Traffic Advisory: ಬೆಂಗಳೂರಿನ ಈ ರಸ್ತೆಗಳಲ್ಲಿ 2 ದಿನ ಸಂಚಾರ ಬಂದ್, ವಾಹನ ನಿಲುಗಡೆ ನಿಷೇಧ
Bengaluru Traffic Advisory: ಆರೋಗ್ಯ ಮಾತೆಯ ಧ್ವಜಾರೋಹಣ ಕಾರ್ಯಕ್ರಮ ಮತ್ತು ಉತ್ಸವ ನಡೆಯುವುದರಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಭಾಗಿಯಾಗಲಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಈ ರಸ್ತೆಗಳಲ್ಲಿ ಎರಡು ದಿನ ಸಂಚಾರ ಬಂದ್, ವಾಹನ ನಿಲುಗಡೆ ನಿಷೇಧಿಸಲಾಗಿದೆ.
ಬೆಂಗಳೂರು, ಆಗಸ್ಟ್ 28: ಬೆಂಗಳೂರು (Bengaluru) ನಗರದ ಈ ರಸ್ತೆಗಳಲ್ಲಿ ಎರಡು ದಿನ ವಾಹನ ಸಂಚಾರ ನಿರ್ಬಂಧಿಸಿ ಬೆಂಗಳೂರು ಸಂಚಾರ ಪೊಲೀಸರು (Bengaluru Traffic Police) ಸೂಚನೆ ಹೊರಡಿಸಿದ್ದಾರೆ. ಹಾಗಿದ್ದರೆ ಯಾವ್ಯಾವ ರಸ್ತೆಯಲ್ಲಿ, ಯಾವ್ಯಾವ ದಿನಾಂಕದಂದು ವಾಹನ ಸಂಚಾರಕ್ಕೆ ನಿರ್ಬಂಧಿಸಲಾಗಿದೆ? ಇಲ್ಲಿದೆ ಮಾಹಿತಿ.
ಶಿವಾಜಿನಗರ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರುವಾರ (ಆ.29) ರಂದು ಆರೋಗ್ಯ ಮಾತೆಯ ಧ್ವಜಾರೋಹಣ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಸಾವಿರಾರು ಭಕ್ತರು ಸೇರುವ ನಿರೀಕ್ಷೆ ಇದೆ. ಹೀಗಾಗಿ ಸಾರ್ವಜನಿಕರ ಸುಗಮ ಸಂಚಾರದ ಹಿತದೃಷ್ಟಿಯಿಂದ ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ವಾಹನ ಸಂಚಾರ ಬಂದ್ ಮಾಡಲಾಗಿದೆ ಎಂದು ಬೆಂಗಳೂರು ಸಂಚಾರಿ ಪೊಲೀಸ್ ಮಾಧ್ಯಮ ಪ್ರಕಟಣೆ ಹೊರಡಿಸಿದೆ.
ಇದನ್ನೂ ಓದಿ: ಬೆಂಗಳೂರಿನ ಈ ರಸ್ತೆಯಲ್ಲಿ 30 ದಿನ ಸಂಚಾರ ಬಂದ್, ಮಾರ್ಗ ಬದಲಾವಣೆ ಇಲ್ಲಿದೆ
ಸೆಪ್ಟೆಂಬರ್ 8 ರವಿರಾದಂದು ಆರೋಗ್ಯ ಮಾತೆಯ ರಥೋತ್ಸವ ಕಾರ್ಯಕ್ರಮದ ನಡೆಯುವ ಹಿನ್ನೆಲೆಯಲ್ಲಿ ಮಧ್ಯಾಹ್ನ 12 ಗಂಟೆಯಿಂದ ರಾತ್ರಿ 10 ಗಂಟೆಯವರೆಗೆ ಸಂಚಾರ ನಿರ್ಬಂಧಿಸಲಾಗಿದೆ. ಸಂಚಾರ ನಿರ್ಬಂಧಿಸಿರುವ ರಸ್ತೆಗಳು:
- ಜ್ಯೋತಿಕೆಫೆ ವೃತ್ತದಿಂದ ರಸಲ್ ಮಾರ್ಕೆಟ್ವರೆಗೆ ರಸ್ತೆಯ ಎರಡು ಬದಿಯಲ್ಲಿ ಎಲ್ಲ ಮಾದರಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.
- ಬ್ರಾಡ್ ವೇ ರಸ್ತೆಯಲ್ಲಿ ರಸಲ್ ಮಾರ್ಕೆಟ್ಕಡೆಗೆ ರಸ್ತೆಯ ಎರಡು ಬದಿಯಲ್ಲಿ ಎಲ್ಲ ಮಾದರಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.
- ಧರ್ಮರಾಜ ಕೋಯಿಲ್ ಸ್ಪೀಟ್ – ಓ.ಪಿ.ಹೆಚ್.ರಸ್ತೆ ವರೆಗೆ ರಸಲ್ ಮಾರ್ಕೆಟ್ಕಡೆಗೆ ಬರುವ ವಾಹನ ಸಂಚಾರವನ್ನು ತಾಜ್ ವೃತ್ತದಲ್ಲಿ ನಿರ್ಬಂಧಿಸಲಾಗಿದೆ.
- ಬಿ.ಆರ್.ವಿ ಜಂಕ್ಷನ್ನಿಂದ ಶಿವಾಜಿನಗರ ಬಸ್ ನಿಲ್ದಾಣಕ್ಕೆ ಬರುವ ಬಿ.ಎಂ.ಟಿ.ಸಿ ಬಸ್‌ಗಳು ಸೇರಿದಂತೆ ಎಲ್ಲ ಮಾದರಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ.
- ಬಾಳೇ ಕುಂದ್ರಿ ವೃತ್ತದಿಂದ ಶಿವಾಜಿನಗರ ಬಸ್ ನಿಲ್ದಾಣಕ್ಕೆ ಬರುವ ಬಿ.ಎಂ.ಟಿ.ಸಿ ಬಸ್‌ಗಳು ಸೇರಿದಂತೆ ಎಲ್ಲ ಮಾದರಿಯ ವಾಹನಗಳನ್ನು ನಿರ್ಬಂಧಿಸಲಾಗಿದೆ.
ಪರ್ಯಾಯ ಮಾರ್ಗಗಳು:
- ಅನಿಲ್ ಕುಂಬ್ಳೆ ಜಂಕ್ಷನ್ ಕಡೆಯಿಂದ ಬರುವ ಬಿ.ಎಂ.ಟಿ.ಸಿ ಬಸ್‌ಗಳು ಬಿ.ಆರ್.ವಿ ಜಂಕ್ಷನ್‌ನಲ್ಲಿ ಎಡತಿರುವು ಪಡೆದು- ಸಿ.ಟಿ.ಓ- ಕ್ಲೀನ್ಸ್ ಸರ್ಕಲ್- ಎಂ.ಜಿ ರಸ್ತೆ ಮೂಲಕ ಸಂಚರಿಸಬಹುದು.
- ದ್ವಿಚಕ್ರ ಹಾಗೂ ಲಘು ಮೋಟಾರ್ ವಾಹನಗಳು ಬಿ.ಆರ್.ವಿ ಸೆಂಟ್ರಲ್ ಸ್ಟ್ರೀಟ್ – ಬಲ ತಿರುವು – ಸಫೀನಾ ಪ್ಲಾಜಾ -ಕಮರ್ಷಿಯಲ್ ಸ್ಟ್ರೀಟ್-ಕಾಮರಾಜ ರಸ್ತೆ ಮೂಲಕ ಸಂಚರಿಸಬಹುದು.
- ದ್ವಿಚಕ್ರ ಹಾಗೂ ಲಘು ಮೋಟಾರ್ ವಾಹನಗಳು ಬಿ.ಆರ್.ವಿ-ಸೆಂಟ್ರಲ್ ಸ್ಟ್ರೀಟ್ – ಸೆಲೆಕ್ಟ್ ಜಂಕ್ಷನ್ ಎಡ ತಿರುವು ರಮಡಾ ಹೋಟೆಲ್-ವಿ.ಎಸ್.ಎನ್ ರಸ್ತೆ ಮೂಲಕ ಸಂಚರಿಸಬಹುದು.
ವಾಹನಗಳ ನಿಲುಗಡೆ ನಿರ್ಬಂಧಿಸಿರುವ ಸ್ಥಳಗಳು:
ರಸಲ್ ಮಾರ್ಕೆಟ್ ಸುತ್ತ-ಮುತ್ತ – ಬ್ರಾಡ್‌ವೇರಸ್ತೆ – ಮೀನಾಕ್ಷಿಕೋಯಿಲ್ ಸ್ಟ್ರೀಟ್ – ಸೆಂಟ್ರಲ್ ಸ್ಟ್ರೀಟ್ ಶಿವಾಜಿ ರಸ್ತೆ – ಬಾಳೇ ಕುಂದ್ರಿ ವೃತ್ತದಿಂದ ಚಂದ್ರಿಕಾ ಹೋಟೆಲ್ ವರೆಗೂ (ಕನ್ನಿಂಗ್ ಹ್ಯಾಮ್ ರಸ್ತೆ) ಯೂನಿಯನ್ ಸ್ಟ್ರೀಟ್ ಇನ್ ಫೆಂಟ್ರಿರಸ್ತೆ ಸ್ಪೀಟ್ – ಎಂ.ಜಿರಸ್ತೆ ಕಬ್ಬನ್‌ರಸ್ತೆ ಲೇಡಿಕರ್ಜನ್ ರಸ್ತೆ ವಿ.ಎಸ್.ಎನ್ ರಸ್ತೆ ಪ್ಲೇನ್ ಸ್ಟ್ರೀಟ್-ಎಂಜಿರಸ್ತೆಯಲ್ಲಿ ವಾಹನ ನಿಲುಗಡೆ ನಿಷೇಧಿಸಲಾಗಿದೆ.
ವಾಹನ ನಿಲುಗಡೆ ಸ್ಥಳಗಳ ವಿವರ:
ಕಾಮರಾಜರಸ್ತೆ ಪಾರ್ಕಿಂಗ್ ಸ್ಥಳದಲ್ಲಿ (ಸರ್ವೀಸ್ ರಸ್ತೆ ಆರ್ಮಿ ಸ್ಕೂಲ್ ಮುಂಭಾಗ) – ಸಫೀನಾ ಪ್ಲಾಜಾ ಮುಂಭಾಗ ( ಮೈನ್ ಗಾರ್ಡನ್ ರಸ್ತೆ) ಜೆಸ್ಮಾ ಭವನ ರಸ್ತೆ – ಆರ್.ಬಿ.ಎ.ಎನ್.ಎಮ್.ಎಸ್ ಮೈದಾನ ( ಗಂಗಾಧರ ಚೆಟ್ಟಿ ರಸ್ತೆ ) ಮುಸ್ಲಿಂ ರ್ಆಫೆನೇಜ್ ಡಿಕನ್ಸನ್ ರಸ್ತೆ ( ಹಸನತ್ ಕಾಲೇಜ್ ಹತ್ತಿರ), ರಮಡಾ ಹೊಟೇಲ್ (ಓಲ್ಡ್ ಕಾಂಗ್ರೇಸ್ ಕಛೇರಿ) ಪ್ಲೇನ್ ಸ್ಟ್ರೀಟ್ನಲ್ಲಿ ವಾಹನ ನಿಲ್ಲಿಸಬಹುದಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ