವೆಬ್‍ಸೈಟ್‍ನಲ್ಲಿ ಡೌನ್‍ಲೋಡ್ ಮಾಡಿಕೊಂಡು ಆಯಾ ಪರೀಕ್ಷಾ ಕೇಂದ್ರದ ಮುಖ್ಯಸ್ಥರು ಪ್ರಕಟಣಾ ಫಲಕದಲ್ಲಿ ಪ್ರಕಟಿಸಲು ಸೂಚಿಸಲಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಲಾಗಿದೆ.

ಇದನ್ನೂ ಓದಿ:

CBSE Results: ಸಿಬಿಎಸ್​ಇ 12ನೇ ತರಗತಿಯ 1ನೇ ಟರ್ಮ್ ಫಲಿತಾಂಶ ಪ್ರಕಟ; ರಿಸಲ್ಟ್​ ನೋಡಲು ಹೀಗೆ ಮಾಡಿ

Sushil Kumar: ತಿಹಾರ್ ಜೈಲಿನಲ್ಲಿರುವ ಒಲಿಂಪಿಕ್ ಪದಕ ವಿಜೇತ ಸುಶೀಲ್ ಕುಮಾರ್​ರಿಂದ ಕೈದಿಗಳಿಗೆ ಫಿಟ್‌ನೆಸ್ ತರಬೇತಿ