AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Tv9 Education Summit: ಎರಡನೇ ದಿನಕ್ಕೆ ಕಾಲಿಟ್ಟ ಎಜುಕೇಷನ್ ಎಕ್ಸ್ ಪೋಗೆ ಭರ್ಜರಿ ರೆಸ್ಪಾನ್ಸ್, ಇ ಬೈಕ್ ಗೆದ್ದ ಗಾನವಿ

ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ಜೂನ್ 09ರಂದು ಆರಂಭವಾದ ಈ ಎಕ್ಸ್ ಪೋ ಮೂರು ದಿನಗಳ ಕಾಲ‌ ನಡೆಯಲಿದ್ದು, ಒಂದೇ ಸೂರಿನಡಿ 80 ಕ್ಕೂ ಹೆಚ್ಚು ದೇಶ ವಿದೇಶದ ವಿದ್ಯಾಸಂಸ್ಥೆಗಳು ಎಕ್ಸ್ ಪೋದಲ್ಲಿ ಭಾಗಿ ಆಗಿವೆ.

ಆಯೇಷಾ ಬಾನು
|

Updated on: Jun 10, 2023 | 2:59 PM

Share

ಬೆಂಗಳೂರು: TV9 ನೆಟ್ ವರ್ಕ್ ಆಯೋಜನೆ ಮಾಡಿರುವ ಏಳನೇ ಆವೃತ್ತಿಯ ಎಜುಕೇಷನ್ ಎಕ್ಸ್ ಪೋ(TV9 Education Expo 2023) ಎರಡನೇ ದಿನಕ್ಕೆ ಕಾಲಿಟ್ಟಿದೆ. ನಗರದ ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ಜೂನ್ 09ರಂದು ಆರಂಭವಾದ ಈ ಎಕ್ಸ್ ಪೋ ಮೂರು ದಿನಗಳ ಕಾಲ‌ ನಡೆಯಲಿದ್ದು, ಒಂದೇ ಸೂರಿನಡಿ 80 ಕ್ಕೂ ಹೆಚ್ಚು ದೇಶ ವಿದೇಶದ ವಿದ್ಯಾಸಂಸ್ಥೆಗಳು ಎಕ್ಸ್ ಪೋದಲ್ಲಿ ಭಾಗಿ ಆಗಿವೆ. ಇಂದು ಟಿವಿನೈನ್ ಎಕ್ಸ್ ಪೋಗೆ ನಟ ಜೆಕೆ ಭೇಟಿ ನೀಡಿ ಸಂತಸ ವ್ಯಕ್ತಪಡಿಸಿದರು. ಸ್ಟಾಲ್ ಗಳಿಗೆ ವಿಸಿಟ್ ಮಾಡಿ ಅಭಿಮಾನಿಗಳಿಗೆ ಸೆಲ್ಫಿಗೆ ಫೋಸ್ ಕೊಟ್ಟಿದ್ದಾರೆ.

ಲಕ್ಕಿ ವಿನರ್ ಗಾನವಿಗೆ ಇ ಬೈಕ್ ಗಿಫ್ಟ್

ಇನ್ನು ಎಜುಕೇಷನ್ ಎಕ್ಸ್ ಪೋದಲ್ಲಿ ನಡೆದ ಲಕ್ಕಿ ಡ್ರಾ ಕಾಂಪಿಟೇಷನ್​ನಲ್ಲಿ ಗಾನವಿ ಎನ್ನುವವರು ವಿನ್ ಆಗಿದ್ದಾರೆ. ಅತಿಯಾಸ್ ವತಿಯಿಂದ ನೀಡಲಾಗಿದ್ದ ಇ ಬೈಕನ್ನು ಗೆದ್ದ ಲಕ್ಕಿ ವಿನರ್ ಗಾನವಿಗೆ ಇಂದು ಟಿವಿನೈನ್ ನೆಟ್ ವರ್ಕ್ ವಿಪಿ ನೋಬಲ್ ಮತ್ತು ಅತಿಯಾಸ್ ನ ಡೈರೆಕ್ಟರ್ ಉಮೇಶ್ ಗೌಡ ಅವರು ನೀಡಿ ಶುಭ ಆರೈಸಿದರು.

ಇದನ್ನೂ ಓದಿ: Tv9 Education Summit: ಇಂದಿನಿಂದ ಟಿವಿ9 ಶಿಕ್ಷಣ ಎಕ್ಸ್‌ಪೋ ಪ್ರಾರಂಭ; ಉತ್ತಮ ಶೈಕ್ಷಣಿಕ ಅವಕಾಶಕ್ಕಾಗಿ ಇಂದೇ ಅರಮನೆ ಮೈದಾನಕ್ಕೆ ಭೇಟಿ ನೀಡಿ

ನಿನ್ನೆ ಉನ್ನತ ಶಿಕ್ಷಣ ಸಚಿವ ಎಮ್.ಸಿ. ಸುಧಾಕರ್ ಎಕ್ಸ್ ಪೋನ ಟೇಪ್ ಕಟ್ ಮಾಡಿ ಲಾಂಚ್ ಮಾಡಿದ್ರು. ಜೊತೆಗೆ ಎಚ್ ಎಸ್ ಆರ್ ಮೂರ್ತಿ , ಅಸಿಸ್ಟೆಂಟ್ ಡೈರೆಕ್ಟರ್ ಮೀಡಿಯಾ ಅಂಡ್ ಅಡ್ಮಿಷನ್ ಕೆಎಲ್ ಡೀಮ್ಡ್ ಯೂನಿವರ್ಸಿಟಿ ಹಾಗೇ ಡಾಕ್ಟರ್ ಮುರಳಿಧರ‌ G.V. ಡೈರೆಕ್ಟರ್ ICFAI ಬ್ಯುಸಿನೆಸ್ ಸ್ಕೂಲ್ ಬೆಂಗಳೂರು, ನೋಬಲ್ ಸೀನಿಯರ್ ವಿಪಿ ಸೌತ್ ಟಿವಿನೈನ್ ನೆಟ್ ವರ್ಕ್ ರಿಂದ ಎಕ್ಸ್ ಪೋ ಚಾಲನೆಗೆ ಸಾಥ್ ನೀಡಿದ್ರು. ನಟಿ ಪೂಜಾ ಗಾಂಧಿ‌ ಹಾಗೂ ಮೇಘಾ ಶೆಟ್ಟಿ ಎಕ್ಸ್ ಪೋದಲ್ಲಿ ರೌಂಡ್ಸ್ ಹಾಕಿ ಪ್ರಶಂಸೆ ವ್ಯಕ್ತಪಡಿಸಿದ್ರು.

ಈ ವರ್ಷದ ಅಕಾಡೆಮಿಕ್‌ ಇಯರ್ ಶುರುವಾಗಿದೆ. ಮಕ್ಕಳನ್ನ ಪಿಯು ನಂತ್ರ ಯಾವ ಶಾಲೆಗೆ ಸೇರಿಸಬೇಕು. ಯಾವ ಕೋರ್ಸ್ ತೆಗೆದುಕೊಂಡರೆ ಬೆಟರ್. ಎಷ್ಟು ಫೀಸ್ ಆಗುತ್ತೆ ಹೀಗೆ ವಿದ್ಯಾರ್ಥಿಗಳ ಎಲ್ಲಾ ಗೊಂದಲಕ್ಕೆ ಟಿವಿ9ನ ಎಜುಕೇಷನ್ ಎಕ್ಸ್ ಪೋದಲ್ಲಿ ಉತ್ತರ ಇದೆ. ಟಿವಿನೈನ್ ಎಕ್ಸ್‌ಪೋಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದ್ದು, ಎಕ್ಸ್ ಪೋಗೆ ಬರೋ ವಿಧ್ಯಾರ್ಥಿಗಳಿಗೆ ‌ಸುವರ್ಣಾವಕಾಶವನ್ನ ಕೂಡ ಟಿವಿನೈನ್ ಕಲ್ಪಿಸಿದೆ. ಎಕ್ಸ್ ಪೋ ಗೆ ಆಗಮಿಸಿ ನೋಂದಣಿ ಮಾಡಿಕೊಂಡ ಪೋಷಕರು ಹಾಗು ವಿದ್ಯಾರ್ಥಿಗಳಿಗೆ ಅತಿಯಾಸ್ ವತಿಯಿಂದ ಪ್ರತಿ ದಿನ ಒಂದು ಈ-ಬೈಕ್ ಗೆಲ್ಲೋ ಸುವರ್ಣಾವಕಾಶವಿದೆ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ