ಹಳ್ಳಿ ಯುವತಿಯರೇ ಈತನ ಟಾರ್ಗೆಟ್; FDA, SDA ಕೆಲಸ ಕೊಡಿಸುವುದಾಗಿ ನಂಬಿಸಿ ಹಣ ಪಡೆದು ಬ್ಯಾಂಕಾಕ್​ನಲ್ಲಿ ಮೋಜುಮಸ್ತಿ

ಹಳ್ಳಿ ಭಾಗದಿಂದ ಕೆಲಸ ಬಯಸಿ ಬೆಂಗಳೂರಿಗೆ ಬರುತ್ತಿದ್ದ ಯುವತಿಯರನ್ನೇ ಟಾರ್ಗೆಟ್ ಮಾಡಿಕೊಂಡು ಎಫ್​ಡಿಎ, ಎಸ್​ಡಿಎನಲ್ಲಿ ಕೆಲಸ ಕೊಡಿಸುವ ಭರವಸೆ ನೀಡಿ ಲಕ್ಷಾಂತರ ರೂಪಾಯಿ ಪಡೆದು ವಂಚನೆ ಎಸಗಿದ ಆರೋಪಿಯನ್ನು ಬೆಂಗಳೂರಿನ ವಿಧಾನಸೌಧ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಹಳ್ಳಿ ಯುವತಿಯರೇ ಈತನ ಟಾರ್ಗೆಟ್; FDA, SDA ಕೆಲಸ ಕೊಡಿಸುವುದಾಗಿ ನಂಬಿಸಿ ಹಣ ಪಡೆದು ಬ್ಯಾಂಕಾಕ್​ನಲ್ಲಿ ಮೋಜುಮಸ್ತಿ
ಎಫ್​ಡಿಎ, ಎಸ್​​ಡಿಎನಲ್ಲಿ ಕೆಲಸ ಕೊಡಿಸುವುದಾಗಿ ಹಣ ಪಡೆದ ವಂಚಿಸುತ್ತಿದ್ದ ಬಂಧಿತ ಆರೋಪಿ ಮೋಹನ್ ಕುಮಾರ್
Follow us
Jagadisha B
| Updated By: Rakesh Nayak Manchi

Updated on:Nov 16, 2023 | 2:58 PM

ಬೆಂಗಳೂರು, ನ.16: ಹಳ್ಳಿ ಭಾಗದಿಂದ ಕೆಲಸ ಬಯಸಿ ಬೆಂಗಳೂರಿಗೆ (Bengaluru) ಬರುತ್ತಿದ್ದ ಯುವತಿಯರನ್ನೇ ಟಾರ್ಗೆಟ್ ಮಾಡಿಕೊಂಡು ಉದ್ಯೋಗ ಕೊಡಿಸುವ ಭವರಸೆ ನೀಡಿ ಲಕ್ಷಾಂತರ ರೂಪಾಯಿ ಪಡೆದ ಬ್ಯಾಂಕಾಕ್​ನಲ್ಲಿ ಮೋಜುಮಸ್ತಿ ಮಾಡುತ್ತಿದ್ದ ಆರೋಪಿಯನ್ನು ನಗರದ ವಿಧಾನಸೌಧ ಠಾಣಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮೋಹನ್ ಕುಮಾರ್ (53) ಬಂಧಿತ ಆರೋಪಿ.

ಇನ್ನೇನು ಓದು ಮುಗಿತು, ಸರ್ಕಾರಿ ಉದ್ಯೋಗಕ್ಕೆ ಯತ್ನಿಸಬೇಕು, ಅಲ್ಲಿವೆರೆಗೆ ಏನಾದರೂ ಉದ್ಯೋಗ ಮಾಡಬೇಕು ಎಂದು ಯೋಚಿಸಿ ಬೆಂಗಳೂರಿಗೆ ಬರುವ ಹಳ್ಳಿ ಭಾಗದ ಯುವತಿಯರನ್ನೇ ಟಾರ್ಗೆಟ್ ಮಾಡುತ್ತಿದ್ದ ಮೋಹನ್ ಕುಮಾರ್, ಬಣ್ಣ ಬಣ್ಣದ ಮಾತುಗಳನ್ನಾಡಿ ಬಳಿಕ ಎಫ್​ಡಿಎ, ಎಸ್​​ಡಿಎನಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸುತ್ತಾನೆ.

ಮೋಹನ್​ನ ಬಣ್ಣ ಬಣ್ಣದ ಮಾತುಗಳಿಂದ ಬಲೆಗೆ ಬಿದ್ದ ಯುವತಿಯರಿಂದ ಲಕ್ಷಾಂತರ ರೂಪಾಯಿ ಪಡೆದು ಬಳಿಕ ಸಂಪರ್ಕಕ್ಕೆ ಸಿಗದೆ ಪರಾರಿಯಾಗುತ್ತಾನೆ. ಇದೇ ದುಡ್ಡಲ್ಲಿ ಬ್ಯಾಂಕಾಕ್​ಗೆ ಹೋಗಿ ಮೋಜುಮಸ್ತಿ ಮಾಡುತ್ತಿದ್ದನು. ಹೀಗೆ ಬ್ಯಾಂಕಾಕ್​ನಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಮೋಹನ್​ ಕೈಗಳಿಗೆ ವಿಧಾನಸೌಧ ಪೊಲೀಸರು ಕೋಳ ಹಾಕಿದ್ದಾರೆ.

ಇದನ್ನೂ ಓದಿ: ವೈದ್ಯಕೀಯ ಸೀಟು ಕೊಡಿಸುವುದಾಗಿ ಭರವಸೆ: ಗೃಹ ಸಚಿವರ ಆಪ್ತನೆಂದು ಹೇಳಿ ಲಕ್ಷಾಂತರ ರೂ ವಂಚನೆ

ಎಸ್​ಡಿಎ ಕೆಲಸ ಕೊಡಿಸುವುದಾಗಿ ಗಿರಿಜಾ ಎಂಬ ಯುವತಿಯಿಂದ ಏಳು ಲಕ್ಷಕ್ಕೂ ಹೆಚ್ಚು ಹಣ ಪಡೆದು ವಂಚನೆ ಎಸಗಿದ್ದ. ವಿಧಾನಸೌಧದಲ್ಲಿ ಅಧಿಕಾರಿಗಳ ಪರಿಚಯವಿದ್ದು, ನೇರ ನೇಮಕಾತಿ ಮಾಡಿಸುವುದಾಗಿ ಹೇಳಿ ಹಣ ಪಡೆದು ಬಳಿಕ ಮೊಬೈಲ್ ಸ್ವಿಚ್ ಆಪ್ ಮಾಡಿಕೊಂಡು ತಲೆಮರೆಸಿಕೊಂಡಿದ್ದನು. ಈ ಬಗ್ಗೆ ಯುವತಿ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಳು.

ಅಗ್ನಿಶಾಮಕದಳ ಸಿಬ್ಬಂದಿಯಿಂದ ಚಂದಾ ವಸೂಲಿ

ಬಳ್ಳಾರಿ: ದೀಪಾವಳಿ ಹಬ್ಬ, ದಸರಾ ಹಬ್ಬದ ನಿಮಿತ್ತ ಪ್ರತಿ ಅಂಗಡಿಗಳಲ್ಲಿ ಚಂದಾ ವಸೂಲಿ ಮಾಡಿದ ಆರೋಪ ಕುರುಗೋಡು ಅಗ್ನಿಶಾಮಕದಳ ಸಿಬ್ಬಂದಿ ವಿರುದ್ಧ ಕೇಳಿಬಂದಿದೆ. ಪೈರ್‌ಮ್ಯಾನ್‌ ಎಂ. ಪ್ರಭಾಕರ್ ಸ್ವಾಮಿ ವಿರುದ್ಧ ಚಂದಾ ವಸೂಲಿ ಆರೋಪ ಕೇಳಿಬಂದಿದೆ.

ಹಬ್ಬದ ಪೂಜೆಗಾಗಿ ಪ್ರತಿ ಅಂಗಡಿಯಿಂದ 500 ರೂ., 1000 ರೂ. ಚಂದಾ ವಸೂಲಿ ಮಾಡಿದ್ದಾಗಿ ಆರೋಪಿಸಲಾಗಿದೆ. ಶಾಪ್‌ಗಳು, ಪೆಟ್ರೋಲ್ ಬಂಕ್, ರಸಗೊಬ್ಬರದಂಗಡಿ, ಮದ್ಯದಂಗಡಿ ಸೇರಿದಂತೆ ವಿವಿಧ ಕಡೆ ವಸೂಲಿ ಮಾಡಿದ ಆರೋಪ ಕೇಳಿಬಂದಿದೆ. ಚಂದಾ ವಸೂಲಿಗೆ ಅಂಗಡಿಗೆ ತೆರಳುತ್ತಿರುವ ವಿಡಿಯೋ ವೈರಲ್ ಆಗುತ್ತಿದೆ.

ಇಲಾಖೆ ಹೆಸರು ಹೇಳಿಕೊಂಡು ಚಂದಾ ವಸೂಲಿ ಮಾಡಲಾಗುತ್ತಿದೆ ಅಂತಾ ಪ್ರಭಾಕರ್ ಸ್ವಾಮಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಗ್ನಿಶಾಮಕ ಚಾಲಕ ಶಾಂತಪ್ಪ ಅವರು ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ಅಲ್ಲದೆ, ಅಂಗಡಿ ಮಾಲೀಕರು ಕೂಡ ಪ್ರಭಾಕರ್ ಭಾವಚಿತ್ರ ಸಮೇತ ಪತ್ರದ ಮೂಲಕ ದೂರು ನೀಡಿದ್ದಾರೆ.

ಪ್ರತಿ ವರ್ಷವೂ ಪೂಜೆ ಹೆಸರಲ್ಲಿ ಚಂದಾ ವಸೂಲಿ ಮಾಡುತ್ತಿರುವ ಆರೋಪ ಕೇಳಿಬಂದಿದೆ. ಈ ಬಗ್ಗೆ ದೂರು ನೀಡಿದರೂ ಹಿರಿಯ ಅಧಿಕಾರಿಗಳು ಮೌನವಹಿಸಿದ್ದಾರೆ ಎಂದು ದೂರಲಾಗಿದೆ. ಈ ಬಗ್ಗೆ ಹಿರಿಯ ಅಧಿಕಾರಿಗಳನ್ನು ಕೇಳಿದರೆ, ಘಟನೆ ಬಗ್ಗೆ ಮಾಹಿತಿ ಇಲ್ಲ ಎನ್ನುತ್ತಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:55 pm, Thu, 16 November 23

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ