ಬೆಂಗಳೂರಿಗೆ ಗಣ್ಯ ವ್ಯಕ್ತಿಗಳು ಆಗಮಿಸಿತ್ತಾರೆಂದು ಮಾರ್ಗ ಬದಲಾವಣೆಗೆ ನಿರ್ಧಾರ: ರಿಚ್ಮಂಡ್ ಫ್ಲೈಓವರ್ ಮೇಲೆ ವಾಹನಗಳ ಸಂಚಾರಕ್ಕೆ ನಿರ್ಬಂಧ
ರಿಚ್ಮಂಡ್ ಫ್ಲೈಓವರ್ ಮೇಲೆ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಮಧ್ಯಾಹ್ನ 2.30ರಿಂದ ಸಂಜೆ 5.30ರವರೆಗೆ ಶಾಂತಿನಗರ, ನಂಜಪ್ಪ ವೃತ್ತದವರೆಗೆ ರಸ್ತೆ ಸಂಚಾರ ನಿರ್ಬಂಧ ಹೇರಲಾಗಿದೆ.
ಬೆಂಗಳೂರು: ರಾಷ್ಟ್ರಪತಿ ಸೇರಿದಂತೆ ಗಣ್ಯ ವ್ಯಕ್ತಿಗಳು ಬೆಂಗಳೂರಿಗೆ ಭೇಟಿ ನೀಡುತ್ತಿರುವ ಹಿನ್ನೆಲೆ ಸುಗಮ ಸಂಚಾರಕ್ಕೆ ಟ್ರಾಫಿಕ್ ಪೊಲೀಸರಿಂದ ಮಾರ್ಗ ಬದಲಾವಣೆ ಮಾಡಲಾಗಿದೆ. ರಿಚ್ಮಂಡ್ ಫ್ಲೈಓವರ್ ಮೇಲೆ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಮಧ್ಯಾಹ್ನ 2.30ರಿಂದ ಸಂಜೆ 5.30ರವರೆಗೆ ಶಾಂತಿನಗರ, ನಂಜಪ್ಪ ವೃತ್ತದವರೆಗೆ ರಸ್ತೆ ಸಂಚಾರ ನಿರ್ಬಂಧ ಹೇರಿ ಸಂಚಾರಿ ವಿಭಾಗದ ಜಂಟಿ ಆಯುಕ್ತ ರವಿಕಾಂತೇಗೌಡ ಆದೇಶ ಹೊರಡಿಸಿದ್ದಾರೆ.
ಅಂಗಾಂಗ ದಾನ ಮಾಡಿ ಕುಟುಂಬಸ್ಥರಿಂದ ಮಾನವೀಯತೆ
ಬೆಂಗಳೂರು: ರಸ್ತೆ ಅಪಘಾತದಲ್ಲಿ ಯುವಕನ ಮೆದುಳು ನಿಷ್ಕ್ರಿಯ ಹಿನ್ನೆಲೆ ಕುಟುಂಬಸ್ಥರು ಅಂಗಾಂಗ ದಾನ ಮಾಡಿ ಮಾನವೀಯತೆ ಮೆರೆದ ಘಟನೆ ನಗರದಲ್ಲಿ ನಡೆದಿದೆ. ದೀಪಕ್(26)ನ ಅಂಗಾಂಗ ದಾನ ಮಾಡಲಾಗಿದೆ. ಸೆ.25ರಂದು ನೈಸ್ ರಸ್ತೆಯಲ್ಲಿ ನಿಂತಿದ್ದ ಕ್ಯಾಂಟರ್ಗೆ ಹಿಂಬದಿಯಿಂದ ಕಾರು ಬಂದು ಡಿಕ್ಕಿಯಾಗಿ ದೀಪಕ್ ಮೆದುಳು ನಿಷ್ಕ್ರಿಯಗೊಂಡಿತ್ತು. ಈ ಹಿನ್ನಲೆ ಮೃತನ ಕಿಡ್ನಿ, ಕಣ್ಣು, ಚರ್ಮ ಸೇರಿದಂತೆ ಅಂಗಾಂಗ ದಾನ ಮಾಡಲಾಗಿದೆ. ಸದ್ಯ ಆರ್.ಆರ್.ನಗರದ ಎಸ್ ಎಸ್ ಸ್ಪರ್ಶ್ ಆಸ್ಪತ್ರೆಯಲ್ಲಿ ಮೃತದೇಹ ಇರಿಸಲಾಗಿದ್ದು ಇಂದು ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರಿಸಲಾಗುತ್ತೆ. ಇದನ್ನೂ ಓದಿ: Rajasthan Politics: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಮಲ್ಲಿಕಾರ್ಜನ ಖರ್ಗೆ ವರದಿ; ಹೈಕಮಾಂಡ್ಗೆ ಸೆಡ್ಡು ಹೊಡೆದ ಅಶೋಕ್ ಗೆಹ್ಲೋಟ್ ಬೆಂಬಲಿಗರಿಗೆ ನೊಟೀಸ್ ಸಾಧ್ಯತೆ
ಮರ ಕಡಿದ ಎಂದು ಆದಿವಾಸಿ ಬಂಧನ
ಮೈಸೂರು: ಅಕ್ರಮವಾಗಿ ಬೀಟೆ ಸಾಗುವಾನಿ ಮರ ಕಡಿದ ಆರೋಪ ಆದಿವಾಸಿಯನ್ನು ಬಂಧಿಸಿದ ಘಟನೆ ಮೈಸೂರಿನ ಹೆಚ್ಡಿ ಕೋಟೆಯಲ್ಲಿ ನಡೆದಿದೆ. ಮೇಟಿಕುಪ್ಪೆ ಹಾಡಿ ನಿವಾಸಿ ದಾಸ ಬಂಧಿತ ಆರೋಪಿ. ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಮೇಟಿಕುಪ್ಪೆ ಅರಣ್ಯದಲ್ಲಿ ಅಕ್ರಮವಾಗಿ ಬೆಲೆ ಬಾಳುವ ಮರ ಕಡಿದು ಸಾಗಿಸಿರುವ ಆರೋಪ ಕೇಳಿ ಬಂದಿದೆ. ಆದ್ರೆ ದಾಸ ಮರ ಕಡಿದಿಲ್ಲ ಅರಣ್ಯ ಇಲಾಖೆ ಸುಳ್ಳು ಕೇಸು ದಾಖಲಿಸಿದೆ ಎಂದು ಹಾಡಿ ಜನರು ಆರೋಪಿಸಿದ್ದಾರೆ.
ಪ್ರಸವದ ಬಳಿಕ ಮಹಿಳೆ ಸಾವು
ಮಡಿಕೇರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಹರ್ಷಿತ ಎಂಬ 22 ವರ್ಷ ವಯಸ್ಸಿನ ಬಾಣಂತಿ ಪ್ರಸವದ ಬಳಿಕ ಸಾವನ್ನಪ್ಪಿದ್ದಾಳೆ. ವೈದ್ಯರ ನಿರ್ಲಕ್ಷ್ಯದಿಂದ ಸಾವು ಸಂಭವಿಸಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಸೆಪ್ಟೆಂಬರ್ 20ರಂದು ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 7:26 am, Tue, 27 September 22