ಉತ್ತರಖಾಂಡ್​ನಲ್ಲಿ ಮೇಘಸ್ಫೋಟ; ಕೇದಾರನಾಥ್​ನಲ್ಲಿ ಸಿಲುಕಿದ ಬೆಂಗಳೂರಿನ ಯಾತ್ರಿಕರು

ಕರ್ನಾಟಕದ ಶಿರೂರು, ಕೇರಳದ ವಯನಾಡಿನ ದುರಂತದ ಬಳಿಕ ಇದೀಗ ಭೂಮಿ ಮೇಲಿನ ಸ್ವರ್ಗದಂತಿದ್ದ ಉತ್ತರಾಖಂಡ್ ನಲ್ಲಿ ಪ್ರಕೃತಿ ವಿಕೋಪಕ್ಕೆ ನಲುಗಿಹೋಗಿದೆ. ಮೇಘಸ್ಫೋಟದಿಂದ ತತ್ತರಿಸಿಹೋಗಿರೋ ಕೇದರನಾಥ್ ನಲ್ಲಿ ಕರ್ನಾಟಕದ ಯಾತ್ರಾರ್ಥಿಗಳು ಸಿಲುಕಿ ಪರದಾಡ್ತಿದ್ದಾರೆ. ಬೆಂಗಳೂರಿನಿಂದ ಕೇದಾರನಾಥ್ ಯಾತ್ರೆಗೆ ಹೊರಟಿದ್ದ ತಂಡ, ಪ್ರಕೃತಿ ವಿಕೋಪದಲ್ಲಿ ಸಿಲುಕಿ ಪರದಾಡುತ್ತಿದ್ದಾರೆ.

ಉತ್ತರಖಾಂಡ್​ನಲ್ಲಿ ಮೇಘಸ್ಫೋಟ; ಕೇದಾರನಾಥ್​ನಲ್ಲಿ ಸಿಲುಕಿದ ಬೆಂಗಳೂರಿನ ಯಾತ್ರಿಕರು
ಮೇಘಸ್ಫೋಟ; ಕೇದಾರನಾಥ್​ನಲ್ಲಿ ಸಿಲುಕಿದ ಬೆಂಗಳೂರಿನ ಯಾತ್ರಿಕರು
Follow us
ಶಾಂತಮೂರ್ತಿ
| Updated By: ಆಯೇಷಾ ಬಾನು

Updated on: Aug 03, 2024 | 9:07 AM

ಬೆಂಗಳೂರು, ಆಗಸ್ಟ್.03: ಒಂದೆಡೆ ಎಡೆಬಿಡದೇ ಸುರಿವ ಮಳೆ, ಮತ್ತೊಂದೆಡೆ ಮೇಘಸ್ಫೋಟದ ಎಫೆಕ್ಟ್​ನಿಂದ ಕುಸಿಯುತ್ತಿರೋ ಗುಡ್ಡಗಳು, ಪ್ರಕೃತಿಯ ರೌದ್ರ ನರ್ತನದ ಸುಳಿಯಲ್ಲಿ ಸಿಲುಕಿರೋ ಉತ್ತರಾಖಂಡ್ ನ ಕೇದಾರನಾಥ್ ನಲ್ಲಿ ಯಾತ್ರಾರ್ಥಿಗಳು ನಲುಗಿಹೋಗಿದ್ದಾರೆ. ಮೇಘಸ್ಫೋಟದಿಂದ ಕೇದಾರ್‌ನಾಥ್​ನ (Kedarnath) ಹಲವೆಡೆ ಗುಡ್ಡ ಕುಸಿತ ಉಂಟಾಗಿದ್ದು, ಬೆಂಗಳೂರಿನಿಂದ ಕೇದಾರನಾಥನ ದರ್ಶನಕ್ಕೆ ತೆರಳಿದ್ದ ಕನ್ನಡಿಗರು ಪರದಾಡ್ತಿದ್ದಾರೆ.

ಪ್ರಕೃತಿ ಸೌಂದರ್ಯದ ಜೊತೆ ಪುಣ್ಯಕ್ಷೇತ್ರದ ದರ್ಶನಕ್ಕೆ ಅಂತಾ ಬೆಂಗಳೂರಿನಿಂದ ಕೇದಾರನಾಥ್ ಗೆ ತೆರಳಿದ್ದ 15 ಜನ ಸ್ನೇಹಿತರ ತಂಡ ಕೇದಾರನಾಥ್ ನಲ್ಲಿ ದಿಕ್ಕು ತೋಚದೇ ಕಂಗಾಲಾಗಿದ್ದಾರೆ. ಬೆಂಗಳೂರಿನ ಬೇರೆ ಬೇರೆ ಏರಿಯಾಗಳಿಂದ ಹೊರಟಿದ್ದ 15 ಜನರ ಪೈಕಿ, 6 ಜನರು ಸಂಪರ್ಕಕ್ಕೆ ಸಿಗದೇ ಇರೋದು ಇತರರನ್ನ ಕಂಗಾಲಾಗಿಸಿದೆ. ತಿನ್ನೋಕೆ ಊಟವು ಇಲ್ಲದೇ ಬಿಸ್ಕೆಟ್ ತಿಂದು ಎರಡ್ಮೂರು ದಿನ ಕಾಲ ನೂಕಿದ್ದ ಕನ್ನಡಿಗರ ಪೈಕಿ 5 ಜನರನ್ನ ರಕ್ಷಣಾತಂಡ ಸುರಕ್ಷಿತ ಸ್ಥಳಕ್ಕೆ ರವಾನಿಸಿದೆ. ಉಳಿದ ಕನ್ನಡಿಗರು ರೆಸ್ಕ್ಯೂ ಪಾಯಿಂಟ್ ನಲ್ಲಿ ರಕ್ಷಣೆಗೆ ಕಾದು ನಿಂತ ಜನರ ಗುಂಪಿನ ಜೊತೆ ಕಾದುಕುಳಿತಿದ್ದಾರೆ.

ಇದನ್ನೂ ಓದಿ: ಮಳೆಯಿಂದ ಅತಿವೃಷ್ಟಿ ಅನಾಹುತ ಕಡಿಮೆಯಾಗಲೆಂದು ಕಳಸೇಶ್ವರನಿಗೆ ಅಗಿಲು ಸೇವೆ ಸಲ್ಲಿಸಿದ ಕಳಸ ಗ್ರಾಮಸ್ಥರು

ಇತ್ತ ಬೆಂಗಳೂರಿನಿಂದ ಕೇದಾರನಾಥ್ ಗೆ ಹೊರಟಿದ್ದ 20 ಸದಸ್ಯರಿದ್ದ ಮತ್ತೊಂದು ತಂಡ ರಕ್ಷಣಾ ಪಡೆಯ ನೆರವಿನಿಂದ ಸುರಕ್ಷಿತ ಸ್ಥಳಕ್ಕೆ ತಲುಪಿದ್ದು, 20ಜನರ ಪೈಕಿ ಓರ್ವ ವ್ಯಕ್ತಿ ಸಂಪರ್ಕಕ್ಕೆ ಸಿಗ್ತಿಲ್ಲ ಅಂತಾ ತಂಡದ ಸದಸ್ಯರು ಆತಂಕ ವ್ಯಕ್ತಪಡಿಸಿದ್ದಾರೆ. ಪ್ಯಾಕೇಜ್ ಟೂರ್ ನಲ್ಲಿ ಯಾತ್ರೆಗೆ ಹೊರಟಿದ್ದ ಈ ತಂಡ ಸದ್ಯ ಸುರಕ್ಷಿತ ಸ್ಥಳ ತಲುಪಿದ್ದು, ಯಾತ್ರೆ ವೇಳೆ ಆದ ಅನುಭವವನ್ನ ಯಾತ್ರಾರ್ಥಿಗಳು ಬಿಚ್ಚಿಟ್ಟಿದ್ದಾರೆ.

ಸದ್ಯ ದೇವರನಾಡಿನ ದುರಂತ ಮಾಸೋ ಮೊದಲೇ ಮಳೆರಾಯ ಉತ್ತರವನ್ನು ತತ್ತರ ಪಡುವಂತೆ ಮಾಡಿದ್ದು, ಕೇದಾರನಾಥ್ ನಲ್ಲಿ ಸಿಲುಕಿರೋ ಯಾತ್ರಾರ್ಥಿಗಳ ರಕ್ಷಣೆಗೆ ಸ್ಥಳೀಯ ಪೊಲೀಸರು, SDRF ತಂಡ ಕಾರ್ಯಾಚರಣೆ ಮುಂದುವರಿಸಿದೆ. ಸದ್ಯ ಬೆಂಗಳೂರಿನಿಂದ ಹೊರಟಿದ್ದ ಕನ್ನಡಿಗರು ರಕ್ಷಣಾ ಸ್ಥಳದಲ್ಲಿ ಸೇಫ್ ಆಗಿದ್ದು, ಆದಷ್ಟು ಬೇಗ ತವರು ಸೇರೋಕೆ ಕಾದುಕುಳಿತಿದ್ದಾರೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ