ಅಮೆರಿಕಾದ NSF ನಿರ್ದೇಶಕರಾಗಿ ಸೇತುರಾಮ್ ಪಂಚನಾಥನ್ ಆಯ್ಕೆ

ಬೆಂಗಳೂರು: ಅಮೆರಿಕಾದ ನ್ಯಾಷನಲ್ ಸೈನ್ಸ್ ಫೌಂಡೇಷನ್ ನಿರ್ದೇಶಕರಾಗಿ ಭಾರತೀಯ ಮೂಲದ ಸಂಶೋಧಕ ಸೇತುರಾಮ್ ಪಂಚನಾಥನ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಪಂಚನಾಥನ್ ಎನ್​ಎಸ್​ಎಫ್​ನ ನ್ಯಾಷನಲ್ ಸರ್ವಿಸ್ ಬೋರ್ಡ್​ನಲ್ಲಿ ದೀರ್ಘ ಕಾಲದವರೆಗೆ ಕಾರ್ಯನಿರ್ವಹಿಸಿದ್ದರು. ಇದೀಗ ಅಮೆರಿಕ ಸೆನೆಟ್​ನಲ್ಲಿ ಸೇತುರಾಮ್ ಪಂಚನಾಥನ್ ಆಯ್ಕೆ ಮಾಡಲಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪಂಚನಾಥನ್​ರನ್ನು ಜನವರಿ ತಿಂಗಳಲ್ಲಿ ನೇಮಕ ಮಾಡಿದ್ದರು. ಜುಲೈ 2ರಂದು ಅಧಿಕಾರ ಸ್ವೀಕರಿಸಲಿರೋ ಪಂಚನಾಥನ್, ಜುಲೈ 6ರಂದು ಕರ್ತವ್ಯ ಆರಂಭಿಸಲಿದ್ದಾರೆ.

ಅಮೆರಿಕಾದ NSF ನಿರ್ದೇಶಕರಾಗಿ ಸೇತುರಾಮ್ ಪಂಚನಾಥನ್ ಆಯ್ಕೆ
Edited By:

Updated on: Jun 21, 2020 | 7:28 PM

ಬೆಂಗಳೂರು: ಅಮೆರಿಕಾದ ನ್ಯಾಷನಲ್ ಸೈನ್ಸ್ ಫೌಂಡೇಷನ್ ನಿರ್ದೇಶಕರಾಗಿ ಭಾರತೀಯ ಮೂಲದ ಸಂಶೋಧಕ ಸೇತುರಾಮ್ ಪಂಚನಾಥನ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಪಂಚನಾಥನ್ ಎನ್​ಎಸ್​ಎಫ್​ನ ನ್ಯಾಷನಲ್ ಸರ್ವಿಸ್ ಬೋರ್ಡ್​ನಲ್ಲಿ ದೀರ್ಘ ಕಾಲದವರೆಗೆ ಕಾರ್ಯನಿರ್ವಹಿಸಿದ್ದರು. ಇದೀಗ ಅಮೆರಿಕ ಸೆನೆಟ್​ನಲ್ಲಿ ಸೇತುರಾಮ್ ಪಂಚನಾಥನ್ ಆಯ್ಕೆ ಮಾಡಲಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪಂಚನಾಥನ್​ರನ್ನು ಜನವರಿ ತಿಂಗಳಲ್ಲಿ ನೇಮಕ ಮಾಡಿದ್ದರು. ಜುಲೈ 2ರಂದು ಅಧಿಕಾರ ಸ್ವೀಕರಿಸಲಿರೋ ಪಂಚನಾಥನ್, ಜುಲೈ 6ರಂದು ಕರ್ತವ್ಯ ಆರಂಭಿಸಲಿದ್ದಾರೆ.

Published On - 5:51 pm, Sun, 21 June 20