AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆಳ ಮನೆ ಆಂಟಿ ಜೊತೆ ಅಂಕಲ್ ಎಸ್ಕೇಪ್ ಕೇಸ್; ಇತ್ತ ಠಾಣೆಯಲ್ಲಿ ನವೀದ್ ಪ್ರತ್ಯಕ್ಷ, ಅತ್ತ ಗಂಡನಿಗೆ ಡಿವೋರ್ಸ್ ಕಳಿಸಿದ ಪತ್ನಿ

ನವೀದ್ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ್ಷವಾಗುತ್ತಿದ್ದಂತೆ ನಾಪತ್ತೆಯಾಗಿದ್ದ ಶಾಜಿಯಾ ತನ್ನ ಗಂಡ ಮುಬಾರಕ್​ಗೆ ವಕೀಲರೊಟ್ಟಿಗೆ ಡಿವೋರ್ಸ್ ಪೇಪರ್ ಕಳಿಸಿಕೊಟ್ಟಿದ್ದಾರೆ.

ಕೆಳ ಮನೆ ಆಂಟಿ ಜೊತೆ ಅಂಕಲ್ ಎಸ್ಕೇಪ್ ಕೇಸ್; ಇತ್ತ ಠಾಣೆಯಲ್ಲಿ ನವೀದ್ ಪ್ರತ್ಯಕ್ಷ, ಅತ್ತ ಗಂಡನಿಗೆ ಡಿವೋರ್ಸ್ ಕಳಿಸಿದ ಪತ್ನಿ
ಜ್ಞಾನಭಾರತಿ ಪೊಲೀಸ್ ಠಾಣೆ
TV9 Web
| Updated By: ಆಯೇಷಾ ಬಾನು|

Updated on: Feb 01, 2023 | 7:50 AM

Share

ಬೆಂಗಳೂರು: ಕೆಳ ಮನೆ ಆಂಟಿ ಜೊತೆ ಎಸ್ಕೇಪ್ ಆಗಿದ್ದ ಲವರ್ ಬಾಯ್ ಅಂಕಲ್ ನವೀದ್ ಪ್ರತ್ಯೇಕ್ಷರಾಗಿದ್ದಾರೆ. ಹಲವು ದಿನದ ಬಳಿಕ ತಡರಾತ್ರಿ ವಕೀಲರ ಜೊತೆ ಜ್ಞಾನಭಾರತಿ ಪೊಲೀಸ್ ಠಾಣೆಗೆ ಹಾಜರಾಗಿದ್ದಾರೆ. ಶಾಜಿಯಾಳನ್ನ ನಾನು ಕರೆದುಕೊಂಡು ಹೋಗಿಲ್ಲ ನನ್ನ ಕೆಲಸದ ಮೇಲೆ ಹೋಗಿದ್ದಾಗಿ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾನೆ.

2022ರ ಡಿಸೆಂಬರ್, 9ರಂದು ಕೆಳ ಮಹಡಿಯ ನವೀದ್ ಹಾಗೂ ಮೇಲ್ಮನೆಯಲ್ಲಿದ್ದ ಶಾಜಿಯಾ ಪರಾರಿಯಾಗಿದ್ದಾರೆಂದು ಎರಡೂ ಕುಟುಂಬದವರು ಜ್ಞಾನಭಾರತಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಸದ್ಯ ಈ ಘಟನೆಗೆ ಟ್ವಿಸ್ಟ್ ಸಿಕ್ಕಿದೆ. ಪರಾರಿಯಾಗಿದ್ದ ನವೀದ್ ಪ್ರತ್ಯೇಕ್ಷರಾಗಿದ್ದಾರೆ.

ಇತ್ತ ನಾವೀದ್ ಪ್ರತ್ಯಕ್ಷ, ಅತ್ತ ಗಂಡನಿಗೆ ಡಿವೋರ್ಸ್ ಪೇಪರ್ ಕಳಿಸಿಕೊಟ್ಟ ಶಾಜಿಯಾ

ನವೀದ್ ಪತ್ನಿ ಝೀನತ್ ತನ್ನ ಗಂಡ ಕಾಣಿಯಾಗಿದ್ದಾನೆಂದು ದೂರು ಕೊಟ್ಟಿದ್ದರು. ನನ್ನ ಗಂಡನನ್ನ ಕರೆದುಕೊಂಡು ಬಂದಿರುವ ಪೊಲೀಸರು ನನ್ನ ಜೊತೆ ಕಳಿಸಿದೆ ವಕೀಲರೊಟ್ಟಿಗೆ ಕಳಿಸಿದ್ದಾರೆಂದು ಝೀನತ್ ಪೊಲೀಸರ ಮೇಲೆ ದೂರುತ್ತಿದ್ದಾರೆ. ಆದ್ರೆ ಮತ್ತೊಂದೆಡೆ ನವೀದ್ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ್ಷವಾಗುತ್ತಿದ್ದಂತೆ ನಾಪತ್ತೆಯಾಗಿದ್ದ ಶಾಜಿಯಾ ತನ್ನ ಗಂಡ ಮುಬಾರಕ್​ಗೆ ವಕೀಲರೊಟ್ಟಿಗೆ ಡಿವೋರ್ಸ್ ಪೇಪರ್ ಕಳಿಸಿಕೊಟ್ಟಿದ್ದಾರೆ.

ಡಿವೋರ್ಸ್ ಪೇಪರ್ ಹಾಗೂ ನವೀದ್ ಒಟ್ಟಿಗೆ ಬಂದಿದ್ದರಿಂದ ನವೀದ್ ಮತ್ತು ಶಾಜಿಯಾ ಒಟ್ಟಿಗೆ ಇರುವುದರ ಬಗ್ಗೆ ಎರಡು ಮನೆ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸುತ್ತಿದ್ದಾರೆ. ನವೀದ್ ಜೊತೆ ಹೋಗಿರೋ ಶಾಜಿಯಾ ಈ ಹಿಂದೆ ಕೂಡ ಬೇರೊಬ್ಬನ ಜೊತೆ ಓಡಿ ಹೋಗಿದ್ದರು ಎನ್ನಲಾಗಿದೆ. ಜ್ಞಾನಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯ ಮಾರುತಿ ನಗರದಲ್ಲಿ ವಾಸವಾಗಿದ್ದಾರೆ. ನವೀದ್ ಹಾಗೂ ಮುಬಾರಕ್ ದಂಪತಿಗೆ ಎರಡೆರಡು ಮಕ್ಕಳು ಇದ್ದಾರೆ. ಕೆಳ ಮಹಡಿಯಲ್ಲಿ ಮುಬಾರಕ್ ಮತ್ತು ಶಾಜಿಯಾ ದಂಪತಿ ವಾಸವಾಗಿದ್ದರು. ಮತ್ತು ಎರಡನೇ ಮಹಡಿಯಲ್ಲಿ ನವೀದ್, ಝೀನತ್ ದಂಪತಿ ವಾಸವಾಗಿದ್ದರು. ಮುಬಾರಕ್ ಪತ್ನಿ ಶಾಜಿಯಾ ಜೊತೆಗೆ ಝೀನತ್ ಪತಿ ನವೀದ್​ಗೆ ಅನೈತಿಕ ಸಂಬಂಧವಿರುವ ಆರೋಪ ಕೇಳಿ ಬಂದಿದೆ. ಇಬ್ಬರಿಂದ ಜ್ಙಾನಭಾರತಿ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ‌ ಮಿಸ್ಸಿಂಗ್ ದೂರು ದಾಖಲಾಗಿದ್ದು ನವೀದ್ ಈಗ ಠಾಣೆಗೆ ಬಂದಿದ್ದಾರೆ. ಹೀಗಾಗಿ ವಿಚಾರಣೆ ಬಳಿಕವಷ್ಟೆ ಸತ್ಯ ಬಯಲಾಗಬೇಕಿದೆ.

ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ