‘ಟಿವಿ9’ನ ಜಗದೀಶ್ ಬೆಳ್ಯಪ್ಪ, ಎಂ.ಶ್ರೀಕಾಂತ್ ಸೇರಿ 45 ಮಂದಿಗೆ ಬೆಂಗಳೂರು ಪ್ರೆಸ್ಕ್ಲಬ್ ವಾರ್ಷಿಕ ಪ್ರಶಸ್ತಿ
ಜಗದೀಶ್ ಬೆಳ್ಯಪ್ಪ, ಎಂ.ಶ್ರೀಕಾಂತ್ ಸೇರಿದಂತೆ 45 ಮಂದಿ 2024ನೇ ಸಾಲಿನ ಬೆಂಗಳೂರು ಪ್ರೆಸ್ ಕ್ಲಬ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. 28 ವರ್ಷಗಳ ಪತ್ರಿಕೋದ್ಯಮದ ಅನುಭವ ಹೊಂದಿರುವ ಬೆಳ್ಯಪ್ಪ ವಿವಿಧ ಮಾಧ್ಯಮಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಕೊಡಗು ಜಿಲ್ಲೆಯಿಂದ ಪತ್ರಿಕೋದ್ಯಮ ಪ್ರವೇಶಿಸಿದ ಅವರು ವಿವಿಧ ಪತ್ರಿಕೆಗಳು ಮತ್ತು ಟಿವಿ ಚಾನೆಲ್‌ಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ.
ಜಗದೀಶ್ ಬೆಳ್ಯಪ್ಪ, ಎಂ.ಶ್ರೀಕಾಂತ್
Follow us on
ಬೆಂಗಳೂರು, ಜನವರಿ 01: 2024ನೇ ಸಾಲಿನ ಪ್ರೆಸ್ ಕ್ಲಬ್ ಆಫ್ ಬೆಂಗಳೂರು ಪ್ರಶಸ್ತಿ (Bangalore Press Club Awards 2024) ಪ್ರಕಟವಾಗಿದೆ. ಟಿವಿ9 ಡಿಜಿಟಲ್ ಡೆಪ್ಯೂಟಿ ಎಡಿಟರ್ ಜಗದೀಶ್ ಬೆಳ್ಯಪ್ಪ, ಟಿವಿ9 ತಾಂತ್ರಿಕ ವಿಭಾಗದ ಮುಖ್ಯಸ್ಥ ಎಂ.ಶ್ರೀಕಾಂತ್ ಸೇರಿದಂತೆ ಒಟ್ಟು 45 ಜನರು 2024ನೇ ಸಾಲಿನಲ್ಲಿ ಬೆಂಗಳೂರು ಪ್ರೆಸ್ ಕ್ಲಬ್ ನೀಡುವ ವಾರ್ಷಿಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.
2024ನೇ ಸಾಲಿನ ಪ್ರೆಸ್ಕ್ಲಬ್ ವಾರ್ಷಿಕ ಪ್ರಶಸ್ತಿ ಪುರಸ್ಕೃತರ ಪಟ್ಟಿ