AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನ ಅರಮನೆ ಮೈದಾನದಲ್ಲಿ ಟಿವಿ9 ಎಕ್ಸ್​​ ಪೋಗೆ ಅದ್ಧೂರಿ ಚಾಲನೆ; ರಿಯಾಯತಿ ಬೆಲೆಯಲ್ಲಿ ನಿಮ್ಮ ಇಷ್ಟದ ವಸ್ತುಗಳು

TV9 Lifestyle, Automobile & Furniture Expo 2023: ನಿಮ್ಮ ಮನೆಯನ್ನು ಮತ್ತಷ್ಟು ಸುಂದರವಾಗಿಸಲು ಬೇಕಾದ ವಿವಿಧ ವಸ್ತುಗಳನ್ನ ಅತ್ಯಂತ ಕಡಿಮೆ ಬೆಲೆಯಲ್ಲಿ ಖರೀದಿಸಬೇಕು ಅನ್ನೊ ಆಲೋಚನೆಯಲ್ಲಿರೋರಿಗೆ ಟಿವಿ9 ಒಂದು ಗುಡ್ ನ್ಯೂಸ್ ನೀಡ್ತಿದೆ. ಒಂದೇ ವೇದಿಕೆಯಲ್ಲಿ ಮನೆಗೆ ಬೇಕಾದ ಹಲವು ವಸ್ತುಗಳನ್ನ ನೀವು ಖರೀದಿಸಬಹುದು. ಇಂದಿನಿಂದ 3 ದಿನಗಳ ಕಾಲ ಬೆಂಗಳೂರಿನ ಅರಮನೆ ಮೈದಾನದಲ್ಲಿ ಟಿವಿ9 ಎಕ್ಸ್​​ ಪೋ ನಡೆಯಲಿದೆ.

TV9 Web
| Edited By: |

Updated on: Oct 27, 2023 | 11:46 AM

Share

ಬೆಂಗಳೂರು, ಅ.27: ಬೆಂಗಳೂರಿನ ಬಳ್ಳಾರಿ ರಸ್ತೆಯ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಟಿವಿ 9 ಸಹಭಾಗಿತ್ವದಲ್ಲಿ ಫರ್ನಿಚರ್ ಹಾಗೂ ಆಟೋಮೊಬೈಲ್ ಎಕ್ಸ್ ಪೋ ಆಯೋಜನೆ ಮಾಡಲಾಗಿದ್ದು ಅದ್ಧೂರಿ ಚಾಲನೆ ಸಿಕ್ಕಿದೆ (TV9 Lifestyle, Automobile & Furniture Expo 2023). ಇಂದಿನಿಂದ ಮೂರು ದಿನಗಳ ಕಾಲ ಅಂದರೆ ಅ.27, 28 ಹಾಗೂ 29ರ ವರೆಗೆ ಈ ಎಕ್ಸ್‌ ಪೋ ನಡೆಯಲಿದೆ. ಎಂಎಲ್​ಸಿ ಶರವಣ, ನಟ ಚಿಕ್ಕಣ್ಣ, ನಟಿ ಧನ್ಯಾ ರಾಮ್​​ಕುಮಾರ್, ವಿಕ್ಕಿ ಅರುಣ್ ಹಾಗೂ ಟಿವಿ9 ನಾ ನೊಬೆಲ್ ಜೈಕರ್ ಅವರು ಟೇಪ್ ಕಟ್ ಮಾಡುವ ಮೂಲಕ ಎಕ್ಸ್ ಪೋಗೆ ಚಾಲನೆ ನೀಡಿದ್ದಾರೆ.

ಲೈಫ್​ ಸ್ಟೈಲ್​​, ಫರ್ನಿಚರ್​, ಆಟೋಮೊಬೈಲ್​ ಟಿವಿ9 ಎಕ್ಸ್​​ ಪೋನಲ್ಲಿ ಮನೆ ಬಳಕೆಗೆ ಉಪಯುಕ್ತವಾಗುವ ವಸ್ತುಗಳನ್ನು ಕಡಿಮೆ ಬೆಲೆಗೆ ಖರೀದಿಸುವ ಅವಕಾಶ ಸಿಗಲಿದೆ. 100ಕ್ಕೂ ಹೆಚ್ಚು ಸ್ಟಾಲ್​ಗಳು ಟಿವಿ9 ಎಕ್ಸ್​​ ಪೋನಲ್ಲಿ ಲಭ್ಯವಿದ್ದು ಬೆಳಗ್ಗೆ 10 ಗಂಟೆಯಿಂದ ರಾತ್ರಿ 8ರವರೆಗೆ ನಡೆಯಲಿದೆ. ಎಕ್ಸ್​ ಪೋಗೆ ಬರುವ ಗ್ರಾಹಕರಿಗೆ ಉಚಿತ ಪ್ರವೇಶವಿರಲಿದೆ.

ಇನ್ನೂ ಈ ಎಕ್ಸ್‌ ಪೋನಲ್ಲಿ ಲೇದರ್ ಇಟಾಲಿಯಾ, ಬ್ಲೂ ಡೆಕೊರ್ ರಾಯಲ್ ಟಚ್ ಕ್ಲಾಸಿಕ್ ಫರ್ನಿಚರ್, ಮಿಸ್ಟರ್ ಸೋಫಾ ರಾಜಸ್ತಾನ ಮಾರ್ಬಲ್ ಎಸ್​ಎಂಇ ಟ್ರೆಡಿಂಗ್ ಹಲವಾರು ಬಗೆಯ ಫರ್ನಿಚರ್ ಗಳಿದ್ದು, ಫ್ರಿಡ್ಜ್, ಮೊಬೈಲ್ಸ್ ಸೇರಿದಂತೆ ವಿವಿಧ ಬಗೆಯ ಆಟೊ ಮೊಬೈಲ್ಸ್ ವಸ್ತುಗಳು ಕೂಡ ದೊರೆಯಲಿವೆ. ತಮಿಳನಾಡು, ಮಹಾರಾಷ್ಟ್ರ, ಆಂಧ್ರ ಪ್ರದೆಶ, ರಾಜಸ್ಥಾನ ಸೇರಿದಂತೆ ದೇಶದ ವಿವಿಧಡೆಯಿಂದ ವ್ಯಾಪಾರಸ್ಥರು ಮಾರಾಟಕ್ಕೆ ಬಂದಿದ್ದಾರೆ. ಅಲ್ಲದೇ ವಿದೇಶದಲ್ಲಿ ತಯಾರಾದ ಫರ್ನಿಚರ್​ಗಳು ಕೂಡ ಖರೀದಿ ಮಾಡಬಹುದಾಗಿದೆ.

ಇದನ್ನೂ ಓದಿ: ಟಿವಿ9 ನೆಟ್ವರ್ಕ್ ಲೀಡರ್ಸ್ ಆಫ್ ರೋಡ್ ಟ್ರಾನ್ಸ್​ಪೋರ್ಟ್; ಬೆಂಗಳೂರಿನಲ್ಲಿ ಇಂದು ಸಮಾವೇಶ

ಇಂದಿನಿಂದ ಮೂರು ದಿನಗಳ ಕಾಲ ಈ ಆಟೋ ಮೊಬೈಲ್ಸ್ ಐಂಡ್ ಫರ್ನಿಚರ್ ಎಕ್ಸ್‌ ಪೂ ನಡೆಯಲಿದ್ದು ಎಲ್ಲರಿಗೂ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಇನ್ನೂ 70 % ವರೆಗೂ ಡಿಸ್ಕೌಂಟ್ ಆಫರ್‌ನಲ್ಲಿ ಫರ್ನಿಚರ್ ಮಾರಾಟಕ್ಕಿದ್ದು, ಫರ್ನಿಚರ್ ಎಕ್ಸೆಂಜ್ ಆಫರ್ ಹಾಗೂ ಬ್ಯಾಂಕ್ ಇಎಂಐ ಮೂಲಕ ಕೂಡ ಗ್ರಾಹಕರು ಖರೀದಿ ಮಾಡಬಹುದಾಗಿದಾಗಿದೆ.

ಪ್ರತೀ ಸಲದಂತೆ ಸಖತ್ ರೆಸ್ಪಾನ್ಸ್‌ ಮೇರೆಗೆ ಟಿವಿ9 ಆಟೋ ಮೊಬೈಲ್ಸ್ ಅ್ಯಂಡ್ ಫರ್ನಿಚರ್ ಎಕ್ಸ್‌ ಪೋ ಆಯೋಜಿಸಿದೆ. ಈ ಎಕ್ಸ್ ಪೋಗೆ ಭೇಟಿ ನೀಡಿ ನಿಮ್ಮ ಇಷ್ಟದ ವಸ್ತುಗಳನ್ನ ರಿಯಾಯತಿ ಬೆಲೆಯಲ್ಲಿ ಖರೀದಿಸಬಹುದು.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ