ಅನಧಿಕೃತ ಶಾಲೆಗಳಿಂದ ಪೋಷಕರಿಗೆ ಶುರುವಾಯ್ತು ಟೆನ್ಷನ್; ಸರ್ಕಾರದ ನಡೆ ವಿರುದ್ಧ ಆಕ್ರೋಶ

ವಿದ್ಯಾರ್ಥಿಗಳ ಭವಿಷ್ಯ ರೂಪಿಸಬೇಕಾಗಿರುವ ವಿದ್ಯಾ ದೇಗುಲಗಳು ಮಕ್ಕಳ ಜೀವನದ ಜೊತೆ ಚಲ್ಲಾಟವಾಡ್ತಿವೆ. ಪೋಷಕರ ನೂರಾರು ಕನಸುಗಳು ನುಚ್ಚು ನೂರು ಮಾಡ್ತಿವೆ. ಸದ್ಯ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಸಾವಿರಾರು ಅನಧಿಕೃತ ಶಾಲೆಗಳು ತಲೆ ಎತ್ತಿದ್ದು ಪೋಷಕರ ನಿದ್ದೆಗೆಡಸಿದೆ. ಸಿಲಿಕಾನ್ ಸಿಟಿ ಬೆಂಗಳೂರು ಸೇರಿದ್ದಂತೆ ರಾಜ್ಯದಲ್ಲಿ 1645 ಅನಧಿಕೃತ ಶಾಲೆಗಳಿವೆ ಎಂದು ಶಿಕ್ಷಣ ಸಚಿವರೇ ಒಪ್ಪಿಕೊಂಡಿದ್ದಾರೆ. ಆದರೆ ಶಿಕ್ಷಣ ಇಲಾಖೆ ಮಾತ್ರ ಈವರೆಗೂ ಸೂಕ್ತಕ್ರಮ ಕೈಗೊಂಡಿಲ್ಲ. ಕ್ಷಣಕ್ಕೊಂದು ನಿಲವು ತೋರ್ತಿದೆ. ಇದು ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ.

ಅನಧಿಕೃತ ಶಾಲೆಗಳಿಂದ ಪೋಷಕರಿಗೆ ಶುರುವಾಯ್ತು ಟೆನ್ಷನ್; ಸರ್ಕಾರದ ನಡೆ ವಿರುದ್ಧ ಆಕ್ರೋಶ
ಸಾಂದರ್ಭಿಕ ಚಿತ್ರ
Follow us
Vinay Kashappanavar
| Updated By: ಆಯೇಷಾ ಬಾನು

Updated on: Nov 02, 2023 | 9:32 AM

ಬೆಂಗಳೂರು, ನ.02: ಮಕ್ಕಳನ್ನ ಚೆನ್ನಾಗಿ ಓದಿಸಬೇಕು, ಒಳ್ಳೆ ಶಿಕ್ಷಣ ನೀಡಿ ಐಎಎಸ್ ಐಪಿಎಸ್ ಹುದ್ದೆಗೇರಿಸಬೇಕು ಅಂತಾ ಅದೇಷ್ಟೋ ಪೋಷಕರು ಹಗಲಿರುಳು ಕಷ್ಟಪಟ್ಟು ದುಡಿದು ಲಕ್ಷ ಲಕ್ಷ ಶುಲ್ಕ ಕಟ್ಟಿ ಖಾಸಗಿ ಶಾಲೆಗಳಿಗೆ ಕಳಿಸ್ತಾರೆ. ಮಕ್ಕಳನ್ನ ಹೈಟೆಕ್ ಶಾಲೆ ಸಿಬಿಎಸ್ಇ ಸಿಲೆಬಸ್ ಅಂದ್ರೆ ಹಿಂದೆ ಮುಂದೆ ನೋಡ್ದೆ ಪ್ರತಿಷ್ಠತೆಯನ್ನೇ ಪಣಕ್ಕಿಟ್ಟು ಮಕ್ಕಳ ದಾಖಲಾತಿ ಮಾಡಿಸ್ತಾರೆ. ಆದರೆ ಲಕ್ಷ ಲಕ್ಷ ಶುಲ್ಕ ಕಟ್ಟಿಸಿಕೊಂಡ ಶಾಲೆಗಳು ಪೋಷಕರ ಕನಸು ಆಸೆಗಳಿಗೆ ಬೆಂಕಿ ಹಚ್ಚುತ್ತಿವೆ (unauthorised Schools). ಸಿಲಿಕಾನ್ ಸಿಟಿ ಬೆಂಗಳೂರು ಸೇರಿದ್ದಂತೆ ರಾಜ್ಯದಲ್ಲಿ 1645 ಅನಧಿಕೃತ ಶಾಲೆಗಳಿವೆ ಎಂದು ಶಿಕ್ಷಣ ಸಚಿವರೇ ಒಪ್ಪಿಕೊಂಡಿದ್ದಾರೆ. ಆದರೆ ಶಿಕ್ಷಣ ಇಲಾಖೆ ಮಾತ್ರ ಈವರೆಗೂ ಸೂಕ್ತಕ್ರಮ ಕೈಗೊಂಡಿಲ್ಲ. ಕ್ಷಣಕ್ಕೊಂದು ನಿಲವು ತೋರ್ತಿದೆ. ಇದು ಪೋಷಕರ ಆಕ್ರೋಶಕ್ಕೆ ಕಾರಣವಾಗಿದೆ.

ಪೋಷಕರಿಗೆ ರಾಜ್ಯದ ಅನಧಿಕೃತ ಶಾಲೆಗಳು ಹೊಸ ಟೆನ್ಷನ್ ತಂದಿಟ್ಟಿವೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನವೆಂಬರ್ ನಿಂದಲೇ 2023 -24 ನೇ ಶೈಕ್ಷಣಿಕ ವರ್ಷಕ್ಕೆ ದಾಖಲಾತಿ ಶುರುವಾಗಿದೆ. ಈಗಾಗಲೇ ಅನೇಕ ಶಾಲೆಗಳು ಮುಂದಿನ ವರ್ಷದ ದಾಖಲಾತಿ ಶುರು ಮಾಡಿವೆ. ಆದರೆ ಪೋಷಕರಿಗೆ ಮಾತ್ರ ಇದು ದೊಡ್ಡ ಸಮಸ್ಯೆಯಾಗಿದೆ. ಕೆಲವು ಅನಧಿಕೃತ ಶಾಲೆಗಳು ಕೂಡಾ ಮುಂದಿನ ಶೈಕ್ಷಣಿಕ ವರ್ಷದ ದಾಖಲಾತಿ ಶುರು ಮಾಡಿಕೊಂಡಿವೆ. ಪೋಷಕರಿಗೆ ಅನಧಿಕೃತ ಶಾಲೆಗಳ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಇಲ್ಲದ ಕಾರಣ ಮಕ್ಕಳನ್ನು ಯಾವ ಶಾಲೆಗೆ ಸೇರಿಸಬೇಕು ಎಂಬ ತಲೆ ನೋವು ಉಂಟಾಗಿದೆ.

ಇದನ್ನೂ ಓದಿ: ಮೈಸೂರು ಹುಲಿ ದಾಳಿ ಪ್ರಕರಣ: ಶೀಘ್ರದಲ್ಲೇ ಕೂಂಬಿಂಗ್ ಆಪರೇಷನ್ ಮಾಡಿಸುವುದಾಗಿ ಭರವಸೆ ಕೊಟ್ಟ ಶಾಸಕ ದರ್ಶನ್ ಧ್ರುವನಾರಾಯಣ್

ಸದ್ಯ ಸಿಲಿಕಾನ್ ಸಿಟಿ ಬೆಂಗಳೂರು ಸೇರಿದ್ದಂತೆ ರಾಜ್ಯದಲ್ಲಿ 1645 ಅನಧಿಕೃತ ಶಾಲೆಗಳಿವೆ ಎಂದು ಶಿಕ್ಷಣ ಇಲಾಖೆಯೇ ಒಪ್ಪಿಕೊಂಡಿದೆ. ಆದರೆ ಸರ್ಕಾರ ಈ ಅನಧಿಕೃತ ಶಾಲೆಗಳ ಪಟ್ಟಿಯನ್ನ ವೆಬ್ ಸೈಟ್, ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸುತ್ತಿಲ್ಲ. ಅನಧಿಕೃತ ಶಾಲೆಗಳ ಮುಂದೆ ಶಿಕ್ಷಣ ಇಲಾಖೆ ಯಾವುದೇ ಬೋರ್ಡ್ ಅಥವಾ ನೋಟಿಸ್ ಕೂಡಾ ಹಾಕಿಲ್ಲ. ಇಲಾಖೆಯ ವೆಬ್ ಸೈಟ್ ಪತ್ರಿಕಾ ಪ್ರಕಟಣೆ ಕೂಡಾ ನೀಡುತ್ತಿಲ್ಲ. ಇದು ಪೋಷಕರ ಟೆನ್ಷನ್ ಗೆ ಕಾರಣವಾಗಿದೆ. ಇಲಾಖೆ ಗರುತಿಸಿರುವ ಅನಧಿಕೃತ ಶಾಲೆ ಯಾವವು ಎಂಬ ಮಾಹಿತಿ ತಿಳಿಯದಾಗಿದೆ. ಇದರಿಂದ ಯಾವ ಶಾಲೆಗೆ ದಾಖಲಾತಿ ಮಾಡಿಸಬೇಕು ಯಾವುದು ಅನಧಿಕೃತ ಶಾಲೆ ಅಂತಾ ತಿಳಿಯದೇ ಪೋಷಕರು ಪರದಾಡುತ್ತಿದ್ದಾರೆ. ಹೀಗಾಗಿ ಶಿಕ್ಷಣ ಇಲಾಖೆ ಪೋಷಕರ ಸಮಿತಿ ಒತ್ತಾಯ ಶುರು ಮಾಡಿದೆ. ಶಿಕ್ಷಣ ಇಲಾಖೆ ಗುರುತಿಸಿರುವ 1645 ಅನಧಿಕೃತ ಶಾಲೆಗಳ ಪಟ್ಟಿಯನ್ನ ಪತ್ರಿಕಾ ಪ್ರಕಟಣೆ ನೀಡುವಂತೆ ಅಥವಾ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡುವಂತೆ, ಇಲ್ಲವೇ ಅನಧಿಕೃತ ಶಾಲೆಗಳ ಮುಂದೆ ಇಲಾಖೆಯ ನೋಟಿಸ್ ಬೋರ್ಡ್ ಆದ್ರೂ ಹಾಕುವಂತೆ ಒತ್ತಾಯ ಮಾಡಿದೆ. ಇಲ್ಲದೇ ಹೋದ್ರೆ ಶಿಕ್ಷಣ ಇಲಾಖೆ ವಿರುದ್ಧ ಪೋಷಕರು ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಮಾಡುವ ಎಚ್ಚರಿಕೆ ನೀಡಿದ್ದಾರೆ.

ಈಗಾಗಲೇ ಕೆಲವು ಶಾಲೆಗಳು ಮುಂದಿನ ಶೈಕ್ಷಣಿಕ ವರ್ಷಕ್ಕೆ ಅಂದ್ರೆ 2023-24 ಕ್ಕೆ ದಾಖಲಾತಿ ನೀಡಲು ಮುಂದಾಗಿವೆ. ಆದರೆ ಶಿಕ್ಷಣ ಇಲಾಖೆ ಇದುವರೆಗೂ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿನ ಅನಧಿಕೃತ ಶಾಲೆಗಳ ಪಟ್ಟಿಯನ್ನ ಜಾಲತಾಣದಲ್ಲಿ ಹಾಕಿ ಬಹಿರಂಗ ಪಡಿಸಿ ಆದೇಶ ಮಾಡಿ ಕ್ರಮಕ್ಕೆ ಮುಂದಾಗಿಲ್ಲ. ಇದು ಪೋಷಕರ ಟೆನ್ಷನ್ ಗೆ ಕಾರಣವಾಗಿದ್ದು ಈ ಬಗ್ಗೆ ಶಿಕ್ಷಣ ಸಚಿವರು ಹಾಗೂ ಆಯುಕ್ತರು ಮಾಧ್ಯಮಗಳಿಗೆ ಯಾವುದೇ ಮಾಹಿತಿ ಕೂಡಾ ನೀಡದೇ ದಿವ್ಯ ನಿರ್ಲಕ್ಷ್ಯವಹಿಸಿದ್ದಾರೆ.

ಒಟ್ನಲ್ಲಿ ಬೆಂಗಳೂರು ಸೇರಿದಂತೆ ಹಲವಡೆ ಪೋಷಕರಿಗೆ ಮಕಮಲ್ ಟೋಪಿ ಹಾಕಿರುವ ಅನಧಿಕೃತ ಶಾಲೆಗಳ ಪಟ್ಟಿಯನ್ನು ಶಿಕ್ಷಣ ಇಲಾಖೆ ಪ್ರಕಟ ಮಾಡಬೇಕಿದೆ. ಮುಂದಿನ ದಿನಗಳಲ್ಲಿ ಪೋಷಕರು ಮೋಸ ಹೋಗದಂತೆ ತಡೆಯಲು ಈ ಅನಧಿಕೃತ ಶಾಲೆಗಳ ಪಟ್ಟಿ ನೀಡಿ ಅತಂಹ ಶಾಲೆಗಳ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಬೇಕಿದೆ.

ಬೆಂಗಳೂರಿಗೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಹರಿದು ಚಿಂದಿಯಾಗಿರುವ ಈ ಶರ್ಟ್​​​ ಬೆಲೆ 2.14 ಲಕ್ಷ ರೂ.
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಪ್ರತಿಭಟನೆ ಮಾಡಿ ನ್ಯಾಯ ಕೇಳುವವರಿಗೆ ಎಳನೀರು, ಕಾಫಿಯೇ? ಕುಮಾರಸ್ವಾಮಿ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಸಚಿನ್ ಕುಟುಂಬಕ್ಕೆ ರಾಜ್ಯ ಸರ್ಕಾರದ ಮೇಲೆ ನಂಬಿಕೆ ಇಲ್ಲ: ಆರ್ ಅಶೋಕ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಆದರೆ ಕಾಂಗ್ರೆಸ್ ಕಾರ್ಯಕರ್ತರ ಪಾನೀಯಗಳು ಯಾರಿಗಾಗಿ? ಕನ್ನಡಿಗರ ಪ್ರಶ್ನೆ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು