Veeraloka Books release: ರವಿವಾರ ಉತ್ತರ ಕರ್ನಾಟಕದ ಹತ್ತು ಕೃತಿಗಳ ಲೋಕಾರ್ಪಣೆ: ಟಿವಿ9 ರವೀಂದ್ರ ಮುದ್ದಿ ಪುಸ್ತಕವೂ ಬಿಡುಗಡೆ

Raveendra Muddi varada teerada kathegalu: ವೀರಲೋಕ ಪ್ರಕಾಶನ ವತಿಯಿಂದ ನಡೆದಿರುವ ಉತ್ತರ ಪರ್ವ ಎಂಬ ವಿನೂತನ ಕಥಾ ಸುಗ್ಗಿಯಲ್ಲಿ ಆಯ್ಕೆ ಆದ ಉತ್ತರ ಕರ್ನಾಟಕದ 10 ಕೃತಿಗಳು ಭಾನುವಾರ (ಆ 4) ಚಾಮರಾಜಪೇಟೆಯಲ್ಲಿರುವ ಸಾಹಿತ್ಯ ಪರಿಷತ್ತು ಸಭಾಭವನದಲ್ಲಿ ಲೋಕಾರ್ಪಣೆಯಾಗಲಿವೆ. ಈ ಟಾಪ್ 10 ಕೃತಿಗಳಲ್ಲಿ ಟಿವಿ9 ಹಿರಿಯ ನಿರ್ಮಾಪಕ ರವೀಂದ್ರ ಮುದ್ದಿ ಅವರ “ವರದಾ ತೀರದ ಕತೆಗಳು” ಕೃತಿ ಕೂಡ ಬಿಡುಗಡೆ ಆಗಲಿದೆ.

Veeraloka Books release: ರವಿವಾರ ಉತ್ತರ ಕರ್ನಾಟಕದ ಹತ್ತು ಕೃತಿಗಳ ಲೋಕಾರ್ಪಣೆ: ಟಿವಿ9 ರವೀಂದ್ರ ಮುದ್ದಿ ಪುಸ್ತಕವೂ ಬಿಡುಗಡೆ
ಭಾನುವಾರ ಉತ್ತರ ಕರ್ನಾಟಕದ ಹತ್ತು ಕೃತಿಗಳ ಲೋಕಾರ್ಪಣೆ
Follow us
ಆಯೇಷಾ ಬಾನು
|

Updated on: Aug 03, 2024 | 11:31 AM

ಬೆಂಗಳೂರು, ಆಗಸ್ಟ್.03: ಬೆಂಗಳೂರಿನ ವೀರಲೋಕ ಪ್ರಕಾಶನವು (Veeraloka Books) ‘ಉತ್ತರ ಪರ್ವ’ ಎಂಬ ವಿನೂತನ ಕಥಾ ಸುಗ್ಗಿ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು. ಇದರಲ್ಲಿ ವಿಶೇಷವಾಗಿ ಉತ್ತರ ಕರ್ನಾಟಕ ಲೇಖಕರನ್ನೇ ಕೇಂದ್ರೀಕರಿಸಿ ಮೊದಲ ಹಂತದಲ್ಲಿ ಪ್ರಕಟಣೆಗೆ 10 ಲೇಖಕರ ಕೃತಿಗಳು ಆಯ್ಕೆಯಾಗಿದ್ದು ಭಾನುವಾರ ಬೆಳಗ್ಗೆ 10 ಗಂಟೆಗೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ  ಕನ್ನಡ ಸಾಹಿತ್ಯ ಪರಿಷತ್ತು ಸಭಾಭವನದಲ್ಲಿ ಪುಸ್ತಕಗಳು ಲೋಕಾರ್ಪಣೆಗೊಳ್ಳಲಿವೆ.

ಉತ್ತರ ಪರ್ವ ಕಥಾ ಸುದ್ದಿಗೆ ನೂರಕ್ಕೂ ಹೆಚ್ಚು ಕೃತಿಗಳು ಆಯ್ಕೆಗಾಗಿ ಬಂದಿದ್ದವು. ಸಾಹಿತಿಗಳಾದ ರಾ.ಗಂ. ಅವರ ಸಂಪಾದಕತ್ವದಲ್ಲಿ ಮೂರು ಹಂತದ ಆಯ್ಕೆಯಲ್ಲಿ ಹತ್ತು ವಿಭಿನ್ನ ಕೃತಿಗಳನ್ನು ಆಯ್ಕೆ ಮಾಡಲಾಗಿದೆ.

  • ಶೇಕ್ಷಾವಲಿ ಮಣಿಗಾರ – ಆ ವದನ
  • ಮರ್ತುಜಾಬೇಗಂ ಕೊಡಗಲಿ – ಪರಸ್ಪರ ಮತ್ತಿತರ ಕೃತಿಗಳು
  • ಡಾ.ಸದಾಶಿವ ದೊಡಮನಿ – ಇರುಳ ಬಾಗಿಲಿಗೆ ಕಣ್ಣ ದೀಪ
  • ರವೀಂದ್ರ ಮುದ್ದಿ – ವರದಾ ತೀರದ ಕಥೆಗಳು
  • ಸಿ.ವಿ.ವೀರುಪಾಕ್ಷ – ಖದೀಜಾ
  • ಶ್ರೀಧರ ಗಸ್ತಿ – ಚಂದ್ರಾ ಲೇಔಟ್
  • ಪ್ರಕಾಶ ಗಿರಿಮಲ್ಲನವರ – ಜನನಾಯಕ
  • ಬಿಜೆ ಪಾರ್ವತಿ ವಿ. ಸೋನಾರೆ – ಓಡಿ ಹೋದಾಕಿ
  • ಕವಿತಾ ಹೆಗಡೆ ಅಭಯಂ – ಇತ್ತ ಹಾಯಲಿ ಚಿತ್ತ
  • ನವ್ಯ ಆರ್ ಕತ್ತಿ – ಮಾಯಾ ಗುಹೆಇದನ್ನೂ ಓದಿ: Veeraloka Books: ‘ಉತ್ತರ ಪರ್ವ’ದಲ್ಲಿ ಟಿವಿ9 ರವೀಂದ್ರ ಮುದ್ದಿ ಪುಸ್ತಕ ಟಾಪ್-10ಗೆ ಆಯ್ಕೆ

    ಆಯ್ಕೆಯಾದ ಈ ಎಲ್ಲ ಲೇಖಕರ ಕೃತಿಗಳು ನಾಳೆ ಅಂದರೆ ಆಗಸ್ಟ್ 04ರ ಭಾನುವಾರ ಬೆಳಗ್ಗೆ 10ಗಂಟೆಗೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿರುವ ಕನ್ನಡ  ಸಾಹಿತ್ಯ ಪರಿಷತ್ತು ಸಭಾ ಭವನದಲ್ಲಿ ಲೋಕಾರ್ಪಣೆ ಆಗಲಿವೆ. ಕೃತಿಕಾರರಿಗೆ ರಾಯಧನ ಮತ್ತು ಪುಸ್ತಕಗಳನ್ನು ನೀಡಿ ಗೌರವಿಸಲಾಗುವುದು. ಅತಿಥಿಗಳಾಗಿ ಖ್ಯಾತ ಚಲನಚಿತ್ರ ನಿರ್ದೇಶಕರಾದ ಶ್ರೀ ಬಿ.ಸುರೇಶ, ರಾ.ಗಂ, ಕರ್ಕಿ ಕೃಷ್ಣಮೂರ್ತಿ, ಮಧು ವೈ.ಎನ್, ಪ್ರಕಾಶಕ ವೀರಕಪುತ್ರ ಶ್ರೀನಿವಾಸ ಅವರುಗಳು ಉಪಸ್ಥಿತರಿರುತ್ತಾರೆ ಎಂದು ವ್ಯವಸ್ಥಾಪಕರಾದ ಅನಂತ ಕುಣಿಗಲ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    veeraloka books uttara parva 10 book releasing on sunday august 04th tv9 senior producer ravindra muddi varada teerada kathegalu

    ರವಿ ಮುದ್ದಿ

    ಟಿವಿ9 ಹಿರಿಯ ನಿರ್ಮಾಪಕ ರವೀಂದ್ರ ಮುದ್ದಿ ಪುಸ್ತಕವೂ ಬಿಡುಗಡೆ:

    “ಉತ್ತರ ಪರ್ವ” ಯೋಜನೆಗೆ ಬಂದಿದ್ದ ನೂರಾರು ಕೃತಿಗಳಲ್ಲಿ ಪ್ರಕಟಣೆಗೆ ಆಯ್ಕೆಯಾದ ಟಾಪ್ ಹತ್ತು ಕೃತಿಗಳಲ್ಲಿ ಪತ್ರಕರ್ತ ರವೀಂದ್ರ ಮುದ್ದಿ ಅವರ “ವರದಾ ತೀರದ ಕತೆಗಳು” ಕೃತಿ ಕೂಡ ಭಾನುವಾರ ಬಿಡುಗಡೆ ಆಗಲಿದೆ.

    ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಬಟ್ಟೆ ಕದಿಯಲು ರಜತ್ ಪ್ಲ್ಯಾನ್; ಬಾತ್ ರೂಮ್​ನಲ್ಲಿ ಕಣ್ಣೀರು ಹಾಕಿದ ಗೌತಮಿ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಕೊಟ್ಟ ಖರ್ಗೆ ಆಪ್ತ
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
‘ನಾನು ಶಿಸ್ತುಬದ್ಧವಾಗಿ ಆಡಲಿಲ್ಲ’; ಆಸೀಸ್ ಪ್ರವಾಸದ ಬಗ್ಗೆ ಕೊಹ್ಲಿ ಮಾತು
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಚೈತ್ರಾ ಕುಂದಾಪುರ ಯಾವುದಕ್ಕೂ ಲಾಯಕ್ಕಿಲ್ಲ: ಸಾಕ್ಷಿ ಸಮೇತ ವಿವರಿಸಿದ ರಜತ್
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಪ್ರತಾಪ್​ ಸಿಂಹ ಬಕೆಟ್​​ ಹಿಡಿಯುವುದನ್ನು ನಿಲ್ಲಿಸಲಿ: ಬಿಜೆಪಿ ಮುಖಂಡ ಕಿಡಿ
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
ಕೊಹ್ಲಿ ಜೊತೆಗಿನ ಭುಜಬಲದ ಕಾಳಗದ ಬಗ್ಗೆ ಮೌನ ಮುರಿದ ಕೊನ್​ಸ್ಟಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
'ಹರೇ ರಾಮ, ಹರೇ ಕೃಷ್ಣ' ಮಂತ್ರ ಜಪಿಸಿದ ಸಾಂತಾಕ್ಲಾಸ್
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಆಧುನಿಕ ಗಾಂಧಿಗಳ ಕಟೌಟ್! ಕಾಂಗ್ರೆಸ್ ಅಧಿವೇಶನ ಬಗ್ಗೆ ಕುಮಾರಸ್ವಾಮಿ ವ್ಯಂಗ್ಯ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ಉಗ್ರಂ ಮಂಜು ತಲೆ ಮೇಲೆ ಬಾಟಲಿ ಹೊಡೆದ ಮೋಕ್ಷಿತಾ
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್
ವಾಟ್ ಎ ಬಾಲ್... ಡೇಂಜರಸ್ ಟ್ರಾವಿಸ್ ಹೆಡ್ ಕ್ಲೀನ್ ಬೌಲ್ಡ್