ಬೆಂಗಳೂರಿನಲ್ಲಿ ಯುವಕ- ಯುವತಿ ಮೊಜು ಮಸ್ತಿ, ಬೈಕ್​ ಅಪಘಾತದಲ್ಲಿ ಎರಡು ಜೀವಗಳು ಬಲಿ..!

ರಸ್ಯೆ ಸುರಕ್ಷಿತೆ ಬಗ್ಗೆ ಟ್ರಾಫಿಕ್ ಪೊಲೀಸರು ಸಾಮಾಜಿಕ ಜಾಲತಾಣಗಳಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಹೆಲ್ಮೆಟ್​ ಧರಿಸಿ ಜೀವ ಉಳಿಸಿಕೊಳ್ಳಿ, ಹಾಗೇ ಮದ್ಯಪಾನ ಮಾಡಿ ವಾಹನ ಚಲಾಯಿಸಬೇಡಿ ಎಂದು ಸಾರಿ ಸಾರಿ ಹೇಳುತ್ತಿದ್ದಾರೆ. ಆದರೂ ಕೆಲವರು ಅದ್ಯಾವುದನ್ನು ಲೆಕ್ಕಿಸದೇ ವಾಹನ ಚಲಾಯಿಸಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇದೀಗ ಸಿಲಿಕಾನ್​ ಸಿಟಿ ಬೆಂಗಳೂರಿನಲ್ಲಿ ಎರಡು ಜೀವಗಳು ಬಲಿಯಾಗಿವೆ.​

ಬೆಂಗಳೂರಿನಲ್ಲಿ ಯುವಕ- ಯುವತಿ ಮೊಜು ಮಸ್ತಿ, ಬೈಕ್​ ಅಪಘಾತದಲ್ಲಿ ಎರಡು ಜೀವಗಳು ಬಲಿ..!
ರಕ್ಷಾ, ನರಸಪ್ಪ
Follow us
| Updated By: ರಮೇಶ್ ಬಿ. ಜವಳಗೇರಾ

Updated on: Aug 16, 2023 | 12:54 PM

 ಬೆಂಗಳೂರು, (ಆಗಸ್ಟ್ 16): ಸಂಚಾರ ನಿಯಮ ಉಲ್ಲಂಘಿಸಿ (Traffic Rules), ಅಜಾಗರೂಕವಾಗಿ ವಾಹನ ಚಲಾಯಿಸಿದ್ದರಿಂದ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ( Bengaluru) ಮತ್ತೆರಡು ಜೀವಗಳು ಬಲಿಯಾಗಿವೆ. ನಿನ್ನೆ(ಆಗಸ್ಟ್ 15) ರಾತ್ರಿ ಮಾರುತಿ ನಗರದ (Maruti Nagar)ಮುಖ್ಯರಸ್ತೆಯಲ್ಲಿ ಅಪಘಾತ ಸಂಭವಿಸಿದ ಅಪಘಾತದಲ್ಲಿ ನರಸಪ್ಪ (51) ಹಾಗೂ ರಕ್ಷಾ ಮೃತಪಟ್ಟಿದ್ದಾರೆ. ಕಿಡ್ ಕೇರ್ ನಲ್ಲಿ ಕೆಲಸಮಾಡುತ್ತಿರುವ ರಕ್ಷಾ ಹಾಗೂ ಕಾಲೇಜು ವಿದ್ಯಾರ್ಥಿ ಚಂದನ್ ಪಲ್ಸರ್​ ಬೈಕ್​ನಲ್ಲಿ ಮಾರುತಿ ನಗರದಿಂದ ಕೆಎಲ್‍ಇ ಕಾಲೇಜಿನೆಡೆಗೆ ವೇಗವಾಗಿ ಹೋಗುತ್ತಿದ್ದಾಗ ನರಸಪ್ಪ ಬೈಕ್​ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ನರಸಪ್ಪ ಸ್ಥಳದಲ್ಲೇ ಮೃತಪಟ್ಟಿದ್ದರೆ, ತ್ರೀವೃವಾಗಿ ಗಾಯಗೊಂಡಿದ್ದ ರಕ್ಷಾ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ದುರಂತ ಅಂದರೆ ಮೃತ ರಕ್ಷಾ ಹೆಲ್ಮೆಟ್​ ಹಾಕಿರಲಿಲ್ಲ.

ಮೋಜು- ಮಸ್ತಿಗಾಗಿ ರಕ್ಷಾ ಹಾಗೂ ಚಂದನ್ ವೇಗವಾಗಿ ಬಂದಿದ್ದಲ್ಲದೆ, ಹೆಲ್ಮೆಟ್ ಧರಿಸದೆ ಸಂಚಾರ ನಿಯಮವನ್ನೂ ಪಾಲಿಸಿಲ್ಲ. ಮೃತ ದುರ್ದೈವಿ ನರಸಪ್ಪ ಸರ್ಕಾರಿ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಿದ್ದು, ಹೆಲ್ಮೆಟ್ ಹಾಕಿಯೂ ವಿಧಿಯಾಟಕ್ಕೆ ಬಲಿಯಾಗಿದ್ದಾರೆ. ಈ ಕುರಿತು ಕೆಂಗೇರಿ ಪೋಲಿಸ್ ಠಾಣೆಯಲ್ಲಿ ( Kengeri Police Station) ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Tumakuru News: ಪ್ರತ್ಯೇಕ ಘಟನೆ: ತುಮಕೂರಿನಲ್ಲಿ 3 ಅಪಘಾತ, ಮೂವರು ಸಾವು

ಪಶ್ಚಿಮ ವಿಭಾಗದ ಟ್ರಾಫಿಕ್​ ಡಿಸಿಪಿ ಸುಮನ ಪ್ರತಿಕ್ರಿಯೆ

ಇನ್ನು ಈ ಪ್ರಕರಣದ ಬಗ್ಗೆ ಪಶ್ಚಿಮ ವಿಭಾಗದ ಟ್ರಾಫಿಕ್​ ಡಿಸಿಪಿ ಸುಮನ ಡಿಪಿ ಪ್ರತಿಕ್ರಿಯಿಸಿದ್ದು, ನಿನ್ನೆ ಎರಡು ಬೈಕ್ ಗಳ ಮಧ್ಯೆ ಉಲ್ಲಾಳದ ಮಾರುತಿನಗರದಲ್ಲಿ ಅಪಘಾತವಾಗಿದೆ. ಚಂದನ್ ಎನ್ನುವವರ ಬೈಕ್​ ಹಿಂಬದಿಯಲ್ಲಿ ರಕ್ಷಾ ಕುಳಿತುಕೊಂಡು ಪ್ರಯಾಣ ಪ್ರಯಾಣಿಸುತ್ತಿದ್ದರು. ಮತ್ತೊಂದೆಡೆ ನರಸಪ್ಪ ಎನ್ನುವರು ತಮ್ಮ ಬೈಕ್​ ಟರ್ನಿಂಗ್ ತೆಗೆದುಕೊಳ್ಳುವಾಗ ಈ ಅಪಘಾತವಾಗಿದೆ ಎಂದರು.

ಪಲ್ಸರ್ ಬೈಕ್​ನ ಅತಿವೇಗ ಹಾಗೂ ನಿರ್ಲಲಕ್ಷ್ಯದಿಂದ ಚಂದನ್ ಡ್ರೈವಿಂಗ್ ಮಾಡಿಕೊಂಡು ಬಂದಿದ್ದಾನೆ. ಡಿಕ್ಕಿ ಹೊಡೆದ ರಭಸಕ್ಕೆ ನರಸಪ್ಪ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ರಕ್ಷಾ ಸಾವನ್ನಪ್ಪಿದ್ದಾರೆ. ಮೇಲ್ನೋಟಕ್ಕೆ ಡ್ರೈವರ್ ಚಂದನ್ ಕುಡಿದು ಡ್ರೈವಿಂಗ್ ಮಾಡಿರುವ ಶಂಕೆ ಇದೆ. ಚಂದನ್​ಗೆ ಸಣ್ಣಪುಟ್ಟ ಗಾಯಗಳಾಗಿವೆ. ಬೈಕ್ ಗುದ್ದಿದ ರಭಸಕ್ಕೆ 50 ಮೀಟರ್ ನಷ್ಟು ಉಜ್ಜಿಕೊಂಡು ಹೋಗಿದೆ. ಮೃತ ನರಸಪ್ಪ ಲೆಕ್ಟರರ್ ಆಗಿದ್ದರು. ಇನ್ನು ಚಂದನ್ ಜೊತೆಗಿದ್ದ ರಕ್ಷಾ ಕಿಂಡರ್ ಗಾರ್ಟನ್ ನಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಪಲ್ಸರ್ ಸವಾರ ಚಂದನ್ ಮೇಲೆ ಕೆಂಗೇರಿ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಮಾಧ್ಯಮಗಳಿಗೆ ಮಾಹಿತಿ ನೀಡಿದರು.

ಇನ್ನಷ್ಟು ಬೆಂಗಳೂರು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ತಾಜಾ ಸುದ್ದಿ
ದರ್ಶನ್ ನೋಡಲು ಪರಪ್ಪನ ಅಗ್ರಹಾರ ಜೈಲಿಗೆ ಬಂದು ಕಣ್ಣೀರು ಹಾಕಿದ ತಾಯಿ ಮೀನಾ
ದರ್ಶನ್ ನೋಡಲು ಪರಪ್ಪನ ಅಗ್ರಹಾರ ಜೈಲಿಗೆ ಬಂದು ಕಣ್ಣೀರು ಹಾಕಿದ ತಾಯಿ ಮೀನಾ
ವರದಕ್ಷಿಣೆಗಾಗಿ ಹೆಂಡತಿ ಕತೆಯನ್ನು ಮುಗಿಸಿದನೇ ಪೊಲೀಸ್ ಕಾನ್​ಸ್ಟೇಬಲ್?
ವರದಕ್ಷಿಣೆಗಾಗಿ ಹೆಂಡತಿ ಕತೆಯನ್ನು ಮುಗಿಸಿದನೇ ಪೊಲೀಸ್ ಕಾನ್​ಸ್ಟೇಬಲ್?
ನಡು ರಸ್ತೆಯಲ್ಲೇ ಟಿಎಂಸಿ ಮುಖಂಡನಿಂದ ಮಹಿಳೆಗೆ ಥಳಿತ; ವಿಡಿಯೋ ವೈರಲ್
ನಡು ರಸ್ತೆಯಲ್ಲೇ ಟಿಎಂಸಿ ಮುಖಂಡನಿಂದ ಮಹಿಳೆಗೆ ಥಳಿತ; ವಿಡಿಯೋ ವೈರಲ್
ವಾಲ್ಮೀಕಿ ನಿಗಮದ ಹಗರಣಕ್ಕೆ ಸಿದ್ದರಾಮಯ್ಯ ಸಹ ಜವಾಬ್ದಾರರು: ಬಸನಗೌಡ ಯತ್ನಾಳ್
ವಾಲ್ಮೀಕಿ ನಿಗಮದ ಹಗರಣಕ್ಕೆ ಸಿದ್ದರಾಮಯ್ಯ ಸಹ ಜವಾಬ್ದಾರರು: ಬಸನಗೌಡ ಯತ್ನಾಳ್
ಹೆಣ್ಣಿಗಾಗಿ ಬದುಕು ಹಾಳುಮಾಡಿಕೊಂಡೆಯಲ್ಲ ಎಂದ ಹುಬ್ಬಳ್ಳಿಯ ದರ್ಶನ್ ಅಭಿಮಾನಿ
ಹೆಣ್ಣಿಗಾಗಿ ಬದುಕು ಹಾಳುಮಾಡಿಕೊಂಡೆಯಲ್ಲ ಎಂದ ಹುಬ್ಬಳ್ಳಿಯ ದರ್ಶನ್ ಅಭಿಮಾನಿ
ಬೀದರ್​​: ಅಂತ್ಯಸಂಸ್ಕಾರ ಮಾಡಿದ್ದ ಮಗು ಬೆಳಗಾಗುವಷ್ಟರಲ್ಲಿ ಮರದಲ್ಲಿ ಪ್ರತ್ಯ
ಬೀದರ್​​: ಅಂತ್ಯಸಂಸ್ಕಾರ ಮಾಡಿದ್ದ ಮಗು ಬೆಳಗಾಗುವಷ್ಟರಲ್ಲಿ ಮರದಲ್ಲಿ ಪ್ರತ್ಯ
ವಾಪಸ್ಸಾಗಲು ಬಿಜೆಪಿಯಿಂದ ಕರೆ ಬಂದಿದೆ, ಅಭಿಪ್ರಾಯ ತಿಳಿಸಿಲ್ಲ: ಈಶ್ವರಪ್ಪ
ವಾಪಸ್ಸಾಗಲು ಬಿಜೆಪಿಯಿಂದ ಕರೆ ಬಂದಿದೆ, ಅಭಿಪ್ರಾಯ ತಿಳಿಸಿಲ್ಲ: ಈಶ್ವರಪ್ಪ
ರಿಲಯನ್ಸ್​​ ಜಿಯೋ ರೀಚಾರ್ಜ್ ಪ್ಲ್ಯಾನ್ ಆಯ್ತು ದುಬಾರಿ | ಶೇ 22ರಷ್ಟು ಬೆಲೆ
ರಿಲಯನ್ಸ್​​ ಜಿಯೋ ರೀಚಾರ್ಜ್ ಪ್ಲ್ಯಾನ್ ಆಯ್ತು ದುಬಾರಿ | ಶೇ 22ರಷ್ಟು ಬೆಲೆ
ಚಾರ್ಮಾಡಿ ಘಾಟ್ ಇಳುಕಲು ಪ್ರದೇಶದ ಜಲಪಾತಗಳಲ್ಲಿ ಯುವಕರ ಅಪಾಯಕಾರಿ ಹುಚ್ಚಾಟ
ಚಾರ್ಮಾಡಿ ಘಾಟ್ ಇಳುಕಲು ಪ್ರದೇಶದ ಜಲಪಾತಗಳಲ್ಲಿ ಯುವಕರ ಅಪಾಯಕಾರಿ ಹುಚ್ಚಾಟ
ವಿಧಾನಸಭೆಯಲ್ಲಿ ಮೆಜಾರಿಟಿಯ ಕಾರಣ ಸಿದ್ದರಾಮಯ್ಯ ಸೇಫ್ ಆಗಿದ್ದಾರೆ: ಸಿಟಿ ರವಿ
ವಿಧಾನಸಭೆಯಲ್ಲಿ ಮೆಜಾರಿಟಿಯ ಕಾರಣ ಸಿದ್ದರಾಮಯ್ಯ ಸೇಫ್ ಆಗಿದ್ದಾರೆ: ಸಿಟಿ ರವಿ